ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಎಲ್ಲಾ ವರ್ಗದ ಜನರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮತ್ತು ಹೆಣ್ಣು ಮಕ್ಕಳ ಆರ್ಥಿಕ ಶಕ್ತಿ ಬಲಪಡಿಸುವುದರ ಕಡೆಗೆ ಹೆಚ್ಚು ಗಮನ ನೀಡಿರುವ ಇವರು ಹೆಣ್ಣು ಮಕ್ಕಳಿಗಾಗಿ ವಿಶೇಷ ಯೋಜನೆಗಳನ್ನು ಕೂಡ ಜಾರಿಗೆ ತಂದಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಜಾರಿಗೆ ತಂದ ಸುಕನ್ಯಾ ಸಮೃದ್ಧಿ ಯೋಜನೆ ದೇಶದಾದ್ಯಂತ ಎಲ್ಲಾ ಪೋಷಕರ ಗಮನ ಸೆಳೆದಿದೆ.
ಸುಕನ್ಯಾ ಸಮೃದ್ಧಿ ಯೋಜನೆ ಯನ್ನು ಹೆಣ್ಣು ಮಕ್ಕಳ ಹೆಸರಿನಲ್ಲಿ ಖರೀದಿ ಮಾಡಿದರೆ ಆ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ಬಳಿಕ ಅವರ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಥವಾ ಮದುವೆ ಖರ್ಚಿಗೆ ಅಥವಾ ಸ್ವಂತ ಉದ್ಯಮ ಮಾಡಲು ಬಯಸಿದರೆ ಆಗ ಬೇಕಾದ ಬಂಡವಾಳಕ್ಕೆ ಈ ಹಣ ಉಪಯೋಗಕ್ಕೆ ಬರುತ್ತದೆ.
ಈ ನಿಟ್ಟಿನಲ್ಲಿ ದೂರಲೋಚನೆಯಿಂದ ಹೆಣ್ಣು ಮಕ್ಕಳನ್ನು ಹೊಂದಿರುವ ಪೋಷಕರು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿ ಹಣ ಉಳಿಸುತ್ತಾ ಬರುತ್ತಾರೆ. ಸುಕನ್ಯಾ ಸಮೃದ್ಧಿ ಯೋಜನೆಯನ್ನು ಅಂಚೆ ಕಛೇರಿಗಳಲ್ಲಿ ಹೆಚ್ಚಿನ ಜನರು ಮಾಡಿಸುತ್ತಾರೆ. ಆದರೆ ಈಗ ಈ ಯೋಜನೆಯನ್ನು ದೇಶದಾದ್ಯಂತ ಎಲ್ಲಾ ಬ್ಯಾಂಕುಗಳಲ್ಲೂ ಕೂಡ ಖರೀದಿಸಬಹುದು. SBI ಬ್ಯಾಂಕ್ ಕೂಡ ಇಂತಹದೊಂದು ವ್ಯವಸ್ಥೆ ಮಾಡಿ ಕೊಟ್ಟಿದ್ದು SBI ಬ್ಯಾಂಕಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಮಾಡಿಸುವ ಹೆಣ್ಣು ಮಕ್ಕಳ ಪೋಷಕರು ಆ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ಬಳಿಕ 15 ಲಕ್ಷಗಳವರೆಗೂ ರಿಟರ್ನ್ಸ್ ಪಡೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೆಣ್ಣುಮಕ್ಕಳ ಖಾತೆ ತೆರೆದು ಹಣ ಹೂಡಿಕೆ ಮಾಡಬೇಕು ಎಂದರೆ ಅದರದ್ದೇ ಆದ ಕೆಲವು ನಿಯಮಗಳು ಇವೆ. ಅದೇನೆಂದರೆ ಹೆಣ್ಣುಮಕ್ಕಳ ಹೆಸರಿನಲ್ಲಿ ಮಾತ್ರ ಈ ಖಾತೆ ತೆರೆಯಬಹುದು. ಹೆಣ್ಣು ಮಗುವಿಗೆ 10 ವರ್ಷ ತುಂಬುವುದರೊಳಗೆ ಈ ಯೋಜನೆ ಖರೀದಿ ಮಾಡಬೇಕು. ಒಂದು ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಸುಕನ್ಯ ಸಮೃದ್ಧಿ ಯೋಜನೆ ಖಾತೆ ತೆರೆಯಲು ಮಾತ್ರ ಸಾಧ್ಯ. ವರ್ಷಕ್ಕೆ 250 ರೂಪಾಯಿ ಇಂದ 1.5 ಲಕ್ಷದವರೆಗೆ ಈ ಯೋಜನೆಯಲ್ಲಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುತ್ತಾ ಬರಬಹುದು.
ಇದನ್ನು ಮಾಸಿಕವಾಗಿ ಕೂಡ ಪಾವತಿಸುವ ಅವಕಾಶಗಳು ಇವೆ. ಒಂದು ವೇಳೆ ಒಂದು ವರ್ಷದಲ್ಲಿ ನೀವು ನಿಗದಿತವಾಗಿ ಹೂಡಿಕೆ ಮಾಡುತ್ತಿದ್ದಷ್ಟು ಮೊತ್ತ ಹೂಡಿಕೆ ಮಾಡಲು ಸಾಧ್ಯವಾಗದೆ ಹೋದರೆ ಕನಿಷ್ಠ 250 ರೂಪಾಯಿ ಆದರೂ ಪಾವತಿಸಿ ಯೋಜನೆ ಮುಂದುವರಿಸಬಹುದು. ಟ್ವೀಟ್ ಮಾಡುವ ಮೂಲಕ SBI ತನ್ನ ಬ್ಯಾಂಕಿನಲ್ಲಿ ಕೂಡ ಸುಕನ್ಯಾ ಸಮೃದ್ಧಿ ಯೋಜನೆ ಖರೀದಿಸಬಹುದು ಎನ್ನುವ ಅಂಶವನ್ನು ತಿಳಿಸಿದೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ಹಿಂಪಡೆಯುವಾಗ 80CC ಅಡಿಯಲ್ಲಿ ಇನ್ಕಮ್ ಟ್ಯಾಕ್ಸ್ ರಿಯಾಯಿತಿ ಸಿಗಲಿದೆ.
ಹೆಣ್ಣು ಮಕ್ಕಳಿಗಾಗಿಯೇ ಇರುವಂತೆ ಯೋಚನೆ ಇದಾಗಿತ್ತು ಪೋಷಕರು ತಮ್ಮ ಮೊದಲ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆಯನ್ನು ಮಾಡಿಸಬಹುದು. ಒಂದು ವೇಳೆ ಎರಡನೇ ಮಗು ಜನಿಸಿದ ವೇಳೆಯಲ್ಲಿ ಅವಳಿ ಹೆಣ್ಣು ಮಕ್ಕಳಾಗಿದ್ದರೆ ಆಗ ಮೂರು ಹೆಣ್ಣು ಮಕ್ಕಳ ಹೇಳಲು ಈ ಖಾತೆ ತೆರೆಯಬಹುದು. 7.6% ಬಡ್ಡಿದರವು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣದ ಮೇಲೆ ಸಿಗಲಿದೆ. ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದ ಅಂಚೆ ಕಚೇರಿ ಸಂಪರ್ಕಿಸಿ ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿಕೊಟ್ಟು ತಿಳಿದುಕೊಳ್ಳಬಹುದು.