ಪ್ರತಿಯೊಬ್ಬರ ಹೆಸರಿನಲ್ಲೂ ಕೂಡ ಜಮೀನು, ಸೈಟ್ ಹಾಗೂ ಮನೆ ಇಂತಹ ಆಸ್ತಿಗಳು ಇರುತ್ತವೆ. ಆದರೆ ಇದು ಯಾವ ರೀತಿ ರಿಜಿಸ್ಟರ್ ಆಗುತ್ತದೆ ಎನ್ನುವ ಮಾಹಿತಿ ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಕೂಡ ಪ್ರತಿಯೊಂದು ವಿಷಯದ ಬಗ್ಗೆಯೂ ಸ್ವಲ್ಪವಾದರೂ ತಿಳಿದು ಕೊಂಡಿರಲೇಬೇಕು.
ಅದರಲ್ಲೂ ಆಸ್ತಿ ವಿಚಾರವಾಗಿ ಸಾಮಾನ್ಯ ಜ್ಞಾನ ಇದ್ದರೆ ಉತ್ತಮ ಹಾಗಾಗಿ ಇಂದು ಈ ಅಂಕಣದಲ್ಲಿ ಆಸ್ತಿ ಖರೀರಿಸಿದ ಮೇಲೆ ರಿಜಿಸ್ಟರ್ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಈ ಸಮಯದಲ್ಲಿ ಏನೆಲ್ಲ ದಾಖಲೆಗಳನ್ನು ಕೇಳುತ್ತಾರೆ? ಇದರಲ್ಲಿ ಕೊಂಡುಕೊಳ್ಳುವವರ ಹಾಗೂ ಖರೀದಿಸುವವರ ಜವಬ್ದಾರಿಗಳು ಏನು? ಎನ್ನುವ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:-ಈ ಕಾಲೇಜ್ ನಲ್ಲಿ ಡೊನೇಷನ್ ಇಲ್ಲ, ಕೇವಲ ರೂ.3,700 ಕ್ಕೆ ಊಟ-ವಸತಿ, ಇಲ್ಲಿ ಮಕ್ಕಳು ಓದುತ್ತಲೇ ದುಡಿಯುತ್ತಾರೆ.! ಹೇಗೆ ಅಂತ ನೋಡಿ.!
ಬೇಕಾಗುವ ದಾಖಲೆಗಳು:-
* ಜಮೀನು ಖರೀದಿ ಮಾಡುವ ವ್ಯಕ್ತಿಯ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್
* ಜಮೀನು ಮಾರಾಟ ಮಾಡುವ ವ್ಯಕ್ತಿಯ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್
* ಜಮೀನು ಮಾರುವ ವ್ಯಕ್ತಿಯು ಕೊಂಡುಕೊಳ್ಳುವ ವ್ಯಕ್ತಿಗೆ ಜಮೀನಿಗೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನು ಕೊಡಬೇಕಾಗುತ್ತದೆ. ಅವು ಯಾವುವೆಂದರೆ,
* Form 10
* ಡೊಂಚ ನಕಾಶೆ
* ಪಹಣಿ
* ಆಕಾರ್ ಬಂದ್
* ಜಮೀನಿನ ಮೇಲೆ ಬೆಳೆ ಸಾಲ ಪಡೆದಿದ್ದರೆ ಬ್ಯಾಂಕ್ ನಿಂದ ಪಡೆದಿರುವ No Due Certificate
* ಈ ಮೇಲೆ ತಿಳಿಸಿದ ಮುಖ್ಯ ದಾಖಲೆಗಳ ಜೊತೆಗೆ ವಕೀಲರು ಹೇಳುವಂತಹ ಇನ್ನಷ್ಟು ಹೆಚ್ಚು ದಾಖಲೆಗಳು.
ರಿಜಿಸ್ಟ್ರೇಷನ್ ಪ್ರಕ್ರಿಯೆ ಹೇಗಿರುತ್ತದೆ:-
* ಈ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ತಾಲೂಕಿನಲ್ಲಿರುವ ಲ್ಯಾಂಡ್ ರಿಜಿಸ್ಟ್ರೇಷನ್ ಮಾಡುವ ವಕೀಲರು ಅಥವಾ ನೋಂದಣಿ ಮಾಡುವವರ ಬಳಿ ಹೋಗಿ ಈ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿಸಿ
* ಕರ್ನಾಟಕ ರಾಜ್ಯ ಸ್ಟ್ಯಾಂಪ್ ಕಾಯ್ದೆ ಅನುಸಾರವಾಗಿ ರಿಜಿಸ್ಟ್ರೇಷನ್ ಪ್ರಕ್ರಿಯೆ ನಡೆಯುತ್ತದೆ ಹಾಗಾಗಿ ಸ್ಟ್ಯಾಂಪ್ ಕಾಯ್ದೆ ಪ್ರಕಾರವಾಗಿ ಕ್ರಯ ಪತ್ರ ರೆಡಿ ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:-ಅಂತಿಮ ಮತದಾರರ ಪಟ್ಟಿ ಬಿಡುಗಡೆ.! ಈ ಲಿಸ್ಟ್ ನಲ್ಲಿ ಹೆಸರು ಇದ್ದವರಿಗೆ ಮಾತ್ರ ವೋಟ್ ಹಾಕಲು ಅವಕಾಶ.! ನಿಮ್ಮ ಹೆಸರು ಇದೆಯೇ ಹೀಗೆ ಚೆಕ್ ಮಾಡಿ.!
* ಕ್ರಯ ಪತ್ರದಲ್ಲಿ ಮುಖ್ಯವಾಗಿ ಜಮೀನಿನ ವಿಸ್ತೀರ್ಣ, ಚೆಕ್ಕುಬಂದಿ, ಮಾರಾಟ ಮಾಡುವವರ ಹಾಗೂ ಕೊಳ್ಳುವವರ ಆಧಾರ್ ಸಂಖ್ಯೆ ಸಮೇತ ಹೆಸರು, ವಿಳಾಸ, ಜಮೀನಿನ ಮೌಲ್ಯ ಇತ್ಯಾದಿ ಅನೇಕ ವಿಚಾರಗಳು ಕ್ರಯ ಪತ್ರದಲ್ಲಿ ಬರೆಸಲಾಗಿರುತ್ತದೆ.
* ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಆಸ್ತಿ ಮೌಲ್ಯಕ್ಕೆ ಅನುಗುಣವಾಗಿ ಸ್ಥಳೀಯವಾಗಿ ಸರಕಾರ ನಿಗದಿ ಮಾಡಿರುವ ಸ್ಟ್ಯಾಂಪ್ ಡ್ಯೂಟಿ ಚಾರ್ಜಸ್ ಹಣವನ್ನು ಕಟ್ಟಬೇಕು. ಹಣ ಕಟ್ಟಿರುವ ಈ ದಾಖಲೆ ಪತ್ರವನ್ನು ಕೂಡ ಇತರೆ ದಾಖಲೆಗಳ ಜೊತೆಗೆ ಲಗತ್ತಿಸಬೇಕು.
ಈ ಸುದ್ದಿ ಓದಿ:-ಅಂಚೆ ಇಲಾಖೆ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ ವೇತನ 63,200/-
* ಆಸ್ತಿ ಖರೀದಿಸಿದ ವ್ಯಾಪ್ತಿಗೆ ಬರುವ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ನೀವು ನೀಡಿದ ದಾಖಲೆಗಳನ್ನು ತೆಗೆದುಕೊಂಡು ಪರಿಶೀಲನೆ ಮಾಡಿ ಎಲ್ಲವೂ ಸರಿ ಇದ್ದರೆ ಛೋಟಾ ಸೈನ್ ಹಾಕುತ್ತಾರೆ.
* ಜಮೀನು ಖರೀದಿಸುವವರು ಹಾಗೂ ಮಾರಾಟ ಮಾಡುವವರು ಇಬ್ಬರ ಕಡೆಯಿಂದ ಕೂಡ ಎರೆಡರಡು ಜನ ಸಾಕ್ಷಿಗಳು ಹಾಜರಿದ್ದು ಸಾಕ್ಷಿ ಸಹಿ ಹಾಕಬೇಕು.
* ಜಮೀನು ಮಾರಾಟ ಮಾಡುವವರ ಹಾಗೂ ಖರೀದಿ ಮಾಡುವವರ ಛಾಯಾಚಿತ್ರ ಹಿಡಿದು ಕ್ರಯ ಪತ್ರಕ್ಕೆ ಸಹಿ ಮಾಡಿಸಲಾಗುತ್ತದೆ
* ಇದೆಲ್ಲವೂ ಮುಗಿದ ಮೇಲೆ ನೋಂದಣಾಧಿಕಾರಿಗಳು ಇದನ್ನು ರಿಜಿಸ್ಟರ್ ಮಾಡುತ್ತಾರೆ, ರಿಜಿಸ್ಟ್ರೇಷನ್ ನಂಬರ್ ಕಂಪ್ಯೂಟರ್ ಗೆ ಸೇರಿಸಲಾಗುತ್ತದೆ. ಎಲ್ಲ ದಾಖಲೆ ಪತ್ರಗಳನ್ನು ಸ್ಕ್ಯಾನಿಂಗ್ ಮಾಡಿ ಸರ್ಕಾರದ CD ಖಾತೆಗೆ ಸೇರಿಸಲಾಗುತ್ತದೆ. ಈ ಮೊದಲು ಇದನ್ನು ಪುಸ್ತಕ ರೂಪದಲ್ಲಿ ದಾಖಲು ಮಾಡಿ ಇಡಲಾಗುತ್ತಿತ್ತು, ಈಗ ಎಲ್ಲವೂ ಗಣಕೀಕೃತವಾಗಿದೆ. 2-3 ತಾಸಿನಲ್ಲಿ ಈ ಪ್ರಕ್ರಿಯೆ ಮುಗಿಯುತ್ತದೆ.
ಈ ಸುದ್ದಿ ಓದಿ:-USA ಟೆಕ್ನಾಲಜಿಯ ಬೋರ್ ವೆಲ್ ಪಾಯಿಂಟ್, ಈ ವಿಧಾನ ಅನುಸರಿಸುವುದರ ಬೋರ್ವೆಲ್ ಪಾಯಿಂಟ್ ಫೇಲ್ ಆಗುವ ಚಾನ್ಸೇ ಇರಲ್ಲ.!
* 15-20 ದಿನಗಳ ಒಳಗೆ ಯಾವುದೇ ತಕರಾರು ಅರ್ಜಿ ಸಂಬಂಧಿಸಿದವರಿಂದ ದಾಖಲಾಗದೆ ಹೋದರೆ ಗ್ರಾಮದ ವಿಲೇಜ್ ಅಕೌಂಟೆಂಟ್ ಜೆ ಫಾರಂ ಮೇಲೆ ಖರೀದಿದಾರರು ಹಾಗೂ ಮಾರಾಟಗಾರರಿಂದ ಸಹಿ ಹಾಕಿಸಿಕೊಂಡು ಅನುಮೋದನೆ ಮಾಡುತ್ತಾರೆ. ಇದಾದ 45 ದಿನಗಳ ನಂತರ ಖರೀದಿದರ ಹೆಸರಿಗೆ ಪಹಣಿ ಪತ್ರ ಬರುತ್ತದೆ.