ದೇಶದ ಆಂತರಿಕ ಭದ್ರತೆ ಹಾಗೂ ವಾಹನಗಳ ಸುರಕ್ಷತೆ ಉದ್ದೇಶದಿಂದಾಗಿ 2019ಕ್ಕೂ ಮುನ್ನ ಖರೀದಿಸಿರುವ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಹೆಚ್ಚು ಸೆಕ್ಯೂರಿಟಿ ಇರುವ HSRP (High Security Registration Plate) ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಎನ್ನುವ ಸೂಚನೆಯನ್ನು ಕೇಂದ್ರ ಸರ್ಕಾರ (Central Government) ಹೊರಡಿಸಿ ವರ್ಷಗಳ ಕಳೆದಿವೆ.
ಮತ್ತು ಇಡಿ ದೇಶದಾದ್ಯಂತ ಹಲವು ರಾಜ್ಯಗಳು ಕಟ್ಟುನಿಟ್ಟಾಗಿ ಈ ಆದೇಶವನ್ನು ಜಾರಿ ಮಾಡುತ್ತಿದ್ದು ಕರ್ನಾಟಕ ರಾಜ್ಯವು (Karnataka State) ಕೂಡ ಆಗಸ್ಟ್ 17, 2023 ರಲ್ಲಿ ಈ ನಿಯಮವನ್ನು ಅಂಗೀಕರಿಸಿದೆ. ಆ ಪ್ರಕಾರವಾಗಿ ಆರಂಭದಲ್ಲಿ ಮೂರು ತಿಂಗಳವರೆಗೆ ನಂಬರ್ ಬದಲಾಯಿಸಿಕೊಳ್ಳಲು ಸಮಯವಕಾಶ ಮಾಡಿಕೊಡಲಾಗಿತ್ತು.
ಕಡೇ ದಿನಾಂಕಗಳಲ್ಲಿ ಸರ್ವರ್ ಸಮಸ್ಯೆ ಹಾಗೂ ಮಾಹಿತಿ ಕೊರತೆ ಕಾರಣದಿಂದಾಗಿ ಈ ಕಾರ್ಯ ಪೂರ್ತಿಯಾಗಿಲ್ಲ ಎಂದು ತಿಳಿದು ಬಂದ ಮೇಲೆ ಹಲವು ಬಾರಿ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ಈಗ ಮೂರನೇ ಬಾರಿಗೆ ಮತ್ತೊಮ್ಮೆ ಈ ಸಮಯವನ್ನು ಕರ್ನಾಟಕದಲ್ಲಿ ವಿಸ್ತರಿಸಿ ಮೇ 31.2024 ಕಡೆ ಅವಕಾಶ ಎಂದು ಸಾರಿಗೆ ಸಚಿವಾಲಯ ಘೋಷಿಸಿದೆ.
ಈ ಸುದ್ದಿ ಓದಿ:- ಸಿಕ್ಕ ಸಿಕ್ಕ ಕಡೆ ಲೋನ್ ಪಡೆಯುತ್ತಿದ್ದೀರಾ.? ಅದಕ್ಕೂ ಮುನ್ನ ಈ ವಿಚಾರ ತಿಳಿದುಕೊಳ್ಳಿ.!
ಆನ್ಲೈನ್ ಮೂಲಕ ಹೊಸ ನಂಬರ್ ಪ್ಲೇಟ್ ಬುಕ್ ಮಾಡಿ ಸ್ವತಃ ತಾವೇ ಬದಲಾಯಿಸಿಕೊಳ್ಳುವುದಕ್ಕೆ ಅಥವಾ ಹತ್ತಿರದಲ್ಲಿರುವ ಡೀಲರ್ ಅಥವಾ ಶೋರೂಮ್ ಗಳಲ್ಲಿ ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಒಂದು ವೇಳೆ ಈ ನಿಯಮ ಮೀರಿ ನಡೆದಿದ್ದಲ್ಲಿ ಅಥವಾ ಈ ಸಂಚಾರ ನಿಯಮ ಕಡೆಗಣಿಸಿ ರಸ್ತೆಗೆ ವಾಹನದೊಂದಿಗೆ ಇಳಿದದ್ದೇ ಆದಲ್ಲಿ.
ಮೊದಲ ಬಾರಿಗೆ ರೂ.1000 ನಂತರ ಎರಡನೇ ಬಾರಿಗೆ ರೂ.2000 ಹೀಗೆ ಮುಂದುವರೆಯಲಿದ್ದು ಹತ್ತಾರು ಬಾರಿ ರಿಪೀಟ್ ಆದರೆ ಅವರ ವಾಹನ ಪರವಾಗಿ (DL) ತಡೆಹಿಡಿದು ವೆಹಿಕಲ್ ಸೀಝ್ ಮಾಡಲಾಗುವುದೆಂದು ಸರ್ಕಾರ ಎಚ್ಚರಿಕೆ ನೀಡಿತ್ತು. ಆದರೆ ಈಗ ಮತ್ತೊಂದು ಶಾ’ಕ್ ಎದುರಾಗಿದೆ.
ಅದೇನೆಂದರೆ ಕರ್ನಾಟಕ ರಾಜ್ಯದಲ್ಲಿ ಈ ರೀತಿ ಅವಕಾಶ ವಿಸ್ತರಿಸಿ ಇನ್ನು ಸಮಯ ಮಾಡಿಕೊಡಲಾಗಿದೆ ಆದರೆ ಇತರೆ ರಾಜ್ಯಗಳ ಪರಿಸ್ಥಿತಿ ಹೀಗಿಲ್ಲ. ದೆಹಲಿಯಲ್ಲಿ (Dehli) ಬಹಳ ಕಟ್ಟುನಿಟ್ಟಾದ ಸಂಚಾರಿ ನಿಯಮಗಳನ್ನು ಅನುಸರಿಸಲಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ ಈಗ ಲೋಕಸಭಾ ಚುನಾವಣೆ (Parliment Election) ಸಮಯ ಕೂಡ ಆಗಿರುವುದರಿಂದ ಇಡೀ ದೇಶದ ಚಿತ್ತ ದೆಹಲಿಯ ಕುರ್ಚಿಯತ್ತ ಇದೆ ಮತ್ತು ಚುನಾವಣೆ ನೀತಿ ಸಂಹಿತೆ (Code of Conduct) ಜಾರಿಯಲ್ಲಿದ್ದು ಎಲ್ಲೆಡೆ ಚುನಾವಣೆ ಕಾರ್ಯ ಬರದಿಂದ ಸಾಗುತ್ತಿದೆ.
ಈ ಸುದ್ದಿ ಓದಿ:- ಖಾಸಗಿ ಶಾಲೆಯಲ್ಲಿ ಉಚಿತ ಅಡ್ಮಿಷನ್’ಗೆ ಅರ್ಜಿ ಆಹ್ವಾನ.! ಯಾವುದೇ ಫೀಸ್ ಇಲ್ಲದೆ ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಉಚಿತವಾಗಿ ಕೊಡಿಸಿ.!
ಚುನಾವಣೆ ಕಾರಣದಿಂದ ಅಥವಾ ಇತ್ಯಾದಿ ಯಾವುದೇ ಕಾರಣದಿಂದಾಗಿ ನೀವೇನಾದರೂ ದೆಹಲಿಗೆ ನಿಮ್ಮ ವಾಹನ ತೆಗೆದುಕೊಂಡು ಹೋಗಿದ್ದೆ ಆದಲ್ಲಿ ಮತ್ತು ಒಂದು ವೇಳೆ ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ಇದ್ದಲ್ಲಿ ರೂ.10,000 ದಂಡ ಬೀಳುತ್ತಿದೆ.
ಯಾಕೆಂದರೆ ಈಗಾಗಲೇ HSRP ನಂಬರ್ ಪ್ಲೇಟ್ ಅಳವಡಿಕೆಗೆ ನೀಡಿದ್ದ ಕಾಲಾವಕಾಶವು ದೆಹಲಿಯಲ್ಲಿ ಮುಕ್ತಾಯವಾಗಿದೆ ಮತ್ತು ಅಲ್ಲಿನ ನಿಯಮದ ಪ್ರಕಾರವಾಗಿ HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ತಡೆಹಿಡಿದು, ಈ ರೀತಿ ದಂಡ ವಿಧಿಸಲಾಗುತ್ತದೆ ಇದು ಅಲ್ಲಿನ RTO ಸೂಚನೆಯಾಗಿದ್ದು ಅಧಿಕಾರಿಗಳು ಅದನ್ನು ಪಾಲಿಸುತ್ತಿದ್ದಾರೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಹಣ ಬರದೆ ಇದ್ದವರು ಹೀಗೆ ಮಾಡಿ ಒಟ್ಟಿಗೆ ಎಲ್ಲಾ ಹಣ ಜಮೆ ಆಗುತ್ತೆ.!
ಶೀಘ್ರದಲ್ಲಿಯೇ ಇದು ದೇಶದ ಇತರ ರಾಜ್ಯಗಳಿಗೂ ಕೂಡ ಅನ್ವಯವಾಗಬಹುದು ಮತ್ತು ಮೇ 31, 2024ರ ನಂತರ ಕರ್ನಾಟಕ ರಾಜ್ಯದಲ್ಲೂ ಕೂಡ ಇದೇ ರೀತಿಯ ನಿಯಮ ಬಂದರು ಆಶ್ಚರ್ಯವಿಲ್ಲ. ಹಾಗಾಗಿ ಯಾವುದೇ ಸರ್ಕಾರಿ ಸೂಚನೆಗಳನ್ನು ನಿರ್ಲಕ್ಷ ಮಾಡದೆ ಕೂಡಲೇ ನಿಮ್ಮ ವಾಹನದ ನಂಬರ್ ಪ್ಲೇಟ್ HSRP ಗೆ ಅಳವಡಿಸಿ ನಿಮ್ಮ ಕರ್ತವ್ಯ ಮೆರೆಯಿರಿ ಮತ್ತು ಈ ರೀತಿ ದೇಶದ ಹಿತ ದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಧಾರಗಳನ್ನು ಗೌರವಿಸಿರಿ.