ತುಳಸಿ ಕೃಷಿ ಎಷ್ಟು ಲಾಭದಾಯಕ ನೋಡಿ.! ಎಕರೆಗೆ 3 ಲಕ್ಷ ಆದಾಯ, 8-10 ಬಾರಿ ಕಟಾವು, ಈ ಬೆಳೆ ಬೆಳೆಯಲು ಸರ್ಕಾರದಿಂದ ಸಹಾಯಧನ ಕೂಡ ಲಭ್ಯ.!

ತುಳಸಿ ಗಿಡಕ್ಕೆ ನಮ್ಮ ದೇಶದಲ್ಲಿ ಅತ್ಯುನ್ನತ ಸ್ಥಾನವಿದೆ. ಪ್ರತಿ ಮನೆ ಮುಂದೆ ಕೂಡ ತುಳಸಿ ನೆಟ್ಟು ಪೂಜಿಸುತ್ತಾರೆ. ಶ್ರೀ ವಿಷ್ಣು ಸಮೇತ ಮಹಾಲಕ್ಷ್ಮಿ ತಾಯಿಯು ಈ ತುಳಸಿ ಗಿಡದಲ್ಲಿ ನೆಲೆಸಿರುತ್ತಾರೆ ಎನ್ನುವುದು ನಮ್ಮ ಪುರಾಣಗಳಿಂದ ತಿಳಿದು ಬಂದಿರುವ ನಂಬಿಕೆ. ಇದನ್ನು ಹೊರತು ಪಡಿಸಿ ಕೂಡ ತುಳಸಿ ಗಿಡಕ್ಕೆ ಆಯುರ್ವೇದದಲ್ಲಿ ಅತ್ಯಂತ ಸ್ಥಾನವಿದೆ.

WhatsApp Group Join Now
Telegram Group Join Now

ಅನೇಕ ಕಾಯಿಲೆಗಳಿಗೆ ತುಳಸಿ ರಾಮಬಾಣವಾಗಿದೆ, ಅತಿಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಈ ತುಳಸಿ ಗಿಡದ ಮೂಲಕ ತಯಾರಿಸಿದ ಔಷಧಿಗಳಿಗೆ ಕೆಮ್ಮು ನೆಗಡಿ ಶೀತ ಉಸಿರಾಟದ ಸಮಸ್ಯೆ ಇತ್ಯಾದಿಯಾಗಿ ಕೆಟ್ಟ ಕಾಯಿಲೆಗಳನ್ನು ಕೂಡ ಗುಣ ಮಾಡುವ ಶಕ್ತಿ ಇದೆ.

ಹಾಗಾಗಿ ಇಂತಹ ತುಳಸಿಯನ್ನು ವ್ಯಾಪಾರ ಉದ್ದೇಶಕ್ಕಾಗಿ ಬೆಳೆಯುವುದರಿಂದ ಇದು ಎಂದಿಗೂ ಕೂಡ ಕೈ ಸುಡದ ಉದ್ಯಮವಾಗುತ್ತದೆ ಎಂದು ನಂಬಬಹುದು. ಈ ಬಗ್ಗೆ ಆಸಕ್ತಿ ಇರುವವರಿಗೆ ತುಳಸಿ ಕೃಷಿ ಬಗ್ಗೆ ಈ ಲೇಖನದಲ್ಲಿ ಕೆಲ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.

ಈ ಸುದ್ದಿ ಓದಿ:- ಬರ ಪರಿಹಾರದ ಹಣ ಬರದೇ ಇರುವವರಿಗೆ ಹಣ ಪಡೆಯಲು ಈ ಕೆಲಸ ಕಡ್ಡಾಯ, ಜೂನ್ 1 ರಿಂದಲೇ ಆರಂಭ.!

* ನಮಗೆ ರಾಮ ತುಳಸಿ ಹಾಗೂ ಕೃಷ್ಣ ತುಳಸಿ ಗುರುತಿಸಿ ಗೊತ್ತಿರುತ್ತದೆ. ಆದರೆ ಈ ಎರಡು ತಳಿಗಳು ಮಾತ್ರವಲ್ಲದೆ ವನ ತುಳಸಿ, ದುದ್ರಿಹಿ ತುಳಸಿ, ಬಾಬಿ ತುಳಸಿ (ಬಿದಿರು ತುಳಸಿ), ತುಕಾಶ್ಮಿಯಾ ತುಳಸಿ ಮತ್ತು ಅಮೃತ ತುಳಸಿ ಹೀಗೆ ವೈವಿಧ್ಯಗಳಿದ್ದು ಒಂದಕ್ಕಿಂತ ಒಂದು ತನ್ನ ಗುಣ ಹಾಗೂ ಗುಣಲಕ್ಷಣಗಳಿಂದ ವಿಭಿನ್ನವಾಗಿದೆ. ಇದರಲ್ಲಿ ವ್ಯಾಪಾರ ಉದ್ದೇಶಕ್ಕಾಗಿ ಬೆಳೆಯುವುದಾದರೆ ರಾಮ ತುಳಸಿ ಉತ್ತಮ ಮತ್ತು ದುದ್ರಿಹಿ ತುಳಸಿಯು ವೈದ್ಯಕೀಯ ಉದ್ದೇಶಗಳಿಗಾಗಿ ಹೆಚ್ಚು ಬಳಕೆಯಾಗುತ್ತದೆ.

* ವರ್ಷದಲ್ಲಿ ಜುಲೈ ತಿಂಗಳು ತುಳಸಿ ಕೃಷಿ ಮಾಡುವುದಕ್ಕೆ ಅತ್ಯುತ್ತಮ ಸಮಯ ಎಂದು ಹೇಳಲಾಗುತ್ತದೆ.
* ಆದರೆ ಕೃಷಿ ಮಾಡುವ ಮುನ್ನ ಜಮೀನನ್ನು ಚೆನ್ನಾಗಿ ಉತ್ತು ಹದಗೊಳಿಸಬೇಕು ಹಾಗೂ ತಪ್ಪದೆ ಇದಕ್ಕೆ ಕೊಟ್ಟಿಗೆ ಗೊಬ್ಬರವನ್ನು ಹಾಕಿರಬೇಕು ಮತ್ತು ಪ್ರತಿ 6 ತಿಂಗಳಿಗೊಮ್ಮೆ ಗೊಬ್ಬರ ಹಾಕಬೇಕು. ಹೀಗಿದ್ದಾಗ ಮಾತ್ರ ನೀವು ನಿರೀಕ್ಷಿತ ಇಳುವರಿಯನ್ನು ಕಾಣಬಹುದು

* 24 ಇಂಚು ಹಾಗೂ 8-10 ಇಂಚು ಅಂತರದಲ್ಲಿ ತುಳಸಿ ಸಸಿಗಳನ್ನು ನಾಟಿ ಮಾಡಬೇಕಾಗುತ್ತದೆ. ಇನ್ನು ಮಲ್ಚಿಂಗ್ ಮೂಲಕ ಬೆಳೆಸುವುದಾದರೆ 1:4 ಅನುಪಾತದಲ್ಲಿ ತುಳಸಿ ಬೀಜಗಳನ್ನು ಮರಳಿನೊಂದಿಗೆ ಮಿಕ್ಸ್ ಮಾಡಿ ಇಟ್ಟರೆ ಒಂದೂವರೆ ತಿಂಗಳಲ್ಲಿ ಅವು ಮೊಳಕೆ ನಂತರ ಅವುಗಳನ್ನು ಬೆಳೆಸಬಹುದು.

ಈ ಸುದ್ದಿ ಓದಿ:- ನಿಮ್ಮ ಆಸ್ತಿ ಮತ್ತು ಜಮೀನಿಗೆ ಪೋಡಿ ಮಾಡುವುದು ಹೇಗೆ.? ಅರ್ಜಿ ಹಾಕಲು ಏನೆಲ್ಲ ದಾಖಲೆಗಳು ಬೇಕು ಈ ಪ್ರಕ್ರಿಯೆ ಹೇಗೆ ನಡೆಯುತ್ತೆ ನೋಡಿ.!

* ತುಳಸಿ ಗಿಡಕ್ಕೆ ಕಾಯಿಲೆ ಬೀಳುವುದು ಬಹಳ ಕಡಿಮೆ. ಹಾಗಾಗಿ ಇವುಗಳಿಗೆ ಹೆಚ್ಚು ಕ್ರಿಮಿನಾಶಕ ಕೀಟನಾಶಗಳನ್ನು ವಿನಿಯೋಗಿಸಬೇಕಾದ ಕಷ್ಟ ಬರುವುದಿಲ್ಲ ಇದರಿಂದ ಖರ್ಚು ಕಡಿಮೆ ಆಗುತ್ತದೆ.
* ಬೇಸಿಗೆ ಕಾಲದಲ್ಲಿ ವಾರಕ್ಕೊಮ್ಮೆ ನೀರು ಹಾಯಿಸಿದರೂ ಸಾಕು ಇವು ಬೆಳೆಯುತ್ತವೆ.

* ತುಳಸಿ ಗಿಡವು ಬೆಳೆದು ಹೂ ಬಿಡುವ ಸಮಯಕ್ಕೆ ಬಂದಾಗ ಇವುಗಳನ್ನು ಕಟಾವು ಮಾಡುವುದು ಉತ್ತಮ ಸಮಯ ಎಂದು ಸೂಚಿಸಲಾಗಿದೆ. ಈ ರೀತಿ 40 ದಿನಗಳಿಗೆ ತುಳಸಿ ಬೆಳೆಯುತ್ತದೆ ಪ್ರತಿ 40 ದಿನಗಳಿಗೊಮ್ಮೆ ಒಂದು ವರ್ಷದವರೆಗೆ ನಿರಂತರ ಆದಾಯವನ್ನು ಕೃಷಿಕ ಕಾಣಬಹುದು.

* ಔಷಧೀಯ ಕಂಪನಿಗಳು ಅಥವಾ ಏಜೆನ್ಸಿ ಗಳಿಗೆ ಅಥವಾ ನೀವೇ ನೇರವಾಗಿ ಗ್ರಾಹಕರಿಗೆ ಅಥವಾ ಗ್ರಾಹಕ ಮಳಿಗೆಗಳಲ್ಲಿ ಕಾಂಟಾಕ್ಟ್ ಮಾಡಿಕೊಂಡು ಹೀಗೆ ಹಲವಾರು ವಿಧಾನಗಳಲ್ಲಿ ನೀವು ಬೆಳೆದಿರುವ ತುಳಸಿಯನ್ನು ಮಾರಾಟ ಮಾಡಬಹುದು ನೀವು ಮಾಡಿದ ಖರ್ಚಿಗಿಂತ ಅತಿ ಹೆಚ್ಚಾಗಿ ಲಾಭ ಸಿಗುತ್ತದೆ ಎನ್ನುವುದು ನಿಶ್ಚಿತ ಈ ಕೃಷಿ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now