ಪ್ರತಿಯೊಬ್ಬರಿಗೂ ಕೂಡ ತಮ್ಮ ಕುಟುಂಬದ ಆಸ್ತಿ ವಿವರ ಗೊತ್ತಿರಬೇಕು. ಪ್ರತಿ ವ್ಯಕ್ತಿಗೂ ಖಂಡಿತವಾಗಿ ಮನೆ ಇರುತ್ತದೆ, ಖಾಲಿ ನಿವೇಶನ ಇರುತ್ತದೆ, ಹೊಲ ಗದ್ದೆ ಜಮೀನು ಇರುತ್ತದೆ. ಇದು ಯಾರು ಸ್ವತ್ತು? ಯಾರ ಹೆಸರಿನಲ್ಲಿದೆ? ಯಾರಿಂದ ತಂದೆಗೆ ಬಂದಿದೆ ಇದೆಲ್ಲವನ್ನು ತಿಳಿದುಕೊಂಡಿರಬೇಕು.
ಹೀಗಿದ್ದಾಗ ಮಾತ್ರ ಮುಂದೆ ಆಸ್ತಿ ಸಂಬಂಧಿಸಿದವಾಗಿ ಯಾವುದೇ ತಕರಾರು ಬಂದರು ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಇತ್ಯರ್ಥ ಮಾಡಿಕೊಳ್ಳಬಹುದು. ಈ ವಿಚಾರ ಬಂದಾಗ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿ ಎನ್ನುವ ಎರಡು ವಿಭಾಗವನ್ನು ನೋಡುತ್ತೇವೆ. ಇದರಲ್ಲಿ ಯಾವುದು ಏನನ್ನು ಸೂಚಿಸುತ್ತದೆ ಮತ್ತು ಯಾರು ಇದಕ್ಕೆ ವಾರಸುದಾರರಾಗುತ್ತಾರೆ ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸ ಬಯಸುತ್ತೇವೆ.
ಪಿತ್ರಾರ್ಜಿತ ಆಸ್ತಿ ಎಂದರೆ ತಲೆಮಾರುಗಳಿಂದ ಆಸ್ತಿಯು ವರ್ಗಾವಣೆ ಆಗಿ ಬಂದಿರುವುದು. ತಾತನಿಗೆ ಅವರ ತಂದೆಯಿಂದ ಬಳುವಳಿಯಾಗಿ ಬಂದದ್ದು, ತಾತ ನಿಮ್ಮ ತಂದೆಗೆ ನೀಡಿರುವುದು ಮತ್ತು ನಿಮ್ಮ ತಂದೆಯಿಂದ ನಿಮಗೆ ಬಂದಿರುವುದು ಅಥವಾ ಮುಂದೆ ಬರಬೇಕಾಗಿರುವುದು.
ಈ ಸುದ್ದಿ ಓದಿ:- ಹಳೆಯ ಸ್ಕೂಟರ್ ಹೈಬ್ರಿಡ್ ಮಾಡ್ತಾರೆ, ಪೆಟ್ರೋಲ್ ಮತ್ತು ಬ್ಯಾಟರಿ ಎರಡರಲ್ಲೂ ಚಲಿಸುತ್ತದೆ ಎಷ್ಟು ದೂರ ಬೇಕಾದರೂ ಹೋಗಬಹುದು.!
ಇಂತಹ ಪಿತ್ರಾರ್ಜಿತ ಆಸ್ತಿಯಲ್ಲಿ ಯಾರಿಗೆಲ್ಲಾ ಅಧಿಕಾರ ಇರುತ್ತದೆ ಎಂದರೆ 2005ರ ಹಿಂದೂ ಉತ್ತರಾಧಿತ್ವ ಕಾಯ್ದೆ ಹೇಳುವ ಪ್ರಕಾರ ಒಬ್ಬ ತಂದೆಗೆ ಜನಿಸಿದ ಎಲ್ಲಾ ಮಕ್ಕಳು ಕೂಡ ಸಮಾನವಾದ ಹಕ್ಕನ್ನು ಹೊಂದಿರುತ್ತಾರೆ. ಉದಾಹರಣೆಗೆ, ಒಬ್ಬ ತಂದೆಗೆ ಮೂರು ಜನ ಮಕ್ಕಳಿರುತ್ತಾರೆ, ಇಬ್ಬರು ಗಂಡು ಮಕ್ಕಳು ಒಬ್ಬರು ಹೆಣ್ಣುಮಗಳು ಆತನಿಗೆ ನಾಲ್ಕು ಎಕರೆ ಆಸ್ತಿ ಇದೆ ಎಂದರೆ ನಾಲ್ಕು ಭಾಗವಾಗುತ್ತದೆ.
ಇದರಲ್ಲಿ ತಂದೆಗೆ ಒಂದು ಪಾಲು ಮೂರು ಜನ ಮಕ್ಕಳಿಗೂ ತಲಾ ಒಂದೊಂದು ಎಕರೆ ಹೀಗೆ ಒಟ್ಟು ನಾಲ್ಕು ಪಾಲಾಗುತ್ತದೆ. ಸ್ವಯಾರ್ಜಿತ ಆಸ್ತಿ ಬಗ್ಗೆ ಹೇಳಿದರೆ ಇದನ್ನು ತಂದೆ ಅಥವಾ ತಾಯಿ ಅಥವಾ ತಾತ ಹೀಗೆ ತಮ್ಮ ಕುಟುಂಬದ ಯಾರೇ ಸದಸ್ಯ ಆಗಿದ್ದರು ಅವರ ಸ್ವಂತ ಪರಿಶ್ರಮದಿಂದ ದುಡಿದು ಸಂಪಾದಿಸಿರುವ ಆಸ್ತಿ ಎಂದು ತಿಳಿಸುತ್ತದೆ.
ಇಂತಹ ಸ್ವಯಾರ್ಜಿತ ಆಸ್ತಿಗಳಲ್ಲಿ ಯಾರಿಗೆ ಪಾಲು ಸಿಗುತ್ತದೆ ಎಂದು ನೋಡುವುದಾದರೆ ಆ ವ್ಯಕ್ತಿಗೆ ಮಾತ್ರ ಅದರ ಸಂಪೂರ್ಣ ಅಧಿಕಾರ ಇರುತ್ತದೆ. ಒಂದು ವೇಳೆ ನಿಮ್ಮ ತಂದೆ ಸ್ವಯಾರ್ಜಿತವಾಗಿ ಮನೆ ಕೊಂಡುಕೊಂಡಿದ್ದರೆ ಆ ಮನೆ ಹಕ್ಕನ್ನು ತನ್ನ ಮೂರು ಜನ ಮಕ್ಕಳಲ್ಲಿ ಯಾರಿಗೆ ಒಬ್ಬರಿಗೆ ಬೇಕಾದರೂ ಕೊಡಬಹುದು ಅಥವಾ ಮೂರು ಜನಕ್ಕೂ ಕೊಡಬಹುದು.
ಈ ಸುದ್ದಿ ಓದಿ:-ಕಂದಾಯ ಇಲಾಖೆ ನೇಮಕಾತಿ, PUC ಆಗಿದ್ರೆ ಸಾಕು ಅರ್ಜಿ ಸಲ್ಲಿಸಿ ವೇತನ 42,000/-
ಅಥವಾ ಹೊರಗಿನ ಯಾರಿಗೆ ಬೇಕಾದರೂ ಸ್ವತಂತ್ರವಾಗಿ ದಾನ, ಕ್ರಯ ಅಥವಾ ಗಿಫ್ಟ್ ಡೀಡ್ ರೂಪದಲ್ಲಿ ನೀಡಬಹುದು. ಯಾವುದೇ ಧಾರ್ಮಿಕ ದತ್ತಿಗಳಿಗೆ ಕಾಣಿಕೆಯಾಗಿ ಕೂಡ ಕೊಡಬಹುದು ಇದನ್ನು ಪ್ರಶ್ನಿಸುವ ಅಧಿಕಾರವೂ ಯಾವ ಮಕ್ಕಳಿಗೂ ಕೂಡ ಇರುವುದಿಲ್ಲ. ಒಂದು ವೇಳೆ ಸ್ವಯಾರ್ಜಿತ ಆಸ್ತಿಗೆ ಸಂಬಂಧಪಟ್ಟ ಹಾಗೆ ಆತ ಒಂದು ವಿಲ್ ಕೂಡ ಮಾಡದೆ ಮತ್ತು ಅದಕ್ಕೆ ಉತ್ತರಾಧಿಕಾರಿಯನ್ನು ಸೂಚಿಸದೆ ಮ.ರಣ ಹೊಂದಿದ ಪಕ್ಷದಲ್ಲಿ ಆ ತಂದೆಯ ಮೂರು ಜನ ಮಕ್ಕಳು ಕೂಡ ಆಸ್ತಿಯಲ್ಲಿ ಸಮಾನ ಪಾಲು ಹೊಂದಿರುತ್ತಾರೆ.
ಒಂದು ವೇಳೆ ತಂದೆ ಇದ್ದಾಗ ಅವರು ಯಾವುದಾದರೂ ವಿಲ್ ಮಾಡಿದ್ದೆ ಆದಲ್ಲಿ ಅದರ ಆಧಾರದ ಮೇಲೆ ವಿಲ್ ಪ್ರಕಾರವಾಗಿ ಉತ್ತರಾಧಿಕಾರ ನಿರ್ಧಾರ ಆಗುತ್ತದೆ. ಈ ವಿಚಾರವಾಗಿ ಯಾವುದೇ ಗೊಂದಲ ಇದ್ದರೂ ಹತ್ತಿರದಲ್ಲಿರುವ ಕೋರ್ಟ್ ಗೆ ಹೋಗಿ ಕಾನೂನು ಸಲಹಾ ಕೇಂದ್ರವನ್ನು ಸಂಪರ್ಕಿಸಿ ಉಚಿತವಾಗಿ ಗೈಡೆನ್ಸ್ ಪಡೆಯಿರಿ.