ಸೈಟ್ ಅಥವಾ ಜಮೀನು ಖರೀದಿ ಮಾಡುವಾಗ ನೋಡಲೇಬೇಕಾದ 5 ಪ್ರಮುಖ ಕಾಗದ ಪತ್ರಗಳು ಇದು. ಈ ದಾಖಲೆಗಳು ಸರಿ ಇದ್ದರೆ ಸಂಪೂರ್ಣ ವಿಶ್ವಾಸದಿಂದ ಜಾಗ ಖರೀದಿ ಮಾಡಬಹುದು.

 

WhatsApp Group Join Now
Telegram Group Join Now

ನಾವು ಖರೀದಿ ಮಾಡಬೇಕಾಗಿರುವ ಜಾಗದ ಮೊದಲ ದಾಖಲೆ ಪತ್ರ ನೋಡಬೇಕಾಗಿರುವುದು ಏನೆಂದರೆ ಕ್ರಯ ಪತ್ರ ಹೌದು ಕ್ರಯ ಪತ್ರದಲ್ಲಿ ಮುಖ್ಯವಾಗಿ ನೀವು ನೋಡಬೇಕಾಗಿರುವುದು ಆ ಒಂದು ಜಾಗದ ಮಾಲೀಕ ಯಾರು ಎಂದು ಅದು ಕ್ರಯ ಪತ್ರದಲ್ಲಿ ಇರುತ್ತದೆ ಹಾಗೆಯೇ ಆ ಜಾಗವನ್ನು ಅವರು ರಿಜಿಸ್ಟರ್ ಮಾಡಿಕೊಂಡಂತಹ ದಿನಾಂಕ ಕೂಡ ಅದರಲ್ಲಿ ಇರುತ್ತದೆ ಜಾಗದ ಚಕ್ಕು ಬಂಧುಗಳು ಉದ್ಧ ಅಳತೆಗಳು ಸಹ ಇರುತ್ತದೆ.

ನೀವು ಮಾಡಬೇಕಾಗಿರುವುದು ಆ ಜಾಗಕ್ಕೆ ಹೋಗಿ ಅವರು ಕೊಟ್ಟಿರುವ ಕ್ರಯ ಪತ್ರದಲ್ಲಿ ಹೊಂದಿರುವ ಉದ್ದ ಅಳತೆ ಆ ಜಾಗ ಇರುವಂತಹ ಉದ್ದ ಅಳತೆ ಅಲ್ಲಿ ಇರುವಂತಹ ಚೆಕ್ಕು ಬಂಧುಗಳು ಸರಿಯಾಗಿ ಇದೆಯೋ ಇಲ್ಲವೋ ಎಂದು ಪರಿಶೀಲನೆ ಮಾಡಿಕೊಳ್ಳಬೇಕು. ಅವರು ಕೊಟ್ಟಿರುವ ಜೆರಾಕ್ಸ್ ಪ್ರತಿಗಳು ಮತ್ತು ಒರಿಜಿನಲ್ ಪ್ರತಿಗಳಿಗೆ ತಾಳೆ ಮಾಡಿ ನೋಡಬೇಕು.

ಎರಡನೆಯದಾಗಿ ಲಿಂಕ್ ಡಿಡ್ ಅಥವಾ ಮದರ್ ಡಿಡ್ ನಿಮಗೆ ಮಾರಾಟ ಮಾಡುವ ವ್ಯಕ್ತಿಯ ಹತ್ತಿರ ಇರುವ ಕ್ರಯ ಪತ್ರಕ್ಕಿಂತ ಮೊದಲು ಇರುವಂತಹ ಕ್ರಯ ಪತ್ರ ಹಳೆಯ ಮದರ್ ಡಿಡ್ ಅಥವಾ ಲಿಂಕ್ ಡಿಡ್ ಇದೆಯಾ ಎಂದು ಚೆಕ್ ಮಾಡಿಕೊಳ್ಳಬೇಕು ಯಾವ ರೀತಿ ಇವರು ಜಾಗವನ್ನು ಪಡೆದುಕೊಂಡಿದ್ದಾರೆ ಎಂಬುದು ನಿಮಗೆ ತಿಳಿಯುತ್ತದೆ.

ಮೂರನೆಯದಾಗಿ ನೀವು ಖರೀದಿ ಮಾಡಬೇಕಾಗಿರುವ ಜಾಗ ಎನ್ ಎ ಆಗಿ ಕನ್ವರ್ಟ್ ಆಗಿದೆಯಾ ಎಂದು ಪರಿಶೀಲನೆ ಮಾಡಿಕೊಳ್ಳಿ ಈಗ ಅದು ಕೃಷಿಯೇತರ ಭೂಮಿಯಾಗಿದ್ದರೆ ಅದನ್ನು ಕನ್ವರ್ಟ್ ಮಾಡಿದ್ದರೆ ಅದಕ್ಕೂ ಸಹ ದಾಖಲೆ ಇರುತ್ತದೆ ಅದು ಸೇಲ್ ಡಿಡ್ ಅಲ್ಲಿ ನಿಮಗೆ ಬರುತ್ತದೆ. ಜಿಲ್ಲಾಧಿಕಾರಿಗಳು ಆದೇಶ ಕೊಟ್ಟಂತಹ ನಂಬರ್ ಗಳು ಸಹ ನಿಮಗೆ ಸೇಲ್ ಡಿಡ್ ನಲ್ಲಿ ಬಂದಿರುತ್ತದೆ ಎನ್ ಎ ಹಾಗೆ ಕನ್ವರ್ಟ್ ಆಗದೇ ಇರುವಂತಹ ಜಾಗಗಳನ್ನು ನೀವು ಖರೀದಿ ಮಾಡಬೇಡಿ.

ನಾಲ್ಕನೇದಾಗಿ ಮುಖ್ಯ ದಾಖಲೆ From no 3 ಹಾಗು From 9 & 11, From no 3 ನಗರ ಸಭೆ ಅಡಿಯಲ್ಲಿ ಇರುವಂತಹ ಜಾಗಗಳಿಗೆ ಇದನ್ನು ಮುನಿಸಿಪಾಲ್ ಆಫೀಸಲ್ಲಿ ಕೊಡಲಾಗುತ್ತದೆ. From 9 & 11 ಈ ಜಾಗವು ಗ್ರಾಮ ಪಂಚಾಯಿತಿ ಅಡಿಯಲ್ಲಿ ಕೊಡಲಾಗುತ್ತದೆ ಇವೆರಡು ದಾಖಲಾತಿಗಳನ್ನು ನೀವು ಪರಿಶೀಲನೆ ಮಾಡಬೇಕಾಗುತ್ತದೆ. ನಗರಸಭೆ ಮತ್ತು ಗ್ರಾಮ ಪಂಚಾಯಿತಿ ಅಡಿಯಲ್ಲಿ ಬರುವಂತಹ ಜಾಗಗಳಿಗೆ ಫಾರ್ಮ್ ನಂಬರ್ 3 ಮತ್ತು ಫಾರ್ಮ್ 9 ಮತ್ತು 11 ಯಾವುದು ಇದೆ ಎಂದು ಪರಿಶೀಲನೆ ಮಾಡಿಕೊಡಬೇಕಾಗುತ್ತದೆ.

ಐದನೆಯದಾಗಿ ಇ ಸಿ ಅಂದರೆ ಎನ್‌ಕಂಬರೇನ್ಸ್ ಸರ್ಟಿಫಿಕೇಟ್ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ನೀವು ಅಪ್ಲೈ ಮಾಡಿ ಪಡೆದುಕೊಳ್ಳಬಹುದು ಅದರಲ್ಲಿ ನಿಮಗೆ ಈ ಜಾಗ ಅಡಮಾನ ಇಟ್ಟು ದುಡ್ಡನ್ನು ತೆಗೆದುಕೊಂಡಿದ್ದರೆ ಅಥವಾ ಸಾಲವನ್ನು ತೆಗೆದುಕೊಂಡಿದ್ದರೆ ನಿಮಗೆ ಅಲ್ಲಿ ತಿಳಿಯುತ್ತದೆ. ನೀವು ಖರೀದಿ ಮಾಡುವಂತಹ ಜಾಗದ ಮೇಲೆ ಸಾಲ ತೆಗೆದುಕೊಂಡಿದ್ದರೆ ಆ ಸಾಲವನ್ನು ತೀರಿಸಿದ ನಂತರ ನೀವು ಜಾಗವನ್ನು ಖರೀದಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಅಂತಹ ಜಾಗವನ್ನು ನೀವು ಖರೀದಿ ಮಾಡಲು ಹೋಗಬೇಡಿ.

ಮೇಲೆ ತಿಳಿಸಿದಂತಹ ಎಲ್ಲಾ ದಾಖಲೆಗಳ ಜೊತೆಗೆ ತೆರಿಗೆ ಪತ್ರಗಳು ಇದೆಲ್ಲವನ್ನು ಚೆಕ್ ಮಾಡಿ ನಂತರ ನೀವು ಯಾವುದೇ ಒಂದು ಜಾಗ ಅಥವಾ ಸೈಟನ್ನು ಖರೀದಿ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ ಈ ಮಾಹಿತಿಯನ್ನು ಮತ್ತಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now