ಮನೆಗಳಲ್ಲಿ ಅಕ್ವೇರಿಯಂ ಇಡುತ್ತಾರೆ, ಇದರ ಹಿಂದೆ ವಾಸ್ತು ಕಾರಣ ಹಾಗೂ ಕೆಲ ನಂಬಿಕೆಗಳು ಇದೆ. ಅಕ್ವೇರಿಯಂ ನಲ್ಲಿ ಮೀನುಗಳನ್ನು ಇಟ್ಟು ಸಾಕುವುದರಿಂದ ವಾಸ್ತುದೋಷ ಪರಿಹಾರವಾಗುತ್ತದೆ, ಮನೆಯಲ್ಲಿ ನೆಗೆಟಿವ್ ಎನರ್ಜಿ ಎಂಟ್ರಿ ಆಗುವುದಿಲ್ಲ, ಹಣದ ಆಕರ್ಷಣೆ ಹೆಚ್ಚಿಸುತ್ತದೆ ಮನೆ ಏಳಿಗೆ ಆಗುತ್ತದೆ ಇನ್ನು ಇತ್ಯಾದಿ ಕಾರಣಗಳಿವೆ.
ಮನೆ ಮಾತ್ರವಲ್ಲದೆ ಆಫೀಸ್ ಗಳಲ್ಲಿ ತಮ್ಮ ಅಂಗಡಿ ಮುಗ್ಗಟ್ಟುಗಳಲ್ಲಿ ಕೂಡ ಅಕ್ವೇರಿಯಂ ನಲ್ಲಿ ಫಿಶ್ ಗಳನ್ನು ಸಾಕುತ್ತಾರೆ. ಆದರೆ ಈ ವಿಚಾರವಾಗಿ ಒಂದು ಬೇಸರ ಏನೆಂದರೆ, ಹೊಸದಾಗಿ ಫಿಶ್ ಟ್ಯಾಂಕ್ ಅಥವಾ ಅಕ್ವೇರಿಯಂ ಇಟ್ಟು ಫಿಶ್ ಸಾಕುವವರಿಗೆ ಪದೇಪದೇ ಮೀನು ಸ’ತ್ತು ಹೋಗುತ್ತದೆ ಎಂದು ನೋ’ವಾಗುತ್ತದೆ.
ಈ ಸುದ್ದಿ ಓದಿ:-ಸ್ಟೇಟ್ ಬ್ಯಾಂಕ್ ನಲ್ಲಿ 5 ಲಕ್ಷ FD ಇಟ್ಟರೆ ಎಷ್ಟು ಹಣ ಲಾಭ ಸಿಗುತ್ತದೆ ಗೊತ್ತಾ.? ನಿಮ್ಮ ಹಣ ದುಪ್ಪಟ್ಟು ಮಾಡಲು ಇದೇ ಬೆಸ್ಟ್
ಇದಕ್ಕೆ ಕಾರಣ ಏನು ಎಂದರೆ ಸರಿಯಾಗಿ ಮೀನುಗಳನ್ನು ನಿರ್ವಹಣೆ ಮಾಡುವುದು ಗೊತ್ತಿಲ್ಲದೆ ಇರುವುದೇ ಕಾರಣ ಎಂದು ಹೇಳಬಹುದು. ಹಾಗಾಗಿ ಇಂದು ಈ ಅಂಕಣದಲ್ಲಿ ಹೊಸದಾಗಿ ಮೀನು ಸಾಕುವವರಿಗೆ ಮೀನುಗಳ ಬಗ್ಗೆ ಹಾಗೂ ಅವುಗಳನ್ನು ಸಾಕುವ ರೀತಿ ಬಗ್ಗೆ ಕೆಲ ಮಾಹಿತಿಯನ್ನು ತಿಳಿಸುತ್ತಿದ್ದೇವೆ.
* ಜೀಬ್ರಾ ಡೈನೋಸ್ (Zeebra Danios):- ಇವು ಅಕ್ವೇರಿಯಂ ಅಂದವನ್ನು ಹೆಚ್ಚಿಸುವಂತಹ ಮೀನುಗಳಾಗಿವೆ, ಈ ಮೀನುಗಳು ಬಹಳ ಚಿಕ್ಕದಾಗಿದ್ದು ಹೆಚ್ಚೆಂದರೆ ಒಂದು ಇಂಚು ಬೆಳೆಯುತ್ತದೆ ಅಷ್ಟೇ. ಇವು ಗುಂಪಿನಲ್ಲಿ ವಾಸಿಸುವ ಮೀನುಗಳಾಗಿವೆ. ಬಹಳ ಕಡಿಮೆ ಖರ್ಚಿನಲ್ಲಿ ಹಾಗೂ ಬಹಳ ಈಸಿಯಾಗಿ ಇವುಗಳನ್ನು ಸಾಕಬಹುದು.
ಈ ಸುದ್ದಿ ಓದಿ:-HSRP ಪ್ಲೇಟ್ ಜೊತೆ ಇನ್ಮುಂದೆ ಈ ದಾಖಲೆ ಕಡ್ಡಾಯವಾಗಿ ಇರಲೇಬೇಕು, ಇಲ್ಲದಿದ್ರೆ ಸ್ಥಳದಲ್ಲೇ ಗಾಡಿ ಸೀಜ್, ಹೊಸ ರೂಲ್ಸ್.!
ಯಾವುದೇ ಫಿಲ್ಟರ್ ಅಥವಾ ಆಕ್ಸಿಜನ್ ಸಪ್ಲೈ ಮಾಡುವ ಅವಶ್ಯಕತೆ ಇರುವುದಿಲ್ಲ ಇವುಗಳನ್ನು ಫಾಸ್ಟ್ ಮೂವಿಂಗ್ ಫಿಷಸ್ ಎಂದು ಕೂಡ ಕರೆಯುತ್ತಾರೆ, ಇವುಗಳನ್ನು ಮೂರು ಜೊತೆ ಅಂದರೆ ಒಟ್ಟು ಆರು ಮೀನುಗಳನ್ನು ಒಟ್ಟಿಗೆ ಹಾಕಿ ಸಾಕಬೇಕಾಗುತ್ತದೆ. ಜೊತೆ ಮೀನು ರೂ.20 ರಿಂದ ರೂ.40ರಲ್ಲಿ ಸಿಗುತ್ತದೆ. ಕೇಸರಿ, ಕಂದು, ಹಳದಿ, ಹಸಿರು, ಪಿಂಕ್ ಮತ್ತು ನೀಲಿ ಬಣ್ಣದಲ್ಲಿ ಸಿಗುತ್ತದೆ.
* ಫೈಟರ್ ಫಿಷ್ (Fighter Fish):- ಫೈಟರ್ ಫಿಶ್ ಮೀನುಗಳನ್ನು ಕೂಡ ಅಕ್ವೇರಿಯಂ ಗಳಲ್ಲಿ ಫಿಶ್ ಟ್ಯಾಂಕ್ ಗಳಲ್ಲಿ ಕಡಿಮೆ ಮೇಂಟೆನೆನ್ಸ್ ನಲ್ಲಿ ಸಾಕಬಹುದು. ನೋಡಲು ಬಹಳ ಅಟ್ರಾಕ್ಟಿವ್ ಆಗಿ ಈ ಮೀನು ಕಾಣುತ್ತದೆ ಆದರೆ ಈ ಮೀನನ್ನು ಸಿಂಗಲ್ ಆಗಿ ಸಾಕಬೇಕಾಗುತ್ತದೆ.
ಈ ಸುದ್ದಿ ಓದಿ:-ಆಧಾರ್ ಕಾರ್ಡ್ ಫೋಟೋ ಚೆನ್ನಾಗಿಲ್ವಾ.? ಚಿಂತೆ ಬಿಡಿ ಹೊಸ ಫೋಟೋ ಚೇಂಜ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!
* ಟೈಗರ್ ಬಾರ್ (Tiger Barbs):- ಈ ಮೀನನ್ನು ಕೂಡ ಗುಂಪಿನಲ್ಲಿ ಸಾಕಬೇಕಾಗುತ್ತದೆ. 1 ರಿಂದ 2 ಇಂಚಿನವರೆಗೆ ಈ ಮೀನು ಬೆಳೆಯುತ್ತದೆ. ಈ ಫಿಶ್ ಗಳನ್ನು ಬೇರೆ ಫಿಶ್ ಗಳ ಜೊತೆ ಬಿಡಬಹುದು. ಕಂದು ಹಾಗೂ ಹಳದಿ ಬಣ್ಣದ ಮಿಶ್ರಣದೊಂದಿಗೆ ಕೆಂಪು ಕಪ್ಪು ಪಟ್ಟೆಯೊಂದಿಗೆ ಈ ಮೀನು ಬರುತ್ತದೆ.
ಅಕ್ವೇರಿಯಂ ತುಂಬಾ ಓಡಾಡುವುದರಿಂದ ನೋಡುವುದಕ್ಕೆ ತುಂಬಾ ಚೆನ್ನಾಗಿ ಕಾಣುತ್ತದೆ ಒಂದು ಪೇರ್ ಗೆ ರೂ.50 ರಿಂದ ರೂ.60 ರೂಪಾಯಿಯಲ್ಲಿ ಈ ಮೀನುಗಳು ಸಿಗುತ್ತವೆ, ಅಕ್ವೇರಿಯಂ ನಲ್ಲಿ ಈ ಮೀನುಗಳು ಕನಿಷ್ಠ ಆರು ಮೀನುಗಳಾದರು ಇದ್ದರೆ ಚೆನ್ನಾಗಿರುತ್ತದೆ.
ಈ ಸುದ್ದಿ ಓದಿ:-ಆಧಾರ್ ಕಾರ್ಡ್ ಫೋಟೋ ಚೆನ್ನಾಗಿಲ್ವಾ.? ಚಿಂತೆ ಬಿಡಿ ಹೊಸ ಫೋಟೋ ಚೇಂಜ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!
* ಗೌರಾಮಿ ಫಿಷ್ (Gourami fish):- ಇದು ಒಂದು ರೀತಿಯ ಆರ್ಟ್ ಫಿಷ್, ಹೊಸದಾಗಿ ಸಾಕುವವರಿಗೆ ಈ ಮೀನು ಸಾಕುವುದು ಬಹಳ ಸಲೀಸು. ಫಿಷನ್ ಪಂಪ್ ಇಲ್ಲದೆಯೇ ಈ ಫಿಷ್ ಗಳನ್ನು ಸಾಕಬಹುದು. ಈ ಮೀನನ್ನು ಎಲ್ಲಾ ಮೀನುಗಳ ಜೊತೆ ಬಿಡಬಹುದು. ಮಧ್ಯಮ ಗಾತ್ರದ ಅಕ್ವೇರಿಯಂ ನಲ್ಲಿ ಈ ಫಿಶ್ ಗಳನ್ನು ಹಾಕಬಹುದು. ಒಂದು ಜೊತೆ ರೂ.50 ರಿಂದ ರೂ.70ಕ್ಕೆ ಈ ಫಿಷ್ ಸಿಗುತ್ತದೆ. ಫಿಷ್ ಸಾಕುವ ವಿಚಾರವಾಗಿ ಇನ್ನಷ್ಟು ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.