ಆಧಾರ್ ಕಾರ್ಡ್ (Aadhar Caard) ಸದ್ಯಕ್ಕೆ ಭಾರತದಲ್ಲಿ ಅತ್ಯಂತ ಅಗತ್ಯವಾಗಿ ಬೇಕಾಗಿರುವಂತಹ ಒಂದು ದಾಖಲೆ ಆಗಿದೆ. ಆಧಾರ್ ಕಾರ್ಡ್ ಇಲ್ಲದೆ ಇದ್ದಲ್ಲಿ ಶಾಲೆ ದಾಖಲಾತಿ ಮಾಡಿಸುವುದರಿಂದ ಹಿಡಿದು ಉದ್ಯೋಗ ಸೇರಲು, ಬ್ಯಾಂಕ್ ಖಾತೆ ತೆರೆಯಲು, ವ್ಯಕ್ತಿಯೊಬ್ಬರ ಮ.ರಣ ಪ್ರಮಾಣ ಪತ್ರ ಪಡೆಯಲು ಹೀಗೆ ಯಾವುದೇ ಸರ್ಕಾರಿ ಹಾಗೂ ಖಾಸಗಿ ವಲಯದ ಕಾರ್ಯಗಳು ನಡೆಯುವುದಿಲ್ಲ.
ಇಷ್ಟೊಂದು ಪ್ರಮುಖವಾದ ದಾಖಲೆಯಾಗಿರುವ ಆಧಾರ್ ಕಾರ್ಡ್ ನ್ನು ಭಾರತ ಸರ್ಕಾರದ ಅಂಗ ಸಂಸ್ಥೆಯಾಗಿರುವ ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡುತ್ತದೆ ಮತ್ತು ಕಾಲಕಾಲಕ್ಕೆ ನಿಯಮಗಳನ್ನು ರೂಪಿಸಿ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ.
ಆ ಪ್ರಕಾರವಾಗಿ ಕಳೆದ ಹತ್ತು ವರ್ಷಗಳಿಂದ ಯಾರು ಒಮ್ಮೆಯೂ ಕೂಡ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ (Aadhar Update) ಮಾಡಿಸಿಲ್ಲ ಅವರಿಗೆ ಸತತ ಮೂರನೇ ಬಾರಿಗೆ ಜೂನ್ 14ರವರೆಗೆ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಈ ಸಮಯದಲ್ಲಿ ತಮ್ಮ ಯಾವುದೇ ತಿದ್ದುಪಡಿ ಇದ್ದರೆ ಅಥವಾ ಯಾವುದೇ ವ್ಯತ್ಯಾಸ ಇಲ್ಲದಿದ್ದರೂ ಗುರುತಿನ ಪುರಾವೆ ಅಥವಾ ವಿಳಾಸ ಪುರಾವೆ ನೀಡಿ ಅಪ್ಡೇಟ್ ಮಾಡಿಸಿಕೊಳ್ಳಲು ಸೂಚಿಸಲಾಗಿದೆ.
ಈ ಸುದ್ದಿ ಓದಿ:- ಉಚಿತ ಟೈಲರಿಂಗ್ ತರಬೇತಿ ಆರಂಭ ಆಸಕ್ತರು ಅರ್ಜಿ ಸಲ್ಲಿಸಿ.!
ಇಂತಹ ಸಂದರ್ಭದಲ್ಲಿ ಆಧಾರ್ ಕಾರ್ಡ್ ನಲ್ಲಿ ಯಾವ ಮಾಹಿತಿಯನ್ನು ಎಷ್ಟು ಬಾರಿ ಬದಲಾಯಿಸಬಹುದು? ಒಂದು ವೇಳೆ ಆಧಾರ್ ಕಾರ್ಡ್ ನಲ್ಲಿ ಭಾವಚಿತ್ರ ಚೆನ್ನಾಗಿಲ್ಲದೆ ಇದ್ದರೆ ನಮಗೆ ಇಷ್ಟವಾದ ಭಾವಚಿತ್ರ ಸೇರಿಸಲು ಅವಕಾಶ ಇದೆಯೇ ಎನ್ನುವ ಮಾಹಿತಿಯನ್ನು ತಿಳಿಸುತ್ತಿದ್ದೇವೆ.
ಆಧಾರ್ ಕಾರ್ಡ್ ನಲ್ಲಿ ನಮ್ಮ ಹೆಸರು, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ, ವಿಳಾಸ, ಭಾವಚಿತ್ರ ಮತ್ತು ಬಯೋಮೆಟ್ರಿಕ್ ಮಾಹಿತಿ ಮತ್ತು UIDAI ನೀಡುವ 12 ಅಂಕೆಗಳ ಆಧಾರ್ ಸಂಖ್ಯೆ ಇರುತ್ತದೆ. ಇದರಲ್ಲಿ ಹೆಸರು ಮತ್ತು ಜನ್ಮ ದಿನಾಂಕವನ್ನು ಎರಡು ಬಾರಿ ಮಾತ್ರ ಸೂಕ್ತ ದಾಖಲೆಗಳನ್ನು ನೀಡಿ ಬದಲಾಯಿಸಬಹುದು.
ಲಿಂಗ ಬದಲಾವಣೆಗೆ ಒಂದು ಬಾರಿ ಮಾತ್ರ ಅವಕಾಶ, ಮೊಬೈಲ್ ಸಂಖ್ಯೆ ಹಾಗೂ ವಿಳಾಸವನ್ನು ಎಷ್ಟು ಬಾರಿ ಬೇಕಾದರೂ ಬದಲಾಯಿಸಬಹುದು ಹಾಗೂ ನಿಮಗೆ ನೀಡಿರುವ ಆಧಾರ್ ಸಂಖ್ಯೆ ಎಂದು ಬದಲಾಗುವುದಿಲ್ಲ. ಒಂದು ವೇಳೆ ಭಾವಚಿತ್ರ ಇಷ್ಟವಿಲ್ಲದೆ ಇದ್ದರೆ ಬದಲಾಯಿಸಬಹುದೇ ಎಂದರೆ ಖಂಡಿತ ಬದಲಾಯಿಸಬಹುದು. ಖಾಸಗಿಯವರಿಗೆ ಅವಕಾಶವಿರುವುದಿಲ್ಲ ಹತ್ತಿರದ ಆಧಾರ್ ಸೇವಾ ಕೇಂದ್ರಗಳಿಗೆ ಹೋಗಿ ಬದಲಾಯಿಸಿಕೊಳ್ಳಬೇಕು ಆದರೆ ಮನೆಯಲ್ಲಿ ಸ್ಲಾಟ್ ಬುಕಿಂಗ್ ಮಾಡಿಕೊಂಡು ಹೋಗಲು ಅವಕಾಶವಿದೆ.
ಈ ಸುದ್ದಿ ಓದಿ:- ಕೆನರಾ ಬ್ಯಾಂಕ್ ಅಕೌಂಟ್ ನಲ್ಲಿ ಅಕೌಂಟ್ ಇದ್ದವರಿಗೆ ಬಂಪರ್ ಕೊಡುಗೆ, ನಿಮ್ಮ ಹಣ ಡಬಲ್ ಆಗುವ ಹೊಸ ಸ್ಕೀಮ್.!
* ಮೊದಲಿಗೆ ನೀವು UIDAI ನ ಅಧಿಕೃತ ವೆಬ್ಸೈಟ್ ಆದ https://uidai.gov.in ಗೆ ಭೇಟಿ ನೀಡಿ.
* ನಂತರ ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ OTP ಕಳುಹಿಸಲಾಗುತ್ತದೆ ಅದನ್ನು ನಮೂದಿಸಿದರೆ ಮುಂದುವರೆಯಬಹುದು.
* ನೀವು ಆಧಾರ್ ಕಾರ್ಡ್ ಫೋಟೋ ಬದಲಾವಣೆಗೆ ಫಾರ್ಮ್ ಸರ್ಚ್ ಮಾಡಿ ಅದನ್ನು ಡೌನ್ಲೋಡ್ ಮಾಡಿಕೊಂಡು, ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ನೊಂದಿಗೆ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ.
* ಆಧಾರ್ ಸೇವಾ ಕೇಂದ್ರದ ಸಿಬ್ಬಂದಿಗಳು ನಿಮ್ಮ ಬಯೋಮೆಟ್ರಿಕ್ (biometric) ವಿವರಗಳನ್ನು ಪಡೆಯುತ್ತಾರೆ.
* ಬಳಿಕ ನಿಮ್ಮ ಫೋಟೋ ಅಪ್ಡೇಟ್ ಮಾಡಿಕೊಡುತ್ತಾರೆ. ಇದಕ್ಕೆ ನೀವುರೂ.100 ಶುಲ್ಕ ಪಾವತಿಸಬೇಕು.
* ರೆಫರೆನ್ಸ್ ನಂಬರ್ ಪಡೆದು ಸ್ಟೇಟಸ್ ಟ್ರಾಕ್ ಮಾಡಬೇಕು, ಫೋಟೋ ಅಪ್ಡೇಟ್ ಆದ ಬಳಿಕ ನಿಮ್ಮ ಆಧಾರ್ ಕಾರ್ಡನ್ನು ನೀವೆ ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಇದೆ.