2024ರ ಲೋಕಸಭಾ ಚುನಾವಣೆಗೆ (Parliment Election – 2024) ಭರ್ಜರಿಯಾಗಿ ಚಾಲನೆ ಸಿಕ್ಕಿದೆ ಏಪ್ರಿಲ್ 19 ರಿಂದ ದೇಶದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯ ಚುರುಕಿನಿಂದ ಸಾಗುತ್ತಿದ್ದು ಕರ್ನಾಟಕದಲ್ಲಿ ಕೂಡ ಎರಡು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಏಪ್ರಿಲ್ 26ರಂದು ಮೊದಲನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು ಎಲ್ಲಾ ಕಡೆಯಿಂದಲೂ ಸರ್ವ ಸಿದ್ಧತೆಗಳು ತಯಾರಾಗಿದೆ.
ಕರ್ನಾಟಕದಲ್ಲಿ ಮುಖ್ಯ ಚುನಾವಣಾ ಅಧಿಕಾರಿ, ಕರ್ನಾಟಕ (CEO Karnataka) ಇವರ ಸುಪರ್ಧಿಯಲ್ಲಿ ತಯಾರಿ ನಡೆಯುತ್ತಿದ್ದು ಇದರ ಸಂಬಂಧ ಚುನಾವಣೆ ಕುರಿತಂತೆ ಒಂದು ಪ್ರಮುಖ ಸಂಗತಿ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸಲು ಬಯಸುತ್ತಿದ್ದೇನೆ. ಮುಖ್ಯ ಚುನಾವಣೆ ಅಧಿಕಾರಿ, ಕರ್ನಾಟಕ ಇವರು ಚುನಾವಣೆಗಳ ವಿಚಾರವಾಗಿ ಸಂಪೂರ್ಣ ಜವಾಬ್ದಾರಿ ಹೊತ್ತಿರುತ್ತಾರೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 8ನೇ ಕಂತಿನ ಹಣ ಇಂದು ಬಿಡುಗಡೆ.! ನಿಮ್ಮ ಖಾತೆಗೂ ಹಣ ಬಂದಿದಿಯೇ ಈ ರೀತಿ ಚೆಕ್ ಮಾಡಿ, ಪೆಂಡಿಂಗ್ ಹಣ ಪಡೆಯಲು ಹೊಸ ಮಾರ್ಗಸೂಚಿ ಪ್ರಕಟ.!
18 ವರ್ಷ ತುಂಬಿದ ನಾಗರಿಕನಿಗೆ ಅರ್ಜಿ ಸ್ವೀಕರಿಸಿ ಮತದಾರರ ಗುರುತಿನ ಚೀಟಿ ನೀಡುವುದು, ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು, ಚುನಾವಣೆ ವ್ಯವಸ್ಥೆಯಲ್ಲಿ ಮುಕ್ತ ನ್ಯಾಯೋಚಿತ ಹಾಗೂ ಪಾರದರ್ಶಕತೆ ತಂದು ಪ್ರಜೆಗಳು ಬಯಸಿದ ಪ್ರಬಲ ವ್ಯಕ್ತಿಗೆ ಅಧಿಕಾರ ದೊರೆಯುವಂತೆ ಮಾಡಲು ಪ್ರತಿಯೊಂದು ಹಂತದಲ್ಲೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಾರೆ.
ಈಗ ಟೆಕ್ನಾಲಜಿ ಕೂಡ ಬಳಸಿಕೊಂಡು ಇದರ ಸಹಾಯದಿಂದ ತಮ್ಮ ಇಲಾಖೆಯ ಅಧಿಕೃತ ವೆಬ್ಸೈಟ್ನ ಮೂಲಕ ಚುನಾವಣೆ ಸಂಬಂಧಿತ ಎಲ್ಲಾ ವಹಿವಾಟುಗಳ ಬಗ್ಗೆ ಸಾರ್ವಜನಿಕರಿಗೆ ಮುಕ್ತವಾಗಿ ಮಾಹಿತಿ ನೀಡುತ್ತಾರೆ ಅದರಂತೆ ಇಲಾಖೆ ವೆಬ್ಸೈಟ್ ನಲ್ಲಿ ಅಂತಿಮ ಮತದಾರರ ಪಟ್ಟಿಯು ಬಿಡುಗಡೆ ಆಗಿದೆ.
ಈ ಸುದ್ದಿ ಓದಿ:- ಅಂಚೆ ಇಲಾಖೆ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ ವೇತನ 63,200/-
ಈ ಮತದಾರ ಪಟ್ಟಿಯಲ್ಲಿ ಹೆಸರು ಹೊಂದಿದ್ದ ವ್ಯಕ್ತಿ ಮಾತ್ರ ಲೋಕಸಭಾ ಚುನಾವಣೆ – 2024ರಲ್ಲಿ ಮತದಾನ ಮಾಡಲು ಅರ್ಹನಾಗಿರುತ್ತಾನೆ. ಇದರಲ್ಲಿ ಕರ್ನಾಟಕದ ಪ್ರತಿ ಗ್ರಾಮದ ಡೀಟೇಲ್ಸ್ ಕೂಡ ಇದ್ದು ಈ ಕೆಳಗಿನ ಪೂರೈಸುವ ಮೂಲಕ ಸುಲಭವಾಗಿ ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಪರಿಶೀಲನೆ ಮಾಡಿಕೊಳ್ಳಿ.
* https://ceo.karnataka.gov.in/kn ವೆಬ್ ಸೈಟ್ ಗೆ ಭೇಟಿ ನೀಡಿ.
* ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯಿತಿ ಸೆಲೆಕ್ಟ್ ಮಾಡಿ ನಿಮ್ಮ ಆಯ್ಕೆ ಭಾಷೆಯನ್ನು ಕೂಡ ಸೆಲೆಕ್ಟ್ ಮಾಡಿ ನೀಡಲಾಗುವ ಕ್ಯಾಪ್ಚಾಕೋಡ್ ಎಂಟ್ರಿ ಮಾಡಿ
* ಮುಂದಿನ ಹಂತದಲ್ಲಿ ಸ್ಕ್ರೀನ್ ಮೇಲೆ ನಿಮ್ಮ ಪೋಲಿಂಗ್ ಬೂತ್ ಕಾಣುತ್ತದೆ. ಫೈನಲ್ ರೋಲ್ 2024ರ ಕೆಳಗೆ ಕಾಣುವ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ವಾರ್ಡ್ ನಲ್ಲಿರುವ ಎಲ್ಲಾ ಮತದಾರರ ಪೂರ್ತಿ ಲಿಸ್ಟ್ ಸ್ಕ್ರೀನ್ ಮೇಲೆ ಬರುತ್ತದೆ.
ಈ ಸುದ್ದಿ ಓದಿ:- PF ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್, ವೇತನ ಮಿತಿ 15,000 ದಿಂದ 21,000ಕ್ಕೆ ಹೆಚ್ಚಳ.!
* ಇದರಲ್ಲಿ ಹೆಸರು, ಅವರ ಲಿಂಗ, ವಯಸ್ಸು, ವಿಳಾಸ ಮತ್ತು ಭಾವಚಿತ್ರ ಕೂಡ ಇರುತ್ತದೆ. ನಿಮ್ಮ ಹೆಸರು ತಪ್ಪಾಗಿ ನಮೂದಿಸಲ್ಪಟ್ಟಿದ್ದರೆ ಅಥವಾ ಇತ್ಯಾದಿ ಯಾವುದೇ ವ್ಯತ್ಯಾಸ ಆಗಿದ್ದರು ಕೂಡ ನೀವು ಪರಿಶೀಲನೆ ಮಾಡಿ ಸರಿಪಡಿಸಿಕೊಳ್ಳಬಹುದು. ಹೀಗೆ ನಿಮ್ಮ ಕೈ ನಲ್ಲಿರುವ ಆಂಡ್ರಾಯ್ಡ್ ಮೊಬೈಲ್ ಫೋನ್ ನಲ್ಲಿ ಅಥವಾ ನಿಮ್ಮ ಮನೆಯಲ್ಲಿರುವ ಕಂಪ್ಯೂಟರ್ ನಲ್ಲಿಯೇ ಈ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಲು ಮತ್ತು ಸರಿಪಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
ಇದು ಬಹಳ ಉಪಯುಕ್ತ ಮಾಹಿತಿಯಾಗಿದ್ದು ಮತದಾರರ ಲಿಸ್ಟ್ ನಲ್ಲಿ ಹೆಸರು ಇಲ್ಲದೆ ಇದ್ದರೆ ಅವರ ಬಳಿ ವೋಟರ್ ಐಡಿ ಇದ್ದರೂ ಕೂಡ ಮತದಾನ ಮಾಡಲು ಸಾಧ್ಯವಾಗದ ಸಮಸ್ಯೆ ಆಗುವ ಕಾರಣ ತಪ್ಪದೆ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಅವರಿಗೂ ವಿಷಯ ತಿಳಿಯುವಂತೆ ಮಾಡಿ.