ದೇಶದಲ್ಲಿರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ (Govt job Aspirants) ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಬೇಕು ಎನ್ನುವ ಕನಸು ಕಂಡಿರುವವರಿಗೆ ಸಿಹಿ ಸುದ್ದಿ ಇದೆ. ಕೇಂದ್ರ ಸರ್ಕಾರವು (Central Government ) ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 75,768 ಕಾನ್ಸ್ಟೇಬಲ್ (Constable posts) ಹುದ್ದೆಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (Staff Selection Commision) ಮೂಲಕ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ.
ಇದಕ್ಕೆ ಸಂಬಂಧಿಸಿದ ಅಧಿಸೂಚನೆ ಕೂಡ SSC ಯಿಂದ ಹೊರ ಬಿದ್ದಿದ್ದು ಅಧಿಸೂಚನೆಯಲ್ಲಿ ನೀಡಿರುವ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಹುದ್ದೆ ಪಡೆದುಕೊಳ್ಳಲು ಪ್ರಯತ್ನಿಸಬಹುದು. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಈ ಅಂಕಣದಲ್ಲಿ ಪ್ರಕಟಣೆಯಲ್ಲಿ ತಿಳಿಸಿರುವ ನೇಮಕಾತಿ ಕುರಿತ ಪ್ರಮುಖ ಅಗತ್ಯ ಅಂಶಗಳ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ.
ನೇಮಕಾತಿ ಸಂಸ್ಥೆ:- ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)
ಹುದ್ದೆ ಹೆಸರು:- ಕಾನ್ಸ್ಟೇಬಲ್
ಹುದ್ದೆಗಳ ವಿವರ:-
* BSF – 27,875 ಹುದ್ದೆಗಳು
* CISF – 8598 ಹುದ್ದೆಗಳು
* CRPF – 25427 ಹುದ್ದೆಗಳು
* SSB – 5278 ಹುದ್ದೆಗಳು
* ITBP – 3006 ಹುದ್ದೆಗಳು
* AR – 4776 ಹುದ್ದೆಗಳು
* SSF – 583 ಹುದ್ದೆಗಳು.
ಉದ್ಯೋಗ ಸ್ಥಳ :- ಭಾರತದಾದ್ಯಂತ…
ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ. 21,700 ರಿಂದ ರೂ.69,100 ವೇತನ ಸಿಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಇನ್ನಿತರ ಮಾನದಂಡಗಳು:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ಯಾವುದೇ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು.
* ಪುರುಷ ಅಭ್ಯರ್ಥಿಗಳು 170 cm ಮತ್ತು ಮಹಿಳಾ ಅಭ್ಯರ್ಥಿಗಳು 157cm ಗಿಂತ ಎತ್ತರದಲ್ಲಿರಬೇಕು.
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 21 ವರ್ಷಗಳು
* SC/ST ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇದೆ
* OBC ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ ಇದೆ.
ಅರ್ಜಿ ಸಲ್ಲಿಸುವ ವಿಧಾನ:-
* ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಯು ಎಲ್ಲಾ ನಿಯಮ ಹಾಗೂ ನಿಬಂಧನೆಗಳನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳಬೇಕು.
* https://ssc.nic.in ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಲಿಂಕ್ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ಅರ್ಜಿ ಶುಲ್ಕ ಪಾವತಿ ಮಾಡಬೇಕಿದ್ದ ಪಕ್ಷದಲ್ಲಿ ಅದನ್ನು ಪೂರೈಸುವ ಮೂಲಕ ಅರ್ಜಿ ಸಲ್ಲಿಕೆ ಪೂರ್ತಿಗೊಳಿಸಬೇಕು, ನಂತರ ತಪ್ಪದೇ ಈ ರಶೀದಿ ಹಾಗೂ ಅರ್ಜಿ ಸ್ವೀಕೃತಿ ಪ್ರತಿಯನ್ನು ಪಡೆದುಕೊಳ್ಳಬೇಕು.
ಆಯ್ಕೆ ವಿಧಾನ:-
* ಕಂಪ್ಯೂಟರ್ ಆಧಾರಿತ ಪರೀಕ್ಷೆ
* ಫಿಸಿಕಲ್ ಎಫಿಷಿಯನ್ಸಿ ಟೆಸ್ಟ್
* ಫಿಸಿಕಲ್ ಸ್ಟಾಂಡರ್ಡ್ ಟೆಸ್ಟ್
* ವೈದ್ಯಕೀಯ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ಸಂದರ್ಶನ
ಅರ್ಜಿ ಶುಲ್ಕ:-
* SC/ST, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
* ಉಳಿದ ಅಭ್ಯರ್ಥಿಗಳಿಗೆ ರೂ. 100
* ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ನಲ್ಲಿ ಪಾವತಿ ಮಾಡಬೇಕು.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 24 ನವೆಂಬರ್, 2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 28 ಡಿಸೆಂಬರ್, 2023.