“ಸಖೀ ಭಾಗ್ಯ ಯೋಜನೆ” ಮಹಿಳೆಯರಿಗೆ ಸಿಗಲಿದೆ ಪ್ರತಿ ತಿಂಗಳು 3000 ರೂಪಾಯಿ. ಅರ್ಜಿ ಸಲ್ಲಿಸುವ ವಿಧಾನ & ಬೇಕಾಗುವ ದಾಖಲೆಗಳೇನು ನೋಡಿ

ಕರ್ನಾಟಕ ರಾಜ್ಯ ಸರ್ಕಾರದಿಂದ ಈವರೆಗೆ ಹಲವು ವಿಧದ ಯೋಜನೆಗಳು ಜಾರಿಯಾಗಿವೆ. ರಾಜ್ಯದ ಎಲ್ಲಾ ವರ್ಗದ ಜನರ ಏಳಿಗೆಯನ್ನು ಬಯಸುತ್ತಿರುವ ಸರ್ಕಾರವು ಕೃಷಿಕರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು ಹೀಗೆ ಎಲ್ಲರಿಗೂ ಕೂಡ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಸಹಾಯ ಮಾಡುತ್ತಿದೆ. ರಾಜ್ಯ ಸರ್ಕಾರದ ವತಿಯಿಂದ ಕರ್ನಾಟಕದ ಜನತೆಗೆ ಹಲವಾರು ಭಾಗ್ಯಗಳು ಸಿಕ್ಕಿರುವುದನ್ನು ನೋಡಿದ್ದೇವೆ.

WhatsApp Group Join Now
Telegram Group Join Now

ಅನ್ನಭಾಗ್ಯ, ಕೃಷಿಭಾಗ್ಯ, ಭಾಗ್ಯಲಕ್ಷ್ಮಿ, ಶಾಧಿಭಾಗ್ಯ ಇನ್ನೂ ಮುಂತಾದ ಅನೇಕ ಭಾಗ್ಯಗಳ ಯೋಜನೆ ಸಿಕ್ಕಿದ್ದು ಸಖಿಭಾಗ್ಯ ಎನ್ನುವ ಹೊಸದೊಂದು ಯೋಜನೆ ರೆಡಿ ಆಗಿದೆ. ರಾಜ್ಯ ಸರ್ಕಾರವು ಕಳೆದ ವರ್ಷ 2022ರ ಗೌರಿ ಹಬ್ಬದ ಸಮಯದಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಮೂಲಕ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು 3000 ಹಣ ನೀಡುವ ನಿರ್ಧಾರಕ್ಕೆ ಬಂದಿದೆ.

ಸಖಿ ಭಾಗ್ಯ ಎಂದರೇನು? ಸಖಿ ಎಂದರೇನು? ಯಾರು ಈ ಯೋಜನೆಗೆ ಅರ್ಹರು, ಇದಕ್ಕಾಗಿ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಯಾವ ರೀತಿಯಾಗಿ ಹಣ ಬರುತ್ತದೆ ಸಖಿ ಭಾಗ್ಯ ಯೋಜನೆಯಿಂದ ಸಿಗುವ ಇನ್ನು ಹೆಚ್ಚಿನ ಅನುಕೂಲತೆಗಳು ಏನು ಎನ್ನುವ ಎಲ್ಲ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ಮಹಿಳೆಯರು ಸಖಿ ಬಗ್ಗೆ ಯೋಚನೆ ಅಡಿ ಅರ್ಜಿ ಸಲ್ಲಿಸಬಹುದು.

ಅದಕ್ಕಾಗಿ ರಾಜ್ಯದ ಮಹಿಳೆಯರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಯೋಜನೆ ಕುರಿತಾದ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಮೊದಲಿಗೆ ಈ ಯೋಜನೆಯಲ್ಲಿ ಸಖಿ ಎನ್ನುವ ಪದದ ಅರ್ಥವನ್ನು ಹೇಳುವುದಾದರೆ ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ತಯಾರಿಸುವ ಉತ್ಪನ್ನಗಳ ಮೌಲ್ಯವರ್ಧನೆ, ಮಾರುಕಟ್ಟೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವುದಕ್ಕೆ ತರಬೇತಿ ಪಡೆದ ಸಿಬ್ಬಂದಿ ಸಖಿಯಾಗುತ್ತಾರೆ.

ಪ್ರತಿ ಪಂಚಾಯಿತಿ ವಲಯದಲ್ಲಿ ಇವರನ್ನು ನೇಮಕ ಮಾಡಲಾಗುತ್ತದೆ. ಪ್ರತಿ ಪಂಚಾಯಿತಿಗೆ ಐದು ಮಹಿಳಾ ಸದಸ್ಯರನ್ನು ಸಖಿಯರಾಗಿ ಆಯ್ಕೆ ಮಾಡಲಾಗುತ್ತದೆ. ಸಮುದಾಯ ಸಂಪನ್ಮೂಲ ವ್ಯಕ್ತಿಗಳ ರೀತಿ ಇವರು ಕಾರ್ಯ ನಿರ್ವಹಿಸುತ್ತಾರೆ. ಜೀವನೋಪಾಯ ವೃದ್ದಿಸುವುದರ ಜೊತೆಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಭಾಗದ ಮಹಿಳೆಯರಿಗೆ ಅನುಕೂಲತೆ ಮಾಡಿ ಕೊಡುವ ಉದ್ದೇಶವನ್ನು ಈ ಸಖಿ ಭಾಗ್ಯ ಯೋಜನೆ ಹೊಂದಿದೆ.

ಸಖಿ ಪರಿಕಲ್ಪನೆಯಲ್ಲಿ ವಿವಿಧ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುವ ಹೊಸ ಯೋಜನೆ ಇದಾಗಿದೆ. ಕೃಷಿ ಸಖಿ, ವನಸಖಿ, ಹೈನುಗಾರಿಕೆ ಸಖಿ, ಬ್ಯಾಂಕ್ ವಹಿವಾಟಿನ ಸಖಿ, ಡಿಜಿಟಲ್ ಪಾವತಿ ಸಖಿ ರೂಪದಲ್ಲಿ ಮಹಿಳೆಯರಿಗೆ ಉದ್ಯೋಗ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ. ಗ್ರಾಮೀಣ ಜೀವನಪಾಯ ಅಭಿಯಾನಕ್ಕೆ 10 ವರ್ಷಗಳಾದ ನೆಲೆಯಲ್ಲಿ ಹಲವು ಯೋಜನೆಗಳನ್ನು ಜಾರಿ ಮಾಡಿ ಸಖಿ ಭಾಗ್ಯ ಯೋಜನೆಯನ್ನು ಕೂಡ ಜಾರಿಗೆ ತರಲಾಗಿದೆ.

1000 ಕೋಟಿ ವೆಚ್ಚದಲ್ಲಿ ಯೋಜನೆಗೆ ಪ್ಲಾನ್ ನಡೆದಿದ್ದು, ಮಹಿಳೆಯರಿಗೆ ಸಂಬಂಧಿತ ಕ್ಷೇತ್ರದಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿ ಮುಗಿದ ಬಳಿಕ ಆ ಕ್ಷೇತ್ರದ ಕುರಿತು ಮಾಹಿತಿ ನೀಡುವ ಮತ್ತು ಸಂಬಂಧಿತ ಉದ್ಯೋಗಗಳಿಗೆ ಗ್ರಾಮಸ್ಥರನ್ನು ಉತ್ತೇಜಿಸುವ ಕೆಲಸ ಇವರದ್ದಾಗಿರುತ್ತದೆ. ಇದಕ್ಕಾಗಿ ಇವರಿಗೆ ಮೂರು ವರ್ಷಗಳವರೆಗೆ ಪ್ರತಿ ತಿಂಗಳ 3000 ಹಣ ಕೂಡ ಪ್ರೋತ್ಸಾಹ ಧನವಾಗಿ ಸರ್ಕಾರದ ಕಡೆಯಿಂದ ಸಿಗುತ್ತದೆ.

ಸಖಿಭಾಗ್ಯ ಯೋಜನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಹೇಳುವುದಾದರೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಿ ಆರ್ಥಿಕ ಚಟುವಟಿಕೆ ಹೆಚ್ಚಾಗುತ್ತದೆ. ಗ್ರಾಮೀಣ ಭಾಗದವರ ಜೀವನಮಟ್ಟ ಸುಧಾರಣೆ ಆಗಿ ಪ್ರತಿಯೊಂದು ವಿಷಯದ ಬಗ್ಗೆ ಮಾಹಿತಿ ದೊರೆಯುತ್ತದೆ. ಜೊತೆಗೆ ಮಹಿಳೆಯರ ಸಾಮರ್ಥ್ಯವು ಕೂಡ ವೃದ್ಧಿ ಆಗುತ್ತದೆ. ಸಖಿ ಭಾಗ್ಯ ಯೋಜನೆ ಕುರಿತಾಗಿ ಇನ್ನು ಸಮಗ್ರವಾದ ಮಾಹಿತಿ ಬೇಕಾದಲ್ಲಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now