ತುಲಾ ರಾಶಿ ರಾಶಿ ಚಕ್ರದಲ್ಲಿ ಏಳನೇ ರಾಶಿಯಾಗಿದೆ. ತುಲಾ ರಾಶಿಯು ಕಾಲ ಪುರುಷನ ಸ್ವಂತ ಭಾಗವನ್ನು ಸೂಚಿಸುತ್ತದೆ. ಪುರುಷ ರಾಶಿಯಾದ ತುಲಾ ರಾಶಿ ವಾಯು ತತ್ವದ ರಾಶಿ, ಇದು ಪಶ್ಚಿಮ ದಿಕ್ಕನ್ನು ಸೂಚಿಸುತ್ತದೆ. ಈ ರಾಶಿಯ ಅಧಿಪತಿ, ಶುಕ್ರನಾಗಿದ್ದುಚಿತ್ತಾ ನಕ್ಷತ್ರದ ಮೂರು ನಾಲ್ಕನೇ ಪಾದದವರು, ಸ್ವಾತಿ ನಕ್ಷತ್ರದ 1,2,3 ಮತ್ತು 4 ನೇ ಪಾದದವರು ಹಾಗು ವಿಶಾಖ ನಕ್ಷತ್ರದ 1,2 ಮತ್ತು 3 ಪಾದದವರು ತುಲಾ ರಾಶಿಗೆ ಸೇರಿರುತ್ತಾರೆ.
ರ, ರಿ, ರೆ, ರೊ, ತ, ತಿ, ತೆ, ತೋ ಈ ಅಕ್ಷರಗಳಿಂದ ತುಲಾ ರಾಶಿಯವರ ಹೆಸರುಗಳು ಆರಂಭವಾಗುತ್ತವೆ ಈ ತುಲಾ ರಾಶಿಯವರ ಗುಣ ಸ್ವಭಾವಗಳು ಹೇಗಿರುತ್ತವೆ ಮತ್ತು ತುಲಾ ರಾಶಿಯವರು ಯಾವ ಕೆಲಸಗಳಲ್ಲಿ ತೊಡಗಿಕೊಂಡರೆ ಉತ್ತಮ, ಅವರ ಭವಿಷ್ಯ ಹೇಗಿರುತ್ತದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಕೆಲ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.
ತುಲಾ ರಾಶಿಯ ರಾಶಿ ಚಿಹ್ನೆ ತಕ್ಕಡಿ. ತುಲಾ ರಾಶಿಯ ರಾಶಿ ಸಂಕೇತವನ್ನು ನೋಡಿದಾಗ ಶ್ರೀ ತತ್ಪುರುಷಾಯ ಪುರುಷನೊಬ್ಬನು ವ್ಯಾಪಾರ ಕ್ಕಾಗಿ ತಕ್ಕಡಿ ಹಿಡಿದು ನಿಂತಂತೆ ಕಾಣಿಸುತ್ತದೆ. ಇದಕ್ಕೆ ತಕ್ಕಹಾಗೆ ತುಲಾ ರಾಶಿಯವರು ಯಾವಾಗಲೂ ಸಮಾನತೆ ಮತ್ತು ನ್ಯಾಯದ ಪರವಾಗಿರುತ್ತಾರೆ.
ಈ ರಾಶಿಯ ಅಧಿಪತಿ ಶುಕ್ರನು ಸೌರಮಂಡಲದಲ್ಲಿ ಪ್ರಕಾಶಮಾನ ಆಕಾಶಕಾಯ ಹಾಗೆಯೇ ತುಲಾ ರಾಶಿಯವರು ಒಂದು ಮನೆಯಲ್ಲಿರುವವರಲ್ಲಿ ಅಥವಾ ಒಂದು ತರಗತಿಯಲ್ಲಿ ಅಥವಾ ಒಂದು ಕಚೇರಿಯಲ್ಲಿ ಉಳಿದ ಎಲ್ಲರಿಗಿಂತ ಭಿನ್ನವಾಗಿರುತ್ತಾರೆ. ತಮ್ಮ ತೇಜಸ್ಸಿನಿಂದ ಹಾಗೂ ಕಾರ್ಯ ಚಟುವಟಿಕೆಗಳಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ.
ಈ ರಾಶಿಯವರು ಮಧ್ಯಮ ಎತ್ತರ ಹೊಂದಿರುತ್ತಾರೆ ಸದೃಢವಾದ ದೇಹ ಕಾಯ ಉಳ್ಳವರಾಗಿರುತ್ತಾರೆ. ತಮ್ಮ ಮಾತಿನಿಂದ ಸುತ್ತಮುತ್ತನವರ ಮೇಲೆ ಪ್ರಭಾವ ಬೀರುವ ಇವರು ನೋಡುವುದಕ್ಕೂ ಸುಂದರವಾಗಿರುತ್ತಾರೆ. ಹೆಚ್ಚಾಗಿ ಗುಂಗುರು ಕೂದಲು ಆಕರ್ಷಕ ಕಣ್ಣುಗಳು, ನೀಳ ವಾದ ಮುಖ, ಗೋಧಿ ಮೈಬಣ್ಣ ಹೊಂದಿರುತ್ತಾರೆ.
ಆಧುನಿಕ ಶೈಲಿಯ ಉಡುಪು ಮತ್ತು ಸ್ಟೈಲ್, ಟ್ರೆಂಡ್ ಫಾಲೋ ಮಾಡಲು ಇಚ್ಚಿಸುವ ಈ ರಾಶಿಯವರು ಸಂಪ್ರದಾಯ ಹಾಗೂ ಪದ್ಧತಿಗೆ ಅಷ್ಟೇ ಗೌರವ ಕೊಡುತ್ತಾರೆ. ದೇವರ ಮೇಲೆ ಅಪಾರವಾದ ನಂಬಿಕೆ ಉಳ್ಳ ಇವರು ಹಿರಿಯರ ಮೇಲೆ ದೇವರ ಮೇಲೆ ಭಯ ಭಕ್ತಿ ಹೊಂದಿರುವವರಾಗಿರುತ್ತಾರೆ.
ಹಣಕಾಸಿನ ವಿಚಾರದಲ್ಲೂ ಕೂಡ ಶುಕ್ರ ಗ್ರಹದ ಪ್ರಭಾವದಿಂದ ಸಂಪನ್ನರಾಗಿರುತ್ತಾರೆ. ತುಲಾ ರಾಶಿಯವರು ವ್ಯಾಪಾರ, ವಾಣಿಜ್ಯೋದ್ಯಮಗಳ ಪ್ರಿಯರು, ಪ್ರತಿದಿನವೂ ಹಣ ನೋಡಲು ಇಚ್ಚಿಸುತ್ತಾರೆ. ಸಂಚಾರ ಪ್ರಿಯರು, ಧನವಂತರು, ಕ್ರಯ ವಿಕ್ರಯ ಮುಂತಾದ ವ್ಯವಹಾರಗಳನ್ನು ಹೆಚ್ಚಾಗಿ ಮಾಡುವವರು ಮತ್ತು ಇದರಲ್ಲಿ ನಿಪುಣರಾಗಿ ಹೆಸರು ಮಾಡಿರುತ್ತಾರೆ.
ತುಲಾ ರಾಶಿಯವರಿಗೆ ಒಂದ ಕ್ಕಿಂತ ಹೆಚ್ಚು ಹೆಸರುಗಳು ಇರುತ್ತವೆ. ಹೆಸರು ಬದಲಾಯಿಸಿಕೊಂಡ ಮೇಲೆ ತುಲಾ ರಾಶಿಯ ಪ್ರಕಾರ ಹೆಸರು ಇಟ್ಟುಕೊಂಡ ಕಾರಣ ತಮ್ಮ ಕ್ಷೇತ್ರದಲ್ಲಿ ಹೆಸರು ಮಾಡಿದ ಅನೇಕರ ಉದಾಹರಣೆಗಳು ಇವೆ. ಚುರುಕು ಸ್ವಭಾವದವರು ಹಣದ ಲೇವಾದೇವಿಯಲ್ಲಿ ಹೆಚ್ಚು ಗಮನ ಉಳ್ಳವರಾಗಿರುತ್ತಾರೆ.
ವಾಣಿಜ್ಯ ಮತ್ತು ತಾಂತ್ರಿಕ ಶಿಕ್ಷಣ ದಲ್ಲಿ ಹೆಚ್ಚಾಗಿ ಆಸಕ್ತಿ ಇರುತ್ತದೆ, ಅದನ್ನು ಹೊರತುಪಡಿಸಿ ಕಲೆ ನೃತ್ಯ ನಾಟಕ ಸಿನಿಮಾ ನಿರ್ದೇಶನ ಇವುಗಳು ಇವರಿಗೆ ಅತ್ಯಂತ ಪ್ರಿಯ ಕ್ಷೇತ್ರವಾಗಿರುತ್ತದೆ. ಇವರು ಯಾವುದೇ ಒಂದು ವಿಷಯವನ್ನು ಆಯ್ದುಕೊಂಡು ಕ’ಷ್ಟಪಟ್ಟು ಗಿಟ್ಟಿಸಿಕೊಳ್ಳುವಂತಹ ಗಟ್ಟಿತನ ಹೊಂದಿರುತ್ತಾರೆ. ಅವರ ಇಚ್ಛೆಯಂತೆಯ ಬದುಕು ಕಟ್ಟಿಕೊಳ್ಳುತ್ತಾರೆ.