ಗೊರಕೆ ಹೊಡೆಯುತ್ತ ನಿದ್ರೆ ಮಾಡುವವರನ್ನು ನಾವು ಸುಖ ಜೀವಿಗಳು ಎಂದುಕೊಂಡಿರುತ್ತೇವೆ ಜೀವನದಲ್ಲಿ ಅವರಿಗೆ ಯಾವುದೇ ಕ’ಷ್ಟಗಳು ಇಲ್ಲ ಹಾಗಾಗಿ ನೆಮ್ಮದಿಯಾಗಿ ಗೊರಕೆ ಹೊಡೆಯುತ್ತಾ ನಿದ್ದೆ ಮಾಡುತ್ತಿದ್ದಾರೆ ಎಂದು ಭಾವಿಸಿರುತ್ತೇವೆ.
ಆದರೆ ಇದು ಅಕ್ಷರಶಃ ತಪ್ಪು ಗೊರಕೆ ಹೊಡೆಯುವುದು ಆರೋಗ್ಯಕರ ವ್ಯಕ್ತಿಯ ಲಕ್ಷಣವಲ್ಲ, ಗೊರಕೆ ಹೊಡೆಯುತ್ತಿದ್ದಾರೆ ಎಂದರೆ ಮುಂದೆ ಬರಬಹುದಾದ ಆರೋಗ್ಯ ಸಮಸ್ಯೆಗಳ ಮುನ್ಸೂಚನೆ ಆಗಿರುತ್ತದೆ ಹಾಗಾಗಿ ಇದರ ಬಗ್ಗೆ ಎಚ್ಚರ ಇರಲೇಬೇಕು. ಗೊರಕೆ ಯಾಕೆ ಬರುತ್ತದೆ ಎಂದು ತಿಳಿದುಕೊಂಡು ಸರಿಪಡಿಸಿಕೊಳ್ಳಬೇಕು.
ಸೂಕ್ತ ವೈದ್ಯರನ್ನು ಭೇಟಿಯಾಗಿ ಪರಿಹಾರ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಪ್ರಾಣಕ್ಕೆ ಅಪಾಯವಾಗಬಹುದ. ಹಾಗಾಗಿ ಈ ಅಂಕಣದಲ್ಲಿ ಇದರ ಕುರಿತು ಕೆಲ ಪ್ರಮುಖ ಅಂಶಗಳ ಬಗ್ಗೆ ತಿಳಿಸುತ್ತೇವೆ. ಪ್ರತಿಯೊಬ್ಬರು ಕೂಡ ಗೊರಕೆ ಹೊಡೆಯುತ್ತಾರೆ, ಆದರೆ ಎಲ್ಲರಿಗೂ ಇದು ಅ’ಪಾ’ಯ’ವಲ್ಲ. ಕೆಲವರು ತುಂಬಾ ಸುಸ್ತಾದ ದಿನ ಗೊರಕೆ ಹೊಡೆಯುತ್ತಾರೆ.
ಆದರೆ ಪ್ರತಿನಿತ್ಯವೂ ಕೂಡ ಗೊರಕೆ ಹೊಡೆಯುವವರು ಇದರ ಬಗ್ಗೆ ಎಚ್ಚರವಹಿಸಬೇಕು. ಕುತ್ತಿಗೆ ದಪ್ಪವಿದ್ದವರು ಅಥವಾ ಸಣ್ಣ ಇದ್ದವರು ತುಂಬಾ ದಪ್ಪಗಿರುವವರು ಗೊರಕೆ ಹೊಡೆಯುತ್ತಾರೆ. ಇದಕ್ಕೆ ಕಾರಣವೇನೆಂದರೆ ಮಲಗಿದಾಗ ನಿಧಾನವಾಗಿ ನಮ್ಮ ಎಲ್ಲಾ ಆರ್ಗನ್ ಗಳು ಕೂಡ ರೆಸ್ಟ್ ಪಡೆಯುತ್ತವೆ ಆದರೆ ಹೃದಯ ಒಡೆದುಕೊಳ್ಳುತ್ತಲೇ ಇರುತ್ತದೆ.
ಹೃದಯ ರಕ್ತವನ್ನು ಪಂಪ್ ಮಾಡುವುದಕ್ಕೆ ಆಕ್ಸಿಜನ್ ಅವಶ್ಯಕತೆ ಇರುತ್ತದೆ ನಾವು ಮಲಗಿದಾಗ ನಾಲಿಗೆಯನ್ನು ಕೂಡ ಹಿಂದೆ ತೆಗೆದುಕೊಂಡಿರುತ್ತೇವೆ. ಆಮ್ಲಜನಕದ ಸರಬರಾಜು ಕಡಿಮೆ ಆದಾಗ ಉಂಟಾಗುವ ಘರ್ಷಣೆಯಿಂದ ಈ ಗೊರಕೆ ಶಬ್ದ ಬರುತ್ತದೆ ಎನ್ನುತ್ತಾರೆ ವೈದ್ಯರು.
ಆಗ ಹೃದಯವು ಮೆದುಳಿಕೆ ತನಗೆ ಬೇಕಾದಷ್ಟು ಆಮ್ಲಜನಕದ ಪೂರೈಕೆ ಇಲ್ಲ ಎನ್ನುವ ಸಂದೇಶ ಕಳುಹಿಸುತ್ತದೆ ಆಗ ವ್ಯಕ್ತಿ ಎಚ್ಚರವಾದರೆ ಒಳ್ಳೆಯದು ಇಲ್ಲವಾದರೆ ಹೃದಯಕ್ಕೆ ಹೆಚ್ಚು ಒತ್ತಡ ಬಿಡುತ್ತದೆ. ಪ್ರತಿನಿತ್ಯವು ಕೂಡ ಹೀಗೆ ಗೊರಕೆ ಹೊಡೆಯುವುದರಿಂದ ಖಂಡಿತವಾಗಿಯೂ ಹೃದಯ ದು’ರ್ಬ’ಲಗುತ್ತದೆ.
ಮೊದಲಿಗೆ ಹೃದಯದ ಬಡಿತ ಹೆಚ್ಚಾಗುತ್ತದೆ ಬ್ಲಡ್ ಪ್ರೆಶರ್ ಬರುತ್ತದೆ ಮತ್ತು ಹಾ’ರ್ಟ್ ಅಟ್ಯಾಕ್, ಹಾ’ರ್ಟ್ ಫೇಲ್, ಸ್ಟ್ರೋಕ್ ಇದೆಲ್ಲದಕ್ಕೂ ಕೂಡ ಗೊರಕೆ ಹೊಡೆಯುವುದೇ ಕಾರಣವಾಗಿರುತ್ತದೆ. ನೀವು ಗಮನಿಸಬಹುದು ಯಾರಿಗೆ ಹಾ’ರ್ಟ್ ಅಟ್ಯಾಕ್ ಅಥವಾ ಹಾ-ರ್ಟ್ ಫೇಲ್ ಅಥವಾ ಸ್ಟ್ರೋಕ್ ಆದರೂ ಅವರು ಮಲಗಿರುವ ಸಮಯದಲ್ಲಿ ಸಂದರ್ಭಗಳಲ್ಲಿ ಆಗಿರುತ್ತದೆ.
ಹಾಗಾಗಿ ಕೊರಕೆ ತಾನೇ ಎಂದು ನಿರ್ಲಕ್ಷಿಸುವಂತಿಯೇ ಇಲ್ಲ. ಇದು ಗೊರಕೆ ಹೊಡೆಯುವ ವ್ಯಕ್ತಿಗಿಂತ ಆತನ ಪಕ್ಕದಲ್ಲಿ ಮಲಗಿಕೊಳ್ಳುವ ಅವರ ಕುಟುಂಬಸ್ಥರಿಗೆ ಮೊದಲು ಗೊತ್ತಾಗುತ್ತದೆ. ಅವರು ಗಮನವಹಿಸಿ ತಮ್ಮ ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು ಶೀಘ್ರವಾಗಿ ತಜ್ಞ ಪಲ್ಮನರಿಸ್ಟ್ ಗಳನ್ನು ಭೇಟಿಯಾಗಿ ಪರಿಹಾರ ಮಾಡಿಕೊಳ್ಳಬೇಕು.
ಗೊರಕೆ ಹೊಡೆವವರು 8 ಘಂಟೆಗಳ ಕಾಲ ಮಲಗಿದ್ದರೂ ಅವರ ಡೀಪ್ ಸ್ಲಿಪ್ ಗೆ ಅಷ್ಟು ಗಂಟೆ ಇರುವುದಿಲ್ಲ ಹಾಗಾಗಿ ಅವರು ನಿದ್ರಾಹೀನತೆಯಿಂದ ಕೂಡ ಬಳಲುತ್ತಾರೆ. ಮುಂದೆ ಇದು ಅವರನ್ನು ಮಾನಸಿಕ ರೋಗಗಳಿಗೆ ತುತ್ತು ಮಾಡಬಹುದು ಒಂದೆರಡು ದಿನ ಗೊರಕೆ ಹೊಡೆದರೆ ತಕ್ಷಣ ಅದನ್ನು ಕಾಯಿಲೆ ಎಂದುಕೊಳ್ಳುವಂತಿಲ್ಲ.
ನಿಯಮಿತವಾಗಿ ಗೊರಕೆ ಹೊಡೆಯುತ್ತಿದ್ದರೆ, ಕೂತ ಕೂತಲ್ಲಿಯೇ ತೂಕಡಿಸುತ್ತಿದ್ದರೆ ಹಾಗೂ ಅಲ್ಲೇ ಗೊರಕೆ ಹೊಡೆಯುವಂತೆ ನಿದ್ರೆ ಮಾಡುತ್ತಿದ್ದರೆ, ಯಾವುದರಲ್ಲೂ ಆಸಕ್ತಿ ಇಲ್ಲ ಯಾವಾಗಲೂ ಸುಸ್ತು ಎನ್ನುತ್ತಿರುತ್ತಾರೆ ಮತ್ತು ರಾತ್ರಿ ಹೊತ್ತು ಉಸಿರಾಡುವಾಗ ಮಧ್ಯೆ ಮಧ್ಯೆ ಉಸಿರನ್ನು ಸ್ಟಾಪ್ ಮಾಡುತ್ತಾರೆ ಎಂದರೆ ನಿರ್ಲಕ್ಷಿಸುವಂತೆ ಇಲ್ಲ ಕೂಡಲೇ ಅವರನ್ನು ವೈದ್ಯರ ಬಳಿ ಕರೆದೊಯ್ಯಲೇಬೇಕು. ಇದು ಬಹಳ ಉಪಯುಕ್ತ ಮಾಹಿತಿಯಾಗಿತ್ತು ತಪ್ಪದೆ ಇದನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಹಂಚಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!