ನಮ್ಮ ದೇಶದಲ್ಲಿ ವೃದ್ಧರಿಗೆ (Senior Citizens) ಪ್ರತಿ ತಿಂಗಳು ಪಿಂಚಣಿ ನೀಡುವ ವ್ಯವಸ್ಥೆ ಇದೆ. ಇದನ್ನು ವೃದ್ಯಾಪ್ಯ ವೇತನ (Old age Pension) ಎಂದು ಕೂಡ ಕರೆಯುತ್ತಾರೆ. ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರದಿಂದ ಇಂದಿರಾಗಾಂಧಿ ರಾಷ್ಟ್ರೀಯ ವಿದ್ಧಾಪ್ಯ ವೇತನ ಯೋಜನೆಯಡಿ 60 ವರ್ಷದಿಂದ 64 ವರ್ಷ ವಯಸ್ಸಿನ ಒಳಗಿನವರಿಗೆ ಪ್ರತಿ ತಿಂಗಳು ರೂ.600 ಮತ್ತು 65 ವರ್ಷ ಮೇಲ್ಪಟ್ಟವರಿಗೆ ರೂ.1000 ಪಿಂಚಣಿ ನೀಡಲಾಗುತ್ತಿದೆ.
ಅಂತೆಯೇ ಕರ್ನಾಟಕ ರಾಜ್ಯ ಸರ್ಕಾರವು 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಪ್ರತಿ ತಿಂಗಳು ರೂ.1200 ಮಾಸಿಕ ಪಿಂಚಣಿ ನೀಡುತ್ತಿದೆ. ಆದರೆ ಇನ್ನು ಮುಂದೆ ಈ ವೃದ್ಧಾಪ್ಯ ವೇತನ ಪಡೆಯಲು ಅರ್ಜಿ ಸಲ್ಲಿಸುವವರಿಗೆ ಆದಾಯದ ಮಿತಿ ಅನ್ವಯವಾಗುತ್ತದೆ.
ಈ ಸುದ್ದಿ ಓದಿ:- ಫೋನ್ ಪೇ, ಗೂಗಲ್ ಪೇ, ಪೇಟಿಎಂ ಬಳಸುವವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.! ಈ ರೂಲ್ಸ್ ಫಾಲೋ ಮಾಡಿದ್ರೆ ಮಾತ್ರ ನಿಮ್ಮ ಹಣ ಸೇಫ್.!
ಸರ್ಕಾರ ಈಗ ವಿಧಿಸಿರುವ ಮಾನದಂಡ ಮೀರಿ ಆದಾಯ ಹೊಂದಿದದವರ ಅರ್ಜಿಗಳು ಸ್ವಯಂ ಚಾಲಿತವಾಗಿ ತಿರಸ್ಕೃತವಾಗುತ್ತವೆ. ಇಂದಿನ ಪ್ರಮುಖ ಸುದ್ದಿ ಅದೇ ಆಗಿದ್ದು, ಎಲ್ಲೆಡೆ ಚರ್ಚೆ ವಿಷಯವಾಗಿದೆ. ಸರ್ಕಾರವು ಇದಕ್ಕೆ ನಿಗದಿಪಡಿಸಿರುವ ಆದಾಯದ ಮಿತಿ ರೂ.32,000 ಆಗಿರುವುದು ಜನರನ್ನು ಗೊಂದಲಕ್ಕೀಡು ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhar card) ಒಂದು ಅತ್ಯಗತ್ಯ ದಾಖಲೆ ಆಗಿದ್ದು ನಾವು ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆ ಸಮೇತವಾಗಿ ಹಲವಾರು ದಾಖಲೆಗಳಿಗೆ ಜೋಡಣೆ ಮಾಡುತ್ತಿದ್ದೇವೆ. ಅರ್ಜಿ ಸಲ್ಲಿಸುವ ಸಮಯದಲ್ಲಿ ಆಧಾರ್ ಕಾರ್ಡ್, ವಯಸ್ಸಿನ ದೃಢೀಕರಣ ಪತ್ರ ರೇಷನ್ ಕಾರ್ಡ್, ಇತ್ತೀಚಿನ ಭಾವಚಿತ್ರ ಸೇರಿದಂತೆ ಕೆಲ ಅಗತ್ಯ ದಾಖಲೆಗಳನ್ನು ನೀಡಿ ಆನ್ಲೈನ್ ಮೂಲಕ ಅಥವಾ ನಾಡಕಚೇರಿಗಳಲ್ಲಿ ಅರ್ಜಿ ಸಲ್ಲಿಸಬೇಕು.
ಈ ಸುದ್ದಿ ಓದಿ:- ಮಹಿಳೆಯರಿಗಾಗಿ ಹೊಸ ಯೋಜನೆ.! ಗೆಳತಿ ಯೋಜನೆಯಡಿ 2.25 ಲಕ್ಷ ಸಂಪೂರ್ಣ ಉಚಿತ.!
ರೇಷನ್ ಕಾರ್ಡ್ ನಲ್ಲಿ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಆಗಿರುತ್ತದೆ ಮತ್ತು ಇದರ ಮೂಲಕ ಕುಟುಂಬದ ವಾರ್ಷಿಕ ಆದಾಯ ಎಷ್ಟಿದೆ ಎನ್ನುವುದು ತಿಳಿದು ಬರುತ್ತದೆ ಇದನ್ನು ಡಿಟೆಕ್ ಮಾಡಿ ಅರ್ಜಿ ಸಲ್ಲಿಸುವಾಗಲೇ ತಿರಸ್ಕೃತ ಗೊಳಿಸಲಾಗುತ್ತಿದೆ.
ಸದ್ಯಕ್ಕೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತಿದ್ದು, ಈಗಾಗಲೇ ಅರ್ಜಿ ಸಲ್ಲಿಸಿ ವೃದ್ಧಾಪ್ಯ ವೇತನ ಪಡೆಯುತ್ತಿರುವ ಫಲಾನುಭವಿಗಳಿಗೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಸರ್ಕಾರ ಈಗ ನಿಗದಿಪಡಿಸಿರುವ ಹೊಸ ನಿಯಮದ ಪ್ರಕಾರ ವಾರ್ಷಿಕವಾಗಿ ರೂ.32,000 ಮೇಲ್ಪಟ್ಟಿದ್ದರೆ ಆ ಕುಟುಂಬದ ಹಿರಿಯ ನಾಗರಿಕರು ಅರ್ಜಿ ಸಲ್ಲಿಸುವುದಕ್ಕೆ ಸಾಧ್ಯವಾಗುವುದಿಲ್ಲ.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು 9250 ಬಡ್ಡಿ ಸಿಗುತ್ತೆ.!
ಆದರೆ ಇದುವರೆಗೂ ಕೂಡ APL ಮತ್ತು BPL ಕಾರ್ಡ್ ಹೊಂದಿದ್ದವರು ಕೂಡ ಈ ವೃದ್ಧಾಪ್ಯ ವೇತನ ಪಡೆಯುತ್ತಿದ್ದರು. ಸರ್ಕಾರ ಈ ನಿರ್ಧಾರಕ್ಕೆ ಬರುವುದರ ಹಿಂದಿನ ಉದ್ದೇಶ ಏನೆಂದರೆ ಇಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು ಆರ್ಥಿಕವಾಗಿ ಅಶಕ್ತರಾಗಿರುವಂತಹ ವೃದ್ಧರಿಗೆ ಅನುಕೂಲವಾಗಲಿ ಎಂದು.
ಆದರೆ ಈ ಯೋಜನೆಯನ್ನು ಲಕ್ಷಾಂತರ ಅನುಕೂಲಸ್ಥರು ಕೂಡ ಪಡೆದುಕೊಳ್ಳುತ್ತಿದ್ದಾರೆ ಈ ರೀತಿ ಯೋಜನೆ ದುರುಪಯೋಗ ಆಗುತ್ತಿರುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಇದಲ್ಲದೆ ಈಗ ಗೃಹಲಕ್ಷ್ಮಿ, ಯುವನಿಧಿ ಯೋಜನೆಗೂ ಕೂಡ ಹೊಸದಾಗಿ ಸರ್ಕಾರ ಪ್ರತಿ ತಿಂಗಳು ಹಣ ನೀಡುವುದಕ್ಕೆ ಹಣ ಹೊಂದಿಸಬೇಕಾಗಿದೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆ ಹಣ ಪಡೆಯುತ್ತಿರುವ ಮಹಿಳೆಯರಿಗೆ ಗುಡ್ ನ್ಯೂಸ್, ಇನ್ಮುಂದೆ 2000 ಅಲ್ಲ 4000 ಹಣ ನೀಡಲು ನಿರ್ಧರಿಸಿರುವ ಸರ್ಕಾರ, ತಪ್ಪದೇ ಈ ಕೆಲಸ ಮಾಡಿ.!
ಆದ್ದರಿಂದ ಎಲ್ಲೆಲ್ಲಿ ಈ ರೀತಿ ಹಣ ಸೋರಿಕೆ ಆಗುತ್ತಿದೆ ಎನ್ನುವುದನ್ನು ಪತ್ತೆ ಹಚ್ಚಿ ನಿಯಂತ್ರಣದಲ್ಲಿ ಇಡಲು ಈ ಒಂದು ನಿರ್ಧಾರಕ್ಕೆ ಬಂದಿದೆ ಎನ್ನುವುದು ತಿಳಿದು ಬಂದಿದೆ. ಆದರೆ ವಾರ್ಷಿಕವಾಗಿ 32,000 ಮಿತಿ ನೀಡಿರುವುದು ಅಸಂಮಜಸ ಎನ್ನುವುದು ಹಲವರ ವಾದ.