ಪ್ರಸ್ತುತವಾಗಿ ನಮ್ಮ ದೇಶದಲ್ಲಿ ಎರಡು ರೀತಿಯ ಡ್ರೈವಿಂಗ್ ಲೈಸನ್ಸ್ ಇದೆ. ಒಂದು ಲರ್ನಿಂಗ್ ಲೈಸೆನ್ಸ್ ಮತ್ತು ಡ್ರೈವಿಂಗ್ ಲೈಸೆನ್ಸ್. ಲರ್ನಿಂಗ್ ಲೈಸೆನ್ಸ್ ಅನ್ನು ಕಲಿಕಾ ಅವಧಿಯ ಪರವಾನಗಿ ಆಗಿ DL ನೀಡುವ ಮುನ್ನ ನೀಡಲಾಗಿರುತ್ತದೆ. ಲರ್ನಿಂಗ್ ಲೈಸನ್ನ್ ಆರು ತಿಂಗಳವ ಅವಧಿವರೆಗೆ ಇರುತ್ತದೆ. ಲರ್ನಿಂಗ್ ಲೈಸೆನ್ಸ್ ಬಂದ ಒಂದು ತಿಂಗಳ ನಂತರ ನೀವು ಡ್ರೈವಿಂಗ್ ಲೈಸೆನ್ಸ್ ಗಾಗಿ ಅಪ್ಲೈ ಮಾಡಬಹುದು ನಂತರ RTO ಪರೀಕ್ಷೆ ಪ್ರಾಧಿಕಾರ ಪರೀಕ್ಷೆ ಮಾಡಿ ನಿಮಗೆ ಡ್ರೈವಿಂಗ್ ಲೈಸೆನ್ಸ್ ನೀಡುತ್ತದ.
ಈ ರೀತಿ ಡ್ರೈವಿಂಗ್ ಲೈಸೆನ್ಸ್ ಗೆ ಅನ್ನು ಅಪ್ಲೈ ಮಾಡಲು RTO ಕಚೇರಿಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ಈಗ ಆನ್ಲೈನ್ ಅಲ್ಲಿಯೇ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ :-
●ಮೊದಲು https://parivahan.gov.in ವೆಬ್ ಸೈಟಿಗೆ ಭೇಟಿ ನೀಡಿ.
●ಆನ್ಲೈನ್ ಸರ್ವಿಸಸ್ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಡ್ರೈವಿಂಗ್ ಲೈಸೆನ್ಸ್ ರಿಲೇಟೆಡ್ ಸರ್ವಿಸಸ್ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ
●ನಿಮ್ಮ ಎದುರು ಕಾಣುವ ಪುಟದಲ್ಲಿ ಎಲ್ಲ ರಾಜ್ಯಗಳ ಹೆಸರು ಇರುತ್ತದೆ ಅದರಲ್ಲಿ ಕರ್ನಾಟಕ ಎನ್ನುವುದನ್ನು ಆಯ್ಕೆ ಮಾಡಿ
●ಮತ್ತು ನೀವು ಮೊದಲು ಕಲಿಕಾ ಪರವಾನಗಿ ಪಡೆಯಬೇಕಾದ ಕಾರಣ ಲರ್ನಿಂಗ್ ಲೈಸೆನ್ಸ್ ಎನ್ನುವುದರ ಮೇಲೆ ಕ್ಲಿಕ್ ಮಾಡಿ
●ಆ ಅರ್ಜಿಯಲ್ಲಿರುವ ವಿವರಗಳನ್ನು ತುಂಬಿಸಿ ಕೇಳಲಾಗುವ ವಯಸ್ಸಿನ ದೃಢೀಕರಣ ದಾಖಲೆ ಮತ್ತು ವಿಳಾಸ ದೃಢೀಕರಣ ಮತ್ತು ಫೋಟೋ ಹಾಗೂ ಸಹಿ ಇನ್ನಿತರ ಮಾಹಿತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
●LL ಟೆಸ್ಟ್ ಸ್ಲಾಟ್ ಬುಕಿಂಗ್ ಪುಟದಲ್ಲಿ ನಿಮಗೆ ಪರೀಕ್ಷೆ ನಡೆಯುವ ದಿನಾಂಕ ಮತ್ತು ವೇಳೆಯನ್ನು ನಿಗದಿಪಡಿಸಿಕೊಳ್ಳಿ. ಆನ್ಲೈನ್ ಪೇಮೆಂಟ್ ಮಾಡುವ ಇಚ್ಛೆ ಇದ್ದರೆ ಪೇಮೆಂಟ್ ಆಫ್ ಫೀ ಮೇಲೆ ಕ್ಲಿಕ್ ಪ್ರಕ್ರಿಯೆ ಪೂರ್ಣಗೊಳಿಸಿ, ರಶೀದಿ ಪ್ರಿಂಟ್ ಮಾಡಿಟ್ಟುಕೊಳ್ಳಿ. ಆನ್ಲೈನ್ ಪೇಮೆಂಟ್ ವ್ಯವಸ್ಥೆ ಇಲ್ಲ ಎಂದರೆ RTO ನಗದು ಶಾಖೆಯಲ್ಲಿ ಶುಲ್ಕ ಪಾವತಿಸಬಹುದು.
●ನೀವು ದಿನಾಂಕ ಗೊತ್ತು ಪಡಿಸಿದ ದಿನಾಂಕದಂದು ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿ ಮೊತ್ತ ಸ್ವೀಕೃತಿ ಪತ್ರ ಹಾಗೂ ಆನ್ಲೈನ್ ಶುಲ್ಕ ರಶೀದಿ ಹಾಗೂ ಅಪ್ಲೋಡ್ ಮಾಡಲಾದ ಮೂಲ ದಾಖಲೆಗಳನ್ನು ಹಾಜರುಪಡಿಸಿ. ಪರೀಕ್ಷೆಗೆ ಹಾಜರಾಗಿ.
●ಪರೀಕ್ಷೆ ಉತ್ತೀರ್ಣರಾದರೆ ಅಂಚೆ ಮೂಲಕ ನಿಮ್ಮ ವಿಳಾಸಕ್ಕೆ ಡ್ರೈವಿಂಗ್ ಲೈಸೆನ್ಸ್ ಬರಲಿದೆ.
ಡ್ರೈವಿಂಗ್ ಲೈಸನ್ಸ್ ಪಡೆಯಲು ಅಗತ್ಯವಾದ ದಾಖಲೆಗಳು :-
●ವಯಸ್ಸಿನ ಪುರಾವೆಗಾಗಿ ಇವುಗಳಲ್ಲಿ ಯಾವುದಾದರೂ ಒಂದು
10ನೇ ತರಗತಿ ಮಾರ್ಕ್ಸ್ ಕಾರ್ಡ್
ಜನನ ಪ್ರಮಾಣ ಪತ್ರ
ಪ್ಯಾನ್ ಕಾರ್ಡ್
ಪಾಸ್ಪೋರ್ಟ್
ಶಾಲೆಯ ವರ್ಗಾವಣೆ ಪತ್ರ (ಹುಟ್ಟಿದ ದಿನಾಂಕ ಒಳಗೊಂಡಿರಬೇಕು)
●ವಿಳಾಸ ದೃಢೀಕರಣಕ್ಕಾಗಿ ಇವುಗಳಲ್ಲಿ ಒಂದು
ಪಾಸ್ಪೋರ್ಟ್
ಆಧಾರ್ ಕಾರ್ಡ್
ಸ್ವಂತ ಮನೆ ಕರಾರು ಪತ್ರ
ಅರ್ಜಿದಾರರ ಹೆಸರಿನಲ್ಲಿರುವ ವಿದ್ಯುತ್ ಬಿಲ್
ಎಲ್ಐಸಿ ಬಾಂಡ್
ವೋಟರ್ ಐಡಿ
ಪ್ರಸ್ತುತ ವಿಳಾಸದಲ್ಲಿರುವ ರೇಷನ್ ಕಾರ್ಡ್
ಬಾಡಿಗೆ ಒಪ್ಪಂದ ಮತ್ತು ಎಲ್ಪಿಜಿ ಬಿಲ್
ಬಾಡಿಗೆ ಒಪ್ಪಂದ ಮತ್ತು ವಿದ್ಯುತ್ ಬಿಲ್
●ವೈದ್ಯಕೀಯ ಪ್ರಮಾಣ ಪತ್ರ :-
40 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ವೈದ್ಯಕೀಯ ಪ್ರಮಾಣ ಪತ್ರ ಕಡ್ಡಾಯವಾಗಿದೆ ಫಾರ್ಮ್ 1ಎ ಮತ್ತು ಫಾರ್ಮ್ 1 ಅನ್ನು ಪ್ರಮಾಣೀಕೃತ ಸರ್ಕಾರಿ ವೈದ್ಯರು ನೀಡಬೇಕು.
https://youtu.be/25VT6ebpqpU