ಭಾರತದಲ್ಲಿ ಕೃಷಿಯು ಮಳೆ ಜೊತೆಗೆ ಆಡುವ ಜೂಜಾಟ ಎಂದು ಬಹಳ ಹಿಂದೆಯೇ ಅರ್ಥಶಾಸ್ತ್ರಜ್ಞರು ಬರೆದಿದ್ದಾರೆ. ಈಗ ಮಳೆ ಜೊತೆ ಪ್ರಕೃತಿ ಜೊತೆಗೆ ಆಡುವ ಆಟ ಎಂದರೆ ತಪ್ಪಾಗಬಾರದು. ಯಾಕೆಂದರೆ ಒಮ್ಮೆ ಅತಿಯಾಗಿ ಮಳೆ ಸುರಿದು ಅತಿವೃಷ್ಟಿ ಆದರೆ, ಮಳೆ ಬಾರದೆ ಬರಗಾಲ ಇನ್ನೊಂದು ರೀತಿಯ ಪೆಟ್ಟು ಕೊಡುತ್ತದೆ. ವಾತಾವರಣದಲ್ಲಿ ಬಿಸಿಲು ಗಾಳಿ ಮಳೆಯಿಂದ ರೈತರು ಬೆಳೆದ ಕೃಷಿ ಪದಾರ್ಥಗಳು ಹಾಳಾಗುತ್ತಿವೆ. ಈಗಾಗಲೇ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದೆ.
ಇಡೀ ದೇಶಕ್ಕೆ ಅನ್ನ ಕೊಡುವ ರೈತ ಬೆಳೆ ಬೆಳೆಯಲು ಆಗದೆ ತತ್ತರಿಸಿ ಹೋಗಿದ್ದಾನೆ. ಅಲ್ಲದೇ ಬೆಳೆದ ಬೆಳೆಗೆ ಪರಿಶ್ರಮಕ್ಕೆ ಪ್ರತಿಫಲ ಸಿಗದೇ ಹೋದರೆ ಆತನ ಪಾಡು ಹೇಳ ತೀರದು. ಹಾಗಾಗಿ ಇಂತಹ ಸಮಯದಲ್ಲಿ ಕೈಹಿಡಿಯಲು ಸರ್ಕಾರಗಳು ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಬಾರಿ ಬಜೆಟ್ ಆದಾಗಲೂ ಕೂಡ ರೈತರ ಬಗ್ಗೆ ಕಾಳಜಿ ವಹಿಸಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ.
ಜೊತೆಗೆ ಸಂಪುಟ ಸಭೆ ಚರ್ಚೆಗಳನ್ನು ಕೂಡ ರೈತರ ಕಷ್ಟಗಳ ವಿಚಾರ ಚರ್ಚೆ ಆಗುತ್ತವೆ. ಇದೇ ರೀತಿಯ ಒಂದು ವಿಷಯ ಕಳೆದ ವರ್ಷ 10.08.2023 ರಂದು ನಡೆದ ಸಂಪುಟ ಸಭೆಯಲ್ಲಿ ಚರ್ಚೆಯಾಗಿ ತೀರ್ಮಾನ ಕೂಡ ಆಯ್ತು. ಅದೇನೆಂದರೆ ಕಳೆದ ವರ್ಷ ಜುಲೈ ತಿಂಗಳಲ್ಲಿ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ಅನೇಕ ಕಡೆ ಬಿದ್ದ ಅತಿಯಾದ ಮಳೆ ಪ್ರಭಾವದಿಂದ ರಾಜ್ಯದ ಅನೇಕ ಭಾಗಗಳಲ್ಲಿ ರೈತರ ಬೆಳೆ ನಾಶ ಆಗಿತ್ತು.
ಈ ರೀತಿ ರೈತರ ಬೆಳೆ ಚಂಡಮಾರುತ, ಅತಿವೃಷ್ಟಿ , ಅನಾವೃಷ್ಟಿ ಪ್ರವಾಹ ನೈಸರ್ಗಿಕ ವಿಕೋಪಗಳಿಗೆ ಒಳಗಾಗಿ ಹಾಳಾದರೆ ಆಗ ಸರ್ಕಾರ ರೈತನಿಗೆ ಸಹಾಯಕ್ಕೆ ಬರುತ್ತದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಉಂಟಾದಾಗ ಸರ್ಕಾರದ ರಾಜ್ಯ ವಿಪತ್ತು ಸ್ಪಂದನ ನಿಧಿಯಿಂದ ನಿಗದಿತ ದರದಲ್ಲಿ ಇನ್ಪುಟ್ ಸಬ್ಸಿಡಿ ರೂಪದಲ್ಲಿ ಒಂದು ಬಾರಿ ಸಹಾಯಧನ ನೀಡಲಾಗುತ್ತದೆ. ಕಳೆದ ವರ್ಷ ಪ್ರಕೃತಿ ವಿಕೋಪದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರ ಬೆಳೆ ಹಾನಿಯಾಗಿತ್ತು.
ಸಂತಸ್ಥ ರೈತರಿಗೆ ಹೂಡಿಕೆ ಕಳೆದ ರೂಪದಲ್ಲಿ ಸಹಾಯದಿಂದ ನೀಡಲು ಸರ್ಕಾರ ಅರ್ಜಿ ಕೂಡ ಆಹ್ವಾನಿಸಿತ್ತು. ಆ ಸಮಯದಲ್ಲಿ ಅರ್ಜಿ ಸಲ್ಲಿಸಿ ನಿಖರವಾದ ದಾಖಲೆ ಒದಗಿಸಿದ್ದ ಸಾಕಷ್ಟು ರೈತರಿಗೆ ಈಗಾಗಲೇ ಪರಿಹಾರದ ಹಣ ರೈತರ ಖಾತೆಗಳಿಗೆ ಜಮೆ ಆಗಿದೆ. ಕೆಲ ಜಿಲ್ಲೆಯ ರೈತರುಗಳಿಗೆ ಹಣ ಜಮೆ ಆಗುವುದು ಬಾಕಿ ಇತ್ತು, ಈಗ ಸರ್ಕಾರ ಮತ್ತೊಂದು ಫಲಾನುಭವಿಗಳ ಲಿಸ್ಟ್ ಅನ್ನು ಅನೌನ್ಸ್ ಮಾಡಿದೆ. ಈ ಬಾರಿ ಮತ್ತೊಂದಿಷ್ಟು ಜಿಲ್ಲೆಯ ರೈತರುಗಳು ಈ ಸಹಾಯಧನ ಪಡೆಯಲಿದ್ದಾರೆ.
ಈಗಾಗಲೇ ಈ ಯೋಜನೆಯ ಫಲಾನುಭವಿಗಳಾಗಿರುವ ಅಭ್ಯರ್ಥಿಗಳು ಹೇಳುತ್ತಿರುವ ಮಾಹಿತಿ ಪ್ರಕಾರ ಪ್ರತಿ ಎಕರೆಗೆ 10 ಸಾವಿರ ರೂಗಳು ಸಹಾಯಧನವಾಗಿ ಸರ್ಕಾರ ನೀಡುತ್ತದೆಯಂತೆ. ನೀವು ಸಹ ರೈತರಾಗಿದ್ದು ನೀವೇನಾದರೂ ಕಳೆದ ವರ್ಷ ಈ ರೀತಿ ಬೆಳೆ ಹಾನಿ ಹಣಕ್ಕೆ ಅರ್ಜಿ ಸಲ್ಲಿಸಿದ್ದರೆ ಫಲಿನುಭವಿಗಳ ಲಿಸ್ಟ್ ಅನ್ನು ಸಹ ಸರ್ಕಾರ ಹೊರ ಹಾಕಿದೆ. ಆ ಲಿಸ್ಟ್ ಅಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿಕೊಳ್ಳಿ. ಈ ರೀತಿ ನಿಮ್ಮ ಹೆಸರು ಲಿಸ್ಟ್ ಅಲ್ಲಿ ಇದೆಯಾ, ನೀವು ಸಹ ಇದನ್ನು ಪಡೆದಿದ್ದೀರಾ ಎನ್ನುವ ಎಲ್ಲಾ ವಿವರಗಳನ್ನು ತಿಳಿದುಕೊಳ್ಳಲು ರೈತ ಬೆಳೆ ಪರಿಹಾರ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ.