R.T.E ಅಡಿಯಲ್ಲಿ LKG, ಒಂದನೇ ತರಗತಿಯಿಂದ 10ನೇ ತರಗತಿವರೆಗೂ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕರ್ನಾಟಕ ಇವರ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಇದರ ಪ್ರಕಾರ ನೀವು ನಿಮ್ಮ ಮಕ್ಕಳಿಗೆ ನೀವು ಎಲ್ಲಿ ವಾಸ ಮಾಡುತ್ತಿದ್ದೀರೋ ಅಲ್ಲಿರುವ ಪ್ರತಿಷ್ಠಿತ ಶಾಲೆಗಳಲ್ಲಿ ಯಾವುದೇ ಅಡ್ಮಿಶನ್ ಫೀಸ್ ಇಲ್ಲದೆ ನಿಮ್ಮ ಮಕ್ಕಳನ್ನು ಸೇರಿಸಬಹುದು.
ಸಾರ್ವಜನಿಕ ಶಿಕ್ಷಣ ಇಲಾಖೆಯೇ ವತಿಯಿಂದ ಸಿಗುತ್ತಿರುವ ಈ ಅನುಕೂಲತೆಯನ್ನು ವಿದ್ಯಾರ್ಥಿಗಳು ಹೇಗೆ ಪಡೆಯಬಹುದು ಮತ್ತು ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಅದಕ್ಕಾಗಿ ಏನೆಲ್ಲಾ ದಾಖಲಾತಿಗಳನ್ನು ಕೇಳುತ್ತಾರೆ ಮತ್ತು ಅರ್ಜಿ ಸಲ್ಲಿಕೆ ನಂತರ ಸೀಟುಗಳನ್ನು ಹೇಗೆ ಆಯ್ಕೆ ಮಾಡುತ್ತಾರೆ ಅವುಗಳ ಹಂಚಿಕೆ ಯಾವ ರೀತಿಯಲ್ಲ ಇರುತ್ತದೆ ಇತ್ಯಾದಿ ವಿಷಯಗಳ ಬಗ್ಗೆ ಕೂಡ ತಿಳಿದುಕೊಂಡಿರಬೇಕು.
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ R.T.E ಅಡಿಯಲ್ಲಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಉಚಿತವಾಗಿ ಶಿಕ್ಷಣ ಕಲಿಯುತ್ತಿದ್ದಾರೆ. ಈ ವರ್ಷ ಕೂಡ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಒಂದು ಸುತ್ತೋಲೆ ಹೊರಡಿಸಲಾಗಿದೆ. ಫೆಬ್ರವರಿ 9, 2023 ರಂದು ಈ ಸುತ್ತೋಲೆ ಹೊರ ಬಿದ್ದಿದೆ. ಇದರ ಪ್ರಕಾರ 2023 – 24ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯ್ದೆ 2009ರ ಕಾಯ್ದೆ ಪ್ರಕಾರ ಗ್ರಾಮೀಣ ಪ್ರದೇಶ, ಮುನ್ಸಿಪಾಲಿಟಿ, ಪಟ್ಟಣ ಪಂಚಾಯಿತಿ ಮತ್ತು ಬಿಬಿಎಂಪಿ ಲಿಮಿಟ್ ರಲ್ಲಿ ಬರುವ ಶಾಲೆಗಳನ್ನು ಪಟ್ಟಿ ಮಾಡಿಕೊಂಡು.
ನೆರೆಹೊರೆ ಯಾವುದೇ ಶಾಲೆಗಳನ್ನು ಕೈಬಿಡದಂತೆ ಎಲ್ಲ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಬಿಬಿಎಂಪಿ ಶಾಲೆಗಳು ಇವುಗಳನ್ನು ಮ್ಯಾಪ್ ಮಾಡುವುದು. ಅದರೆ ಅಲ್ಪಸಂಖ್ಯಾತ ಘೋಷಣ ಪತ್ರ ಪಡೆದಿರುವ ಈಗಾಗಲೇ ಮುಚ್ಚಿರುವ ನ್ಯಾಯಾಲಯದ ತಡೆಯಾಜ್ಞೆ ಪಡೆದಿರುವ ಶಾಲೆಗಳನ್ನು ಆ ಪಟ್ಟಿಯಿಂದ ಕೈಬಿಡುವುದು.
ಜೊತೆಗೆ ಎಲ್ಕೆಜಿ ಮತ್ತು ಯುಕೆಜಿ ಮಾತ್ರ ಹೊಂದಿರುವ ಶಾಲೆಗಳನ್ನು ಸಹ ಈ ಪಟ್ಟಿಯಿಂದ ಕೈ ಬಿಡುವುದು. ಈ ಪಟ್ಟಿಯಲ್ಲಿರುವ ಯಾವುದೇ ಶಾಲೆಗಳಲ್ಲಿ ಕೂಡ ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸುವ ಮಗು ಶಿಕ್ಷಣ ಪಡೆಯಬಹುದಾಗಿದೆ ಅದು ಕೂಡ ಉಚಿತವಾಗಿ. ಇದಕ್ಕಾಗಿ ಪ್ರತಿ ವರ್ಷ ಕೂಡ ಅರ್ಜಿ ಕರೆಯಲಾಗುತ್ತದೆ. ಅರ್ಜಿ ಸಲ್ಲಿಸಿದ ಮಗು ಇದಕ್ಕೆ ಸಂಬಂಧ ಪಟ್ಟ ದಾಖಲಾತಿಗಳನ್ನು ಹೊಂದಿರಬೇಕು, ಜೊತೆಗೆ ಮಗುವಿನ ಪೋಷಕರ ಕೆಲ ದಾಖಲೆಗಳನ್ನು ಸಹ ಕೇಳಲಾಗುತ್ತದೆ.
ನಂತರ ಒಂದು ದಿನಾಂಕವನ್ನು ಘೋಷಿಸಿ ಆ ದಿನಾಂಕದಂದು ಲಾಟರಿ ಮೂಲಕ ಕೆಲ ಸಂಖ್ಯೆಯ ಸೀಟುಗಳ ಘೋಷಣೆ ಮಾಡಲಾಗುತ್ತದೆ. ಆ ಭರ್ತಿ ವಿವರವನ್ನು ತಂತ್ರಾಂಶದಲ್ಲಿ ತುಂಬಿಸಿದ ನಂತರ ಎರಡನೇ ಸುತ್ತಿನಲ್ಲಿ ಹಂಚಿಕೆ ಮಾಡಲಾಗುತ್ತದೆ ನಂತರ ಅದನ್ನು ಸಹ ತಂತ್ರಾಂಶದಲ್ಲಿ ತುಂಬಿಸಬೇಕಾಗಿರುತ್ತದೆ.
ಈ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣ ವಿವರ ಮತ್ತು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಮಗು ಹಾಗೂ ಪೋಷಕರಕ್ಕೆ ಸಂಬಂಧಿಸಿದ ದಾಖಲೆಗಳ ವಿಚಾರ ಮತ್ತು ಈ ವರ್ಷದ ವೇಳಾಪಟ್ಟಿ ಇನ್ನಿತರ ವಿಷಯಗಳ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ತಪ್ಪದೆ ಪೂರ್ತಿಯಾಗಿ ನೋಡಿ. ಇದನ್ನು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರ ಜೊತೆ ಹಂಚಿಕೊಳ್ಳುವ ಮೂಲಕ ಇನ್ನು ಹೆಚ್ಚಿನ ಮಕ್ಕಳಿಗೆ R.T.E ಸೀಟ್ ಅಡಿ ಉಚಿತ ಶಿಕ್ಷಣ ಸಿಗುವುದಕ್ಕೆ ಅದಕ್ಕೆ ನೀವು ನೆರವಾಗಿ.