ಅಕ್ರಮ ಆಸ್ತಿಯನ್ನು ಸಕ್ರಮ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

WhatsApp Group Join Now
Telegram Group Join Now

ಗ್ರಾಮೀಣ ಪ್ರದೇಶದಲ್ಲೇ ಇರಲಿ ಅಥವಾ ನಗರ ಪ್ರದೇಶದಲ್ಲಿಯೇ ಆಗಲಿ ವಾಸಿಸಲು ಸ್ವಂತ ಮನೆ ಇಲ್ಲದ ಕಾರಣದಿಂದಾಗಿ ಸರ್ಕಾರಿ ಜಾಗಗಳಲ್ಲಿ ಮನೆ ಕಟ್ಟುಕೊಂಡಿದ್ದವರಿಗೆ ಆ ಅಕ್ರಮ ಮನೆಯನ್ನು ಸಕ್ರಮ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದೆ.

ಅಕ್ರಮ ಸಕ್ರಮ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಕೇಳಲಾಗುವ ಪೂರಕ ಸಾಕ್ಷ್ಯಳನ್ನು ಒದಗಿಸಿ ನಿಮ್ಮ ಮನೆಯಲ್ಲಿ ಸಕ್ರಮ ಮಾಡಿಕೊಳ್ಳಬಹುದು. ಆದರೆ ಅನೇಕರಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ, ಆದ್ದರಿಂದ ಈ ಲೇಖನದಲ್ಲಿ ಎಲ್ಲರಿಗೂ ಅನುಕೂಲತೆ ಆಗಲಿ ಎನ್ನುವ ಉದ್ದೇಶದಿಂದ ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸುವುದು ಹೇಗೆ? ಈ ವಿಧಾನ ಹೇಗಿರುತ್ತದೆ.? ಇತ್ಯಾದಿ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ತಿಳಿಸಿಕೊಡುತ್ತಿದ್ದೇವೆ. ತಪ್ಪದೇ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಈ ಸುದ್ದಿ ಓದಿ:- ಸೈಟ್ ಖರೀದಿ ಮಾಡುವ ಮುನ್ನ ಈ ದಾಖಲೆ ಪರಿಶೀಲನೆ ಮಾಡುವುದು ಕಡ್ಡಾಯ.!
ಬೇಕಾಗುವ ದಾಖಲೆಗಳು:-

* ಆಧಾರ್ ಕಾರ್ಡ್
* ಮನೆ ನಕ್ಷೆ
* ಗ್ರಾಮ ಪಂಚಾಯಿತಿ ಅಥವಾ ಪುರಸಭೆ ಅಥವಾ ನಗರ ಸಭೆಯಲ್ಲಿ ಕಂದಾಯ ಕಟ್ಟಿರುವ ರಸೀದಿ
* ಮನೆಯ ಫೋಟೋ
* ಸ್ಥಳೀಯ ಪರಿಚಿತರಿಂದ ಪಂಚನಾಮೆ ಸಹಿ

ಅರ್ಜಿ ಸಲ್ಲಿಸುವ ವಿಧಾನ:-

* ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಜಿ ಫಾರಂ ಸಿಗುತ್ತದೆ. ಆ ಅರ್ಜಿ ಫಾರಂ ತೆಗೆದುಕೊಂಡು ಅದರಲ್ಲಿ ಕೇಳಲಾಗಿರುವ ಸ್ವ-ವಿವರಗಳನ್ನು ಸರಿಯಾಗಿ ತುಂಬಿಸಿ ಈ ಮೇಲೆ ತಿಳಿಸಿದಾಗ ಎಲ್ಲಾ ದಾಖಲೆ ಪ್ರತಿಗಳನ್ನು ಕೂಡ ಲಗತ್ತಿಸಬೇಕು.
* ನಿಮ್ಮ ತಾಲೂಕು ವ್ಯಾಪ್ತಿಗೆ ಬರುವ ಅಟಲ್ ಜಿ ಜನಸ್ನೇಹಿ ಕೇಂದ್ರ ಅಥವಾ ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು
* ಅರ್ಜಿ ಸಲ್ಲಿಸಿದ ಬಳಿಕ ಅವರು ಅರ್ಜಿ ಸ್ವೀಕರಿಸಿ ಒಂದು ಆಕ್ನಾಲಜಿಮೆಂಟ್ ಕೂಡ ಕೊಡುತ್ತಾರೆ. ಇದನ್ನು ತಪ್ಪದೆ ಪಡೆದುಕೊಳ್ಳಬೇಕು. ಯಾಕೆಂದರೆ ಇದರ ಮೂಲಕ ನೀವು ಕಚೇರಿಗೆ ಬರದೆ ಆನ್ಲೈನಲ್ಲಿ ನಿಮ್ಮ ಅಜ್ಜಿ ಸ್ಟೇಟಸ್ ಏನಾಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.

ಈ ಸುದ್ದಿ ಓದಿ:- ಜಮೀನು ಮತ್ತು ಸೈಟ್ ರಿಜಿಸ್ಟರ್ ಪ್ರಕ್ರಿಯೆ ಹೇಗಿರುತ್ತೆ.? ಪ್ರತಿಯೊಬ್ಬರೂ ತಿಳಿದುಕೊಳ್ಳಲೇ ಬೇಕಾದ ಮಾಹಿತಿ.!

ಅರ್ಜಿ ಸಲ್ಲಿಸಿದ ಬಳಿಕ ಮುಂದಿನ ಪ್ರಕ್ರಿಯೆಗಳು ಹೀಗೆ ನಡೆಯುತ್ತವೆ:-

* ನೀವು ಸಲ್ಲಿಸಿದ ಅರ್ಜಿಯು ಅರ್ಜಿ ಪರಿಶೀಲನೆಗಾಗಿ ನಿಮ್ಮ ಗ್ರಾಮದ ವಿಲೇಜ್ ಅಕೌಂಟೆಂಟ್ ಅವರ ಕಚೇರಿಗೆ ಹೋಗುತ್ತದೆ.
* ರೆವೆನ್ಯೂ ಇನ್ಸ್ಪೆಕ್ಟರ್ (RI ) ಮತ್ತು ವಿಲೇಜ್ ಅಕೌಂಟೆಂಟ್ (VA) ಇಬ್ಬರು ವಿಳಾಸಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿ ಮತ್ತು ಈ ಮೇಲೆ ಸಹಿ ಮಾಡಿರುವ ಪಂಚನಾಮೆ ಸಾಕ್ಷಿಗಳ ಸಮ್ಮುಖದಲ್ಲಿ ಮತ್ತು ಸುತ್ತಮುತ್ತಲ ಮನೆ ಮಾಲೀಕರ ಸಮ್ಮುಖದಲ್ಲಿ ಅಳತೆ ಮಾಡಿಸುತ್ತಾರೆ.

ಈ ಸುದ್ದಿ ಓದಿ:- ಈ ಕಾಲೇಜ್ ನಲ್ಲಿ ಡೊನೇಷನ್ ಇಲ್ಲ, ಕೇವಲ ರೂ.3,700 ಕ್ಕೆ ಊಟ-ವಸತಿ, ಇಲ್ಲಿ ಮಕ್ಕಳು ಓದುತ್ತಲೇ ದುಡಿಯುತ್ತಾರೆ.! ಹೇಗೆ ಅಂತ ನೋಡಿ.!

* ವಾಸ್ತವಿಕವಾಗಿ ವಿವರ ಬರೆದು ತಯಾರಿಸಿ ಸಮಿತಿ ಎದುರು ಮಂಡಿಸುತ್ತಾರೆ. (ಸಮಿತಿಯಲ್ಲಿ ಸ್ಥಳೀಯ ಶಾಸಕರು ಅಧ್ಯಕ್ಷರಾಗಿರುತ್ತಾರೆ, ತಹಶೀಲ್ದಾರರ ಕಾರ್ಯದರ್ಶಿಗಳಾಗಿರುತ್ತಾರೆ ವಿಲೇಜ್ ಅಕೌಂಟೆಂಟ್ ಮತ್ತು ರೆಬೆಲ್ ಯು ಇನ್ಸ್ಪೆಕ್ಟರ್ ಕೂಡ ಇರುತ್ತಾರೆ)

* ಎಲ್ಲವೂ ಸರಿ ಇದ್ದಲ್ಲಿ ಮಂಡಳಿಯಿಂದ ನಿಮಗೆ ನಿಮ್ಮ ಆಸ್ತಿಯು ಅಕ್ರಮದಿಂದ ಸಕ್ರಮವಾಗಿ ಬದಲಾಗಿರುವ ಆಸ್ತಿ ಹಕ್ಕುಪತ್ರ ಸಿಗುತ್ತದೆ
* ಇದಾರಬಳಿಕ 15 ದಿನಗಳ ಒಳಗೆ ಯಾರದ್ದಾದರೂ ತಕರಾರು ಇದ್ದರೆ ಸೂಕ್ತ ದಾಖಲೆಗಳೊಂದಿಗೆ ತಕರಾರು ಅರ್ಜಿ ಸಲ್ಲಿಸಲು 15 ದಿನಗಳ ಕಾಲಾವಕಾಶ ಮಾಡಿಕೊಡಲಾಗಿರುತ್ತದೆ.

ಅಕ್ರಮ-ಸಕ್ರಮಕ್ಕೆ ಇರುವ ಕಂಡೀಷನ್ ಗಳು:-

* ಸಕ್ರಮವಾಗಿ ಬದಲಾದ ಮನೆ ಹಕ್ಕುಪತ್ರ ನಿಮ್ಮ ಹೆಸರಿನಲ್ಲಿ ಇದ್ದರು ನೀವು ಯಾರಿಗೂ ಮನೆಯನ್ನು ಮಾರುವವಂತಿಲ್ಲ * ಮನೆಯನ್ನು ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಬಳಸುವಂತಿಲ್ಲ
* ಕಟ್ಟಿರುವ ಮನೆಗೆ ಮಾತ್ರ ಈ ರೀತಿ ಅಕ್ರಮ ಸಕ್ರಮ ಯೋಜನೆಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now