ಕುಟುಂಬದಲ್ಲಿ ದುಡಿಯುವ ವ್ಯಕ್ತಿಯು ಆ ಕುಟುಂಬದ ಆಧಾರವಾಗಿರುತ್ತಾನೆ. ಆತ ತನ್ನ ಬದುಕು ಮಾತ್ರವಲ್ಲದೆ ತನ್ನ ಕುಟುಂಬದ ಎಲ್ಲರ ಜೀವನಕ್ಕೆ ಆಸರೆ ಆಗಿರುತ್ತಾನೆ. ಒಂದು ವೇಳೆ ಅ’ಪ’ಘಾ’ತ ಅಥವಾ ಅನಾರೋಗ್ಯದ ಕಾರಣದಿಂದಾಗಿ ಆ ವ್ಯಕ್ತಿಗೆ ಅ’ಪ’ಮೃ’ತ್ಯು ಸಂಭವಿಸಿದರೆ ಕುಟುಂಬದ ಸ್ಥಿತಿ ದಯಾಹೀನವಾಗುತ್ತದೆ.
ಹಾಗಾಗಿ ದುಡಿಯುವ ಪ್ರತಿಯೊಬ್ಬರಿಗೂ ಹೇಳುವ ಕಿವಿಮಾತು ಏನೆಂದರೆ, ಸಂಬಳ ಬಂದ ತಕ್ಷಣ ಮೊದಲು ಹೆಲ್ತ್ ಇನ್ಸೂರೆನ್ಸ್ ಲೈಫ್ ಇನ್ಶುರೆನ್ಸ್ ಹಾಗೆ ಟರ್ಮ್ ಇನ್ಸೂರೆನ್ಸ್ ಗಳಿಗೆ ಹಣ ಹೂಡಿಕೆ ಮಾಡಿ ಎಂದು. ಒಬ್ಬ ವ್ಯಕ್ತಿಯ ಅನುಪಸ್ಥಿತಿಯನ್ನು ಭಾವನಾತ್ಮಕವಾಗಿ ಯಾರಿಂದಲೂ ತುಂಬಲು ಸಾಧ್ಯವಿಲ್ಲ ಆದರೆ ಆತನ ಮೇಲೆ ಡಿಪೆಂಡ್ ಆಗಿದ್ದ ಅವರ ಕುಟುಂಬದ ಹೊರೆಯನ್ನು ಟರ್ಮ್ ಇನ್ಸೂರೆನ್ಸ್ ಗಳು ಕಡಿಮೆ ಮಾಡುತ್ತವೆ.
ಆದರೆ ಈಗ ಟರ್ಮ್ ಇನ್ಸೂರೆನ್ಸ್ (Term Insurance) ಮಾಡಿಸುವುದಕ್ಕೂ ಜನ ಹಿಂದೂ ಮುಂದೆ ನೋಡುತ್ತಿದ್ದಾರೆ ಯಾಕೆಂದರೆ ಮಾರ್ಕೆಟ್ ನಲ್ಲಿ ಹಲವಾರು ಕಂಪನಿಗಳು ಇವೆ. ಟರ್ಮ್ ಇನ್ಶುರೆನ್ಸ್ ಗೆ ದೀರ್ಘ ಕಾಲದವರೆಗೆ ಹೂಡಿಕೆ ಮಾಡಿರುತ್ತೇವೆ ಅಷ್ಟು ವರ್ಷಗಳವರೆಗೆ ಕಂಪನಿಗಳು ಗಟ್ಟಿಯಾಗಿ ನಿಲ್ಲುತ್ತವೆ ಎನ್ನುವ ಗ್ಯಾರಂಟಿ ಇಲ್ಲ.
ಜೊತೆಗೆ ಹೂಡಿಕೆ ಅಲ್ಲದೇ ಇರುವುದರಿಂದ ಕ್ಲೈಮ್ ಆಗದೆ ಇದ್ದ ಪಕ್ಷದಲ್ಲಿ ಹಣ ವಾಪಸ್ ಬರದ ಕಾರಣ ಜನರು ಮನಸ್ಸು ಮಾಡುವುದಿಲ್ಲ. ಒಂದು ವೇಳೆ ಟರ್ಮ್ ಇನ್ಸೂರೆನ್ಸ್ ಗೆ ನೀವು ಹೂಡಿಕೆ ಮಾಡಬೇಕಾದ ಹಣದ ಕಾರಣಕ್ಕಾಗಿ ಲೆಕ್ಕಚಾರ ಮಾಡುತ್ತಿದ್ದರೆ ತಿಂಗಳಿಗೆ ಕೇವಲ ರೂ.34 ವಾರ್ಷಿಕವಾಗಿ ಕೇವಲ ರೂ.399 ರೂ.ಗೆ 10 ಲಕ್ಷ ವಿಮೆ ಕೊಡುವ ಟರ್ಮ್ ಇನ್ಸೂರೆನ್ಸ್ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ರೂ.399 ಅಧಿಕ ಆಯ್ತು ಎನ್ನುವವರಿಗೆ ರೂ.299 ವಾರ್ಷಿಕ ಪ್ರೀಮಿಯಂ ಕೂಡ ವಿಮೆ ಇದೆ ಮತ್ತು ಭದ್ರತೆಯ ವಿಚಾರದಲ್ಲಿ ಇದಕ್ಕೆ ಸರ್ಕಾರವೇ ಗ್ಯಾರಂಟಿ ಏಕೆಂದರೆ ಈ ಒಂದು ಅನುಕೂಲತೆ ನೀಡುತ್ತಿರುವುದು ಭಾರತೀಯ ಪೋಸ್ಟ್ ಪೇಮೆಂಟ್ ಬ್ಯಾಂಕ್ (Indian Post Payment Bank).
ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಂದರೆ ಅಂಚೆ ಬ್ಯಾಂಕ್ ಹಾಗೂ TATA AIG INSURANCE ಸಹಯೋಗದೊಂದಿಗೆ ಗ್ರೂಪ್ ಆಕ್ಸಿಡೆಂಟ್ ಇನ್ಸೂರೆನ್ಸ್ ಯೋಜನೆಯನ್ನು (Group Accident Insurance Scheme) ಪರಿಚಯಿಸಿವೆ. ಇದರಿಂದ ನೀವು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಕೌಂಟ್ ಹೊಂದಿದ್ದರೆ ಈ ಯೋಜನೆಯನ್ನು ಖರೀದಿಸಿದರೆ ವಾರ್ಷಿಕವಾಗಿ ರೂ.299 ಅಥವಾ ರೂ.399 ಹೂಡಿಕೆಗೆ 10 ಲಕ್ಷಗಳ ಅ’ಪ’ಘಾ’ತ ವಿಮೆ ಸಿಗುತ್ತದೆ.
ರೂ.299 ಬೇಸಿಕ್ ಇನ್ಸೂರೆನ್ಸ್ (Basic Insurance) ಹಾಗೂ ರೂ.399 ಗೆ ಪ್ರೀಮಿಯಂ ಇನ್ಸೂರೆನ್ಸ್ (Premium Insurance) ಕೂಡ ಸಿಗುತ್ತದೆ. ಈ ಯೋಜನೆಯಲ್ಲಿ ವ್ಯಕ್ತಿ ಅ’ಪ’ಘಾ’ತದಿಂದ ಮೃ’ತ ಹೊಂದಿದ್ದರೆ ಗರಿಷ್ಠ 10 ಲಕ್ಷ, ಅ’ಪ’ಘಾ’ತದಿಂದ ಅಲ್ಪ ಪ್ರಮಾಣದ ಅಥವಾ ಪೂರ್ಣ ಪ್ರಮಾಣದ ಅಂಗವಿಕಲತೆ ಉಂಟಾದರೆ, ಆಕ್ಸಿಡೆಂಟಲ್ ಡಿಸ್ ಮೆಂಬರ್ಮೆಂಟ್ ಪ್ಯಾರಾಲಿಸಿಸ್ 10 ಲಕ್ಷ ವಿಮೆ ಕ್ಲೈಮ್ ಆಗುತ್ತದೆ.
ಆಕ್ಸಿಡೆಂಟಲ್ ಮೆಡಿಕಲ್ ಎಕ್ಸ್ಪೆನ್ಸಸ್ಗೆ (IPD) ಕೂಡ ಅನ್ವಯಿಸುತ್ತದೆ. ರೂ.60,000 ಅಥವಾ ನಿಮ್ಮ ಮೆಡಿಕಲ್ ಬಿಲ್ ಈ ಎರಡರಲ್ಲಿ ಯಾವುದು ಕಡಿಮೆ ಇದೆಯೋ ಅಷ್ಟಕ್ಕೇ ಹಣ ಕ್ಲೈಮ್ ಮಾಡಬಹುದು, ಆ.ಕ್ಸಿಡೆಂಟಲ್ ಮೆಡಿಕಲ್ ಎಕ್ಷ್ಪೆನ್ಸಸ್ (OPD) ಆಗಿದ್ದರೆ ಗರಿಷ್ಠ 30 ಸಾವಿರ ಅಥವಾ ನಿಮ್ಮ ಬಿಲ್ ಎರಡರಲ್ಲಿ ಯಾವುದು ಕಡಿಮೆ ಇದೆ ಅದನ್ನು ಭರಿಸುತ್ತಾರೆ.
ನಿಮ್ಮ ವಿಮೆ ಮೊತ್ತ 10 ಲಕ್ಷ ಇರುವುದರಿಂದ ಇದರಲ್ಲಿ 10% ಅಂದರೆ 1 ಲಕ್ಷ ಹಣವನ್ನು ಒಂದು ವೇಳೆ ಅ’ಪ’ಘಾ’ತ ಉಂಟಾಗಿ ಅನಾಹುತಗಳಾಗಿದ್ದರೆ ನಿಮ್ಮ ಮಕ್ಕಳ ಎಜುಕೇಶನ್ ಗೆ ತೊಂದರೆ ಆಗಬಾರದು ಎಂದು ಈಗಾಗಲೇ ಶಾಲೆಗೆ ದಾಖಲಾಗಿರುವ ಇಬ್ಬರು ಮಕ್ಕಳಿಗೆ ಶಿಕ್ಷಣಕ್ಕಾಗಿ ತಲಾ ಒಂದು ಲಕ್ಷ ನೆರವು ನೀಡುತ್ತಾರೆ. ನೀವೇನಾದರೂ ಅ’ಪ’ಘಾ’ತ’ ವಾಗಿ ಹಾಸ್ಪಿಟಲ್ ಗೆ ಅಡ್ಮಿಟ್ ಆದರೆ ಕನಿಷ್ಠ 10 ದಿನಗಳ ವರೆಗೆ ದಿನಕ್ಕೆ ರೂ.1000 ರೂಪಾಯಿಯಂತೆ ಆಸ್ಪತ್ರೆ ಖರ್ಚು ವೆಚ್ಚುಗಳಿಗೆ ಹಾಗೂ ನಿಮ್ಮ ಟ್ರಾನ್ಸ್ಪೋರ್ಟ್ ಚಾರ್ಜಿಗೂ ಕೂಡ ಕನಿಷ್ಠ ರೂ.25,000 ವರೆಗೆ ಅಥವಾ ನಿಮ್ಮ ಬಿಲ್ ಇದರಲ್ಲಿ ಯಾವುದು ಕಡಿಮೆ ಇದೆಯೋ ಅಷ್ಟು ಹಣ ಹಣ ನೀಡುತ್ತಾರೆ.
ಒಂದು ವೇಳೆ ಈ ಇನ್ಸೂರೆನ್ಸ್ ಖರೀದಿಸಿದ ವ್ಯಕ್ತಿಯು ಮೃ’ತ ಪಟ್ಟಲ್ಲಿ ಆತನ ಅಂತ್ಯಸಂಸ್ಕಾರ ವೆಚ್ಚವಾಗಿ ವಿಮೆ ಮೊತ್ತ ರೂ.10 ಲಕ್ಷದ ಜೊತೆ ರೂ.5000 ಹಣ ನೀಡಲಾಗುತ್ತದೆ. ಈ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಹತ್ತಿರದ ಅಂಚೆ ಕಛೇರಿಯನ್ನು ಸಂಪರ್ಕಿಸಿ ಹಾಗೂ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.