ಸೆಪ್ಟೆಂಬರ್ 26ಕ್ಕೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ವರ್ಗಾವಣೆ, ಈ ಮಹಿಳೆಯರಿಗೆ ಮಾತ್ರ.!

 

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ (Guarantee Scheme) ಜಾರಿಯಾಗಿರುವ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಸಹಾಯಧನವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುವ ಕಾರ್ಯಕ್ರಮಕ್ಕೆ ಆಗಸ್ಟ್ 30ರಂದು ಚಾಲನೆ ನೀಡಲಾಗಿದೆ. ಅಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದ ಎಲ್ಲಾ ಅರ್ಹ ಫಲಾನುಭವಿಗಳು ಬ್ಯಾಂಕ್ ಖಾತೆಗಳಿಗೂ DBT ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ.

ಸರ್ಕಾರವು 2023-24ನೇ ಸಾಲಿಗೆ 17,000 ಕೋಟಿ ಬಜೆಟ್ ಅಂದಾಜಿಸಿ ಈಗಾಗಲೇ ಆಗಸ್ಟ್ ಮತ್ತು ಸೆಪ್ಟೆಂಬರ್ ಕಂತಿನ ಬಜೆಟ್ ಮೊತ್ತ 4.600 ಕೋಟಿ ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ (Women and Welfare department) ಮಂಜೂರು ಮಾಡಿದೆ. ಯೋಜನೆ ಲಾಂಚ್ ಆಗಿ 25 ದಿನ ಕಳೆಯುತ್ತಿದ್ದರೂ ಇನ್ನೂ ಅನೇಕ ಮಹಿಳೆಯರಿಗೆ ಹಣ ತಲುಪಿಲ್ಲ ಹೀಗಾಗಿ ಅವರೆಲ್ಲ ಗೊಂದಲಕ್ಕೆ ಒಳಗಾಗಿದ್ದಾರೆ.

ನೀರಿನ ಬಾಟಲ್, ಫ್ಲಾಸ್ಕ್, ಕ್ಯಾನ್ ಗಳನ್ನು ಕ್ಲೀನ್ ಮಾಡಲು ಕಷ್ಟ ಪಡುವುದು ಬೇಡ ಇಲ್ಲಿದೆ ನೋಡಿ ಸುಲಭವಾದ ಟ್ರಿಕ್.!

ಇದರ ನಡುವೆ ಎರಡನೇ ಕಂತಿನ ಹಣ ಬಿಡುಗಡೆ ದಿನಾಂಕ ಕೂಡ ಘೋಷಣೆಯಾಗಿದೆ ಹಾಗಾಗಿ ಮೊದಲನೇ ಕಂತಿನಿಂದ ವಂಚಿತರಾದವರು ನಮಗೆ ಮೊದಲ ಕಂತಿನ ಹಣ ಬರುವುದಿಲ್ಲವೇ ಎನ್ನುವ ಆತಂಕದಲ್ಲಿದ್ದಾರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಗೃಹಲಕ್ಷ್ಮಿ ಯೋಜನೆ ಮೊದಲನೇ ಕಂತಿನ ಹಣ ಪಡೆಯಲು 1.1 0 ಕೋಟಿ ಮಹಿಳೆಯರು ಅರ್ಹರಾಗಿದ್ದು.

ಇವರಲ್ಲಿ 6-7 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಗೆ ಮಾತ್ರ ತಾಂತ್ರಿಕ ಸಮಸ್ಯೆಗಳಿಂದ (tenchnical issues) ಕಾರಣದಿಂದಾಗಿ ಹಣ ತುಂಬಿಸಲು ಆಗುತ್ತಿಲ್ಲ, ಉಳಿದ ಎಲ್ಲಾ ಫಲಾನುಭವಿಗಳ ಖಾತೆಗೂ RBI ನಿಯಮಾನುಸಾರ ಹಣ ವರ್ಗಾವಣೆ ಮಾಡಲಾಗುತ್ತಿದೆ. ಆದರೆ ಮೊದಲ ಕಂತಿನ ಹಣವಾಗಿರುವುದರಿಂದ ಅರ್ಜಿ ಪರಿಶೀಲನೆ ಮತ್ತು ಇನ್ನಿತರ ಕ್ರಮಗಳಿಂದಾಗಿ ಸಮಯ ತೆಗೆದುಕೊಳ್ಳುತ್ತಿದೆ.

ರೈತರ ಜಮೀನಿನಲ್ಲಿ ಇರುವ ಅಕ್ರಮ ಪಂಪ್ ಸೆಟ್ ಗಳಿಗೆ ಸಕ್ರಮ ಭಾಗ್ಯ ನೀಡಲು ಮುಂದಾದ ಸರ್ಕಾರ ಯಾವ ರೀತಿಯ ಪಂಪ್ ಸೆಟ್ ಗಳು ಸಕ್ರಮವಾಗಲಿದೆ ನೋಡಿ.!

ಈ ಮೇಲೆ ತಿಳಿಸಿದಂತೆ ಬ್ಯಾಂಕ್ ಖಾತೆ ಸಮಸ್ಯೆ ಇರುವವರು ಹೊರತುಪಡಿಸಿ ಉಳಿದ ಎಲ್ಲಾ ಫಲಾನುಭವಿಗಳು ಕೂಡ ಸೆಪ್ಟೆಂಬರ್ 26ಕ್ಕೆ ಎರಡು ಕಂತಿನ ಗೃಹಲಕ್ಷ್ಮಿ ಹಣ ಪಡೆಯಲಿದ್ದಾರೆ. ಈಗಾಗಲೇ ಮೊದಲನೇ ಕಂತಿನ ಹಣ ಪಡೆದವರು ಎರಡನೇ ಕಂತಿನ ಹಣ ಹಾಗೂ ಹಣ ಪಡೆಯಲು ವಿಳಂಬ ಆಗಿರುವವರು ಒಟ್ಟಿಗೆ ಎರಡು ಕಂತಿನ ರೂ.4,000 ಪಡೆಯಲಿದ್ದಾರೆ ಎನ್ನುವ ಮಾಹಿತಿಯನ್ನು ಇಲಾಖೆಯ ಮೂಲಗಳು ತಿಳಿಸಿವೆ.

ಬ್ಯಾಂಕ್ ಖಾತೆ ಆಕ್ಟಿವ್ ಆಗಿರದ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ (aadhar seeding NPCI mapping to bank account) ಆಗಿರದ ಅಥವಾ ಮಾಹಿತಿ ಹೋಂದಾಣಿಕೆಯಾಗದ ಸಮಸ್ಯೆಯುಳ್ಳ ಮಹಿಳೆಯರು ಆ ಸಮಸ್ಯೆಗಳನ್ನು ಸರಿಪಡಿಸಿಕೊಂಡ ನಂತರವೇ ಅವರ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ ಎಂದಿದ್ದಾರೆ.

ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿ, S.S.L.C ಆಗಿದ್ದರೂ ಸಾಕು ಅರ್ಜಿ ಸಲ್ಲಿಸಿ.!

ಇನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಕೂಡ ಸಾವಿರಾರು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿರುವುದು ತಿಳಿದುಬಂದಿದೆ, ಇವರೆಲ್ಲರಿಗೂ ಮೊದಲನೇ ಕಂತಿನ ಹಣ ಪಡೆಯಲು ಮಾತ್ರ ಅರ್ಹರಾಗಿರುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಗಳು ಮಾಹಿತಿ ತಿಳಿಸಿವೆ.

ಹಾಗೆಯೇ ಗೃಹಲಕ್ಷ್ಮಿ ಯೋಜನೆಗೆ ಯಾವುದೇ ಕಡೆಯ ದಿನಾಂಕವನ್ನು ನಿಗದಿಪಡಿಸಿಲ್ಲ ಹಾಗಾಗಿ ರೇಷನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಸಮಸ್ಯೆಯಿಂದಾಗಿ ಅಥವಾ ಬ್ಯಾಂಕ್ ಖಾತೆಯಲ್ಲಿನ ಸಮಸ್ಯೆಯಿಂದಾಗಿ ಇನ್ನು ಸಹ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿಲ್ಲ ಎಂದರೆ ಈ ಸಮಸ್ಯೆಗಳನ್ನು ತಿದ್ದುಪಡಿ ಮಾಡಿಸಿಕೊಂಡು ನಂತರ ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

 ಶುಗರ್ ಬಂದ್ರೆ ಕಿಡ್ನಿ, ಲಿವರ್ ಡ್ಯಾಮೇಜ್ ಆಗುತ್ತೆ ದೃಷ್ಟಿ ಹೋಗುತ್ತದೆ ಎನ್ನುವುದು ಎಷ್ಟು ಸತ್ಯ.? ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು ಸಕ್ಕರೆ ಖಾಯಿಲೆ ಇರುವವರು ತಪ್ಪದೆ ಇದನ್ನು ನೋಡಿ.!

ಅರ್ಜಿ ಸಲ್ಲಿಸಿದ ಮುಂದಿನ ತಿಂಗಳಿಂದ ಅರ್ಹರು ಸಹಾಯಧನವನ್ನು ಪಡೆಯಲಿದ್ದಾರೆ ಎಂದು ಮತ್ತು ಇನ್ನು ಮುಂದೆ ಪ್ರತಿ ತಿಂಗಳ 26 ನೇ ತಾರೀಖಿನಂದು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now