ಪುನೀತ ಪರ್ವ ಕಾರ್ಯಕ್ರಮ ನೆಡೆಸಿಕೊಡೋಕೆ ಅನುಶ್ರೀ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಆಶ್ಚರ್ಯ

ನಮ್ಮ ಕನ್ನಡ ಚಿತ್ರರಂಗ ಕಂಡಂತಹ ಒಬ್ಬ ಅತ್ಯುತ್ತಮ ನಟ ಎಂದರೆ ಅದು ನಮ್ಮ ನಿಮ್ಮೆಲ್ಲರ ಪುನೀತ್ ರಾಜ್‌ಕುಮಾರ್ ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ ಸಹ ಪುನೀತ್ ಅವರ ಅಭಿನಯದ ರಂಗು ಪಸರಿಸಿಕೊಂಡಿದೆ ಇತರ ರಾಜ್ಯಗಳಿಂದಲೂ ಅಷ್ಟೇ ಅಲ್ಲದೆ ಇತರ ದೇಶಗಳಲ್ಲಿಯೂ ಸಹ ನಮ್ಮ ಅಪ್ಪು ಅವರ ಅಭಿಮಾನಿಗಳು ಇದ್ದಾರೆ. ಅಪ್ಪು ಅವರ ನಿಧನದ ನಂತರ ಎಷ್ಟೋ ಅಭಿಮಾನಿಗಳು ನೋವನ್ನು ಇಂದಿಗೂ ಸಹ ಅನುಭವಿಸುತ್ತಾ ಇದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದಂತಹ ಅಪ್ಪು ಅವರು ಸಾಕಷ್ಟು ಚಿತ್ರಗಳಲ್ಲಿ ನಟನೆಯನ್ನು ಮಾಡುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕೇವಲ ಚಿತ್ರಗಳಲ್ಲಿ ಹೀರೋ ಆಗಿ ಇರದೆ ಪುನೀತ್ ರಾಜ್‌ಕುಮಾರ್ ನಿಜ ಜೀವನದಲ್ಲಿಯೂ ಸಹ ಹೀರೊ ಎನಿಸಿಕೊಂಡಿದ್ದಾರೆ. ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ರಿಯಲ್ ಹೀರೋ ಆಗಿ ಎಲ್ಲರ ಕಣ್ಣಿಗೆ ಬಿದ್ದಿದ್ದಾರೆ ಹಲವು ಅನಾಥಾಶ್ರಮಗಳು, ವೃದ್ದಾಶ್ರಮಗಳು, ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸ ಹಾಗೂ ಕೆಲವೊಂದಷ್ಟು ಗೋಶಾಲೆಗಳನ್ನು ನೋಡಿಕೊಳ್ಳುವ ಮೂಲಕ ಮಾನವೀಯತೆಯ ಮತ್ತೊಂದು ಹೆಸರು ಎನಿಸಿಕೊಂಡಿದ್ದಾರೆ. ಅಪ್ಪು ಅವರು ನಮ್ಮನ್ನು ಹಗಲಿ ಸುಮಾರು ಒಂದು ವರ್ಷಗಳೇ ಆಗುತ್ತಾ ಬಂದಿದ್ದರು ಸಹ ಅಭಿಮಾನಿಗಳ ಮನಸ್ಸಿನಲ್ಲಿ ಅವರು ಎಂದೆಂದಿಗೂ ಜೀವಂತವಾಗಿ ಇರುತ್ತಾರೆ. ಅಪ್ಪು ಅವರ ಜೀವಮಾನದಲ್ಲಿ ಕೊನೆಯ ಸಿನಿಮಾ ಆದಂತಹ ಗಂಧದಗುಡಿಯ ಫ್ರೀ ರಿಲೀಸ್ ಇವೆಂಟ್ ಗೆ ಪುನೀತ ಪರ್ವ ಎಂದು ಹೆಸರಿಟ್ಟು ಈ ಒಂದು ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡು ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು.

ಕಾರ್ಯಕ್ರಮಕ್ಕೆ ಪುನೀತ್ ಅವರ ಕುಟುಂಬಸ್ಥರು ಹಾಗೆಯೇ ಚಿತ್ರರಂಗದ ಸಾಕಷ್ಟು ಗಣ್ಯರು ಸಹ ಆಗಮಿಸಿದ್ದರು. ಇನ್ನು ಈ ಕಾರ್ಯಕ್ರಮದ ನಿರೂಪಣೆಯ ಸಂಪೂರ್ಣ ಹೊಣೆಯನ್ನು ನಮ್ಮ ನಿಮ್ಮೆಲ್ಲರ ಅನುಶ್ರೀ ಅವರು ವಹಿಸಿಕೊಂಡಿದ್ದು ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕನ್ನಡ ಚಿತ್ರರಂಗದ ಮತ್ತು ಕಿರುತೆರೆಯಲ್ಲಿ ಬಹುತೇಕ ಎಲ್ಲಾ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವಂತಹದ್ದು ಅನುಶ್ರೀ ತಮ್ಮ ಸುಲಲಿತ ಮಾತುಗಳ ಮೂಲಕ ಜನರನ್ನು ಮೋಡಿ ಮಾಡಿರುವಂತಹ ಅನುಶ್ರೀ ಅವರನ್ನು ಮಾತಿನಮಲ್ಲಿ ಎಂದೇ ಕರೆಯುತ್ತಾರೆ. ಕನ್ನಡದಲ್ಲಿ ಯಾವುದೇ ಒಂದು ಕಾರ್ಯಕ್ರಮವನ್ನು ನಿರೂಪಣೆ ಮಾಡಬೇಕು ಎಂದರು ಮೊದಲಿಗೆ ತಲೆಯಲ್ಲಿ ಬರುವ ಮೊದಲ ಹೆಸರು ಅನುಶ್ರೀ. ಅನುಶ್ರೀ ಅವರು ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ. ಪುನೀತ್ ಅವರ ಹಲವಾರು ಆದರ್ಶಗಳನ್ನು ಮೈ ಗೂಡಿಸಿಕೊಂಡಿರುವಂತಹ ಅನುಶ್ರೀ ಅವರು ನಟ ಪುನೀತ್ ರಾಜಕುಮಾರ್ ಅವರ ನೆನಪಿನ ಅಂಗವಾಗಿ ನಡೆದ ಪುನೀತಪರ್ವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಿರೂಪಣೆ ಮಾಡಿದ್ದಾರೆ‌.

ಪುನೀತಪರ್ವ ಕಾರ್ಯಕ್ರಮದಲ್ಲಿ ಅನುಶ್ರೀ ಅವರು ಪಡೆದಂತಹ ಸಂಭಾವನೆ ಇದೀಗ ಎಲ್ಲಾ ಕಡೆ ಚರ್ಚೆಯಾಗುತ್ತಿದೆ ಪುನೀತಪರ್ವ ಕಾರ್ಯಕ್ರಮದಲ್ಲಿ ಅನುಶ್ರೀ ಅವರು ದೊಡ್ಡ ಮಟ್ಟದ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂದು ಹಲವಾರು ಚರ್ಚೆಗಳು ನಡೆಯುತ್ತಿದೆ. ಆದರೆ ಅನುಶ್ರೀ ಅವರು ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಆಗಿರುವುದರಿಂದ ಈ ಒಂದು ಕಾರ್ಯಕ್ರಮಕ್ಕೆ ಯಾವುದೇ ಸಂಭಾವನೆಯನ್ನು ಪಡೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಹೌದು ಅನುಶ್ರೀ ಅವರು ಯಾವುದೇ ಸಂಭಾವನೆಯನ್ನು ಪಡೆದುಕೊಳ್ಳದೆ ಪುನೀತಪರ್ವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿ ಕೊಟ್ಟಿದ್ದು ಅಪ್ಪು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ‌‌. ಅಷ್ಟೇ ಅಲ್ಲದೆ ಈ ಹಿಂದೆ ನಡೆದಂತಹ ಪುನೀತ ನಮನ ಕಾರ್ಯಕ್ರಮವನ್ನು ಸಹ ನಿರೂಪಣೆ ಮಾಡಿದ ಅನುಶ್ರೀ ಯಾವುದೇ ಸಂಬಂಧವನ್ನು ಪಡೆದುಕೊಂಡಿರಲಿಲ್ಲ.

Leave a Comment

%d bloggers like this: