ಕರ್ನಾಟಕದ ಪ್ರತಿ ಕುಟುಂಬದ ಯಜಮಾನಿಯು ಬಹಳ ನಿರೀಕ್ಷೆ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಸೋಮವಾರದಿಂದ ಚಾಲನೆ ಸಿಕ್ಕಿದೆ. ಸೋಮವಾರ ಸಂಜೆ ವಿಧಾನಸೌಧದ ಅಂಗಳದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು ಲಾಂಚ್ ಮಾಡಿದ್ದಾರೆ.
ಮೊದಲು ತಿಳಿಸಿದ ಮಾರ್ಗಸೂಚಿ ಪ್ರಕಾರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಪಲಾನುಭವಿಗಳು ತಮ್ಮ ಪಡಿತರಚೀಟಿ ಸಂಖ್ಯೆಯನ್ನು ಸರ್ಕಾರ ನೀಡಿದ್ದ ಮೊಬೈಲ್ ಸಂಖ್ಯೆಯಾದ 8147500500 ಈ ಸಂಖ್ಯೆಗೆ SMS ಮೂಲಕ ಕಳುಹಿಸಬೇಕಾಗಿತ್ತು, ಕೆಲವೇ ಸೆಕೆಂಡುಗಳಲ್ಲಿ ಕರ್ನಾಟಕ ಸರ್ಕಾರ ವತಿಯಿಂದ ಇದಕ್ಕೆ ರಿಪ್ಲೈ ಕೂಡ ಬರುತ್ತಿತ್ತು.
VM-SEVSIN ನಿಂದ ಬರುತ್ತಿದ್ದ ರಿಪ್ಲೈ ಅಲ್ಲಿ ರೇಷನ್ ಕಾರ್ಡ್ ಸಂಖ್ಯೆ ಜೊತೆಗೆ ಆ ಫಲಾನುಭವಿಯು ಯಾವ ಸ್ಥಳದಲ್ಲಿ ಯಾವ ಸಮಯಕ್ಕೆ ಯಾವ ದಿನಾಂಕದಂದು ಹೋಗಿ ಅರ್ಜಿ ಸಲ್ಲಿಸಬೇಕು ಎಂದು ವಿವರ ಬರುತ್ತಿತ್ತು. ಒಂದು ದಿನಕ್ಕೆ 60 ಜನರಿಗಷ್ಟೇ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತಿತ್ತು, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎನ್ನುವ ಲಿಸ್ಟ್ ಕೂಡ ಸೇವಾ ಸಿಂಧು ಕೇಂದ್ರಗಳಿಗೆ ಸರ್ಕಾರದಿಂದ ಬರುತ್ತಿತ್ತು.
ತಪ್ಪದೆ ಈ ಸುದ್ದಿ ನೋಡಿ:-ಬಿತ್ತನೆ ಮಾಡದಿದ್ದರೂ ಬೆಳೆವಿಮೆ ಪರಿಹಾರ ಪಡೆಯಬಹುದು.! ಹೇಗೆ ಗೊತ್ತಾ.?
ಈ ಸಮಯದಲ್ಲಿ ಹೋಗಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರಿಗೆ ಸಂಜೆ 5:00 – 7:00 ರವರೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿತ್ತು. ಅದನ್ನು ಹೊರತುಪಡಿಸಿ ಉಳಿದ ಜನರು ತಮಗೆ SMS ಬರುವವರೆಗೂ ಕೂಡ ಕಾಯಬೇಕಾಗಿತ್ತು. ಇದರಿಂದ ಸಾಕಷ್ಟು ಜನರು ಗೊಂದಲಕ್ಕೆ ಒಳಗಾಗಿದ್ದರು. ಆದರೆ ಸರ್ಕಾರದಿಂದ ಈಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.
ಗೃಹಲಕ್ಷ್ಮಿ ಯೋಜನೆಗೆ ಕುಟುಂಬದ ಯಜಮಾನಿಯರು ಅರ್ಜಿ ಸಲ್ಲಿಸಲು ಇನ್ನು ಮುಂದೆ ಸ್ಲಾಟ್ ಬುಕ್ಕಿಂಗ್ ಗಾಗಿ SMS ಅನ್ನು ಕಾಯುವ ಅವಶ್ಯಕತೆ ಇಲ್ಲ. ಬದಲಾಗಿ ಡೈರೆಕ್ಟ್ ಆಗಿಯೇ ಫಲಾನುಭವಿಗಳು ತಮಗೆ ಹತ್ತಿರದಲ್ಲಿರುವ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಸೇವಾಸಿಂಧು ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಅನುಮತಿ ನೀಡಿದೆ.
ಹಾಗಾಗಿ ಇನ್ನು ಮುಂದೆ ಸರ್ಕಾರದಿಂದ ಬರುವ SMS ಗೆ ಕಾಯಬೇಕಾದ ಅವಶ್ಯಕತೆ ಇಲ್ಲ ಹಾಗೂ ನೀವು ಕೂಡ ಅರ್ಜಿ ಸಲ್ಲಿಸಿ, ನೋಂದಣಿ ವೇಳಾಪಟ್ಟಿ ಗಾಗಿ ಕಾಯಬೇಕಾದ ಪರಿಸ್ಥಿತಿಯೂ ಇಲ್ಲ. ನೇರವಾಗಿ ಪೂರಕ ದಾಖಲೆಗಳ ಜೊತೆ ಹೋಗಿ ಇಂದಿನಿಂದಲೇ ಈ ಮೇಲೆ ತಿಳಿಸಿದ ಸೇವಾಕೇಂದ್ರಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಅನುಮತಿಸಿದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಈಗಾಗಲೇ ಸರ್ಕಾರವು ಯಾರೆಲ್ಲ ಅರ್ಹರು ಎಂದು ತಿಳಿಸಿದೆ. ಅವರು ಅರ್ಜಿ ಸಲ್ಲಿಸಲು ಹೋಗುವಾಗ ಅವರ ಪಡಿತರ ಚೀಟಿ, ಪತಿ ಮತ್ತು ಪತ್ನಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಆಧಾರ್ ಕಾರ್ಡ್ ಗೆ ನೋಂದಣಿ ಆಗಿರುವ ಮೊಬೈಲ್ ಸಂಖ್ಯೆ ಮೂಲಕ ಹೋಗಿ ಅರ್ಜಿ ಸಲ್ಲಿಸಬೇಕು.
ಒಂದುವೇಳೆ ಫಲಾನುಭವಿಯು ಆಧಾರ್ ಕಾರ್ಡ್ ಲಿಂಕ್ ಆಗಿರದ ಬ್ಯಾಂಕ್ ಖಾತೆಯನ್ನು ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಪಡೆಯಲು ದಾಖಲೆಯಾಗಿ ನೀಡುವುದಾದರೆ ಸರ್ಕಾರ ಅದಕ್ಕೂ ಕೂಡ ಅನುಮತಿ ಮಾಡಿಕೊಟ್ಟಿದೆ. ಕರ್ನಾಟಕದ ಎಲ್ಲಾ ಕುಟುಂಬಗಳ ಯಜಮಾನಿಯೂ ಫಲಾನುಭವಿಯು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲಿ ಆ ಕಾರಣಕ್ಕಾಗಿ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ತಪ್ಪದೇ ಹಂಚಿಕೊಳ್ಳಿ.