ಕೇರಳದ ಶಬರಿಮಲೆ (Kerala Shabarimale) ದಕ್ಷಿಣ ಭಾರತದ ಜನರ ಪಾಲಿಗೆ ಅತ್ಯಂತ ಪವಿತ್ರವಾದ ಪುಣ್ಯಕ್ಷೇತ್ರ. ಶಬರಿಮಲೆ ಎಂದ ಕೂಡಲೇ ಮೈ ರೋಮಾಂಚನವಾಗುತ್ತದೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯದವರಿಗಂತೂ ಅದೊಂದು ಎಮೋಷನ್ ಕೂಡ.
ಆಧುನಿಕ ಯುಗದ ಅಬ್ಬರದಲ್ಲಿಯೂ ಇನ್ನು ಸಹ ಜನರು ಅಷ್ಟೇ ಭಯ ಭಕ್ತಿಯಿಂದ ಆಚರಿಸುವ ಪ್ರವಿತ್ರವಾದ ಶಬರಿಮಲೆಗೆ ಮಾಲೆ ಹಾಕುವ ಭಕ್ತರ ಸಂಖ್ಯೆ ಪ್ರತಿವರ್ಷವೂ ವರ್ಷಾಂತ್ಯದ ಸಮಯದಲ್ಲಿ ಹೆಚ್ಚಾಗುತ್ತದೆ. ಅಂದರೆ ನವೆಂಬರ್ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಯಾತ್ರೆ ಹೊರಡುತ್ತಾರೆ.
ಇದಕ್ಕೆ ಕಾರಣ ಕೂಡ ಇದೆ, ಇದೇ ಸಮಯಕ್ಕೆ ಸರಿಯಾಗಿ ಕೇರಳದಲ್ಲಿ ಮಂಡಲ ಮಕರ-ವಿಳಕ್ಕು ಋತು ಆರಂಭವಾಗುತ್ತದೆ. ಅಂತೆಯೇ ಈ ವರ್ಷ ನವೆಂಬರ್ 17 ರಂದು ಶಬರಿಮಲೆಯಲ್ಲಿ ಮಂಡಲ-ಮಕರವಿಳಕ್ಕು ಋತುವು ಪ್ರಾರಂಭವಾಗಿದೆ. ಡಿಸೆಂಬರ್ 27 ರಂದು ಮಂಡಲ ಪೂಜೆಯ ನಂತರ ದೇವಾಲಯವು ಸ್ವಲ್ಪ ಸಮಯದವರೆಗೆ ಮುಚ್ಚಲ್ಪಡುತ್ತದೆ.
ಇದು ಮಕರವಿಳಕ್ಕು ಋತುವಿಗಾಗಿ ಡಿಸೆಂಬರ್ 30 ರಂದು ಮತ್ತೆ ತೆರೆಯುತ್ತದೆ ಪ್ರಸಿದ್ಧ ಮಕರವಿಳಕ್ಕು ಜನವರಿ 15, 2024 ರಂದು ನಡೆಯಲಿದೆ. ಹಾಗಾಗಿ ಜನಸ್ತೋಮ ಅಧಿಕವಾಗಿರುವ ಈ ಸಮಯದಲ್ಲಿ ಶಬರಿಮಲೆ ಸ್ವಾಮಿ ದರ್ಶನಕ್ಕಾಗಿ ತೆರಳುವ ಭಕ್ತರ ಪಾಲಿಗೆ ನೆರವಾಗುವ ಉದ್ದೇಶದಿಂದ ಶಬರಿಮಲೆಗೆ ಯಾತ್ರೆ ಕೈಗೊಳ್ಳುವ ಭಕ್ತರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ವಿಶೇಷ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಆ ಭಾಗದಲ್ಲಿ ಓಡಿಸಲು ಮುಂದಾಗಿದೆ.
ದಕ್ಷಿಣ ರೈಲ್ವೆ ಚೆನ್ನೈ ಮತ್ತು ಕೊಟ್ಟಾಯಂ ನಡುವೆ ವಿಶೇಷ ವಂದೇ ಭಾರತ್ ರೈಲು (Vande Bharath Train facility) ಸಂಚರಿಸಲಿದೆ ಈ ಬಗ್ಗೆ ಸಿಹಿ ಸುದ್ದಿ ನೀಡಿ ತಮಿಳುನಾಡು ಸರ್ಕಾರವು ಪ್ರಕಟಣೆಯನ್ನು ಕೂಡ ಹೊರಡಿಸಿದೆ. ರೈಲು ಸಂಖ್ಯೆ 06151 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಹಾಗೂ ಕೊಟ್ಟಾಯಂ ನಡುವೆ ವಂದೇ ಭಾರತ್ ಶಬರಿ ಎರಡು ವಾರದ ವಿಶೇಷ ರೈಲು ಡಿಸೆಂಬರ್ 15, 17, 22 ಮತ್ತು 24 ರಂದು ಬೆಳಿಗ್ಗೆ 4.30 ಕ್ಕೆ ಚೆನ್ನೈನಿಂದ ಹೊರಡಲಿದೆ.
ಅದೇ ದಿನ ಸಂಜೆ 4.15 ಕ್ಕೆ ಕೊಟ್ಟಾಯಂ ತಲುಪಲಿದೆ. ಹಿಂದುರುಗುವ ರೈಲು ಸಂಖ್ಯೆ 06152 ಕೊಟ್ಟಾಯಂ – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಶಬರಿ ದ್ವಿ-ವಾರದ ವಿಶೇಷ ರೈಲು ಡಿಸೆಂಬರ್ 16, 18, 23 ಮತ್ತು 25 ರಂದು ಬೆಳಿಗ್ಗೆ 4.40 ಕ್ಕೆ ಕೊಟ್ಟಾಯಂ ನಿಲ್ದಾಣದಿಂದ ಹೊರಟು ಅದೇ ದಿನ ಸಂಜೆ 5.15 ಕ್ಕೆ ಚೆನ್ನೈ ತಲುಪಲಿದೆ. ಇದು ಪೆರಂಬೂರ್, ಕಟ್ಪಾಡಿ, ಸೇಲಂ, ಈರೋಡ್, ತಿರುಪ್ಪೂರ್, ಪೊದನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ ಮತ್ತು ಎರ್ನಾಕುಲಂ ಉತ್ತರದಂತಹ 10 ನಿಲ್ದಾಣಗಳಲ್ಲಿ ನಿಲ್ಲುತ್ತದೆ.
ಈ ವಿಶೇಷ ಸಂದರ್ಭದಲ್ಲಿ ಶಬರಿಮಲೆ ಯಾತ್ರಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಮತ್ತು ಮಾಧ್ಯಮಗಳಲ್ಲಿ ಅಲ್ಲಿನ ಪರಿಸ್ಥಿತಿ ಬಗ್ಗೆ ನಾನಾ ರೀತಿಯ ಸುದ್ದಿಗಳು ಪ್ರಕಟವಾಗುತ್ತಿರುವುದರಿಂದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (Thamilnadu CM Stallon) ರಾಜ್ಯದ ಭಕ್ತರಿಗೆ ಸುರಕ್ಷತೆ ಮತ್ತು ಸುಗಮ ಸಂಚಾರ ಸೌಲಭ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ತಮಿಳುನಾಡು ಮುಖ್ಯ ಕಾರ್ಯದರ್ಶಿ ಶಿವದಾಸ್ ಮೀನಾ (Thamilunadu Government Secretariat Shivadas Meena) ಅವರು ಕೇರಳ ಮುಖ್ಯಮಂತ್ರಿ ವಿ ವೇಣು (Kerala CM V.Venu) ಅವರೊಂದಿಗೆ ಮಾತನಾಡಿ ಶಬರಿಮಲೆಯ ಪರಿಸ್ಥಿತಿಯ ಬಗ್ಗೆ ವಿಚಾರಿಸ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದಾರೆ.