Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಮನೆಗೊಂದು ಫ್ರಿಡ್ಜ್ ಬೇಕೇ ಬೇಕು. ಸೊಪ್ಪು, ಹಣ್ಣು, ತರಕಾರಿಗಳನ್ನು ಹೆಚ್ಚು ದಿನ ಫ್ರೆಶ್ ಆಗಿರುವ ರೀತಿ ಇಟ್ಟುಕೊಳ್ಳಲು, ಮೆಡಿಸನ್ ಸ್ಟೋರ್ ಮಾಡಲು ಮನೆಯಲ್ಲಿ ಆಹಾರ ಪದಾರ್ಥ ಹೆಚ್ಚಾಗಿ ಉಳಿದಿದ್ದರೆ ಅದನ್ನು ವೇಸ್ಟ್ ಆಗದಂತೆ ಉಪಯೋಗಿಸಿಕೊಳ್ಳಲು ಇನ್ನು ಇತ್ಯಾದಿ ಕಾರಣಕ್ಕಾಗಿ ಮನೆಗೊಂದು ರೆಫ್ರಿಜರೇಟರ್ ಖಂಡಿತವಾಗಿಯೂ ಈಗಿನ ಕಾಲದಲ್ಲಿ ಬೇಕೆ ಬೇಕು ಯಾಕೆಂದರೆ ವರ್ಕಿಂಗ್ ವುಮೆನ್ ಗಳ ವರ್ಕ್ ಲೋಡ್ ಈ ಫ್ರಿಜ್ ಖಂಡಿತ ಕಡಿಮೆ ಮಾಡುತ್ತದೆ.
ಇದೆಲ್ಲ ಸರಿ ಆದರೆ ತೆಗೆದುಕೊಳ್ಳುವಾಗ ಕನ್ಫ್ಯೂಷನ್ ಮಾತ್ರ ತಪ್ಪುವುದಿಲ್ಲ ಹತ್ತಾರು ಕಂಪನಿಗಳ ಕಾಂಪಿಟೇಶನ್ ನಡುವೆ ಸಿಂಗಲ್ ತೆಗೆದುಕೊಳ್ಳಬೇಕೋ? ಡಬಲ್ ಡೋರ್ ಗೆ ಹೋಗಬೇಕೋ? ಯಾವ ಫ್ಯಾಮಿಲಿ ಗೆ ಯಾವುದು ಬೆಸ್ಟ್ ಯಾವ ರೀತಿ ಇದರ ಫೀಚರ್ಸ್ ತಿಳಿದುಕೊಳ್ಳುವುದು ಇತ್ಯಾದಿ ಗೊಂದಲ ಇರುತ್ತದೆ. ನಿಮಗೆ ಸಲಹೆ ನೀಡಲು ಈ ಲೇಖನದಲ್ಲಿ ಸಿಂಗಲ್ ಡೋರ್ ಹಾಗೂ ಡಬಲ್ ಡೋರ್ ನಡುವಿನ ಪ್ಲಸ್ ಮತ್ತು ಮೈನಸ್ ಪಾಯಿಂಟ್ ಗಳ ಬಗ್ಗೆ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- LPG ಬಳಕೆದಾರರಿಗೆಲ್ಲಾ ಗುಡ್ ನ್ಯೂಸ್, ಸರ್ಕಾರದಿಂದ ಬರೋಬ್ಬರಿ ರೂ.300 ಸಬ್ಸಿಡಿ ನೆರವು, ಪಡೆಯುವುದು ಹೇಗೆ ನೋಡಿ.!
ನಂತರ ನಿಮ್ಮ ಮನೆಗೆ ಯಾವುದು ಸೂಕ್ತ ಎನ್ನುವುದನ್ನು ಅರ್ಥ ಮಾಡಿಕೊಂಡು ಶೋರೂಮ್ ಗೆ ಭೇಟಿ ಕೊಟ್ಟರೆ ಸ್ವಲ್ಪ ಕನ್ಫ್ಯೂಷನ್ ಕಡಿಮೆ ಆಗುತ್ತದೆ ಮತ್ತು ಬೇಗ ಜಡ್ಜ್ ಮಾಡಿ ಬುಕ್ ಮಾಡಬಹುದು, ಹಾಗಾಗಿ ನಿಮಗಾಗಿ ಮಾಹಿತಿ ಹೇಗಿದೆ ನೋಡಿ.
* ನೋಡಿದ ತಕ್ಷಣ ಎಲ್ಲರಿಗೂ ತಿಳಿಯುತ್ತದೆ ಸಿಂಗಲ್ ಡೋರ್ ರೆಫ್ರಿಜರೇಟರ್ ಗಿಂತ ಡಬಲ್ ರೋ ಡೋರ್ ರೆಫ್ರಿಜರೇಟರ್ ಗಳು ಹೆಚ್ಚು ದೊಡ್ಡದಾಗಿರುತ್ತದೆ ಮತ್ತು ಇದೇ ಕಾರಣದಿಂದ ಇವುಗಳ ಬೆಲೆಯಲ್ಲಿ ಕೂಡ ವ್ಯತ್ಯಾಸ ಇರುತ್ತದೆ ಎಂದು.
* ಸಿಂಗಲ್ ಡೋರ್ ರೆಫ್ರಿಜರೇಟರ್ ನಲ್ಲಿ ವೆಜಿಟೇಬಲ್ ಡ್ರಾ ಮತ್ತು ಬಾಟೆಲ್ಸ್ ಶೆಲ್ಫ್ ಗಳು ಚಿಕ್ಕದಾಗಿರುತ್ತವೆ ಮತ್ತು ಕಡಿಮೆ ಇರುತ್ತವೆ ಇದಕ್ಕಿಂತ ಡಬಲ್ ಡೋರ್ ನಲ್ಲಿ ದೊಡ್ಡದಾಗಿರುತ್ತದೆ ಹಾಗೂ ಹೆಚ್ಚು ಶೆಲ್ಫ್ ಹೆಚ್ಚಿಗೆ ಇರುತ್ತದೆ.
ಈ ಸುದ್ದಿ ಓದಿ:-ಕೇವಲ 600 ಗೆ ಛಾವಣಿ ತಂಪು, ರಾತ್ರಿ ಸೆಖೆ ಇಲ್ಲದೆ ಸುಖ ನಿದ್ರೆ ಮಾಡಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ ಸಾಕು.!
* ಸಿಂಗಲ್ ಡೋರ್ ರೆಫ್ರಿಜರೇಟರ್ ಗಳಲ್ಲಿ ಫ್ರೀಝರ್ ಕಂಪಾರ್ಟ್ಮೆಂಟ್ ಮರ್ಜ್ ಆಗಿರುತ್ತದೆ ಫ್ರಿಡ್ಜ್ ಜೊತೆಗೆ ಫ್ರೀಝರ್ ಇರುವುದರಿಂದ ಆಟೋಮೆಟಿಕ್ ಡಿ ಫಾರೆಸ್ಟ್ ಆಗುವುದಿಲ್ಲ. ಮ್ಯಾನುವಲ್ ಆಗಿ ಬಟನ್ ಪ್ರೆಸ್ ಮಾಡಿ ಡಿಫಾರೆಸ್ಟ್ ಮಾಡಬೇಕಿರುತ್ತದೆ. ಆದರೆ ಡಬಲ್ ಡೋರ್ ರೆಫ್ರಿಜರೇಟರ್ ನಲ್ಲಿ ಈ ಕಂಪಾರ್ಟ್ಮೆಂಟ್ ಸೆಪರೇಟ್ ಇರುತ್ತದೆ ಮತ್ತು ಅದು ಆಟೋಮೆಟಿಕ್ ಡಿಫಾರೆಸ್ಟ್ ಆಗುತ್ತದೆ. ಇತ್ತೀಚಿಗೆ ಬರುತ್ತಿರುವ ಮಾಡೆಲ್ ಗಳಲ್ಲಿ ಕನ್ವರ್ಟೇಬಲ್ ಸೌಲಭ್ಯ ಕೂಡ ಇದೆ. ಡಬಲ್ ಡೋರ್ ಫ್ರಿಡ್ಜ್ ತೆಗೆದುಕೊಂಡು ಫ್ರೀಝರ್ ಫ್ರಿಡ್ಜ್ ಆಗಿ ಕೂಡ ಮಾಡಿಕೊಳ್ಳಬಹುದು.
* ಸಿಂಗಲ್ ಡೋರ್ ರೆಫ್ರಿಜರೇಟರ್ ನಲ್ಲಿ ಡಿಫಾರೆಸ್ಟ್ ಆದ ನಂತರ ಆ ನೀರೆಲ್ಲ ಹೋಗಿ ಹಿಂಬದಿ ಸ್ಟೋರ್ ಆಗಿರುತ್ತದೆ. ನೀವು ಆಗಾಗ ಅದನ್ನು ತೆಗೆದು ಕ್ಲೀನ್ ಮಾಡಬೇಕು ಆದರೆ ಆಟೋಮೆಟಿಕ್ ಡಿಫಾರೆಸ್ಟ್ ಕ್ರಮದಲ್ಲಿ ಈ ರೀತಿ ನೀವು ನೀರನ್ನು ತೆಗೆದು ಖಾಲಿ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ ಇದು ಆಟೋಮೆಟಿಕ್ ಆಗಿ ಡ್ರೈ ಆಗಿ ಹೊರಟು ಹೋಗುತ್ತದೆ.
* ಸಿಂಗಲ್ ಡೋರ್ ರೆಫ್ರಿಜರೇಟರ್ ನಲ್ಲಿ ಫ್ರೀಸರ್ ಕಂಪಾರ್ಟ್ಮೆಂಟ್ ಸೆಪರೇಟ್ ಇರದ ಕಾರಣ ನೀವೇನಾದರೂ ನಾನ್ ವೆಜ್ ತಿನ್ನುವವರಾಗಿದ್ದು ಫ್ರೀಜರ್ ನಲ್ಲಿ ನಾನ್-ವೆಜ್ ಇಟ್ಟಿದ್ದರೆ ಕೆಳಗಿನ ಶೆಲ್ಫ್ ಗಳಲ್ಲಿ ಇಟ್ಟಿರುವ ವಸ್ತುಗಳಿಗೂ ಅದರ ವಾಸನೆ ಮತ್ತು ಓಡರ್ ತಗಲುವ ಸಾಧ್ಯತೆ ಇರುತ್ತದೆ.
* ಸಾಮಾನ್ಯವಾಗಿ ಮನೆ ಬಳಕೆಗೆ ಫ್ರಿಡ್ಜ್ ಬಳಸುವುದಾದರೆ ಡಬಲ್ ಡೋರ್ ಪ್ರಿಫರ್ ಮಾಡುತ್ತಾರೆ, ಶಾಪ್ ಗಳಲ್ಲಿ ಸ್ಟೋರ್ ಮಾಡಲು ಸಿಂಗಲ್ ಡೋರ್ ರೆಫ್ರಿಜರೇಟರ್ ಬಳಸುತ್ತಾರೆ.