ಇತ್ತೀಚಿನ ದಿನಗಳಲ್ಲಿ ಯಾರ ಮನೆಗೆ ಹೋದರೂ ಒಂದು ಟ್ರೆಂಡಿಂಗ್ ಇಂಟೀರಿಯರ್ ಡಿಸೈನ್ ಫಾಲೋ ಮಾಡುತ್ತಿರುವುದನ್ನು ನೀವು ಗಮನಿಸಿರಬಹುದು. ಸಾಮಾನ್ಯವಾಗಿ ಟಿವಿ ಹಿಂದೆ ಮತ್ತು ಬೆಡ್ರೂಮ್ ನಲ್ಲಿ ಬೆಡ್ ಹೆಡ್ ಬೋರ್ಡ್ ಹಿಂದೆ WPC ಲೂವರ್ಸ್ ಹಾಕಿಸಿರುವುದನ್ನು ನೋಡಿರುತ್ತೀರಿ. ಆಗ ನಿಮಗೂ ಇದು ಅಟ್ಟ್ರಕ್ಟಿವ್ ಆಗಿ ಕಾಣಿಸಿ ನಿಮ್ಮ ಮನೆ ಗೋಡೆಗಳಿಗೂ ಇದನ್ನು ಹಾಕಿಸಬೇಕು ಎನ್ನುವ ಇಂಟರೆಸ್ಟ್ ಬಂದಿರುತ್ತದೆ.
ಆದರೆ ಈ ವಿಚಾರದ ಬಗ್ಗೆ ಜಾಸ್ತಿ ಡೀಟೇಲ್ಸ್ ಗೊತ್ತಿಲ್ಲ ವೆರೈಟಿ ಎಷ್ಟಿರುತ್ತದೆ ಎಷ್ಟು ಖರ್ಚಾಗಬಹುದು ಎನ್ನುವ ಹೆಚ್ಚಿನ ಮಾಹಿತಿ ಬೇಕಿತ್ತು ಎಂದು ಥಿಂಕ್ ಮಾಡಿದ್ದರೆ ಇಂದು ನಾವು ಈ ಲೇಖನದಲ್ಲಿ ಹೇಳುವ ವಿಚಾರವು ನಿಮಗೆ ಅನುಕೂಲ ಮಾಡಿಕೊಡುತ್ತದೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಿಂದ ಪ್ರತಿ ತಿಂಗಳು 20,500 ರೂ ಬಡ್ಡಿ ಪಡೆಯುವ ಹೊಸ ಸ್ಕೀಮ್ ಜಾರಿ.!
* WPC ಲೂವರ್ಸ್ ನಲ್ಲಿ ಅಬ್ಯೂಸ್ ಅಂದರೆ ಅದು ಮೇಲೆ ಉಬ್ಬಿದ ರೀತಿ ಕಾಣುವ ಡಿಸೈನ್ ಎಷ್ಟು ಇಂಚಸ್ ಬಂದಿದೆ, ಇದರ ಡೆಪ್ತ್ ಎಷ್ಟಿದೆ ಎನ್ನುವುದರ ಆಧಾರದ ಮೇಲೆ ಬೆಲೆ ನಿರ್ಧಾರ ಆಗುತ್ತದೆ.
* ಕ್ವಾಲಿಟಿ ವಿಚಾರವಾಗಿ ನೋಡುವುದಾದರೆ ಕನಿಷ್ಠ 2MM ಆದರೂ ಥಿಕ್ನೆಸ್ ಇರಬೇಕು. ಬಹಳ ಥಿನ್ ಆಗಿದ್ದರೆ ಯಾವುದಾದರೂ ವಸ್ತುಗಳು ಅಥವಾ ಮಕ್ಕಳು ಆಟ ಆಡುವಾಗ ಬ್ರೇಕ್ ಆಗಿ ಬಿಡಬಹುದು ಹಾಗಾಗಿ 2MM ಗಿಂತ ಹೆಚ್ಚು ಹೋಗುವುದೇ ಉತ್ತಮ ಇದು ಕೂಡ ತಿಕ್ನೆಸ್ ಹೆಚ್ಚಾದಂತೆ ರೇಟ್ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗಬೇಡಿ ನೀವೇ ಒಂದು ಪೀಸ್ ತೆಗೆದುಕೊಂಡು ಅದನ್ನು ಬೆಂಡ್ ಮಾಡಿ ನೋಡಿ ಅದು ಬೆಂಡ್ ಆಗಲ್ಲ ಎನ್ನುವ ರೀತಿ ಇದ್ದರೆ ಆ ಥಿಕ್ನೆಸ್ ನಲ್ಲಿ ಖರೀದಿಸಿ.
ಈ ಸುದ್ದಿ ಓದಿ:- ಅಕ್ರಮ ಆಸ್ತಿಯನ್ನು ಸಕ್ರಮ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
* ಇನ್ನು ಇದರ ಹೈಟ್ ಬರುವುದೇ 9.6 ಇಂಚಸ್ ನೀವೇನಾದರೂ 10 ಫೀಟ್ ವಾಲ್ ಹೊಂದಿದ್ದೀರಾ ಎಂದರೆ ಕೆಳಗೆ ಕಟಿಂಗ್ಸ್ ಕೊಡಬೇಕು. ಬೇಕಾದರೆ ಇದಕ್ಕಿಂತ ಚಿಕ್ಕದು ಸಿಗುತ್ತದೆ, 6 ಫೀಟ್ ಸಿಗುತ್ತದೆ ಆದರೆ ಎರಡು ತೆಗೆದುಕೊಂಡರೆ ವೇಸ್ಟ್ ಆಗಿ ಬಿಡಬಹುದು. ಹಾಗಾಗಿ ವಾಲ್ ಗಳಿಗೆ ಸಾಮಾನ್ಯವಾಗಿ 9.6 ಇಂಚಸ್ ತೆಗೆದುಕೊಳ್ಳಲಾಗುತ್ತದೆ. ಆದರೆ ಇದಕ್ಕಿಂತಲೂ ಹೆಚ್ಚಿನ ಎತ್ತರದ ಸಿಗುವುದಿಲ್ಲ ಹಾಗಾಗಿ ಕೆಳಗೆ ನೀಟಾಗಿ ಕಟಿಂಗ್ ಕೊಟ್ಟು ಫಿನಿಶಿಂಗ್ ಮಾಡಿಕೊಂಡರೆ ಲುಕ್ ಚೆನ್ನಾಗಿಯೇ ಇರುತ್ತದೆ.
* ಅಗಲ 6 ಇಂಚಸ್ ಮಾತ್ರ ಬರುತ್ತದೆ ಆದರೆ ಇದು ಒಂದಕ್ಕೊಂದು ಕನೆಕ್ಟ್ ಮಾಡುವುದರಿಂದ ಯಾವುದೇ ರೀತಿಯಾಗಿ ನಿಮಗೆ ಡಿಫ್ರೆಂಟ್ ಗೊತ್ತಾಗುವುದಿಲ್ಲ ತುಂಬಾ ಚೆನ್ನಾಗಿ ಇದು ಕವರ್ ಆಗಿ ಒಳ್ಳೆ ಲುಕ್ ಕೊಡುತ್ತದೆ ಮತ್ತು ಇದು ಬರುವುದೇ ಹೀಗೆ.
ಈ ಸುದ್ದಿ ಓದಿ:- ಸೈಟ್ ಖರೀದಿ ಮಾಡುವ ಮುನ್ನ ಈ ದಾಖಲೆ ಪರಿಶೀಲನೆ ಮಾಡುವುದು ಕಡ್ಡಾಯ.!
* ಬೆಲೆ ಬಗ್ಗೆ ಹೇಳುವುದಾದರೆ ಸರಾಸರಿ ಒಂದು ಪ್ಯಾನಲ್ ಗೆ ಅಂದರೆ ಒಂದು ಶೀಟ್ ಗೆ ರೂ.800 ಆಗುತ್ತದೆ. ಇದು ಕಡಿಮೆ ಬೆಲೆಗೂ ಅಂದರೆ ರೂ.500 ರಿಂದ ರೂ.600 ಗೆ ಕೂಡ ಸಿಗುತ್ತದೆ. ತುಂಬಾ ಹೆಚ್ಚಿನ ರೇಟ್ ಗೆ ರೂ.1,200 ಪರ್ ಪ್ಯಾನಲ್ ವರೆಗೂ ಇದೆ. ಆದರೆ ರೂ.800 ಇರುವುದನ್ನೇ ಖರೀದಿಸುವುದು ಚೀಪ್ ಅಂಡ್ ಬೆಸ್ಟ್.
* ಕೊನೆಯಲ್ಲಿ ಎಂಡ್ ಮಾಡುವಾಗ ಒಂದು ಕಾರ್ನರ್ ಪೀಸ್ ಹಾಕಬೇಕಾಗುತ್ತದೆ 25 mm ಇರುತ್ತದೆ, ಇದು 350 ಪರ್ ಪ್ಯಾನಲ್ ಆಗುತ್ತದೆ.
* ನಿಮ್ಮ ಕಣ್ಣಿಗೆ ಬೇಕಾದ ಕಲರ್ ಕಾಂಬಿನೇಷನ್ ನಲ್ಲಿ ನೀವು ಇದನ್ನು ಸೆಟ್ ಮಾಡಿಸಿಕೊಳ್ಳಬಹುದು ಮತ್ತು ಅದಕ್ಕೆ ತಕ್ಕ ಹಾಗೆ ಪರ್ಚೇಸ್ ಕೂಡ ಮಾಡಬಹುದು ಈ ವಿಚಾರವಾಗಿ ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.