ನೌಕರರ ಭವಿಷ್ಯ ನಿಧಿ (Employee provident Fund) ಈ ವಿಚಾರವಾಗಿ ಮಾಧ್ಯಮಗಳಲ್ಲಿ ಆಗಾಗ ಸುದ್ದಿ ಪ್ರಸಾರವಾಗುತ್ತಲೇ ಇರುತ್ತದೆ. ಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕನ ವೇತನದಲ್ಲಿ ಆತನ ದುಡಿಮೆಯ ಮೂಲ ವೇತನದ 12% ನ್ನು ಕಡಿತಗೊಳಿಸಿ ಆತನ PF ಖಾತೆಗೆ ಜಮಾ ಮಾಡಿ ಆತ ಕೆಲಸ ಬಿಟ್ಟ ನಂತರ ಅಥವಾ ನಿವೃತ್ತಿ ಹೊಂದಿದ ನಂತರ.
ಆತನಿಗೆ ಅದನ್ನು ಅನ್ವಯವಾಗುವ ಬಡ್ಡಿದರಗಳ ಲಾಭದೊಂದಿಗೆ ಹಿಂತಿರುಗಿಸುವ ನಿಯಮವನ್ನು ಇಟ್ಟುಕೊಂಡು ಭಾರತದ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯ (EPFO) ಈ EPF ಸ್ಕೀಮ್ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಮತ್ತೊಂದು ಗಮನಿಸಲೇಬೇಕಾದ ಅಂಶವೇನೆಂದರೆ, ಉದ್ಯೋಗದಾತನ ವತಿಯಿಂದ ಕೂಡ ಈ ಉದ್ಯೋಗಿ ಖಾತೆಗೆ ಪ್ರತಿ ತಿಂಗಳು ಅಷ್ಟೇ ಮೊತ್ತದ ಹಣವು ಕೂಡ ಜಮೆ ಆಗುತ್ತದೆ ಎನ್ನುವುದು.
ಹೀಗೆ ಒಟ್ಟು 24% ಹಣ ಜಮೆಯಾದಂತಾಗುತ್ತದೆ. ಆದರೆ ಇದುವರೆಗೆ ಈ ಸೌಲಭ್ಯ ಪಡೆಯಲು ವೇತನ ಮಿತಿ ಮೂಲವೇತನ 15,000 ವರೆಗೆ ಇತ್ತು, ಈಗ ಇದನ್ನು ಹೆಚ್ಚಿಸುವ ಕುರಿತು ಅಮೂಲಕ PF ಕಡಿತಗೊಳಿಸುವ ಮಿತಿಯನ್ನು ಹೆಚ್ಚಿಸುವ ಬಗ್ಗೆ ವಿಷಯ ಪ್ರಸ್ತಾಪವಾಗುತ್ತಿದೆ.
ಈ ಸುದ್ದಿ ಓದಿ:- ಸ್ಟೇಟ್ ಬ್ಯಾಂಕ್ ನಲ್ಲಿ 5 ಲಕ್ಷ FD ಇಟ್ಟರೆ ಎಷ್ಟು ಹಣ ಲಾಭ ಸಿಗುತ್ತದೆ ಗೊತ್ತಾ.? ನಿಮ್ಮ ಹಣ ದುಪ್ಪಟ್ಟು ಮಾಡಲು ಇದೇ ಬೆಸ್ಟ್
ಕಾರ್ಮಿಕರ ಈ EPF ಮಾಸಿಕ ಗರಿಷ್ಠ ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರಕಾರ ನಿರ್ಧಾರ ಮಾಡಿದೆ ಎನ್ನುವ ಮಾಹಿತಿಗಳು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಪ್ರಸ್ತುತ, ಸದ್ಯಕ್ಕೆ ಕನಿಷ್ಠ ವೇತನದ ಗರಿಷ್ಠ ಮಿತಿ ರೂ.15,000 ಇದ್ದು, ಈ ಮಿತಿಯನ್ನು ರೂ.21,000 ರೂ.ಗೆ ಏರಿಸಲು ಚರ್ಚಿಸಲಾಗಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ.
ಹೀಗಾದರೆ ಸಹಜವಾಗಿ PF ಖಡಿತಗೊಳ್ಳುವ ಮಿತಿಯು ಹೆಚ್ಚಾಗುತ್ತದೆ. ಇದು ದೇಶದ ಲಕ್ಷಾಂತರ ಕಾರ್ಮಿಕರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಶೀಘ್ರವಾಗಿ ಈ ಯೋಜನೆ ಜಾರಿಗೆ ಬಂದರೆ ಇದು ಲಕ್ಷಾಂತರ ಕುಟುಂಬಗಳಿಗೆ ನೆರವಾಗುವುದರಲ್ಲಿ ಅನುಮಾನವೇ ಇಲ್ಲ ಹಾಗಾಗಿ ಇಡೀ ಕಾರ್ಮಿಕ ಸಮೂಹವು ಇಂತಹದೊಂದು ಘೋಷಣೆಗಾಗಿ ಎದುರು ನೋಡುತ್ತಿದ್ದೆ.
ಅದಕ್ಕೀಗ ಕಾಲ ಕೂಡಿ ಬಂದಿದ್ದು EPF ನ ಗರಿಷ್ಠ ಮಿತಿ ಹೆಚ್ಚಿಸಲು ಕೇಂದ್ರ ಸರಕಾರ ಕೂಡ ಮನಸ್ಸು ಮಾಡಿದೆ. ಇದನ್ನು ಆದ್ಯತಾ ವಿಷಯವಾಗಿ ಪರಿಗಣಿಸಿ, ಲೋಕಸಭಾ ಚುನಾವಣೆ 2024ರ ನಂತರ ಸ್ಥಾಪನೆಯಾಗುವ ಹೊಸ ಸರಕಾರವು ಇದರ ಸಂಬಂಧ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು EPFO ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿ:- ಮನೆ ಕಟ್ಟಿಸುತ್ತಿದ್ದೀರಾ.? ಆಗಿದ್ರೆ ಈ ವಿಷ್ಯ ತಿಳ್ಕೋಳಿ ವುಡನ್, UPVC, ಅಲ್ಯೂಮಿನಿಯಂ ಯಾವ ರೀತಿ ಕಿಟಕಿ ಹಾಕಿಸುವುದು ಬೆಸ್ಟ್ ಅಂತ ನೋಡಿ.!
ಆದರೆ ಹತ್ತಾರು ಅನುಕೂಲದ ಜೊತೆ ಕಾರ್ಮಿಕರಿಗಾಗುತ್ತಿರುವ ಒಂದು ಸಣ್ಣ ಸಮಸ್ಯೆ ಎಂದರೆ ಈ ರೀತಿ EPF ಕಡಿತಗೊಳ್ಳುವ ಮಿತಿ ಹೆಚ್ಚಳದಿಂದ ನೌಕರರ ಕೈಗೆ ಸೇರುವ ಟೇಕ್ ಹೋಮ್ ಸ್ಯಾಲರಿ (take home Salary) ಕಡಿಮೆಯಾಗಲಿದೆ. ಸಣ್ಣ ಪ್ರಮಾಣದ ಈ ಹೊರಿಯನ್ನು ಕಾರ್ಮಿಕ ಭರಿಸುವುದಾದರೆ ಆತನಿಗೆ ಭವಿಷ್ಯದ ದೃಷ್ಟಿಯಿಂದ ಬಹಳ ಲಾಭವಾಗಲಿದೆ, ಹಾಗಾಗಿ ಸದ್ಯಕ್ಕೀಗ ಇದನ್ನು ಇಬ್ಬರ ಹೊರೆ ಎಂದು ಹೇಳಬಹುದು.
ಕನಿಷ್ಠ ವೇತನ ಮಿತಿ ಹೆಚ್ಚಳವಾಗುವುದರ ಬಗ್ಗೆ ಹೇಳುವುದಾದರೆ
ಈ ಹಿಂದೆ ಹಲವು ಬಾರಿ ವೇತನ ಮಿತಿ ಪರಿಷ್ಕರಣೆಯಾಗಿದೆ, ಕಳೆದ ಬಾರಿಗೆ ವೇತನ ಮಿತಿ 2014ರಲ್ಲಿ ಪರಿಷ್ಕರಿಸಲಾಗಿತ್ತು. ಆ ಸಮಯದಲ್ಲಿ ರೂ.6,500 ರೂ.ಗಳಿಂದ ರೂ.15,000 ಏರಿಕೆಯಾಗಿತ್ತು. ಈಗ ಇದನ್ನು ರೂ.15000 ದಿಂದ ಇದು ರೂ.21,000 ಕ್ಕೆ ಏರಿಸಲು ಮಾತುಕತೆ ನಡೆಯುತ್ತಿದೆ.
ಈ ಸುದ್ದಿ ಓದಿ:- HSRP ಪ್ಲೇಟ್ ಜೊತೆ ಇನ್ಮುಂದೆ ಈ ದಾಖಲೆ ಕಡ್ಡಾಯವಾಗಿ ಇರಲೇಬೇಕು, ಇಲ್ಲದಿದ್ರೆ ಸ್ಥಳದಲ್ಲೇ ಗಾಡಿ ಸೀಜ್, ಹೊಸ ರೂಲ್ಸ್.!
ಇದು ಸಾಧ್ಯವಾದರೆ ಗಣನೀಯವಾಗಿ PF ಖಾತೆಯಲ್ಲಿ ಹಿಂಪಡೆಯುವ ಮೊತ್ತ ಹಾಗೂ ಪಿಂಚಣಿ ಪಡೆಯುವ ಮೊತ್ತವು ಕೂಡ ಏರಿಕೆ ಆಗಲಿದೆ. ಈ ಬಗ್ಗೆ ಸರ್ಕಾರದ ಅಧಿಕೃತ ಘೋಷಣೆ ಯಾವಾಗ ಎಂದು ಎದುರು ನೋಡೋಣ.