ಸುಳ್ಳು ಚೆಕ್ ಬೌನ್ಸ್ ಕೇಸ್ ಬಿದ್ದರೆ ಹೇಗೆ ಡೀಲ್ ಮಾಡಬೇಕು ನೋಡಿ.!

 

WhatsApp Group Join Now
Telegram Group Join Now

ಈಗಿನ ಕಾಲದಲ್ಲಿ ಜನ ಲೆಸ್ ಕ್ಯಾಶ್ ಬಳಸುತ್ತಿದ್ದಾರೆ ಅಂತಲೇ ಹೇಳಬಹುದು. ತರಕಾರಿ ತೆಗೆದುಕೊಳ್ಳುವುದರಿಂದ ಹಿಡಿದು ಎಷ್ಟೇ ಶಾಪಿಂಗ್ ಮಾಡಿದರು ಕೂಡ UPI ಆಧಾರಿತ ಅಪ್ ಗಳ ಮೂಲಕ ವ್ಯವಹಾರ ನಡೆಯುತ್ತಿದೆ. ಸಣ್ಣಪುಟ್ಟದ ಹಣ ವಿನಿಮಯಕ್ಕೆ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಇಂತಹ UPI ಆಪ್ ಮೇಲೆಯೇ ಅವಲಂಬಿತರಾಗಿದ್ದರು.

ಇದರಲ್ಲಿ ಒಂದು ದಿನಕ್ಕೆ ಇಂತಿಷ್ಟೇ ಎಂಬ ಮಿತಿ ಇದೆ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ಇಂದಿಗೂ ಭದ್ರತೆ ಉದ್ದೇಶದಿಂದ ಆನ್ಲೈನ್ ಬದಲು ಈ ರೀತಿ ಚೆಕ್ ಮೂಲಕವೇ ವ್ಯವಹಾರ ನಡೆಸುತ್ತಾರೆ. ಹೀಗೆ ಚೆಕ್ ಬಳಕೆಯು ಶಾಶ್ವತವಾಗಿ ಇರುವ ಬ್ಯಾಂಕಿಂಗ್ ಸೇವೆ ಎನ್ನಬಹುದು ಈ ರೀತಿ ಚೆಕ್ ಮೇಲೆ ಅವಲಂಬಿತರಾಗುವುದು ಹೆಚ್ಚಾದಂತೆ ಚೆಕ್ ಬೌನ್ಸ್ ಪ್ರಕರಣಗಳು ಕೂಡ ಕೋರ್ಟ್ ಗಳಲ್ಲಿ ಹೆಚ್ಚಾಗುತ್ತಿವೆ.

ಇದರಲ್ಲಿ ನಿಜವಾಗಿ ಮೋ’ಸ ಹೋಗಿ ಚೆಕ್ ಬೌನ್ಸ್ ಕೇಸ್ ಹಾಕುವವರಿಗಿಂತ ಯಾವುದೋ ಉದ್ದೇಶಕ್ಕೆ ಕೊಟ್ಟಿದ್ದ ಬ್ಲಾಂಕ್ ಚೆಕ್ ಇಟ್ಟುಕೊಂಡು ಮತ್ತೊಂದು ಉದ್ದೇಶಕ್ಕಾಗಿ ಬಳಸಿಕೊಂಡಿರುವ ಉದಾಹರಣೆಗಳು ಕೂಡ ಇವೆ. ಚೆಕ್ ಬೌನ್ಸ್ ಪ್ರಕರಣಗಳನ್ನು ಜನರು ಬಹಳ ನಿರೀಕ್ಷೆ ಮಾಡುತ್ತಾರೆ ಅಥವಾ ಬಹಳ ಗಂಭೀರವಾಗಿ ತೆಗೆದುಕೊಂಡು ಬಿಡುತ್ತಾರೆ.

ಈ ಸುದ್ದಿ ಓದಿ:- ಮೊದಲನೇ ಬೆಳೆಗೆ ಒಂದು ಕೋಟಿ ಲಾಭ.! ಅಷ್ಟಕ್ಕೂ ರೈತ ಬೆಳೆದಿದ್ದಾದರೂ ಏನು ಗೊತ್ತಾ?…

ಆದರೆ ಇದರಲ್ಲಿ ಅರಿತುಕೊಳ್ಳಬೇಕಾದ ವಿಷಯ ಏನೆಂದರೆ ಚೆಕ್ ಬೌನ್ಸ್ ಪ್ರಕರಣದ ಸಂಬಂಧಿತವಾಗಿ ಪೊಲೀಸರಿಂದ ನೋಟಿಸ್ ಮನೆಗೆ ತಲುಪಿದೆ ಎನ್ನುವ ಕಾರಣಕ್ಕೆ ಇದು ದೊಡ್ಡ ಕೇಸ್ ಎಂದು ಹೆದರುವ ಅಗತ್ಯ ಇಲ್ಲ ಮತ್ತು ಚೆಕ್ ಬೌನ್ಸ್ ಕೇಸ್ ತಾನೆ ಎಂದು ಅಸಡ್ಡೆ ಕೂಡ ತೋರಬಾರದು.

ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಕೋರ್ಟ್ ಮೂರು ಬಾರಿ ನೋಟಿಸ್ ಕಳುಹಿಸುತ್ತದೆ. ಆದರೆ ಮುಖ್ಯ ವಿಚಾರ ಏನೆಂದರೆ, ಈ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಆತ ಊರು ಖಾಲಿ ಮಾಡಿಕೊಂಡು ಹೋಗಿರುವ ಅಥವಾ ನೀಡಿರುವ ವಿಳಾಸದಲ್ಲಿ ಇಲ್ಲದೆ ಇರುವ ಸಾಧ್ಯತೆ ಇರುತ್ತದೆ ಹಾಗಾಗಿ ಕೋರ್ಟ್ ಸಮನ್ಸ್ ಅವರಿಗೆ ತಲುಪದೇ ಹೋಗಬಹುದು.

ಹಾಗಾಗಿ ಇಂತಹ ಪ್ರಕರಣಗಳಲ್ಲಿ ತಾವು ಯಾರ ಮೇಲೆ ಕೇಸ್ ಹಾಕುತ್ತಿದ್ದೀರ ಅವರಿಗೆ ನೋಟಿಸ್ ತಲುಪಿಸಲು ಆ ವ್ಯಕ್ತಿಯೇ ಕುತ್ತಾಗಿ ವಿಳಾಸ ಹುಡಕಿ ಕೊಡಬೇಕು ಹೇಗಾದರೂ ನೋಟೀಸ್ ಅವರಿಗೆ ತಲುಪುವಂತೆ ಮಾಡಬೇಕು. ಒಂದು ವೇಳೆ ನೋಟಿಸ್ ತಲುಪಿದಾಗ ಆತ ಸ್ವೀಕರಿಸದೆ ಇದ್ದರೆ ಅದು ರಿಜೆಕ್ಟ್ ಎಂದು ನಿರ್ಧಾರವಾಗುತ್ತದೆ, ಅದು ಬೇರೆ ಅರ್ಥ ತೆಗೆದುಕೊಳ್ಳುತ್ತದೆ.

ಈ ಸುದ್ದಿ ಓದಿ:- HSRP Number Plate: ಹೆಚ್‌.ಎಸ್‌.ಆರ್‌.ಪಿ ನೋಂದಣಿಗೆ ಪಾವತಿಸಬೇಕಾದ ಶುಲ್ಕ ವಿವರದ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್.!

ಆದರೆ ಆತನ ವಿಳಾಸಕ್ಕೆ ನೋಟಿಸ್ ತಲುಪದೇ ಇದ್ದಾಗ ಬೇರೆ ಕೇಸ್ ಗಳಂತೆ ಮೂರು ನೋಟಿಸ್ ಗಳಿಗೆ ಉತ್ತರಿಸಲಿಲ್ಲ ಎಂದು ಪತ್ರಿಕ ಪ್ರಕಟಣೆ ಹೊರಡಿಸಿ ಅದಕ್ಕೂ ಉತ್ತರ ಬರದೇ ಇದ್ದಾಗ ಎಕ್ಸ್ ಪಾರ್ಟಿ ಪ್ರಕರಣ ಮಾಡಿ ಕೇಸ್ ಗೆಲ್ಲಲು ಸಾಧ್ಯವಿಲ್ಲ.

ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಅತಿ ಮುಖ್ಯವಾಗಿ ಕೇಳಬೇಕಾದ ವಿಚಾರೇನೆಂದರೆ ಯಾವುದೇ ಒಬ್ಬ ವ್ಯಕ್ತಿ ಕಡಿಮೆ ಹಣ ಕೊಟ್ಟು ಆತ ಸಾಕ್ಷಿಗಾಗಿ ನೀಡಿದ್ದ ಚೆಕ್ ಮೇಲೆ ದೊಡ್ಡಮೊತ್ತದ ಹಣ ಕೊಟ್ಟಿದ್ದು ವಾಪಸ್ ಕೊಟ್ಟಿಲ್ಲ ಎಂದು ಬರೆದುಕೊಳ್ಳುವ ಪ್ರಕರಣಗಳಲ್ಲಿ ಆತನ ಆದಾಯ ಎಷ್ಟಿದೆ, ಯಾವುದಾದರೂ ಆಸ್ತಿ ಮಾರಿ ಕೊಟ್ಟಿದ್ದನೆ ಅಥವಾ ಐಟಿ ರಿಟರ್ನ್ ಸಲ್ಲಿಸಿದ್ದಾನೆ ಇತ್ಯಾದಿ ವಿಚಾರಗಳನ್ನು ಕ್ರಾಸ್ ಎಕ್ಸಾಮಿನೇಷನ್ ಮಾಡಬೇಕು.

ಇನ್ನು ಕೆಲ ಪ್ರಕರಣಗಳಲ್ಲಿ ಬಹಳ ನಂಬಿಕೆಯಿಂದ ಬ್ಲಾಂಕ್ ಚೆಕ್ ಕೊಟ್ಟು ಅಗ್ರಿಮೆಂಟ್ ಮಾಡಿಕೊಂಡಿರುತ್ತಾರೆ. ಅಗ್ರಿಮೆಂಟ್ ಕ್ಯಾನ್ಸಲ್ ಆದಾಗ ಚೆಕ್ ವಾಪಸ್ ಕೊಡುವುದು ಬಿಟ್ಟು ಕೇಸ್ ಹಾಕಿರುತ್ತಾರೆ ಇಂತಹ ಪ್ರಕರಣದ ಕೂಡ ಇದೆ. ಏನೇ ಇದ್ದರೂ ಕೋರ್ಟ್ ನಿಂದ ಬರುವ ನೋಟಿಸ್ ಗಳನ್ನು ಸ್ವೀಕರಿಸಿ ಎವಿಡೆನ್ಸ್ ಗಳನ್ನು ಸರಿಯಾಗಿ ಇಟ್ಟುಕೊಂಡಿದ್ದರೆ ಕೇಸ್ ಗೆಲ್ಲಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now