RTO ಇಂದ 2023 ರಲ್ಲಿ ಹೊಸ ನೇಮಕಾತಿಯನ್ನು ಪ್ರಾರಂಭ ಮಾಡಿದ್ದು. ಈ ವಿಷಯಕ್ಕೆ ಸಂಬಂಧಿಸಿದಂತೆ RTO ಗೆ ಅರ್ಜಿಯನ್ನು ಸಲ್ಲಿಸುವುದು ಯಾವಾಗ ಹಾಗೂ ಈ ಒಂದು ಅರ್ಜಿಯನ್ನು ಸಲ್ಲಿಸುವುದಕ್ಕೆ ಯಾರೆಲ್ಲಾ ಅರ್ಹರಿದ್ದಾರೆ. ಪ್ರಾರಂಭ ದಿನಾಂಕ ಯಾವುದು ಹಾಗೂ ಕೊನೆಯ ದಿನಾಂಕ ಯಾವುದು? ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಅರ್ಜಿ ಶುಲ್ಕ ಎಷ್ಟಿರುತ್ತದೆ, ಹಾಗೂ ಎಷ್ಟು ವಿದ್ಯಾರ್ಹತೆಯನ್ನು ಪಡೆದುಕೊಂಡಿರಬೇಕು. ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ರಸ್ತೆ ಸಾರಿಗೆ ಅಧಿಕಾರಿ ಇತರೆ ಹುದ್ದೆಗಳಿಗೆ ಕರ್ನಾಟಕ RTO ನೇಮಕಾತಿ 2023 ಇದೀಗ ಬಿಡುಗಡೆಯಾಗಿದ್ದು. ಇದಕ್ಕೆ ಸಂಬಂಧಿಸಿದಂತೆ ಈ ಹುದ್ದೆಗೆ ಅರ್ಜಿಯನ್ನು ಹಾಕುವವರು KPSC ಪರೀಕ್ಷೆಯ ಅಡಿಯಲ್ಲಿ. ಈ ಒಂದು RTO ನೇಮಕಾತಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಅಂಥವರು KPSC ಪರೀಕ್ಷೆಯನ್ನು ಬರೆಯುವುದರ ಮೂಲಕ ಈ ಒಂದು ಹುದ್ದೆಗೆ ನೇಮಕಾತಿಯನ್ನು ಪಡೆದುಕೊಳ್ಳಬಹುದು ಎಂದು ಹೊರಡಿಸಲಾಗಿದೆ. ಅದೇ ರೀತಿಯಾಗಿ, ಕರ್ನಾಟಕದ RTO ಅಧಿ ಸೂಚನೆ 2023 ಅನ್ನು ಬಿಡುಗಡೆ ಮಾಡುವ ಅವಕಾಶವನ್ನು ಈಗಾಗಲೇ ಹೇಳಿದ ಹಾಗೆ KPSC ತೆಗೆದುಕೊಳ್ಳುತ್ತದೆ.
ಆದ್ದರಿಂದ KPSC ಕರ್ನಾಟಕ RTO ಖಾಲಿ ಹುದ್ದೆಯನ್ನು ಬಿಡುಗಡೆ ಮಾಡಿದರೆ, ಅದನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಸುದ್ದಿಯಾಗಿದೆ. ಕರ್ನಾಟಕ RTO ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಇದು ಒಳ್ಳೆಯ ಅವಕಾಶವಾಗಿದೆ. ಒಟ್ಟಾರೆಯಾಗಿ 2768 ಹುದ್ದೆಗಳಿಗೆ ಇಲ್ಲಿ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಅದರಲ್ಲಿ 2677 ಹುದ್ದೆಗೆ ನೇರವಾಗಿ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಒಂದು ನೇಮಕಾತಿಯ ಮಂಡಳಿಯ ಹೆಸರು ಕರ್ನಾಟಕ ಲೋಕಸೇವಾ ಆಯೋಗ ಎಂದು. ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಈ ಒಂದು ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಯಾವ ಯಾವ ಹುದ್ದೆಗಳಿಗೆ ಇಲ್ಲಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಎಂದು ನೋಡುವುದಾದರೆ. ರಸ್ತೆ ಅಥವಾ ಪ್ರಾದೇಶಿಕ ಸಾರಿಗೆ ಅಧಿಕಾರಿ FDA, SDA, ಟೈಪಿಸ್ಟ್, ಪ್ಯೂನ್ ಪ್ರೋಸೆಸ್ ಸರ್ವರ್ ಮತ್ತು ಇದರ ಹುದ್ದೆಗಳಿಗೆ ಇಲ್ಲಿ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದಾರೆ. ಒಟ್ಟಾರೆಯಾಗಿ 2768 ಹುದ್ದೆಗಳಿಗೆ ಇಲ್ಲಿ ನೇರವಾಗಿ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದ್ದು.
ಉಳಿದ 91 ಹುದ್ದೆಗಳಿಗೆ ಡೆಪ್ಯುಟೇಷನ್ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಯಾವ ಯಾವ ಹುದ್ದೆಗಳು ಎಷ್ಟು ಪೋಸ್ಟ್ ಹೊಂದಿರುತ್ತದೆ ಎಂದು ನೋಡುವುದಾದರೆ. ಆಯುಕ್ತರು ಸಾರಿಗೆ ಮತ್ತು ರಸ್ತೆ ಸಂರಕ್ಷಣೆಗೆ 1 ಪೋಸ್ಟ್, ಸಾರಿಗೆ ಆಯುಕ್ತ 6 ಪೋಸ್ಟ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ 93 ಪೋಸ್ಟ್, ಮೋಟಾರು ವಾಹನ ನಿರೀಕ್ಷೆಗಳು 438 ಪೋಸ್ಟ್, ಹೀಗೆ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು.
ನಿಮಗೆ ಯಾವ ಹುದ್ದೆ ಬೇಕು ಆ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ನಿಮ್ಮ ನಿಗದಿತ ಅಂಕಪಟ್ಟಿಗಳನ್ನು ಕೊಡುವ ಮೂಲಕ ನೀವು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ವಯಸ್ಸಿನವರು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಹಾಗೂ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.