ಈಗಷ್ಟೇ ರಾಜ್ಯದಾದ್ಯಂತ ದ್ವಿತೀಯ PUC ಪರೀಕ್ಷೆ ಫಲಿತಾಂಶ ಅನೌನ್ಸ್ ಆಗಿದೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಇರುವ ಯೋಜನೆಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಕರ್ನಾಟಕ ರಾಜ್ಯ ದ್ವಿತೀಯ PUC ಪರೀಕ್ಷೆ ಉತ್ತೀರ್ಣವಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್ಟಾಪ್ ವಿತರಣೆ ಮಾಡಲಾಗುತ್ತಿದೆ.
ಕರ್ನಾಟಕ ರಾಜ್ಯ ಸರ್ಕಾರದಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಸೌಲಭ್ಯ ಇದಾಗಿದ್ದು, ಈವರೆಗೆ ಸಾಕಷ್ಟು ವಿದ್ಯಾರ್ಥಿಗಳು ಈ ಯೋಜನೆ ಪ್ರಯೋಜನ ಪಡೆದಿದ್ದಾರೆ. ಸದ್ಯಕ್ಕೆ 2024ನೇ ಸಾಲಿನ ಕರ್ನಾಟಕ ಉಚಿತ ಲ್ಯಾಪ್ಟಾಪ್ ಯೋಜನೆ ನೊಂದಣಿ ನಡೆಯುತ್ತಿದ್ದು ದ್ವಿತೀಯ PUC ಪಾಸಾಗಿರುವ ಎಲ್ಲರೂ ಸಹ ಅರ್ಜಿ ಸಲ್ಲಿಸಿ, ಈ ಯೋಜನೆಯ ಫಲಾನುಭವಿಗಳಾಗಬಹುದು. ವಿದ್ಯಾರ್ಥಿಗಳಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಈ ಅಂಕಣದಲ್ಲಿ ಸರ್ಕಾರದ ಈ ಉಚಿತ ಲ್ಯಾಪ್ಟಾಪ್ ಯೋಚನೆ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
ಕರ್ನಾಟಕ ಉಚಿತ ಲ್ಯಾಪ್ಟಾಪ್ ಯೋಜನೆ 2023 ನೊಂದಣಿ ಫಾರಂ https://dice.karnataka.gov.in ವೆಬ್ ಸೈಟಲ್ಲಿ ಲಭ್ಯವಿದೆ. ದ್ವಿತೀಯ PUC ಪಾಸಾದ ಎಲ್ಲಾ ಅರ್ಜಿದಾರರು ಈಗ ಈ ಯೋಜನೆಯ ಮೂಲಕ ಲ್ಯಾಪ್ಟಾಪ್ ಪಡೆಯಲು ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದು.
● ಯೋಜನೆ ಹೆಸರು :- ಕರ್ನಾಟಕ ಉಚಿತ ಲ್ಯಾಪ್ಟಾಪ್ ಯೋಜನೆ.
● ಮೂಲ :- ರಾಜ್ಯ ಸರ್ಕಾರ
● ಪ್ರಮುಖ ಫಲಾನುಭವಿಗಳು :- ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳು.
● ಉದ್ದೇಶ :- ಉಚಿತ ಲ್ಯಾಪ್ಟಾಪ್‌ಗಳನ್ನು ಒದಗಿಸುವುದು.
● ಅಧಿಕೃತ ಜಾಲತಾಣ :-
1. https://dce.karnataka.gov.in/
2. https://dce.kar.nic.in/
● ಕರ್ನಾಟಕ ಉಚಿತ ಲ್ಯಾಪ್ಟಾಪ್ ಸ್ಕೀಮ್ ನೋಂದಣಿ ಮತ್ತು ಅನ್ವಯಿಸುವ ಬಗೆ…
1. ಉಚಿತ ಲ್ಯಾಪ್ಟಾಪ್ ಯೋಜನೆ 2023 ಕ್ಕಾಗಿ ಮೊದಲು ಕಾಲೇಜು ಶಿಕ್ಷಣ ಅಧಿಕೃತ ವೆಬ್ಸೈಟ್ https://dce.karnataka.gov.in/ ಗೆ ಭೇಟಿಕೊಡಬೇಕು.
2. ಮುಖಪುಟದಲ್ಲಿ ಅಧಿಕೃತ ವೆಬ್ಸೈಟ್ ನಲ್ಲಿರುವ ಲ್ಯಾಪ್ಟಾಪ್ ಸ್ಕೀಮ್ ಟ್ಯಾಬ್ ನಲ್ಲಿ ಕ್ಲಿಕ್ ಮಾಡಿ.
3. ಅರ್ಜಿದಾರರು ಕರ್ನಾಟಕ ಉಚಿತ ಲ್ಯಾಪ್ಟಾಪ್ ಯೋಜನೆಯ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಲು ಕಾಣುವ ಲಿಂಕ್ ಅನ್ನು ನೇರವಾಗಿ ಕ್ಲಿಕ್ ಮಾಡಬೇಕು.
4. ನಂತರ ಉಚಿತ ಲ್ಯಾಪ್ಟಾಪ್ ಯೋಜನೆಯ ಅರ್ಜಿ ಫಾರಂ ಕಾಣುತ್ತದೆ. ಆ ಪಿಡಿಎಫ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಂಡರೆ ಅರ್ಜಿ ಫಾರಂ ಓಪನ್ ಆಗುತ್ತದೆ.
5. ಅದರ ಹೆಡ್ ಲೈನ್ ಡಿಪಾರ್ಟ್ಮೆಂಟ್ ಆಫ್ ಕಾಲೇಜಿಯೇಟ್ ಎಜುಕೇಶನ್ , ಸ್ಟುಡೆಂಟ್ ಇನ್ಫಾರ್ಮಶನ್ ಫಾರ್ ಇಶ್ಯು ಆಫ್ ಫ್ರೀ ಲ್ಯಾಪ್ಟಾಪ್ ಕಂಪ್ಯೂಟರ್ ಫಾರ್ SC/ST ಸ್ಟೂಡೆಂಟ್ಸ್ ಅಂಡರ್ SCP / TSP ಸ್ಕೀಮ್ ಎಂದು ಇದೆ. ಇದರಲ್ಲಿ SC&ST
ಸ್ಟೂಡೆಂಟ್ಸ್ ಎಂದು ಮೆನ್ಷನ್ ಮಾಡಿರುವುದರಿಂದ ಹಲವರು ಈ ಯೋಜನೆ SC,ST ವಿದ್ಯಾರ್ಥಿಗಳಿಗೆ ಮಾತ್ರ ಎಂದುಕೊಂಡಿದ್ದಾರೆ. ಆದರೆ ಮೊದಲ ಆದ್ಯತೆ SC,ST ವಿದ್ಯಾರ್ಥಿಗಳಿಗೆ ನಂತರದಲ್ಲಿ, OBC ಅಭ್ಯರ್ಥಿಗಳಿಗೂ ಕೂಡ ಉಚಿತ ಲ್ಯಾಪ್ಟಾಪ್ ಸಿಗುತ್ತದೆ.
● ಡೌನ್ಲೋಡ್ ಮಾಡಿಕೊಂಡ ಅಜ್ಜಿ ಫಾರಂ ಅಲ್ಲಿ ನಿಮ್ಮ ಹೆಸರು, ತಂದೆ ಹೆಸರು, ಜಾತಿ ವಿವರ, ವಿಳಾಸ ಸೇರಿದಂತೆ ಸಂಪೂರ್ಣ ವಿವರಗಳನ್ನು ಕೂಡ ಕೇಳಿರುವ ವಿಷಯಗಳಿಗೆ ಸರಿಯಾಗಿ ಫಿಲ್ ಮಾಡಬೇಕು.
● ನಂತರ ಮುಂದಿನ ಹಂತ ಹೇಗಿರುತ್ತದೆ ಹಾಗೂ ಹೇಗೆ ಮುಂದುವರೆಯಬೇಕು ಎನ್ನುವುದನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ…