ಕೇಂದ್ರ ಸರ್ಕಾರ ಜಾರಿಗೆ ತಂದ ಶಿಕ್ಷಣ ಹಕ್ಕು (RTE) ಕಾಯಿದೆ ಸರ್ವರಿಗೂ ಸಮ ಶಿಕ್ಷಣವನ್ನು ಪತಿಪಾದಿಸುತ್ತದೆ. ಸರ್ಕಾರದ ಈ ನೂತನ ಶಿಕ್ಷಣ ನೀತಿಯಿಂದ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳು ಉಚಿತವಾಗಿ ಅಗತ್ಯವಿರುವ ಶಿಕ್ಷಣವನ್ನು ತಮ್ಮ ಹತ್ತಿರದ ಸ್ಥಳದಲ್ಲಿಯೇ ಪಡೆಯಬಹುದು.
RTE ಕಾಯ್ದೆಯನ್ನು ಕರ್ನಾಟಕವು ಕೂಡ ಅಳವಡಿಸಿಕೊಂಡಿದೆ ಮತ್ತು ಈ ಕಾಯ್ದೆಯ ಗುರಿಯಂತೆ 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುತ್ತದೆ. RTE ಕಾಯ್ದೆ ಪ್ರಕಾರ ಎಲ್ಲಾ ಖಾಸಗಿ ಶಾಲೆಗಳಲ್ಲಿ 25%ರಷ್ಟು ಸೀಟುಗಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಮೀಸಲಿಡಬೇಕು, ಅದಕ್ಕೆ ತಗಲುವ ವೆಚ್ಚಕ್ಕೆ ಸರ್ಕಾರದಿಂದ ಆರ್ಥಿಕ ಸಹಾಯವನ್ನು ಪಡೆಯಬಹುದು.
ಈ ಸುದ್ದಿ ಓದಿ:- ಚಿನ್ನಾಭರಣಗಳನ್ನು ಖರೀದಿಸುವ ಮುನ್ನ ಈ ಸಂಗತಿಗಳನ್ನು ತಿಳಿದುಕೊಂಡಿರಬೇಕು, ಇಲ್ಲದಿದ್ರೆ ಮೋಸ ಹೋಗೋದು ಗ್ಯಾರಂಟಿ.!
ಅಂತೆಯೇ 2024-2025 ಶೈಕ್ಷಣಿಕ ಸಾಲಿನ RTE ಸೀಟ್ ಗಾಗಿ ಅರ್ಜಿ ಸಲ್ಲಿಸಲು ಸರ್ಕಾರ ವೇಳಾಪಟ್ಟಿ ಬಿಡುಗಡೆಗೊಳಿಸಿದೆ. ಈ ಉಚಿತ ಶಿಕ್ಷಣ ಅನುಕೂಲತೆಯನ್ನು ಪಡೆಯಲು ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು? ಆಯ್ಕೆ ಪ್ರಕ್ರಿಯೆ ಹೇಗೆ? ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಏನು? ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
ಅರ್ಹತೆಗಳು:-
* ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
* ಒಂದನೇ ತರಗತಿಗೆ ಪ್ರವೇಶಕ್ಕಾಗಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
* ವಿದ್ಯಾರ್ಥಿಗಳು 1/6/2016 ರಿಂದ 1/1/2018 ರ ಒಳಗಡೆ ಜನಿಸಿರಬೇಕು.
* ಕುಟುಂಬದ ಒಟ್ಟು ವಾರ್ಷಿಕ ಆದಾಯವು ರೂ.3.5 ಲಕ್ಷ ಮೀರಿರಬಾರದು.
* ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗಗಳಿಗೆ ಸೇರಿದ ಮಕ್ಕಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು.
ಬೇಕಾಗುವ ದಾಖಲೆಗಳು:-
* ಮಗುವಿನ ಆಧಾರ್ ಕಾರ್ಡ್
* ಮಗುವಿನ ಜನನ ಪ್ರಮಾಣ ಪತ್ರ
* ಮಗುವಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಪೋಷಕರ ಆಧಾರ್ ಕಾರ್ಡ್
ಅರ್ಜಿಯನ್ನು ಸಲ್ಲಿಸುವ ವಿಧಾನ :-
* ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗಳಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿ ಉಚಿತವಾಗಿ ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
* ಬೆಂಗಳೂರು ಒನ್, ಕರ್ನಾಟಕ ಒನ್, ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ :-
* ಗಣಕೀಕೃತ ವ್ಯವಸ್ಥೆಯನ್ನು ಬಳಸಿಕೊಂಡು ಲಾಟರಿ ಮೂಲಕ ಅರ್ಜಿದಾರರ ಹೆಸರನ್ನು ಆಯ್ಕೆ ಮಾಡಲಾಗುತ್ತದೆ.
* ನಂತರ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸೀಟುಗಳ ಲಭ್ಯತೆಯನ್ನು ಆಧರಿಸಿದೆ ಮತ್ತು ಆಯ್ಕೆಮಾಡಿದ ವಿದ್ಯಾರ್ಥಿಗಳನ್ನು ಆ ಸಂಸ್ಥೆಗಳಿಗೆ ನಿಯೋಜಿಸಲಾಗುತ್ತದೆ.
RTE ತಾತ್ಕಾಳಿಕ ವೇಳಾಪಟ್ಟಿ:-
* 2024-25ನೇ ಸಾಲಿನ RTE ಪ್ರವೇಶಾತಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಪ್ರಕಟಣೆ – 07 ಫೆಬ್ರವರಿ, 2024
* ಶಾಲೆಗಳ ತಾತ್ಕಾಲಿಕ ಪಟ್ಟಿ ಪ್ರಕಟಿಸುವುದು – 23 ಫೆಬ್ರವರಿ, 2024
* ನೆರೆಹೊರೆ ಶಾಲೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ – 28 ಫೆಬ್ರವರಿ, 2024.
ಈ ಸುದ್ದಿ ಓದಿ:- ರೈತರಿಗೆ ಬರ ಪರಿಹಾರ ಹಣ ಜಮೆ.! ನಿಮ್ಮ ಬ್ಯಾಂಕ್ ಖಾತೆ ಪರೀಕ್ಷಿಸಿಕೊಳ್ಳಿ, ಹಣ ಬಾರದೇ ಇದ್ದರೆ ಹೀಗೆ ಮಾಡಿ.!
* 25% ಸೀಟುಗಳು ಲಭ್ಯವಿರುವ ಶಾಲೆಗಳ ಪಟ್ಟಿಯನ್ನು ಜಿಲ್ಲೆಯ ಅಧಿಕೃತ ವೆಬ್ಸೈಟ್ ಹಾಗೂ ಕಚೇರಿ ಸೂಚನಾಲಕದಲ್ಲಿ ಪ್ರಕಟಿಸುವುದು – 04 ಮಾರ್ಚ್, 2024.
* ಪ್ರಾಯೋಗಿಕವಾಗಿ ಅರ್ಜಿ ಸಲ್ಲಿಕೆ ಆರಂಭ – ಮಾರ್ಚ್ 20 & 21, 2024.
* ಅರ್ಜಿ ಸಲ್ಲಿಸಲು ಅವಕಾಶ – 22 ಮಾರ್ಚ್ 2024 ರಿಂದ 22 ಮಾರ್ಚ್ 2024.
* ಮೊದಲ ಸುತ್ತಿನ ಸೀಟು ಹಂಚಿಕೆ – 30 ಏಪ್ರಿಲ್, 2024.