ಇವತ್ತಿನ ಬಹಳ ಇಂಟರೆಸ್ಟಿಂಗ್ ವಿಷಯ ಏನೆಂದರೆ, ನಮ್ಮ ಲೇಖನದಲ್ಲಿ ನಮ್ಮ ತ್ವಚೆಯ ಹೊಳಪನ್ನು ಹೇಗೆ ಹೆಚ್ಚಿಸುವುದು ಅಥವಾ ನಮ್ಮ ಕಪ್ಪು ತ್ವಚೆಯನ್ನು ಹೇಗೆ ಬಿಳುಪಾಗಿಸುವುದು ಎಂದು ನೋಡೋಣ. ನಮ್ಮ ಚರ್ಮವು ಕಪ್ಪಗಲು ನಾನಾ ತರಹದ ಹಲವು ಕಾರಣಗಳು ಇದ್ದಾವೆ, ಕೆಲವೊಂದು ಮೆಡಿಕೇಷನ್ಸ್ ಗಳಿಂದ ಇರಬಹುದು ಇನ್ನೂ ಕೆಲವೊಂದು ಟ್ಯಾನ್ ಆಗುವ ಕಾರಣದಿಂದ ಇರಬಹುದು ಇನ್ನು ಗರ್ಭವಸ್ಥೆಯಲ್ಲಿ ಕೆಲವು ಹಾರ್ಮೋನ್ ಗಳ ಬದಲಾವಣೆಗಳಿಂದ ಚರ್ಮದ ಕಾಂತಿಯು ಹಾಗೂ ಬಣ್ಣವು ಬದಲಾಗುತ್ತದೆ.
ಕೆಲವೊಬ್ಬರಿಗೆ ತುಂಬಾ ದಿನಗಳ ಕಾಲ ಹೋಗದೆ ಅದೇ ಬಣ್ಣವೂ ಶಾಶ್ವತವಾಗಿ ಉಳಿಯಬಹುದು. ಇಂದು ನಾವು ಹೇಳುವ ಮನೆಯ ಮದ್ದನ್ನು ಮಾಡಿ ನೋಡಿದರೆ ಸಾಕು ಈ ಔಷಧಿಯಿಂದ ನಮ್ಮ ಚರ್ಮದ ಬಣ್ಣವೂ ಬದಲಾಗಿ ಹೊಳಪು ಬರಲು ಸಹಾಯ ಮಾಡುತ್ತದೆ. ಈ ಔಷಧಿಯನ್ನು ಬಳಸುವುದರಿಂದ ಯಾವುದೇ ತರಹ ಅಡ್ಡ ಪರಿಣಾಮವಿರುವುದಿಲ್ಲ ಅಲ್ಲದೇ ಇದು ನೈಸರ್ಗಿಕವಾಗಿ ಚರ್ಮವನ್ನು ಒಂದೇ ಬಾರಿ ಉಪಯೋಗಿಸಿದಲ್ಲಿ ಉತ್ತಮ ಪರಿಣಾಮವನ್ನು ಬೀರುತ್ತದೆ.
ಇನ್ನು ಈ ಮನೆ ಮದ್ದನ್ನು ತಯಾರಿಸಲು ಮೊದಲಿಗೆ ಒಂದು ಟೀ ಚಮಚ ಕೊಬ್ಬರಿ ಎಣ್ಣೆ, ಒಂದು ಟೀ ಚಮಚದಷ್ಟು ಅಲೋವೆರಾ ಜೆಲ್, ಮೂರರಿಂದ ನಾಲ್ಕು ಹನಿ ನಿಂಬೆರಸ, ಇನ್ನು ಒಂದು ಸ್ಪೂನಿನಷ್ಟು ಕೋಲ್ಗೇಟ್ ಟೂತ್ಪೇಸ್ಟ್, ಇನ್ನು ಆಕ್ಟಿವಿಟ ಎನ್ನುವ ಕಾಫಿ ಪುಡಿ. ಕೊಬ್ಬರಿ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಪಾಲಿಫಿನಾಲ್ಗಳಂತಹ ಪೋಷಕಾಂಶಗಳು ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿಡಲಿವೆ. ಈ ಎರಡೂ ಪೋಷಕಾಂಶಗಳು ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ.
ಅವರು ವಯಸ್ಸಾದ ಚಿಹ್ನೆಗಳನ್ನು ಉಂಟುಮಾಡುವ ಸ್ವತಂತ್ರ ರಾಡಿಕಲ್ಗಳೊಂದಿಗೆ ಹೋರಾಡುತ್ತಾರೆ. ಅಸ್ತಿತ್ವದಲ್ಲಿರುವ ಅಧ್ಯಯನಗಳ ಸೀಮಿತ ಸಂಖ್ಯೆಯ ಪ್ರಕಾರ, ಅಲೋವೆರಾದಲ್ಲಿನ ಕೆಲವು ರಾಸಾಯನಿಕಗಳು ಚರ್ಮವನ್ನು ಹಗುರಗೊಳಿಸುವ ಗುಣಲಕ್ಷಣಗಳನ್ನು ಹೊಂದಿರಬಹುದು. ಈ ರಾಸಾಯನಿಕಗಳನ್ನು ಅಲೋಯಿನ್ ಮತ್ತು ಅಲೋಸಿನ್ ಎಂದು ಕರೆಯಲಾಗುತ್ತದೆ. ಅಸ್ತಿತ್ವದಲ್ಲಿರುವ ಮೆಲನಿನ್ ಕೋಶಗಳನ್ನು ನಾಶಪಡಿಸುವ ಮೂಲಕ ಮತ್ತು ಚರ್ಮದಲ್ಲಿ ಮೆಲನಿನ್ ಮತ್ತಷ್ಟು ರಚನೆಯನ್ನು ತಡೆಯುವ ಮೂಲಕ ಅವರು ಹೈಪರ್ಪಿಗ್ಮೆಂಟೇಶನ್ ನೋಟವನ್ನು ಕಡಿಮೆ ಮಾಡಬಹುದು.
ನಿಂಬೆ ರಸವು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ, ಇದು ಮೊಂಡುತನದ ಟ್ಯಾನ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇನ್ನು ಕಾಫಿಯಲ್ಲಿ ಇರುವಂತಹ ಆಂಟಿ ಆಕ್ಸಿಡೆಂಡ್ಸ್ ಗಳು ಹಾಗೂ ಅವಶ್ಯಕತೆ ಇರುವಂತಹ ಪೌಷ್ಠಿಕಾಂಶಗಳು ದೈಹಿಕ ಆರೋಗ್ಯವಲ್ಲದೆ ತ್ವಚೆಯ ಸೌಂದರ್ಯಕ್ಕೂ ಉಪಯುಕ್ತವಾಗಿದೆ. ಕಾಫಿಯಲ್ಲಿರುವಂತ ಆಂಟಿ ಆಕ್ಸಿಡೆಂಟ್ ಗಳು ಡೆಡ್ ಸೆಲ್ಸ್ ಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ ಜೊತೆಗೆ ಸ್ಕಿನ್ ಟೈಟನಿಂಗ್ ಹಾಗೂ ಆಂಟಿ ಏಜಿಂಗ್ ಫ್ಯಾಕ್ಟರ್ಸ್ ಗಳು ಇರುವ ಕಾರಣ ತ್ವಚೆಯ ಕಾಂತಿಯು ಹೆಚ್ಚಾಗುತ್ತದೆ.
ಇನ್ನು ಈ ಮನೆಮದ್ದನ್ನು ಮಾಡುವ ಸುಲಭ ವಿಧಾನವೆಂದರೆ ಮೊದಲಿಗೆ ಅಲೋವೆರಾ ಜೆಲ್ ಹಾಗೂ ಕೊಬ್ಬರಿ ಎಣ್ಣೆಯನ್ನು ಒಂದು ಬಟ್ಟಲಿಗೆ ಹಾಗೆ ಹಾಕಿಕೊಂಡು ಮಿಶ್ರಣ ಮಾಡಬೇಕು ನಂತರ ಅದಕ್ಕೆ ಮೂರರಿಂದ ನಾಲ್ಕು ನಿಂಬೆ ರಸವನ್ನು ಹಾಕಬೇಕು, ಅದಕ್ಕೆ ಕೋಲ್ಗೇಟ್ ಟೂತ್ಪೇಸ್ಟ್ ಅನ್ನು ಒಂದು ಚಮಚದಷ್ಟು ಹಾಕಬೇಕು, ಕೊನೆಯಲ್ಲಿ ಆಕ್ಟಿವಿಟ ಕಾಫೀ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ತ್ವಚೆಯ ಮೇಲೆ ಹಚ್ಚಬೇಕು ಹಚ್ಚಿ 5 ನಿಮಿಷಗಳ ನಂತರ ಮತ್ತೊಮ್ಮೆ ಇನ್ನೊಂದು ಲೇಯರ್ನನ್ನು ಅದರ ಮೇಲೆ ಹಚ್ಚಬೇಕು 15 ನಿಮಿಷಗಳ ಕಾಲ ಬಿಟ್ಟು ಹತ್ತಿ ಅಥವಾ ಬಟ್ಟೆಯಿಂದ ತೊಳೆಯಬೇಕು. ಇದನ್ನು ಒಮ್ಮೆ ಮಾಡಿದರೆ ಸಾಕು ನಿಮ್ಮ ತ್ವಚೆಯಲ್ಲಿ ಆಗುವ ಬದಲಾವಣೆಯನ್ನು ನೀವು ಕಾಣಬಹುದಾಗಿದೆ.