ಶ್ರೀ ಕೇತ್ರ ಧರ್ಮಸ್ಥಳ ಸಂಸ್ಥೆಯು ಸಾಕಷ್ಟು ಜನಪರ ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು ಕೂಡ ಒಂದು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ವತಿಯಿಂದ ಪ್ರಗತಿ ಬಂಧು ಅಥವಾ ಸ್ವ-ಸಹಾಯ ಸಂಘಗಳ ಸದಸ್ಯರ ಮಕ್ಕಳುಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲು ಪ್ರತಿ ವರ್ಷವೂ ಕೂಡ ಅರ್ಜಿ ಆಹ್ವಾನಿಸಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಆಂತೆಯೇ ಈ ಬಾರಿ ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಂದ 2023-24ನೇ ಸಾಲಿನ ಸುಜ್ಞಾನನಿಧಿ ಶಿಷ್ಯವೇತನಕ್ಕಾಗಿ (Sujnana Scholarship) ಹೊಸದಾಗಿ ಮತ್ತು ನವೀಕರಣ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿವಿಧ ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣಕ್ಕೆ ಅಪಾರ ಅವಕಾಶಗಳಿವೆ. ಆದರೆ ಬಡವರ, ಕೂಲಿ ಕಾರ್ಮಿಕರ ಮಕ್ಕಳು ಇಂತಹ ಶಿಕ್ಷಣ ಪಡೆಯುವುದು ಹಣಕಾಸಿನ ಅನಾನುಕೂಲತೆಯಿಂದ ಎಟುಕದ ಕನಸಾಗಿತ್ತು.
ಈ ಸುದ್ದಿ ಓದಿ:- ಇನ್ಮುಂದೆ ರೈತರಿಗೆ ಪ್ರತಿ ತಿಂಗಳು 3000 ಪಿಂಚಣಿ.! ನರೇಂದ್ರ ಮೋದಿ ಅವರಿಂದ ಹೊಸ ಘೋಷಣೆ.!
ಬಡತನ, ಸೂಕ್ತ ಪ್ರೋತ್ಸಾಹ ಹಾಗೂ ಮಾರ್ಗದರ್ಶನದ ಕೊರತೆಯಿಂದ ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳು ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣದಿಂದ ಹೊರಗುಳಿಯುವಂತಾಗಬಾರದು ಎಂದು ಪೂಜ್ಯ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗಡೆಯವರು (Dr.Veerendra Hegde) ಸಂಸ್ಥೆಯ ಬೆಳ್ಳಿಹಬ್ಬದ ನೆನಪಿಗಾಗಿ 2007ರಲ್ಲಿ ಈ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಆರಂಭಿಸಿದರು.
ಈವರೆಗೆ ರಾಜ್ಯದ 72,500 ವಿದ್ಯಾರ್ಥಿಗಳಿಗೆ 87 ಕೋಟಿ ರೂ. ವಿದಾರ್ಥಿವೇತನ ನೀಡಲಾಗಿದೆ. ಸುಜ್ಞಾನನಿಧಿಯಡಿ ಶಿಕ್ಷಣ ಪಡೆದು ಸಾವಿರಾರು ಮಂದಿ ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಓರ್ವ ಸಾಮಾನ್ಯ ಬಡಕುಟುಂಬದ ವಿದ್ಯಾರ್ಥಿಯೂ ಡಾಕ್ಟರ್, ಎಂಜಿನಿಯರ್‌ನಂತಹ ಉನ್ನತ ಶಿಕ್ಷಣ ಪಡೆಯಲು ಇಂತಹ ಯೋಜನೆಗಳು ಸಹಕಾರಿಯಾಗಿದೆ.
ಈ ಸುದ್ದಿ ಓದಿ:- ಇಂಥವರಿಗೆ ಮಾತ್ರ ಇನ್ಮುಂದೆ ವೃದ್ಧಾಪ್ಯ ವೇತನ ಸರ್ಕಾರದ ಹೊಸ ರೂಲ್ಸ್.! ಕಂಗಾಲದ ಪಿಂಚಣಿದಾರರು.!
ಅರ್ಜಿ ಸಲ್ಲಿಸಲು ಯಾರು ಅರ್ಹರು.?
ಧರ್ಮಸ್ಥಳ ಸಂಸ್ಥೆಯ ಪ್ರಗತಿ ಬಂದು ಅಥವಾ ಸ್ವಸಹಾಯ ಸಂಘಗಳಲ್ಲಿ ಸದಸ್ಯರಾಗಿರುವಂತಹ ಪೋಷಕರ ಮಕ್ಕಳುಗಳು ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಪಡೆಯುತ್ತಿದ್ದರೆ ಅರ್ಜಿ ಸಲ್ಲಿಸಬಹುದು.
ಸಿಗುವ ಸಹಾಯಧನ:-
ಆಯಾ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಮಾಸಿಕವಾಗಿ ವಿದ್ಯಾಭ್ಯಾಸ ಮುಗಿಯುವವರೆಗೆ ಅಥವಾ ವಾರ್ಷಿಕವಾಗಿ ಒಮ್ಮೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
(ಉದಾ: ITI ವಿದ್ಯಾರ್ಥಿಗಳಿಗೆ ರೂ.4000 ವಾರ್ಷಿಕವಾಗಿ)
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೇಳಲಾಗಿರುವ ಎಲ್ಲಾ ಪೂರಕ ದಾಖಲೆಗಳನ್ನು ಕೂಡ ಸಲ್ಲಿಸಬೇಕು
* SRDRDP ಯ CSC ಕೇಂದ್ರಗಳ ಮೂಲಕವೇ ಈ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಬೇಕು.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 29ನೇ ಫೆಬ್ರವರಿ 2024.
* ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆಗಳು:
9591770660, 6366358320.
ಈ ಸುದ್ದಿ ಓದಿ:- ಚೆಕ್ ಬೌನ್ಸ್ ಆದ್ರೆ ಎಷ್ಟು ದಂಡ ಕಟ್ಟಬೇಕು ಎಷ್ಟು ದಿನ ಜೈಲು ಶಿಕ್ಷೆ ಅನುಭವಿಸಬೇಕು ಗೊತ್ತಾ.? ಚೆಕ್ ಕೊಡುವ ಮುನ್ನ ಎಚ್ಚರ.!
ಬೇಕಾಗುವ ದಾಖಲೆಗಳು:-
1. ಹೊಸದಾಗಿ ಅರ್ಜಿ ಸಲ್ಲಿಸುವ ವಿಧ್ಯಾರ್ಥಿಗಳಿಗೆ
* SSLC ಅಂಕಪಟ್ಟಿ
* ಅಭ್ಯರ್ಥಿಯು ಪ್ರಸ್ತುತ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕಾಲೇಜಿನ ದೃಢೀಕರಣ ಪತ್ರ ಮತ್ತು ಶುಲ್ಕ ಪಾವತಿ ಮಾಡಿರುವ ರಶೀದಿ
* ಯೋಜನಾ ಕಚೇರಿಯ ಶಿಫಾರಸು ಪತ್ರ
* ಹಿಂದಿನ ವರ್ಷದ ಪರೀಕ್ಷೆಯ ಅಂಕಪಟ್ಟಿ
* ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್
* ವಿದ್ಯಾರ್ಥಿಯ ಆಧಾರ್ ಕಾರ್ಡ್
* ಪೋಷಕರ ಆಧಾರ್ ಕಾರ್ಡ್ (ಧರ್ಮಸ್ಥಳ ಸಂಘದಲ್ಲಿ ಸದಸ್ಯರಾಗಿರುವವರದ್ದು)
* ಪೋಷಕರ ಸಂಘದ ನಿರ್ಣಯ ಪುಸ್ತಕ
* ವಿದ್ಯಾರ್ಥಿಯ ಕುಟುಂಬದ ರೇಷನ್ ಕಾರ್ಡ್.
2. ನವೀಕರಣಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ನೀಡಬೇಕಾಗಿರುವ ದಾಖಲೆಗಳು:-
* ಹಿಂದಿನ ವರ್ಷ ವ್ಯಾಸಂಗ ಮಾಡಿದ ಕೋರ್ಸಿನ ಅಂಕಪಟ್ಟಿ
* ಪ್ರಸ್ತುತ ವರ್ಷದ ಕಾಲೇಜು ದೃಢೀಕರಣ ಮತ್ತು ಶುಲ್ಕ ಪಾವತಿ ಮಾಡಿರುವ ರಶೀದಿ
* ಯೋಜನಾ ಕಚೇರಿ ಶಿಫಾರಸು ಪತ್ರ
* ವಿದ್ಯಾರ್ಥಿ ಆಧಾರ್ ಕಾರ್ಡ್
* ಪೋಷಕರ ಆಧಾರ್ ಕಾರ್ಡ್ (ಧರ್ಮಸ್ಥಳ ಸಂಘದ ಸದಸ್ಯರಾಗಿರುವವರದ್ದು)
* ಪೋಷಕರ ಸಂಘದ ನಿರ್ಣಯ ಪುಸ್ತಕ
* ವಿದ್ಯಾರ್ಥಿಯ ಕುಟುಂಬದ ರೇಷನ್ ಕಾರ್ಡ್