ಸರ್ಕಾರದ ವತಿಯಿಂದ ಶಾಲಾ ಮತ್ತು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಲವು ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಈಗ ಅದೇ ರೀತಿ ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ.
ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು (2A, 2B, 3A, 3B) ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2023-24ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ ಮತ್ತು ವಿದ್ಯಾಸಿರಿ ಊಟ ಹಾಗೂ ವಸತಿ ಯೋಜನೆ ಸೌಲಭ್ಯ ಪಡೆಯುವುದಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸಿ ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು, ಯಾವೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ಆನ್ಲೈನ್ ಮೂಲಕ ಯಾವ ರೀತಿ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ವೆಬ್ಸೈಟ್ ವಿಳಾಸ ಮುಂತಾದ ಸಂಪೂರ್ಣ ವಿವರವನ್ನು ನೋಟಿಫಿಕೇಶನ್ ಅಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ನಾವು ಸಹ ಈ ಅಂಕಣದಲ್ಲಿ ನೋಟಿಫಿಕೇಶನ್ ನಲ್ಲಿರುವ ಕೆಲವು ಪ್ರಮುಖ ವಿಷಯಗಳ ಬಗ್ಗೆ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ ಕರ್ನಾಟಕದಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಈ ಮಾಹಿತಿ ತಲುಪುವಂತೆ ತಪ್ಪದೆ ಶೇರ್ ಮಾಡಿ.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 10.01.2024
* ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿರುವ ವೆಬ್ಸೈಟ್ ವಿಳಾಸ:- https://ssp.postmatric.karnataka.gov.in
* ಈ ಮೇಲೆ ತಿಳಿಸಲಾದಂತಹ ಯೋಜನೆಗಳಾದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಶುಲ್ಕ ಮರುಪಾವತಿ ಮತ್ತು ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ ಯೋಜನೆಯ ವಿವರ ಅರ್ಹತೆ ಸಲ್ಲಿಸಬೇಕಾದ ದಾಖಲೆಗಳು ಮತ್ತು ಈ ಯೋಜನೆಗಳಿಗೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಬಗ್ಗೆ ಮಾಹಿತಿಗಾಗಿ ಭೇಟಿ ನೀಡಬೇಕಾದ ವೆಬ್ಸೈಟ್ ವಿಳಾಸ:-
https://bcwd.karnataka.gov.in
* ಇಲಾಖೆಯ ಸಹಾಯವಾಣಿ:-
1. ದೂರವಾಣಿ ಸಂಖ್ಯೆ:- 8050770005
2. ಇ ಮೇಲ್:- bcwdhelpline@gmail.com
ಅರ್ಜಿ ಸಲ್ಲಿಸುವ ವಿಧಾನ:-
1. ಮೊದಲು ನೇರವಾಗಿ https://ssp.postmatric.karnataka.gov.in ಲಿಂಕ್ ಕ್ಲಿಕ್ ಮಾಡುವ ಮೂಲಕ SSP ಪೋರ್ಟಲ್ ಗೆ ಭೇಟಿ ಕೊಡಿ.
2. User name & Password ಹೊಂದಿದ್ದರೆ ನಮೂದಿಸಿ login ಆಗಿ ಇಲ್ಲವಾದಲ್ಲಿ User name & Password ಕ್ರಿಯೇಟ್ ಮಾಡಿಕೊಳ್ಳಿ.
3. SSP applications page ಓಪನ್ ಆಗುತ್ತದೆ. ಅದರಲ್ಲಿ Apply for postmatric Scholarship ಕ್ಲಿಕ್ ಮಾಡಿ ಅಲ್ಲಿ instructions ಕೊಡಲಾಗಿರುತ್ತದೆ. ಅದನ್ನು ಪೂರ್ತಿಯಾಗಿ ಓದಿಕೊಳ್ಳಿ Okay ಕ್ಲಿಕ್ ಮಾಡಿ.
4. ಅರ್ಜಿ ಸಲ್ಲಿಸಲು 5 ಹಂತಗಳಿರುತ್ತವೆ. ಮೊದಲನೇ ಹಂತದಲ್ಲಿ ನಿಮ್ಮ ವೈಯುಕ್ತಿಕ ವಿವರಗಳು, ಎರಡನೇ ಹಂತದಲ್ಲಿ ನಿಮ್ಮ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಹಾಗೆ ಶಾಲಾ-ಕಾಲೇಜುಗಳ ಮಾಹಿತಿಗಳು, ಮೂರನೇಯದಾಗಿ ಇ-ಧೃಡೀಕರಣದ ದಾಖಲೆಗಳು, ನಾಲ್ಕನೆಯದಾಗಿ ವಸತಿ ನಿಲಯದ ವಿದ್ಯಾರ್ಥಿಗಳಾಗಿದ್ದರೆ ಅದರ ಬಗ್ಗೆ ಮಾಹಿತಿ ಮತ್ತು 5ನೇ ಹಂತದಲ್ಲಿ ಪೂರ್ವ ವೀಕ್ಷಣೆ ಮಾಡಿ ಅಂತಿಮ ಸಲ್ಲಿಕೆ ಮಾಡಿದ್ದಲ್ಲಿ ಯಶಸ್ವಿಯಾಗಿ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ, ಕೊನೆಯಲ್ಲಿ ತಪ್ಪದೆ ಇದರ ಪ್ರಿಂಟ ಔಟ್ ಪಡೆದುಕೊಳ್ಳಿ.