ಇತ್ತೀಚಿನ ದಿನಗಳಲ್ಲಿ ಯಾರು ಯಾರನ್ನು ಹಣದ ವಿಚಾರದಲ್ಲಿ ನಂಬುವುದಿಲ್ಲ ಹಾಗಾಗಿ ಸ್ನೇಹಿತರಿಗೆ ಇರಲಿ, ಸಂಬಂಧಿಕರಿಗೆ ಆಗಲಿ ಸಾಲ ಕೊಡುವಾಗ ಅದಕ್ಕೆ ಅಡಮಾನವಾಗಿ ಏನನ್ನಾದರೂ ಕೇಳುತ್ತಾರೆ. ಕೆಲವು ಆಸ್ತಿಪತ್ರ, ಒಡವೆ ಅಡ ಇಟ್ಟು ಹಣ ಪಡೆದುಕೊಂಡರೆ ಕೆಲವರ ಬಳಿ ಏನು ಇರುವುದಿಲ್ಲ ಅವರು ತಮ್ಮ ಆದಾಯವನ್ನೇ ಸಾಕ್ಷಿಯಾಗಿ ತೋರಿಸಿ ತಮ್ಮ ಬ್ಯಾಂಕ್ ಖಾತೆಯ ಒಂದು ಖಾಲಿ ಚೆಕ್ ಕೊಟ್ಟು ಸಾಲ ಪಡೆದಿರುತ್ತಾರೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಖಾಲಿ ಚೆಕ್ ಕೊಟ್ಟು ಸಾಲ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ, ಇದರಿಂದ ಅನುಕೂಲತೆ ಆಗುತ್ತಿದೆ ಎಂದುಕೊಳ್ಳುವಷ್ಟರಲ್ಲಿ ಅನಾನುಕೂಲತೆಯು ಆಗುತ್ತಿದೆ. ಖಾಲಿ ಚೆಕ್ ಪಡೆದುಕೊಂಡು ಸಾಲ ಕೊಟ್ಟವರು ನಂತರ ಅದರ ಮೇಲೆ ಹೆಚ್ಚು ಹಣ ಬರೆದು ವಸೂಲಿ ಮಾಡುತ್ತಿದ್ದಾರೆ ಅಥವಾ ಹೆಚ್ಚು ಹಣ ಬರೆದು ಚೆಕ್ ಬೌನ್ಸ್ ಕೇಸ್ ಹಾಕುತ್ತೇವೆ ಎಂದು ಬ್ಲಾ’ಕ್ ಮೇ’ಲ್ ಮಾಡುತ್ತಿರುವ ಪ್ರಕರಣಗಳು ಹೆಚ್ಚು ಕೇಳಿಬರುತ್ತಿವೆ.
ಈ ವಿಚಾರವಾಗಿ ಈ ಅಂಕಣದಲ್ಲಿ ಕೆಲ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಅದೇನೆಂದರೆ ಸಾಲ ಪಡೆಯಲು ಕೊಟ್ಟಿರುವ ಖಾಲಿ ಚೆಕ್ ಮೇಲೆ ಎಷ್ಟು ಹಣ ಪಡೆಯಬಹುದು ಎಂದು. ಯಾವುದೇ ಕಾರಣಕ್ಕೂ ಅಷ್ಟು ಸುಲಭವಾಗಿ ಖಾಲಿ ಚೆಕ್ ಮೇಲೆ ತಾವು ಸಾಲ ಕೊಟ್ಟಿದ್ದಕ್ಕಿಂತ ದುಪ್ಪಟ್ಟು ಮೂರು ಪಟ್ಟು ಹೆಚ್ಚು ಹಣವನ್ನು ಬರೆದು ವಸೂಲಿ ಮಾಡುವುದು ಅಷ್ಟು ಸುಲಭವಲ್ಲ.
ಉದಾಹರಣೆಗೆ ಒಬ್ಬ ವ್ಯಕ್ತಿಯು ಒಂದು ಲಕ್ಷ ಹಣವನ್ನು ಸಾಲ ಪಡೆದಿದ್ದರೆ ನೀವು ಆತ ಕೊಟ್ಟಿದ್ದ ಖಾಲಿ ಚೆಕ್ ಮೇಲೆ 5 ಲಕ್ಷ ಎಂದು ಬರದಿದ್ದರೆ ಆ ಪ್ರಕರಣಗಳು ಕೋರ್ಟ್ ಗೆ ಹೋದಾಗ 5 ಲಕ್ಷ ಸಾಲ ಪಡೆಯಲು ಆ ವ್ಯಕ್ತಿ ಅರ್ಹನೆ ಆತ ಐಟಿ ರಿಟರ್ನ್ ಫೈಲ್ ಮಾಡಿವುದಿಲ್ಲ ಹೀಗಾಗಿ ಯಾವ ಅಧಾರದ ಮೇಲೆ 5 ಲಕ್ಷಗಳನ್ನು ಸಾಲ ಕೊಟ್ಟರು ಎನ್ನುವುದು ಬರುತ್ತದೆ
ನೀವು ಒಂದು ವೇಳೆ ಒಂದು ಲಕ್ಷ ಸಾಲ ಕೊಟ್ಟು ಅವರು ಅದನ್ನು ಹಂತ ಹಂತವಾಗಿ ತಿರೀಸಿಕೊಂಡು ಬಂದು ಕೊನೆಯಲ್ಲಿ ಉಳಿದ ಮೊತ್ತಕ್ಕೆ ಅವರು ಕೊಟ್ಟಿದ್ದ ಚೆಕ್ ಮೇಲೆ ಹಣ ಬರೆದು ಡ್ರಾ ಮಾಡಿದರೆ ನೀವು ಮಾಡಿರುವ ಹಣಕಾಸಿನ ವಹಿವಾಟಿಗೆ ನಿಮ್ಮ ಬಳಿ ಸಾಕ್ಷಿ ಇರುತ್ತದೆ. ನೀವು ಅವರಿಗೆ ಹಣ ಕಳುಹಿಸಿರುವುದು, ನೀವು ಅವರನ್ನು ಹಣ ಕೇಳಿರುವುದು ಈ ಬಗ್ಗೆ ನಿಮ್ಮ ನಡುವೆ ನಡೆದಿರುವ ಸಂಭಾಷಣೆಗಳು ಇವೆಲ್ಲವೂ ಸಾಕ್ಷಿಯಾಗಿ ಸಿಗುತ್ತವೆ.
ಆದರೆ ನೀವು ಸುಳ್ಳು ಹೇಳಿ ಒಂದು ಲಕ್ಷಕ್ಕೆ 5 ಲಕ್ಷ ಬರೆದಾಗ ನೀವು ಯಾವ ರೂಪದಲ್ಲಿ ಅವರಿಗೆ ಹಣ ಕೊಟ್ಟಿದ್ದೀರಿ ಎನ್ನುವುದಕ್ಕೆ ಸಾಕ್ಷಿ ಕೊಡಬೇಕು ಯಾಕೆಂದರೆ ಕಾನೂನಿನಲ್ಲಿ 2 ಲಕ್ಷಕ್ಕಿಂತ ಹೆಚ್ಚು ಹಣವನ್ನು ನಗದು ಕೊಡುವಂತಿಲ್ಲ ಮತ್ತು ನಿಮ್ಮ ವರಮಾನವನ್ನು ಕೂಡ ಲೆಕ್ಕಾಚಾರ ಹಾಕಲಾಗುತ್ತದೆ .
ಉದಾಹರಣೆಗೆ, ನೀವು ತಿಂಗಳಿಗೆ 10 ರಿಂದ 15 ಸಾವಿರ ದುಡಿವ ವ್ಯಕ್ತಿಯಾಗಿದ್ದು ನೀವು ಯಾರಿಗಾದರೂ 5 ಲಕ್ಷ ಕೊಟ್ಟಿದ್ದೀರ ಎಂದರೆ ನಿಮ್ಮಿಂದ ಅದು ಸಾಧ್ಯವೇ ಎಂದು ಅನುಮಾನ ಮೂಡುತ್ತದೆ ಮತ್ತು ನಿಮ್ಮ ಹಣಕಾಸಿನ ಆದಾಯದ ಮೂಲವನ್ನು ಕೂಡ ನೀವು ತೋರಿಸಬೇಕಾಗುತ್ತದೆ. ಹಾಗಾಗಿ ಈ ರೀತಿ ಖಾಲಿ ಚೆಕ್ ಮೇಲೆ ಎಷ್ಟು ಬೇಕಾದರೂ ಹಣ ಬರೆದುಕೊಂಡು ಪಡೆದುಕೊಳ್ಳಬಹುದು ಎನ್ನುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಬಹಳ ಉಪಯುಕ್ತ ಮಾಹಿತಿ ಇದಾಗಿದ್ದು ತಪ್ಪದೆ ಇದನ್ನು ಎಲ್ಲದರೊಡನೆ ಶೇರ್ ಮಾಡಿ.