ಉಚಿತ ಪ್ರಯಾಣ ಮಾಡುವ ಮಹಿಳೆಯರು ಸ್ಮಾರ್ಟ್ ಕಾರ್ಡ್ ಹೊಂದಿರಲೇಬೇಕು. ಇಲ್ಲದಿದ್ದರೆ ಪ್ರಯಾಣ ಮಾಡಕು ಸಾಧ್ಯವಿಲ್ಲ

 

WhatsApp Group Join Now
Telegram Group Join Now

ರಾಜ್ಯದಲ್ಲಿ ನಾಲ್ಕನೇ ಗ್ಯಾರಂಟಿ ಕಾರ್ಡ್ ಆಗಿ ಘೋಷಣೆ ಆಗಿದ್ದ ಶಕ್ತಿ ಯೋಜನೆ ಅಡಿ ರಾಜ್ಯದಾದ್ಯಂತ ಕರ್ನಾಟಕದ ಮಹಿಳೆಯರು ಐಷಾರಾಮಿ ಬಸ್ ಹೊರತುಪಡಿಸಿ ಉಳಿದ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ಎಂದು ಜೂನ್ 2ರಂದು ಮುಖ್ಯಮಂತ್ರಿಗಳು ಘೋಷಿಸಿದ್ದರು.

ಇದರ ಸಂಬಂಧ ಜೂನ್ 11ನೇ ತಾರೀಕಿನಂದು ವಿಧಾನಸೌಧದ ಎದುರುಗಡೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅಂದಿನಿಂದ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡುವ ಯೋಜನೆಗೆ ಚಾಲನೆ ನೀಡಲು ನಿರ್ಧಾರ ಮಾಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದಾದ್ಯಂತ ಸಂಚಾರ ಮಾಡುವ ಮಹಿಳೆಯರ ದತ್ತಾಂಶವನ್ನು ಲೆಕ್ಕ ಇಡುವ ಕಾರಣಕ್ಕಾಗಿ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎನ್ನುವುದರ ಕುರಿತು ಚರ್ಚೆ ಜೋರಾಗುತ್ತಿದ್ದು ದಿನಕೊಂದು ಸುದ್ದಿ ಇದರ ಬಗ್ಗೆ ವರದಿಯಾಗುತ್ತಿದೆ.

ಸರ್ಕಾರದ ಬಲವಾದ ಮೂಲಗಳ ಪ್ರಕಾರ ಈ ರೀತಿ ಉಚಿತ ಪ್ರಯಾಣ ಮಾಡಲು ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತದೆ. ಮಹಿಳೆಯರ ಭಾವಚಿತ್ರ ಹೊಂದಿರುವ ಈ ಸ್ಮಾರ್ಟ್ ಗಳನ್ನು ಪಡೆಯಲು ಮಹಿಳೆಯರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಇನ್ನು ಮೂರು ತಿಂಗಳ ಒಳಗಡೆ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲು ತೀರ್ಮಾನ ಕೈಗೊಂಡಿರುವ ಸರ್ಕಾರ.

ಆದರೆ ಅಲ್ಲಿಯವರೆಗೂ ಕೂಡ ಮಹಿಳೆಯರಿಗೆ ಭಾರತ ಸರ್ಕಾರ ನೀಡಿರುವ ಯಾವುದಾದರು ಗುರುತಿನ ಚೀಟಿಯನ್ನು ತೋರಿಸಿ ಉಚಿತ ಪ್ರಯಾಣ ಮಾಡಲು ಅವಕಾಶ. ಟಿಕೆಟ್ ವಿಚಾರದಲ್ಲಿ ಕೂಡ ಮಹಿಳೆಯರಿಗೆ ಟಿಕೆಟ್ ವಿತರಣೆ ಮಾಡಲಾಗುತ್ತದೆ, ಅದರಲ್ಲಿಯೂ ಸಾಮಾನ್ಯ ಟಿಕೆಟ್ ಅಲ್ಲಿ ಇರುವಂತೆ ಎಲ್ಲ ಮಾಹಿತಿ ಇರಲಿದೆ ಆದರೆ ಇದರ ಜೊತೆಗೆ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಬರೆಯಲಾಗಿರುತ್ತದೆ ಎಂದು ಹೇಳಲಾಗುತ್ತಿದೆ.

ಟಿಕೆಟ್‌ಗಳ ಆಧಾರದ ಮೇಲೆ ಮತ್ತು ಸ್ಮಾರ್ಟ್ ಕಾರ್ಡ್ ಗಳ ವಿತರಣೆಯ ಆಧಾರದ ಮೇಲೆ ಪ್ರತಿನಿತ್ಯ ಎಷ್ಟು ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಾರೆ ಎನ್ನುವ ಮಾಹಿತಿ ಸರ್ಕಾರಕ್ಕೆ ಸಿಗುತ್ತದೆ ಎಂದು ಊಹಿಸಲಾಗಿದೆ ಸದ್ಯಕ್ಕೆ ಸರ್ಕಾರವು ಈ ಯೋಚನೆ ಕುರಿತು ರೂಪಿಸಿರುವ ಮಾರ್ಗಸೂಚಿಗಳು ಈ ರೀತಿ ಇವೆ.

● ಶಕ್ತಿ ಯೋಜನೆಯಡಿ ರಾಜ್ಯದಾದ್ಯಂತ ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಎಲ್ಲಾ ಮಹಿಳೆಯರಿಗೂ ಕೂಡ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ.
● KSRTC, BMTC, ವಾಯುವ್ಯ ಕರ್ನಾಟಕ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ.
● BMTC ಬಸ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬಸ್ ಗಳಲ್ಲಿ ಪುರುಷರಿಗೆ 50% ಆಸನ ಮೀಸಲು.

● ವೋಲ್ವೋ, ವಾಯುವಜ್ರ, ರಾಜಹಂಸ, ಸ್ಲೀಪರ್ ಕೋಚ್ ಮುಂತಾದ ಐಷಾರಾಮಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ.
● ಕರ್ನಾಟಕದ ಮಹಿಳೆಯರಿಗೆ ಮಾತ್ರ ಈ ಯೋಜನೆ ಅನ್ವಯ APL, BPL ಭೇದವಿಲ್ಲದೆ ಎಲ್ಲಾ ಮಹಿಳೆಯರಿಗೂ ಕೂಡ ಉಚಿತ ಪ್ರಯಾಣಕ್ಕೆ ಅವಕಾಶ.
● ಅಂತರಾಜ್ಯ ಪ್ರಯಾಣಕ್ಕೆ ಅವಕಾಶವಿಲ್ಲ, ರಾಜ್ಯದ ಗಡಿಯೊಳಗೆ ಮಾತ್ರ ಪ್ರಯಾಣಕ್ಕೆ ಅವಕಾಶ.

● ಟಿಕೆಟ್ ಖರೀದಿಸಬೇಕು ಆದರೆ ಯಾವುದೇ ಶುಲ್ಕವನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ, ಸಾಮಾನ್ಯ ಟಿಕೆಟ್ ಅಂತೆಯೇ ಎಲ್ಲಾ ಮಾಹಿತಿಗಳನ್ನು ಒಳಗೊಂಡ ಖರ್ಚು ಎನ್ನುವ ಜಾಗದಲ್ಲಿ ನಿಲ್ ಎಂದು ತೋರಿಸಿರುವ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಬರೆದಿರುವ ಟಿಕೆಟ್ ನೀಡಲಾಗುತ್ತದೆ.
● ಇತ್ತೀಚಿನ ವರದಿಯ ಪ್ರಕಾರ ಸೇವಾ ಸಿಂಧು ಕೇಂದ್ರಗಳಲ್ಲಿ ಪುರಾವೆಗಳನ್ನು ತೋರಿಸಿ ಅರ್ಜಿ ಸಲ್ಲಿಸಿ ಸ್ಮಾರ್ಟ್ ಕಾರ್ಡ್ ಗಳನ್ನು ಪಡೆದುಕೊಳ್ಳಬೇಕು. ಅಲ್ಲಿಯವರೆಗೂ ಸರ್ಕಾರ ನೀಡಿರುವ ಯಾವುದಾದರು ಗುರುತಿನ ಚೀಟಿ ತೋರಿಸಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now