ಈ ವರ್ಗದ ವಿದ್ಯಾರ್ಥಿಗಳು 2023-24ನೇ ಶೈಕ್ಷಣಿಕ ವರ್ಷದ ಕಾಲೇಜು ಶುಲ್ಕ ಕಟ್ಟುವಂತಿಲ್ಲ. ಸರ್ಕಾರದಿಂದ ಅಧಿಕೃತ ಘೋಷಣೆ…

 

WhatsApp Group Join Now
Telegram Group Join Now

ಕಾಂಗ್ರೆಸ್ ಸರ್ಕಾರವು 2023ನೇ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಗೆದ್ದು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಅಭಿವೃದ್ಧಿಗಳ ಪರ್ವಕಾಲ ಎಂದೇ ಜನ ಮಾತನಾಡುತ್ತಿದ್ದಾರೆ. ಯಾಕೆಂದರೆ, ಕಾಂಗ್ರೆಸ್ ಸರ್ಕಾರವು ಈ ಹಿಂದೆ ಚುನಾವಣೆ ಪ್ರಚಾರದ ವೇಳೆ ಕೊಟ್ಟಿದ್ದ ವಚನದಂತೆ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ ಯೋಜನೆ, ಶಕ್ತಿ ಯೋಜನೆ ಹಾಗೂ ಯುವನಿಧಿ ಯೋಜನೆಯ ಜಾರಿಗೆ ಶ್ರಮಿಸುತ್ತಿದೆ.

ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಈಗಷ್ಟೇ ಜುಲೈ ತಿಂಗಳ ಎರಡನೇ ವಾರದಲ್ಲಿ ಕಾಂಗ್ರೆಸ್ ಸರ್ಕಾರವು ತನ್ನ ನೂತನ ಬಜೆಟ್ ಕೂಡ ಮಂಡಣೆ ಮಾಡಿದೆ. ಈ ಬಜೆಟ್ ನಲ್ಲೂ ಕೂಡ ಗ್ಯಾರಂಟಿಯೇತರ ಹಲವು ಯೋಜನೆಗಳ ಬಗ್ಗೆ ಘೋಷಿಸಿ ರಾಜ್ಯದ ಜನತೆಗಾಗಿ ಜನಪರ ಯೋಜನೆಯನ್ನು ಜಾರಿಗೆ ತಂದು ಕಾಳಜಿ ಮಾಡಿದೆ.

ಕೇಂದ್ರದಲ್ಲಿ ಹಾಗೂ ರಾಜ್ಯ ಸರ್ಕಾರದಲ್ಲಿ ಯಾವ ಪಕ್ಷಗಳು ಅಸ್ತಿತ್ವಕ್ಕೆ ಬಂದರು ಕೂಡ ಪ್ರಮುಖವಾಗಿ ಗಮನಹರಿಸುವುದು ರೈತರ ಬಗ್ಗೆ. ಈಗಾಗಲೇ ರೈತರಿಗಾಗಿಯೇ ಹಲವಾರು ಯೋಜನೆಗಳು ರಾಜ್ಯದಲ್ಲಿ ಜಾರಿಯಾಗಿದ್ದು ಈ ಬಾರಿ ಕೂಡ ಅದಕ್ಕೆ ಇನ್ನಷ್ಟು ಸೇರ್ಪಡೆಯಾಗಿ, ಕೆಲವು ಹಳೆ ಯೋಜನೆಗಳಿಗೂ ಜೀವ ಬಂದಿದೆ.

ಇದರ ಜೊತೆಗೆ ಪ್ರಮುಖವಾಗಿ ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಭವಿಷ್ಯ ಎನ್ನುವುದು ಅಕ್ಷರಶಃ ಸತ್ಯವಾಗಿರುವ ಕಾರಣ ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಕೂಡ ಗಮನಹರಿಸಿ ಅವರಿಗೂ ಕೂಡ ಕೆಲ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.

ಪ್ರಮುಖವಾಗಿ ಕಾಲೇಜು ಶಿಕ್ಷಣ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕರ್ನಾಟಕ ಸರ್ಕಾರವು ಅವರಿಗಾಗಿ ವಿಶೇಷವಾದ ಯೋಜನೆಯನ್ನು ಘೋಷಿಸಿದೆ. ಸರ್ಕಾರಿ ಕಾಲೇಜುಗಳಲ್ಲಿ ಕನಿಷ್ಠ ಶುಲ್ಕ ಪಾವತಿ ಮಾಡಿ ಕಾಲೇಜು ಶಿಕ್ಷಣವನ್ನು ಪೂರೈಸಬಹುದು ಆದರೆ ಅದಕ್ಕೂ ಕೂಡ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಅನೇಕ ವಿದ್ಯಾರ್ಥಿಗಳು ಬಳಲುತ್ತಿದ್ದಾರೆ ಮತ್ತು ತಮ್ಮ ಓದುವ ಕನಸಲ್ಲಿ ಕೈ ಬಿಡುತ್ತಿದ್ದಾರೆ.

ಈ ರೀತಿ ಪ್ರತಿಭಾವಂತ ವಿದ್ಯಾರ್ಥಿಗಳು ಹಣಕಾಸಿನ ಸಮಸ್ಯೆಯ ಕಾರಣದಿಂದಾಗಿ ವಿದ್ಯಾಭ್ಯಾಸದಿಂದ ದೂರ ಉಳಿಯಬಾರದು ಎನ್ನುವುದೇ ಸರ್ಕಾರದ ಉದ್ದೇಶ. ಇದಕ್ಕಾಗಿ ಶೈಕ್ಷಣಿಕ ಸಾಲದ ವ್ಯವಸ್ಥೆಯು ಕೂಡ ಇದೆ. ಬ್ಯಾಂಕ್ ಗಳಲ್ಲಿ ಎಜುಕೇಶನ್ ಲೋನ್ ಪಡೆದು ತಮ್ಮ ವಿದ್ಯಾಭ್ಯಾಸವನ್ನು ಪೂರೈಸುವ ವಿದ್ಯಾರ್ಥಿ ವರ್ಗವು ಇದರ ಉಪಯೋಗ ಪಡೆಯುತ್ತಿದೆ.

ಈ ರೀತಿ ಎಜುಕೇಶನ್ ಲೋನ್ ಪಡೆದು ವಿದ್ಯಾಭ್ಯಾಸ ಪಡೆಯುವ ವಿದ್ಯಾರ್ಥಿಗಳು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ವಾರ್ಷಿಕವಾಗಿ 2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಕೌನ್ಸಲಿಂಗ್ ಸೀಟುಗಳಿಗೆ ಸೇರಿದಂತೆ ಸರ್ಕಾರಿ ಸ್ವಾಮ್ಯದ ಅಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಂದಲೂ ಕಾಲೇಜು ಶುಲ್ಕವನ್ನು ವಸೂಲಿ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿದೆ.

SSLC ನಂತರ ಪಡೆಯುವ ಶಿಕ್ಷಣವಾದ PUC, ಪದವಿ ಮತ್ತು ಅದರ ಮುಂದಿನ ಯಾವುದೇ ಕೋರ್ಸ್ಗಳು ಇದ್ದರೂ ಕೂಡ ಅದನ್ನು ನಡೆಸುವ ಮಂಡಳಿ ಹಾಗೂ ವಿಶ್ವವಿದ್ಯಾಲಯಗಳಿಗೆ ಸರ್ಕಾರ ಇಂತಹದೊಂದು ಮಹತ್ವದ ಆದೇಶ ಹೊರಡಿಸಿ ಈ ಮೇಲೆ ತಿಳಿಸಿದ ವರ್ಗದ ವಿದ್ಯಾರ್ಥಿಗಳಿಂದ ಕಾಲೇಜು ಶುಲ್ಕವನ್ನು ವಸೂಲಿ ಮಾಡಬಾರದು ಎಂದು ಸೂಚಿಸಿದೆ.

ಈ ವಿವರವನ್ನು ಸರಿಯಾದ ಮಾಹಿತಿಯೊಂದಿಗೆ ಸರ್ಕಾರಕ್ಕೆ ಮಾರ್ಗಸೂಚಿ ಪಕಾರ ಸಲ್ಲಿಸಿದರೆ ಸರ್ಕಾರವೇ ಆ ಮಕ್ಕಳ ವಿದ್ಯಾಭ್ಯಾಸ ಶುಲ್ಕವನ್ನು ವಹಿಸಿಕೊಳ್ಳುವುದಾಗಿ ಇದರಲ್ಲಿ ಸೇರಿಸಲಾಗಿದೆ. ಬಡತನದ ಕಾರಣಕ್ಕೆ ಶಿಕ್ಷಣ ಅರ್ಧಕ್ಕೆ ನಿಂತು ಹೋಗಬಾರದು ಎನ್ನುವ ಸದುದ್ದೇಶದಿಂದ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅರ್ಹ ಎಲ್ಲರೂ ಕೂಡ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲಿ ಎನ್ನುವುದಷ್ಟೇ ನಮ್ಮ ಆಶಯ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now