SBI ಬ್ಯಾಂಕ್ ನಲ್ಲಿ ಅಕೌಂಟ್ ಇದಿಯಾ.? ಹಾಗಿದ್ರೆ ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ.! ಗ್ರಾಹಕರಿಗಾಗಿ ಹೊಸ ಯೋಜನೆ ಜಾರಿ.

 

WhatsApp Group Join Now
Telegram Group Join Now

ಸದ್ಯಕ್ಕಿಗ ಎಲ್ಲಾ ಸರಕು ಮತ್ತು ಸೇವೆಗಳ ಗುರಿ ಗ್ರಾಹಕರನ್ನು ಮೆಚ್ಚಿಸುವುದಾಗಿದೆ. ಅದಕ್ಕಾಗಿ ಸದಾ ಒಂದಲ್ಲ ಒಂದು ಹೊಸ ರೀತಿಯ ಪ್ರಯೋಗಗಳನ್ನು ಹಾಗೂ ಗ್ರಾಹಕರಿಗೆ ಇಚ್ಛೆ ಆಗುವಂತಹ ಅನುಕೂಲ ಆಗುವಂತಹ ಯೋಜನೆಗಳನ್ನು ಪ್ರತಿ ಕಂಪೆನಿಗಳು ಕೂಡ ತರುತ್ತಲೇ ಇದೆ. ಅದರಲ್ಲಿ ಸೋಶಿಯಲ್ ಮೀಡಿಯಾ ಸೇವೆಗಳು ಹೊರತ್ತೇನಲ್ಲ ಅವು ಸಹ ಪದೇ ಪದೇ ಅಪ್ಡೇಟ್ ಆಗುತ್ತಿದ್ದು ಒಂದಕ್ಕಿಂತ ಒಂದು ಆವೃತ್ತಿ ಮೂಲಕ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲು ಪ್ರಯತ್ನಿಸುತ್ತಿವೆ.

ಅದರಲ್ಲಿ ವಾಟ್ಸಪ್ ಅಪ್ಲಿಕೇಶನ್ ಕೂಡ ಒಂದು. ಇದೀಗ ತನ್ನ ಹೊಸ ಫೀಚರ್ ಜೊತೆ ಹೊರ ಬಿದ್ದಿದೆ. ಆ ಮೂಲಕ ನೀವು ಬ್ಯಾಂಕನ್ನು ಕೂಡ ವಾಟ್ಸಪ್ ಮೂಲಕ ಸಂಪರ್ಕಿಸಬಹುದಾಗಿದೆ. ಸರಿಯಾದ ಮಾಹಿತಿಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ. ಸ್ಪ್ಲಿಟ್ ವ್ಯು ಎನ್ನುವುದು ಇತ್ತೀಚೆಗೆ ಎಲ್ಲಾ ಸ್ಮಾರ್ಟ್ಫೋನ್ ಬಳಕೆದಾರರು ಇಚ್ಛೆ ಪಡುತ್ತಿರುವ ಒಂದು ಪ್ರಮುಖ ಫೀಚರ್ ಆಗಿದೆ. ಕಾರಣ ಇಷ್ಟೇ ಯಾಕೆಂದರೆ ಒಮ್ಮೆಗೆ ಎರಡು ಆಪ್ ಗಳನ್ನು ಇದರಿಂದ ನೀವು ಓಪನ್ ಮಾಡಬಹುದು.

ಈವರೆಗೆ ಸ್ಮಾರ್ಟ್ ಫೋನ್ ಗಳಲ್ಲಿ ಈ ರೀತಿ ಎರಡು ಫೀಚರ್ಸ್ ಗಳನ್ನು ಒಟ್ಟಿಗೆ ಓಪನ್ ಮಾಡುವ ಅನುಕೂಲ ಇದ್ದರೂ ಎಲ್ಲಾ ಆಪ್ ಗಳು ಕೂಡ ಇದಕ್ಕೆ ಬೆಂಬಲಿಸುತ್ತಿರಲಿಲ್ಲ. ಕೆಲವೇ ಕೆಲವು ಆಯ್ದ ಆಪ್ ಗಳನ್ನು ಈ ರೀತಿ ಓಪನ್ ಮಾಡಬಹುದಿತ್ತು. ಇದೀಗ ವಾಟ್ಸಪ್ ಕೂಡ ಅದಕ್ಕೆ ಸೇರಿಕೊಂಡಿದೆ. ಈ ಮೂಲಕ ತನ್ನ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಜೊತೆಗೆ ಇದುವರೆಗೆ ವಾಟ್ಸಪ್ ಅಲ್ಲಿ ಸ್ಟೇಟಸ್ ನೋಡಬಹುದು ಹಾಕಬಹುದಿತ್ತು ಇನ್ನು ಮುಂದೆ ಅದನ್ನು ರಿಪೋರ್ಟ್ ಕೂಡ ಮಾಡುವ ಅವಕಾಶ ಸಿಗಲಿದೆ.

ಹಾಗೆಯೇ ಬ್ಯಾಂಕಿಂಗ್ ಸೇವೆಯಲು ಕೂಡ ವಾಟ್ಸಪ್ ಮೂಲಕ ಹೊಸ ಅನುಕೂಲ ಬರುತ್ತಿದೆ. ಅದೇನೆಂದರೆ ನಿಮ್ಮ ಬ್ಯಾಂಕ್ ಮಾಹಿತಿಯನ್ನು ನೀವು ವಾಟ್ಸಪ್ ಮೂಲಕ ಪಡೆಯಬಹುದಾಗಿದೆ. ಅದರಲ್ಲೂ SBI ಬ್ಯಾಂಕ್ ಖಾತೆ ಹೊಂದಿರುವವರಿಗೆ ಮೊಟ್ಟಮೊದಲ ಬಾರಿಗೆ ಈ ರೀತಿಯ ಫೀಚರ್ ಅನುಕೂಲತೆ ಸಿಗುತ್ತಿದೆ. ಇದನ್ನು ಅಧಿಕೃತವಾಗಿ SBI ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚುವ ಮೂಲಕ ಅನೌನ್ಸ್ ಮಾಡಿದೆ. ನಿಮ್ಮ ಬ್ಯಾಂಕ್ ಈಗ ವಾಟ್ಸಪ್ಪ್ ಅಲ್ಲಿ ಲಭ್ಯವಿದೆ, ಇದೀಗ ವಾಟ್ಸಪ್ ಮೂಲಕ ನಿಮ್ಮ ಖಾತೆ ಹಣ ಮತ್ತು ಮಿನಿ ಸ್ಟೇಟ್ಮೆಂಟ್ ಅನ್ನು ನೀವು ಕುಳಿತಲ್ಲಿಯೇ ಪಡೆಯಬಹುದು ಎನ್ನುವುದನ್ನು ಹೇಳಿದೆ.

ಈಗ ಎಲ್ಲಾ ವಾಟ್ಸಪ್ ಭಾರತೀಯ ಸ್ಟೇಟ್ ಬ್ಯಾಂಕ್ ಬಳಕೆದಾರರು ಈ ಅನುಕೂಲತೆಯನ್ನು ಪಡೆಯಬಹುದಾಗಿದೆ. ಅದರ ವಿಧಾನ ಹೇಗಿದೆ ಎನ್ನುವುದರ ವಿವರ ಇಲ್ಲಿದೆ ನೋಡಿ. SBI ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳ ಲಾಭ ಪಡೆಯಲು ಮೊದಲಿಗೆ ನೀವು ಬ್ಯಾಂಕಲ್ಲಿ ಕೂಡ ನೀಡಿರುವ ನಿಮ್ಮ 10 ಸಂಖ್ಯೆ ಮೊಬೈಲ್ ನಂಬರ್ ಇಂದ 917208933148 ಗೆ SMS WAREG a/c No. ಹೀಗೆ ಟೈಪ್ ಮಾಡಿ ಕಳುಹಿಸಬೇಕು‌.

ಆಗ ನಿಮಗೆ ಅಕೌಂಟ್ ಬ್ಯಾಲೆನ್ಸ್ ಮಿನಿ ಸ್ಟೇಟ್ಮೆಂಟ್ ಅಥವಾ ವಾಟ್ಸಪ್ ಇಂದ ಡಿ ರಿಜಿಸ್ಟರ್ ಮಾಡಿ ಎನ್ನುವ ಆಪ್ಷನ್ ಗಳು ಬರುತ್ತವೆ. ಅದರಲ್ಲಿ ಬೇಕಾದ್ದನ್ನು ಟೈಪ್ ಮಾಡಿ ಮತ್ತೆ ಸೆಂಡ್ ಮಾಡಿದರೆ ಅದರ ಡೀಟೇಲ್ಸ್ ನಿಮಗೆ ಬರಲಿದೆ. ಇನ್ನೂ ಕೆಲ ಹೊಸ ಫ್ಯೂಚರ್ ಗಳ ಬಗ್ಗೆ ವಾಟ್ಸಪ್ ಪರೀಕ್ಷೆ ನಡೆಸುತ್ತಿದ್ದು ಶೀಘ್ರದಲ್ಲೇ ಇನ್ನಷ್ಟು ಅನುಕೂಲತೆಗಳನ್ನು ವಾಟ್ಸಪ್ ಇಂದ ನಿರೀಕ್ಷಿಸಬಹುದಾಗಿದೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಧನ್ಯವಾದಗಳು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now