ಹಕ್ಕು ಬಿಡುಗಡೆ ಪತ್ರ ಎಂದರೆ ಒಂದು ಪಿತ್ರಾರ್ಜಿತ ಆಸ್ತಿಯಲ್ಲಿ ತಮ್ಮ ಪಾಲಿಗೆ ಬರಬೇಕಾದ ಆಸ್ತಿ ಹಕ್ಕನ್ನು ತಮ್ಮ ಸ್ವಂತ ಇಚ್ಛೆಯಿಂದ ತ್ಯಾಗ ಮಾಡುವುದಾಗಿದೆ. ಉದಾಹರಣೆಯೊಂದಿಗೆ ಹೇಳುವುದಾದರೆ ಒಬ್ಬ ತಂದೆಗೆ ನಾಲ್ಕು ಜನ ಮಕ್ಕಳು ಮೂರು ಜನ ಗಂಡು ಮಕ್ಕಳು ಹಾಗೂ ಒಬ್ಬರು ಹೆಣ್ಣು ಮಗಳಿರುತ್ತಾಳೆ ಎಂದುಕೊಳ್ಳೋಣ ಆ ತಂದೆಗೆ 5 ಎಕರೆ ಜಮೀನು ಪಿತ್ರಾರ್ಜಿತ ಆಸ್ತಿ ಇರುತ್ತದೆ.
ಅವಿಭಕ್ತ ಕುಟುಂಬದ ಆಸ್ತಿಯು ವಿಭಾಗ ಆದಾಗ ತಂದೆಯ ಆಸ್ತಿಯು ನಾಲ್ಕು ಜನ ಮಕ್ಕಳಿಗೂ ತಲಾ ಒಂದೊಂದು ಎಕರೆಯಾಗಿ ಭಾಗ ಆಗುತ್ತದೆ ಮತ್ತು ತಂದೆ ಹೆಸರಿಗೆ ಒಂದು ಎಕರೆ ಹೋಗುತ್ತದೆ ಹೆಣ್ಣುಮಗಳು ತನ್ನ ಪಾಲಿನ ಆಸ್ತಿಯು ತನಗೆ ಬೇಡ ಇದು ತವರು ಮನೆಯವರಿಗೆ ಸೇರಲಿ ತನಗೆ ಇದರ ಮೇಲೆ ಯಾವುದೇ ಆಸಕ್ತಿ ಇಲ್ಲ ಎಂದು ಪ್ರೀತಿಯಿಂದ ಆಸ್ತಿ ಮೇಲಿನ ಹಕ್ಕು ಬಿಟ್ಟುಕೊಡುವುದನ್ನು ಆಸ್ತಿ ಹಕ್ಕು ಬಿಡುಗಡೆ ಪತ್ರ (right releasing wishing deed) ಎಂದು ಕರೆಯುತ್ತಾರೆ.
ಈ ಸುದ್ದಿ ಓದಿ:- ಯಾವ ಬೈಕ್ ತೆಗೆದುಕೊಳ್ಳುವುದು ಬೆಸ್ಟ್? ಇದನ್ನು ಡಿಸೈಡ್ ಮಾಡುವುದು ಹೇಗೆ ನೋಡಿ.!
ಈ ರೀತಿ ಪತ್ರವನ್ನು ಬರೆಸಿ ಸಹಿ ಮಾಡುವುದು ಮಾತ್ರವಲ್ಲದೆ ಅದನ್ನು ರಿಜಿಸ್ಟರ್ ಮಾಡಿಸಬೇಕು ಆಗ ಮಾತ್ರ ಅದು ಕಾನೂನು ಪ್ರಕಾರವಾಗಿ ಮಾನ್ಯ ಆಗುತ್ತದೆ. ಆ ಪತ್ರದಲ್ಲಿ ಹೆಣ್ಣು ಮಕ್ಕಳ ಇಚ್ಛೆ ಏನಿದೆ ಆಕೆ ತನ್ನ ಪಾಲಿನ ಆಸ್ತಿಯನ್ನು ತನ್ನ ಎಲ್ಲಾ ಸಹೋದರರು ಹಾಗೂ ತಂದೆಗೂ ಸಮಾನವಾಗಿ ಹಂಚಿಕೊಳ್ಳಲಿ ಎಂದು ತ್ಯಾಗ ಮಾಡಿದ್ದಾರೆಯೇ ಅಥವಾ ಒಬ್ಬ ಸಹೋದರರಿಗೆ ಕೊಟ್ಟಿದ್ದಾರೆಯೇ?
ಅಥವಾ ಉಡುಗೊರೆ ರೂಪದಲ್ಲಿ ಆಕೆ ಇನ್ನೇನಾದರೂ ಪಡೆದು ಆಸ್ತಿ ಹಕ್ಕನ್ನು ತ್ಯಾಗ ಮಾಡದ್ದಾರೆಯೇ? ಇದು ಯಾವ ರೂಪದಲ್ಲಿ ಆಗಿದೆ ಯಾವ ಆಸ್ತಿ ಯಾವ ದಿನಾಂಕದಂದು ಯಾರು ಯಾರಿಗೆ ತ್ಯಾಗ ಮಾಡಿದ್ದಾರೆ ಎನ್ನುವುದನ್ನು ಸರಿಯಾಗಿ ನಮೂದಿಸಿ ಈ ಪತ್ರ ಮಾಡಿಸಬೇಕಾಗುತ್ತದೆ.
ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಸಹೋದರ ಹಾಗೂ ಸಹೋದರಿಯರ ನಡುವೆ ನಡೆಯುತ್ತಿರುವ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಈಗಾಗಲೇ ಆಸ್ತಿ ಹಕ್ಕು ತ್ಯಾಗಪತ್ರಕ್ಕೆ ಸಹಿ ಹಾಕಿ ಅದು ನನ್ನ ತಿಳುವಳಿಕೆಗೆ ಬರದೆ ಮಾಡಿಸಿಕೊಂಡ ಪತ್ರ ಆಗಿದೆ ಎಂದು ಹೇಳುವವರ ಸಂಖ್ಯೆ ಹೆಚ್ಚಾಗಿದೆ.
ಈ ಸುದ್ದಿ ಓದಿ:- ಓದಿರೋದು ಸಾಫ್ಟ್ವೇರ್ ಇಂಜಿನಿಯರ್ ಮಾಡುತ್ತಿರುವುದು ಕೃಷಿ, ಪಡೆಯುತ್ತಿರುವುದು ಎಕರೆಗೆ 40 ಲಕ್ಷ ಆದಾಯ ಕೈ ಹಿಡಿದಿದ್ದು ಯಾವ ಕೃಷಿ ನೋಡಿ
ಹಾಗಾದರೆ ಒಂದು ಬಾರಿ ಸಹಿ ಹಾಕಿ ಆಗಿದ್ದು, ಈಗ ಈ ರೀತಿ ಈ ರೈಟ್ ರಿಲೀಸಿಂಗ್ ವಿಶ್ ಡಿಡ್ ಕ್ಯಾನ್ಸಲ್ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೇ ಎನ್ನುವ ವಿಚಾರದ ಬಗ್ಗೆ ಈ ಲೇಖನದಲ್ಲಿ ಕೆಲ ಮಾಹಿತಿಯನ್ನು ತಿಳಿಸಲು ಬಯಸುತ್ತಿದ್ದೇವೆ.
ಒಂದು ವೇಳೆ ಇದು ರಿಜಿಸ್ಟರ್ ಪ್ರಾಪರ್ಟಿ ಆಗಿದ್ದರೆ ಕ್ಯಾನ್ಸಲ್ ಮಾಡಿಸುವುದು ಬಹಳ ಕಷ್ಟ ಆದರೂ ಈ ಪತ್ರ ಬರೆದ ಮೂರು ವರ್ಷದ ಒಳಗೆ ಇದು ನಿಮ್ಮ ತಿಳುವಳಿಕೆಗೆ ಬಂದ ತಕ್ಷಣ ನೀವು ಸ್ಪೆಸಿಫಿಕ್ ಪರ್ಫಾರ್ಮೆನ್ಸ್ ಆಕ್ಟ್ ಸೆಕ್ಷನ್ 31 (Specific Performance act action 31) ಕೆಳಗಡೆ ಅವರು ಕೋರ್ಟ್ ಗೆ ಅಪ್ಲಿಕೇಶನ್ ಹಾಕಬಹುದು.
ನನಗೆ ಮೋ’ಸ ಮಾಡಿ ಅಥವಾ ತಪ್ಪಾಗಿ ನಿರೂಪಣೆ ಮಾಡಿ ಖಾತೆ ಮಾಡುತ್ತೇವೆ ಎಂದು ಹೇಳಿ ಸಹಿ ತೆಗೆದುಕೊಂಡು ಇದ್ದಾರೆ, ನಾನು ಈ ಹಕ್ಕು ಬಿಡುಗಡೆ ಪತ್ರಕ್ಕೆ ಒಪ್ಪಿ ಸಹಿ ಹಾಕಿಲ್ಲ ನನ್ನನ್ನು ಮಿಸ್ ಲೀಡ್ ಮಾಡಲಾಗಿದೆ ಎಂದು ಅಪ್ಲಿಕೇಶನ್ ಹಾಕಬಹುದು. ಈ ರೀತಿ ಹಾಕುವುದು ಮಾತ್ರ ಅಲ್ಲದೆ ಇದನ್ನು ಸಾಬೀತು ಪಡಿಸಬೇಕಾದ ಎಲ್ಲ ಜವಾಬ್ದಾರಿಯು ಕೂಡ ಇವರಿಗೆ ಇರುತ್ತದೆ. ಈ ಕುರಿತಾಗಿ ಯಾವುದೇ ಹೆಚ್ಚಿನ ಮಾಹಿತಿ ಬೇಕಿದ್ದರೆ ಹತ್ತಿರದಲ್ಲಿರುವ ಕಾನೂನು ಸಲಹಾ ಕೇಂದ್ರಕ್ಕೆ ಭೇಟಿ ನೀಡಿ.