ಕನ್ನಡ ಬಿಗ್ ಬಾಸ್ ಸೀಸನ್ 9 ಈಗಾಗಲೇ ಪ್ರಾರಂಭವಾಗಿದ್ದು ಇಲ್ಲಿ ಇರುವಂತಹ ಸ್ಪರ್ಧಿಗಳು ತಮ್ಮದೇ ಆದ ರೀತಿಯಲ್ಲಿ ಜನರನ್ನು ಎಂಟರ್ಟೈನ್ ಮಾಡುತ್ತಾ ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಸ್ಪರ್ಧೆಗಳು ದಿನದಿಂದ ದಿನಕ್ಕೆ ಪ್ರಬಲರಾಗುತ್ತಿದ್ದಾರೆ ಹಾಗೆಯೇ ಮನರಂಜನೆ ನೀಡುವಲ್ಲಿ ಮುಂದಾಗುತ್ತಿದ್ದಾರೆ ಹೀಗಿರುವಂತಹ ಸಂದರ್ಭದಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಸೀಸನ್ 9ನಲ್ಲಿ ಬರಲಿದ್ದಾರೆ ಎನ್ನುವಂತಹ ಸುದ್ದಿಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಸ್ಪರ್ಧಿಗಳು ಈಗಾಗಲೇ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ ಇದರ ಮಧ್ಯದಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ಬಂದರೆ ಇವರ ಜೊತೆಯಲ್ಲಿ ಹೊಂದಿಕೊಂಡು ಹೋಗುತ್ತಾರ ಎನ್ನುವುದು ಹಲವರ ಪ್ರಶ್ನೆ.
ಇನ್ನು ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಓ ಟಿ ಟಿ ಯಲ್ಲಿ ಬಿಗ್ ಬಾಸ್ ಪ್ರಸಾರವಾಗುತ್ತಿತ್ತು ಈ ಕಾರ್ಯಕ್ರಮದಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ಸದಾ ನಗುತಿದ್ದರು ಹಾಗೆಯೇ ತಮ್ಮ ಮನಸ್ಸಿಗೆ ತೋಚಿದ್ದನ್ನು ನೇರವಾಗಿ ಹೇಳುತ್ತಿದ್ದರು. ಓಟಿಟಿಯಲ್ಲಿ ಭಾಗವಹಿಸಿದ್ದಂತಹ ನಾಲ್ಕು ಜನ ಸ್ಪರ್ಧಿಗಳು ಈಗಾಗಲೇ ಬಿಗ್ ಬಾಸ್ ಸೀಸನ್ 9ರಲ್ಲಿ ಪಾಲ್ಗೊಂಡಿದ್ದಾರೆ ಈಗ ವೈಲ್ ಕಾರ್ಡ್ ಎಂಟ್ರಿ ಯ ಮೂಲಕ ಸೋನು ಅವರು ಹೋಗಲಿದ್ದಾರೆ ಎನ್ನುವಂತಹ ಸುದ್ದಿಗಳು ಹರಿದಾಡುತ್ತಿವೆ.
ತಮ್ಮ ನೇರ ನಡೆ ಮತ್ತು ನುಡಿ ಇಂದ ಜನರ ಮನಸ್ಸನ್ನು ಗೆದ್ದಿರುವಂತಹ ಸೋನು ಅವರು ಬಿಗ್ ಬಾಸ್ ಮನೆಯಲ್ಲಿ ಹೋದರೆ ಎಲ್ಲರಿಗೂ ಸಹ ಮನರಂಜನೆಯನ್ನು ನೀಡುತ್ತಾರೆ ಎನ್ನುವಂತಹ ಉದ್ದೇಶದಿಂದ ಇವರನ್ನು ಬಿಗ್ ಬಾಸ್ ಮನೆಗೆ ಕಳುಹಿಸಬೇಕು ಎಂದು ಸಾಕಷ್ಟು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಹಾಗೆಯೇ ಬಿಗ್ ಬಾಸ್ ಓಟಿಟಿಯಲ್ಲಿ ರಾಕೇಶ್ ಮತ್ತು ಸೋನು ಗೌಡ ಅವರು ತುಂಬಾ ಕ್ಲೋಸ್ ಆಗಿದ್ದರು ಆದ್ದರಿಂದ ಸೋನು ಅವರನ್ನು ಬಿಗ್ ಬಾಸ್ ಮನೆಗೆ ಕಳುಹಿಸುವುದರಿಂದ ರಾಕೇಶ್ ಮತ್ತು ಸೋನು ಅವರ ಸ್ನೇಹ ಇನ್ನಷ್ಟು ಜಾಸ್ತಿಯಾಗುತ್ತದೆ. ಈಗಾಗಲೇ ಬಿಗ್ ಬಾಸ್ ಓಟಿಟಿಯಲ್ಲಿ ಸ್ಪರ್ಧಿಸಿ ದಂತಹ ರೂಪೇಶ್ ಶೆಟ್ಟಿ, ಸಾನಿಯಾ ಐಯರ್, ಆರ್ಯವರ್ಧನ್ ಗುರೂಜಿ, ರಾಕೇಶ್ ಈ ನಾಲ್ವರು ಹೋಗಿರುವುದರಿಂದ ಸೋನು ಗೌಡ ಅವರು ಬಿಗ್ ಬಾಸ್ ಸೀಸನ್ 9ರಲ್ಲಿ ಹೋದರೆ 5ನೆಯ ಸ್ಪರ್ಧಿ ಆಗುತ್ತಾರೆ.
ಸೋನು ಗೌಡ ಅವರು ಬಿಗ್ ಬಾಸ್ ಸೀಸನ್ 9ಕ್ಕೆ ಬಂದರೆ ಇನ್ನಷ್ಟು ಗಾಸಿಪ್ ಗಳು ಹುಟ್ಟಿಕೊಳ್ಳುವುದು ನಿಜ ಕೆಲವರು ಇವರ ನೇರ ನಡೆ ಮತ್ತು ನುಡಿಯನ್ನು ಇಷ್ಟಪಟ್ಟರೆ ಇನ್ನೂ ಕೆಲವರು ಇವರ ವರ್ತನೆಯನ್ನು ಇಷ್ಟಪಡುವುದಿಲ್ಲ, ಆದ್ದರಿಂದ ಇವರು ಚರ್ಚೆಗೆ ಗ್ರಾಸವಾಗುವುದಂತೂ ಖಂಡಿತ. ಸೋನು ಬಿಗ್ ಬಾಸ್ ಮನೆಗೆ ಹೋಗುವ ಯಾವುದೇ ನಿಖರ ಮಾಹಿತಿ ಇಲ್ಲೂ ಸಹ ಹೊರ ಬಂದಿಲ್ಲ ಹೋಗಬಹುದು ಎನ್ನುವಂತಹ ಊಹಾ ಪೋಹಗಳ ಮೇರೆಗೆ ಎಲ್ಲರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ. ಸೋನು ಅವರ ಕಟು ಮಾತು ಏನೇ ಇದ್ದರೂ ಸಹ ಅವರು ಜನರನ್ನು ರಂಜಿಸುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ ಹಾಗೆಯೇ ತಮ್ಮಂತೆ ತಾವು ಇರುತ್ತಾರೆ. ಸೋನು ಅವರು ಬಿಗ್ ಬಾಸ್ ಮನೆಗೆ ಹೋಗಬೇಕು ಎಂದು ನೀವು ಅಂದುಕೊಂಡರೆ ತಪ್ಪದೇ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.