ಯಾವುದೇ ಜಮೀನು ಅಥವಾ ಮನೆ ಅಥವಾ ಆಸ್ತಿ ಖರೀದಿಸುವವರು ಅದನ್ನು ಖರೀದಿಸಿ ರಿಜಿಸ್ಟರ್ ಮಾಡಿಸಿಕೊಳ್ಳುವುದಕ್ಕೂ ಮುನ್ನ ಖರೀದಿದಾರರು ಹಾಗೂ ಮಾರಾಟಗಾರರು ತಮ್ಮ ತಮ್ಮ ನಡುವೆ ಒಂದು ಒಪ್ಪಂದ ಮಾಡಿಕೊಂಡಿರುತ್ತಾರೆ. ಇದು ಆಸ್ತಿಗೆ ಸಂಬಂಧಿಸಿದ ವಿಷಯಗಳು ಹಾಗೂ ನಂತರದ ಕೆಲವು ಕಂಡಿಷನ್ ಗಳನ್ನು ಒಳಗೊಂಡಂತೆ, ನಡುವೆ ನಡೆದಿರುವ ಹಣಕಾಸಿನ ವಿವರ ಆಸ್ತಿ ವಿವರ ಎಲ್ಲದರ ಮಾಹಿತಿ ಹೊಂದಿರುತ್ತದೆ,
ಪಂಚನಾಮೆ ಅಂದರೆ ಸಾಕ್ಷಿಗಳ ಸಮ್ಮುಖದಲ್ಲಿ ಮಾಡಲಾಗಿರುತ್ತದೆ, ಇದನ್ನು ಲ್ಯಾಂಡ್ ರಿಜಿಸ್ಟರ್ ಅಗ್ರಿಮೆಂಟ್ (land register Agriment) ಎನ್ನುತ್ತಾರೆ. ಇದು ಒಂದು ಮಾರಾಟ ಒಪ್ಪಂದ ಪತ್ರವಾಗಿರುತ್ತದೆ. ರಿಜಿಸ್ಟರ್ ಪ್ರಕ್ರಿಯೆ ಸರಾಗವಾಗಿ ನಡೆಯಬೇಕು ಯಾವುದೇ ರೀತಿ ವಂ’ಚ’ನೆಗೂ ಆಸ್ಪದ ಇರಬಾರದು ಎನ್ನುವ ಉದ್ದೇಶದಿಂದ ಈ ಅಗ್ರಿಮೆಂಟ್ ಮಾಡಲಾಗುತ್ತದೆ.
ಈ ಸುದ್ದಿ ನೋಡಿ:- ಬಾಡಿಗೆ & ಭೋಗ್ಯ ಮನೆಯಲ್ಲಿ ಇರುವವರು ಈ ವಿಷಯ ತಪ್ಪದೆ ತಿಳಿದುಕೊಳ್ಳಿ.! ಹೊಸ ರೂಲ್ಸ್.!
ಒಮ್ಮೆ ಈ ಕರಾರು ಪತ್ರ ಮಾಡಿಸಿದ ಮೇಲೆ ಖರೀದಿದಾರರು ಹಾಗೂ ಮಾರಾಟಗಾರರು ಇಬ್ಬರು ಬದ್ಧರಾಗಿರಬೇಕು, ಇಬ್ಬರಲ್ಲಿ ಯಾರೇ ಮುರಿದರೂ ಮತ್ತೊಬ್ಬರು ನ್ಯಾಯ ಹಾಗೂ ಪರಿಹಾರ ಕೇಳಲು ಕಾನೂನಿನಲ್ಲಿ ಅವಕಾಶವಿದೆ. ಮುಂದೆ ಒಂದು ದಿನ ರಿಜಿಸ್ಟರ್ ವಿಷಯಗಳಲ್ಲಿ ತಕರಾರುಗಳಾದಾಗ ದಾಖಲೆಯಾಗಿ ಇದು ಬಳಕೆಗೆ ಬರುತ್ತದೆ. ಇದನ್ನು ಯಾವ ವಿಧಾನದಲ್ಲಿ ಮಾಡಬೇಕು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಕರಾರು ಪತ್ರ ಬರೆಯುವ ಸರಿಯಾದ ವಿಧಾನ:-
* ಖರೀದಿ ಪತ್ರ ಬರೆದು ಕೊಡುವವರ ಹೆಸರು
* ಖರೀದಿ ಪತ್ರ ಬರೆಸಿಕೊಳ್ಳುವವರ ಹೆಸರು
* ದಿನಾಂಕ ಬರೆದು ಬರೆದುಕೊಡುವವರ ಹೆಸರಿನಲ್ಲಿ ಇಂಥವರಾದ ನಾನು ಇಂತಹ ಗ್ರಾಮದ ವಾಸಿಯಾಗಿದ್ದು ತನ್ನ ಸ್ವತ್ತಾದ ಎಂದು ಮಾರಾಟ ಮಾಡಿತ್ತಿರುವ ಆಸ್ತಿಯ ವಿವರವನ್ನು ಬರೆದು ಆಸ್ತಿಗೆ ನಿಗದಿಯಾಗಿರುವ ಬೆಲೆ ಅದರಲ್ಲಿ ಎಷ್ಟನ್ನು ಅಡ್ವಾನ್ಸ್ ಆಗಿ ಸ್ವೀಕರಿಸಿದ್ದಾರೆ.
ಮತ್ತು ಎಷ್ಟು ದಿನಗಳ ಒಳಗೆ ಉಳಿದ ಹಣವನ್ನು ಕೊಡುವುದಕ್ಕೆ ಸಮಯ ಅವಕಾಶ ಇದೆ ಹಾಗೂ ಎಷ್ಟು ದಿನದ ಒಳಗಡೆ ರಿಜಿಸ್ಟರ್ ಮಾಡಿಕೊಡುತ್ತಾರೆ ಎನ್ನುವುದನ್ನು ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವ ಆ ಒಪ್ಪಂದದ ಮಾತಿನ ಸಂಪೂರ್ಣ ವಿವರವನ್ನು ಪಂಚನಮೆ ಸಹಿಸಾಕ್ಷಿಯೊಂದಿಗೆ ಬರೆದಿದ್ದೇನೆ ಎಂದು ಒಪ್ಪಿಕೊಂಡು ಬರೆಯಬೇಕು.
ಈ ಸುದ್ದಿ ನೋಡಿ:- ಇನ್ಮುಂದೆ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ.! 1 ರೂಪಾಯಿ ಹಣ ಕಟ್ಟುವಂತಿಲ್ಲ ಯಾರಿಗೆ ಈ ಸೌಲಭ್ಯ ಸಿಗಲಿದೆ ನೋಡಿ.!
* ಜಮೀನಿನ ವಿಸ್ತೀರ್ಣವನ್ನು ತಿಳಿಸುವುದರ ಜೊತೆಗೆ ಅದರ ಚೆಕ್ಕು ಬಂದಿ ವಿವರವನ್ನು ಕೂಡ ಬರೆಯಬೇಕು. ಪೂರ್ವ ಪಶ್ಚಿಮ ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ಯಾರ ಮಾಲಿಕತ್ವದ ಯಾವ ಆಸ್ತಿಗಳಿವೆ ಎನ್ನುವುದನ್ನು ಪತ್ರದಲ್ಲಿ ಕಾಣಿಸಿರಬೇಕು
* ಯಾರದ್ದೇ ಭಯವಿಲ್ಲದೆ ಬರೆದು ಸಹಿ ಮಾಡಿ ಕೊಟ್ಟಿದ್ದೇವೆ ಎಂದು ಹೇಳಿಕೆಯನ್ನು ಕೂಡ ತಪ್ಪದೆ ಬರೆಯಬೇಕು
* ಪಂಚನಾಮೆಯರ ಹೆಸರು ಇರಬೇಕು ಹಾಗೂ ಅದರ ನೇರಕ್ಕೆ ಸಹಿ ತಪ್ಪದೆ ಪಡೆದುಕೊಳ್ಳಬೇಕು
* ಬರೆಸಿಕೊಳ್ಳುವವರ ಹೆಸರು ಹಾಗೂ ಸಹಿ ಮತ್ತು ಬರೆದುಕೊಡುವವರ ಹೆಸರು ಹಾಗೂ ಸಹಿ ಇರಬೇಕು.
ಕರಾರು ಪತ್ರದ ಇನ್ನಿತರ ಪ್ರಮುಖ ಅಂಶಗಳು:-
* ಪಿತ್ರಾರ್ಜಿತ ಆಸ್ತಿಗೆ ಕರಾರು ಪತ್ರ ಮಾಡುವಾಗ ಕುಟುಂಬಸ್ಥರ ಎಲ್ಲರ ಸಹಿಯು ಕೂಡ ಪತ್ರದಲ್ಲಿ ಇರಬೇಕು
* ಆಕಾರ, ವಿಸ್ತೀರ್ಣ, ದಿನಾಂಕ ಸ್ಪಷ್ಟವಾಗಿರಬೇಕು
* ಬಿಳಿ ಹಾಳೆಯಲ್ಲಿ ಬೇಕಾದರೂ ಕರಾರು ಪತ್ರ ಬರೆಯಬಹುದು ಆದರೆ e-Stamp ಪೇಪರ್ ನಲ್ಲಿ ಬರೆದು ನೋಟರಿ ಮಾಡಿಸಿದರೆ ಕಾನೂನಿನ ಮಾನ್ಯತೆ ಸಿಗುತ್ತದೆ.
ಈ ಸುದ್ದಿ ನೋಡಿ:- ಗೃಹಲಕ್ಷ್ಮಿ 6ನೇ ಕಂತಿನ ಹಣ ಇಂದು 11:00 ಘಂಟೆಗೆ ಈ ಜಿಲ್ಲೆಯವರಿಗೆ 2,000 ಜಮೆ, ತಕ್ಷಣ ಹಣ ಪಡೆಯಲು ಈ ರೀತಿ ಮಾಡಿ.!
* ರಿಜಿಸ್ಟರ್ ಆದಮೇಲೆ ಕರಾರು ಪತ್ರದ ಅವಶ್ಯಕತೆ ಇರುವುದಿಲ್ಲ ಆದರೂ ಅದನ್ನು ಜೋಪಾನವಾಗಿ ಇಟ್ಟುಕೊಂಡಿರಬೇಕು
ಅಥವಾ ರಿಜಿಸ್ಟರ್ ಸಮಯದಲ್ಲಿ ಕರಾರು ಪತ್ರವನ್ನು ಸೇರಿಸಿ ರಿಜಿಸ್ಟರ್ ಮಾಡಿಸಿದರೆ ಇನ್ನು ಒಳ್ಳೆಯದು
* ಕರಾರು ಪತ್ರ ಮಾಡುವಾಗ ರಿಜಿಸ್ಟರ್ ಮಾಡುವಷ್ಟೇ ಎಚ್ಚರಿಕೆಯಿಂದ ಇರಬೇಕು. ಕೆಲವೊಮ್ಮೆ ಕರಾರು ಪತ್ರ ಎಂದು ಹೇಳಿ ರಿಜಿಸ್ಟರ್ ಮಾಡಿಸಿಕೊಂಡು ಮೋಸ ಮಾಡುವವರು ಇದ್ದಾರೆ ಹಾಗಾಗಿ ಎಲ್ಲವನ್ನು ಓದಿದ ನಂತರವೇ ಸಹಿ ಹಾಕಿ.