Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
HSRP ನಂಬರ್ ಪ್ಲೇಟ್ ವಿಚಾರ ದೇಶದಾದ್ಯಂತ ಕಳೆದು ಒಂದು ವರ್ಷಗಳಿಂದ ಬಾರಿ ಸದ್ದು ಮಾಡಿದೆ. ಯಾಕೆಂದರೆ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳು HSRP (High Security registration Plate) ನಂಬರ್ ಪ್ಲೇಟ್ ಹಾಗೂ ಕಲರ್ ಕೋಡ್ ಸ್ಟಿಕ್ಕರ್ ಕಡ್ಡಾಯಗೊಳಿಸಲಾಗಿದೆ.
2019 ರ ನಂತರ ವಾಹನಗಳನ್ನು ಖರೀದಿಸುವಂತಹ ಮಾಲೀಕರಿಗೆ ವಾಹನಗಳ ಜೊತೆಯಲ್ಲಿಯೇ HSRP ನಂಬರ್ ಪ್ಲೇಟ್ ನೀಡಲಾಗಿದೆ. ಆದರೆ 2019 ಏಪ್ರಿಲ್ 1ಕ್ಕೂ ಮುಂಚೆ ಯಾವುದೇ ದ್ವಿಚಕ್ರ / ನಾಲ್ಕು ಚಕ್ರದ ವಾಹನಗಳನ್ನು ಖರೀದಿಸಿದರೆ ಸರ್ಕಾರದ ನಿಯಮದ ಪ್ರಕಾರವಾಗಿ ದೇಶದ ರಕ್ಷಣೆಯ ಉದ್ದೇಶದಿಂದ ಮತ್ತು ನಿಮ್ಮ ವಾಹನ ಸುರಕ್ಷತೆ ಉದ್ದೇಶದಿಂದ ಕೂಡ ನೀವು HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು.
ರಾಷ್ಟ್ರೀಯ ಹೆದ್ದಾರಿ ಹಾಗೂ ಸಾರ್ವಜನಿಕ ಸಚಿವಾಲಯದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೀವು ಅತಿ ಸರಳ ಹಂತಗಳಲ್ಲಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಅಪ್ಲಿಕೇಶನ್ ಹಾಕಬಹುದು ನಂತರ ಹತ್ತಿರದ ಶೋರೂಮ್ ಗಳಲ್ಲಿ ಅಥವಾ ಡೀಲರ್ ಬಳಿ ಅಥವಾ ನೀವೇ ನಿಮ್ಮ ಮನೆಯಲ್ಲಿ ಡೆಲಿವರಿ ಪಡೆದುಕೊಂಡು ಈ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳಬಹುದು.
ಈ ಸುದ್ದಿ ಓದಿ:-ಸಿಂಗಲ್ ಡೋರ್ ಅಥವಾ ಡಬಲ್ ಡೋರ್ ಯಾವ ರೆಫ್ರಿಜರೇಟರ್ ತೆಗೆದುಕೊಳ್ಳುವುದು ಬೆಸ್ಟ್ ನೋಡಿ.!
ಅತ್ಯಂತ ಕಡಿಮೆ ಶುಲ್ಕದಲ್ಲಿ ನಂಬರ್ ಅಳವಡಿಸಿಕೊಳ್ಳುವುದಕ್ಕೆ ಕಾಲಾವಕಾಶ ಮಾಡಿಕೊಡಲಾಗಿದೆ. ಮಾರ್ಚ್ 17 ರವರೆಗೆ ಇದ್ದ ಕಡೆ ಗಡುವನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಲಾಗಿದ್ದು ಶೀಘ್ರವೇ ನೀವು ನಿಯಮದಂತೆ ನಡೆದು ಕೊಂಡರೆ ಉತ್ತಮ. ಇಲ್ಲವಾದಲ್ಲಿ HSRP ಇಲ್ಲದೆ ರಸ್ತೆಗಳಿಯುವ ವಾಹನಗಳನ್ನು ಸೀಸ್ ಮಾಡಿ ದಂಡ ವಿಧಿಸಲಾಗುತ್ತದೆ.
ಒಂದು ವೇಳೆ ನೀವು ಈಗಾಗಲೇ HSRP ನಂಬರ್ ಪ್ಲೇಟ್ ಅಳವಡಿಸಿಕೊಂಡಿದ್ದರೆ ಸಂತೋಷ ಇದರೊಂದಿಗೆ ಮತ್ತೊಂದು ವಿಚಾರ ಕೂಡ ಈ ಸಮಯದಲ್ಲಿ ನಿಮಗೆ ಗೊತ್ತಿರಬೇಕು. ಅದೇನೆಂದರೆ HSRP ನಂಬರ್ ಪ್ಲೇಟ್ ಮಾತ್ರವಲ್ಲದೆ ವಾಹನದ ಕಂಡಿಷನ್ ಹೇಗಿದೆ ಎನ್ನುವುದನ್ನು ತಿಳಿಸುವ ಒಂದು ದಾಖಲೆ ಕೂಡ ನಿಮ್ಮ ಬಳಿ ಇರಬೇಕು ಇಲ್ಲವಾದಲ್ಲಿ ಇದಕ್ಕೂ ಕೂಡ ನಿಮಗೆ ದಂಡ ಬೀಳುತ್ತದೆ.
ಸ್ವಚ್ಛ ಪರಿಸರ ಧ್ಯೇಯದಡಿ ಇಲಾಖೆಯು ವೆಹಿಕಲ್ ಫಿಟ್ ನೆಸ್ ಸರ್ಟಿಫಿಕೇಟ್ (Vehicle Fitness Certificate) ಹೊಂದಿರಬೇಕು ಎನ್ನುವ ನಿಯಮವನ್ನು ಇಲಾಖೆ ಜಾರಿಗೆ ತಂದಿದೆ. ಎಲ್ಲಾ ದ್ವಿಚಕ್ರ, ಮೂರು ಚಕ್ರ ಹಾಗೂ ನಾಲ್ಕು ಚಕ್ರದ ವಾಹನ ಸವಾರರು ತಮ್ಮ ವಾಹನಗಳಿಗೆ ವೆಹಿಕಲ್ ಸರ್ಟಿಫಿಕೇಟ್ ಮಾಡಿಸಿಕೊಳ್ಳಬೇಕು ಹತ್ತಿರದ RTO ಕಚೇರಿಗಳಿಗೆ ಭೇಟಿ ನೀಡಿ ತಮ್ಮ ವಾಹನಗಳನ್ನು ಪರೀಕ್ಷೆಗೆ ಒಳಪಡಿಸಿ ಈ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು.
ಈ ಸುದ್ದಿ ಓದಿ:-ಆಧಾರ್ ಕಾರ್ಡ್ ಫೋಟೋ ಚೆನ್ನಾಗಿಲ್ವಾ.? ಚಿಂತೆ ಬಿಡಿ ಹೊಸ ಫೋಟೋ ಚೇಂಜ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!
15 ವರ್ಷಕ್ಕಿಂತ ಹಳೆಯದಾಗಿರುವ ವಾಹನಗಳಾಗಿದ್ದರೆ ಪರ್ಮಿಷನ್ ಸಿಗುತ್ತದೆ, ಇಲ್ಲವಾದರೆ ವಾಹನದ ಕಂಡಿಶನ್ ಮೇಲೆ ನಿರ್ಧಾರ ಆಗುತ್ತದೆ. ಈ ಸರ್ಟಿಫಿಕೇಟ್ ಗಾಗಿ ನೀವು ಶುಲ್ಕವನ್ನು ಕೂಡ ಪಾವತಿಸಬೇಕು. ಶುಲ್ಕ ಎಷ್ಟಿದೆ? ಒಂದು ವೇಳೆ ಈ ನಿಯಮ ಮುರಿದರೆ ದಂಡ ಎಷ್ಟು ಬೀಳಲಿದೆ ಅದರ ವಿವರ ಕೂಡ ಹೀಗಿದೆ ನೋಡಿ.
* ಮ್ಯಾನುವಲ್ ಕಾರ್ – ರೂ.400
* ಆಟೋಮ್ಯಾಟಿಕ್ ಕಾರ್ – ರೂ.600
* ದ್ವಿಚಕ್ರವಾಹನ ಮ್ಯಾನುವಲ್ ವಾಹನಕ್ಕೆ – ರೂ.200 * ಆಟೋಮ್ಯಾಟಿಕ್ ವಾಹನ – ರೂ.400
* ಒಂದು ವೇಳೆ ನಿಮ್ಮ ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ನ್ನು ನವೀಕರಣ ಮಾಡಬೇಕು ಎನ್ನುವುದಾಗಿದ್ದಲ್ಲಿ ಆ ಸಂದರ್ಭದಲ್ಲಿ ರೂ.200 ಶುಲ್ಕವನ್ನು ಪಾವತಿಸಬೇಕು
* ವ್ಯಾಲಿಡಿಟಿ ದಿನಾಂಕದಿಂದ ದೂರವಾಗುತ್ತಾ ಹೋದಂತೆ ಪ್ರತಿದಿನ 50 ರೂಪಾಯಿಗಳ ಶುಲ್ಕವನ್ನು ಹೆಚ್ಚಾಗಿ ಕಟ್ಟಬೇಕಾಗುತ್ತದೆ.