ಕೊರೊನ ಹಾವಳಿ ಬಳಿಕ ದೇಶದ ಆರ್ಥಿಕತೆ ಸುಧಾರಿಸಿಕೊಳ್ಳುತ್ತಿದೆಯಾದರು ಲಾಕ್ಡೌನ್ ನಿಂದ ಆದ ಆರ್ಥಿಕ ನಷ್ಟವನ್ನು ಸುಧಾರಿಸಿಕೊಳ್ಳಲು ಇನ್ನು ಬಹಳ ಸಮಯ ಬೇಕು. ಪರಿಣಾಮವಾಗಿ ಹಣದುಬ್ಬರವನ್ನು (inflation) ದೇಶ ಎದುರಿಸುವಂತಾಗಿದೆ.
ದಿನ ಬಳಕೆಯ ಎಲ್ಲಾ ಬೇಡಿಕೆ ವಸ್ತುಗಳ ಬೆಲೆಯು ಗಗನಕ್ಕೇರಿದೆ, ಇದರಿಂದ ಜನಸಾಮಾನ್ಯರ ಬದುಕು ಬಹಳ ಕಷ್ಟದಲ್ಲಿದೆ. ಇದನ್ನು ಅರ್ಥ ಮಾಡಿಕೊಂಡ ಕೇಂದ್ರ ಸರ್ಕಾರವು ಜನಸಾಮಾನ್ಯರ ಹೊರೆಯನ್ನು ಇಳಿಸುವ ಸಲುವಾಗಿ ಪ್ರಯತ್ನ ಮಾಡುತ್ತಿದೆ.
ಇದೇ 2023ರ ಜುಲೈ ತಿಂಗಳ ರಕ್ಷಾಬಂಧನ ಸಮಯದಲ್ಲಿ ಹಬ್ಬದ ಪ್ರಯುಕ್ತ ದೇಶದ ಎಲ್ಲಾ ಮಹಿಳೆಯರಿಗೂ ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿಯವರು (PM Narendra Modi) ಸಿಹಿ ಸುದ್ದಿ ನೀಡಿದ್ದರು. ಗೃಹಬಳಕೆಯ ಸಿಲಿಂಡರ್ ಬೆಲೆ (reduce Gas price) ಇಳಿಸಿ 1100 ಇದ್ದ ಸಿಲಿಂಡರ್ 900 ಸಿಗುವಂತೆ ಮಾಡಿದರು.
ಅದರಲ್ಲೂ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ (PM Ujwal Scheme) ಗ್ಯಾಸ್ ಕನೆಕ್ಷನ್ ಪಡೆದವರಿಗೆ ಇದು ಡಬಲ್ ಧಮಾಕವಾಯಿತು. ಯಾಕೆಂದರೆ ಉಜ್ವಲ ಯೋಜನೆಯಡಿ ನೋಂದಾಯಿಸಿಕೊಂಡು ಗ್ಯಾಸ್ ಸಂಪರ್ಕ ಪಡೆದಿದ್ದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ (BPL) ಮಹಿಳೆಯರಿಗೆ ಈಗಾಗಲೇ ಪ್ರತಿ ಸಿಲಿಂಡರ್ ಬುಕ್ ಮೇಲೆ 200 ರೂಪಾಯಿಗಳ ಸಬ್ಸಿಡಿ (Subsidy) ಸಿಗುತ್ತಿತ್ತು.
ಈಗ ಒಟ್ಟಾರೆಯಾಗಿ ಎಲ್ಲಾ ಗೃಹಬಳಕೆಯ ಸಿಲಿಂಡರ್ ಬೆಲೆ ರೂ.200 ಇಳಿಸಿದ್ದರಿಂದ ಒಟ್ಟು ಅವರಿಗೆ 400ರೂ. ಬೆಲೆ ಕಡಿಮೆಯಾದಂತಾಗಿದೆ. ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ 200ರೂ. ಸಬ್ಸಿಡಿ ಹಾಗೂ ಬೆಲೆ ಇಳಿಕೆ ಕಾರಣದಿಂದಾಗಿ 200 ರೂಪಾಯಿ ಕಡಿಮೆಯಾದ್ದರಿಂದ 1,100 ಬೆಲೆಯ ಸಿಲಿಂಡರ್ ಅನ್ನು 700 ರೂಪಾಯಿಗೆ ಪಡೆಯುವಂತಾಗಿದೆ.
ಆದರೆ ಈಗ ಇದರಲ್ಲೊಂದು ಟ್ವಿಸ್ಟ್ ಇದೆ. ಈ ಸಬ್ಸಿಡಿ ಹಣದ ವಿಚಾರದಲ್ಲೂ ಕೂಡ ಅವ್ಯವಹಾರ ಆಗಿರುವ ಶಂ’ಕೆ ಇರುವುದರಿಂದ ಇದರಲ್ಲೂ ಪಾರದರ್ಶಕತೆ ತರುವ ಉದ್ದೇಶದಿಂದ ಹೇಗೆ ಆಧಾರ್ ಕಾರ್ಡನ್ನು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಬೇಕೋ ಅದೇ ರೀತಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ಪಡೆದಿರುವ ಗ್ಯಾಸ್ ಕನೆಕ್ಷನ್ ಮಾಹಿತಿಯನ್ನು ಕೂಡ ಆಧಾರ್ ಗೆ ಲಿಂಕ್ (LPG connection Link to Aadhar) ಮಾಡಬೇಕಾಗಿದೆ.
ಆಧಾರ್ ಅಧಿಕೃತ ವೆಬ್ ಸೈಟ್ ಗೆ ಭೇಟಿಕೊಟ್ಟು ಆನ್ಲೈನ್ ನಲ್ಲಿ ಈ ಪ್ರಕ್ರಿಯೆ ಪೂರ್ತಿಗೊಳಿಸಬಹುದು ಒಂದು ವೇಳೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ಅಥವಾ ಯಾವುದೇ ಗೊಂದಲಗಳಿದ್ದರೆ ನಿಮ್ಮ ಏಜೆನ್ಸಿಗೆ ಭೇಟಿ ಕೊಟ್ಟು ಇದರ ವಿವರ ಪಡೆಯಬಹುದು.
ಆನ್ಲೈನ್ ನಲ್ಲಿ LPG ಕನೆಕ್ಷನ್ ಲಿಂಕ್ ಮಾಡುವ ವಿಧಾನ:-
* https://www.pmuy.gov.in ಕ್ಲಿಕ್ ಮಾಡಿ UIDAI ನ ಅಧಿಕೃತ ವೆಬ್ ಸೈಟ್ ಗೆ ಕೊಡಿ.
* ಮುಖಪುಟದಲ್ಲಿ President Self Seeding ಎನ್ನುವ ಆಪ್ಷನ್ ಕಾಣುತ್ತದೆ, ಕ್ಲಿಕ್ ಮಾಡಿ.
* ನಂತರ ಗ್ಯಾಸ್ ಒದಗಿಸುವ ಕಂಪನಿ ವಿತರಕರ ಸಂಖ್ಯೆ ಮೊದಲಾದ ವಿವರಗಳನ್ನು ಕೇಳಲಾಗಿರುತ್ತದೆ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ.
* ನಿಮ್ಮ ಗ್ಯಾಸ್ ಕನೆಕ್ಷನ್ ಸಂಖ್ಯೆ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮುಂತಾದ ವಿವರಗಳನ್ನು ಕೇಳಲಾಗಿರುತ್ತದೆ. ನೀವು ಎಲ್ಲಾ ಸರಿಯಾದ ಮಾಹಿತಿಗಳನ್ನು ನೀಡಿದ್ದರೆ, ನೀವು ನೀಡಿರುವ ಮೊಬೈಲ್ ನಲ್ಲಿ OTP ಪಡೆಯುತ್ತೀರಿ.
* OTP ನಮೂದಿಸಿ Go ಎಂದು ಪ್ರೆಸ್ ಮಾಡಿ. ಇಷ್ಟಾದರೆ ನಿಮ್ಮ ಆಧಾರ್ ಗೆ LPG ಕನೆಕ್ಷನ್ ಲಿಂಕ್ ಆಗಿರುತ್ತದೆ. ತಕ್ಷಣವೇ ಈ ಕೆಲಸ ಮಾಡಿಕೊಳ್ಳಿ ಇಲ್ಲವಾದರೆ ನಿಮ್ಮ ಉಚಿತ ಗ್ಯಾಸ್ ಕನೆಕ್ಷನ್ ರ’ದ್ದಾಗಬಹುದು ಅಥವಾ ಸಬ್ಸಿಡಿ ಹಣವನ್ನು ನಿಮ್ಮ ಖಾತೆಗೆ ಬರಲು ಸಮಸ್ಯೆ ಆಗಬಹುದು.