ನಿಮ್ಮ ಮನೆಯಲ್ಲಿರುವ ಕರೆಂಟ್ ಮೀಟರ್ ಸಂಖ್ಯೆ ನಿಮ್ಮ ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ಇರಬೇಕು ಆದರೆ ಕೆಲವು ಕುಟುಂಬಗಳಲ್ಲಿ ಅದು ಇನ್ನು ತಾತನ ಅಥವಾ ತಂದೆಯ ಹೆಸರಿನಲ್ಲಿಯೇ ಇರುತ್ತದೆ. ಕೆಲವೊಮ್ಮೆ ಪಿತ್ರಾರ್ಜಿತ ಆಸ್ತಿಯಾಗಿ ಮನೆ ಬಂದ ಕಾರಣ ಆ ಮನೆಯು ಈ ಮೊದಲ ತಾತನ ಹೆಸರಿನಲ್ಲಿ ಇದ್ದ ಕಾರಣ ತಾತನಿಂದ ತಂದೆಗೆ ಮನೆಗೆ ಬಂದು ತಂದೆಯಿದ್ದ ಮಗನಿಗೆ ವರ್ಗಾವಣೆ ಆಗಿದ್ದರೂ ಕೂಡ ಕರೆಂಟ್ ಮೀಟರ್ ಸಂಖ್ಯೆಯನ್ನು ಬದಲಿಸುವ ಗೋಜಿಗೆ ಯಾರು ಹೋಗಿರುವುದಿಲ್ಲ.
ನಮ್ಮ ಟೆಲಿಗ್ರಾಂ ಗ್ರೂಪ್ ಗೆ ಸೇರಲು ಇಲ್ಲಿ:–ಇಲ್ಲಿ ಕ್ಲಿಕ್ ಮಾಡಿ
ಇತ್ತೀಚೆಗೆ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ವೇಳೆ ಅನೇಕರು ಈ ಬಗ್ಗೆ ತಲೆ ಕೆಡಿಸಿಕೊಂಡರು ಆದರೂ ಕೂಡ ಸರ್ಕಾರ ಇವರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ತಂದೆ ಅಥವಾ ತಾತ ಜೀವಂತವಾಗಿ ಇಲ್ಲ ಎಂದರೆ ನಂತರದ ತಲೆಮಾರಿನವರು ಅದನ್ನು ವರ್ಗಾವಣೆ ಮಾಡಿಕೊಂಡು ಬರಬೇಕಾದದ್ದು ಕಾನೂನು ಪ್ರಕಾರ ಸರಿಯಾದ ವಿಧಾನ.
ಒಂದು ವೇಳೆ ಈಗ ನೀವು ವಾಸ ಮಾಡುತ್ತಿರುವ ಮನೆಗೆ ನೀವೇ ಮುಖ್ಯಸ್ಥರಾಗಿದ್ದು ಕರೆಂಟ್ ಮೀಟರ್ ಮಾತ್ರ ಮ’ರ’ಣ ಹೊಂದಿರುವ ನಿಮ್ಮ ತಂದೆ ಅಥವಾ ತಾತದ ಹೆಸರಿನಲ್ಲಿ ಇದ್ದರೆ ಈ ಕೂಡಲೇ ತಪ್ಪದೇ ನಾವು ಹೇಳುವ ಈ ವಿಧಾನದ ಮೂಲಕ ಅರ್ಜಿ ಸಲ್ಲಿಸಿ ಇದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ಅದರೊಂದಿಗೆ ಲಗತ್ತಿಸಿ ಆದಷ್ಟು ಬೇಗ ನಿಮ್ಮ ಹೆಸರಿಗೆ ನಿಮ್ಮ ಮನೆಯ ಕರೆಂಟ್ ಮೀಟರ್ ಅನ್ನು ಬದಲಾಯಿಸಿಕೊಳ್ಳಿ. ಯಾಕೆಂದರೆ, ಭವಿಷ್ಯದಲ್ಲಿ ಇದೇ ಆಧಾರದ ಮೇಲೆ ಇನ್ನಷ್ಟು ಯೋಜನೆಗಳು ಬಂದರು ಬರಬಹುದು ಅಥವಾ ಇನ್ಯಾವುದೇ ಅವಶ್ಯಕತೆ ಪರಿಸ್ಥಿತಿ ಉಂಟಾದರೂ ಅನುಮಾನವಿಲ್ಲ.
ಮನೆ ವಿದ್ಯುತ್ ಮೀಟರ್ ಸಂಖ್ಯೆಯನ್ನು ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಕೇಳಲಾಗುವ ಪ್ರಮುಖ ದಾಖಲೆಗಳು:-
● ನಿಮ್ಮ ಮನೆಯ ಕರೆಂಟ್ ಮೀಟರ್ ಸಂಖ್ಯೆ ಅಥವಾ ವಿದ್ಯುತ್ ಬಿಲ್
● ಯಾರ ಹೆಸರಿಗೆ ವರ್ಗಾವಣೆ ಆಗಬೇಕು, ಅವರ ಆಧಾರ್ ಕಾರ್ಡ್
● 200 ರೂ. ಸ್ಟಾಂಪ್ ಪೇಪರ್ ಮೇಲೆ ಬರೆದ ಒಪ್ಪಿಗೆ ಪತ್ರ
● ಮನೆ ಮೀಟರ್ ಸಂಖ್ಯೆ, ನಿಮ್ಮ ತಾತ ಅಥವಾ ತಂದೆ ಹೆಸರಿನಲ್ಲಿ ಈ ಹಿಂದೆ ಇದ್ದು ಅವರೀಗ ಜೀವಂತ ಇಲ್ಲದಿದ್ದರೆ ಅವರ ಮ’ರ’ಣ ಪ್ರಮಾಣ ಪತ್ರ, ಒಂದು ವೇಳೆ ಜೀವಂತ ಇದ್ದರೆ ಅವರಿಂದ ಬರೆಸಿಕೊಂಡ ಒಪ್ಪಿಗೆ ಪತ್ರ.
● ಬೇಕಾಕ ಪತ್ರ
● ಕರೆಂಟ್ ಮೀಟರ್ ಹೆಸರು ವರ್ಗಾವಣೆ ಮಾಡುವಂತೆ ಕಛೇರಿಗೆ ವಿನಂತಿ ಸಲ್ಲಿಸಿ ಬರೆಯುವ ಅರ್ಜಿ.
ಈ ಸುದ್ದಿ ತಪ್ಪದೆ ಓದಿ:- ಪತ್ನಿಯ ಆಸ್ತಿಗಳಾದ ಚಿನ್ನ, ಮನೆ, ಜಮೀನು, ಹಣ ಇದರ ಮೇಲೆ ಗಂಡನಿಗೆ ಹಕ್ಕು ಇದಿಯೋ ಇಲ್ಲವೋ ಕೋರ್ಟ್ ಕೊಟ್ಟ ತೀರ್ಪು ಏನು ನೋಡಿ.!
ಈ ಮೇಲೆ ತಿಳಿಸಿದ ಎಲ್ಲಾ ಅಗತ್ಯ ದಾಖಲೆಗಳ ಜೊತೆಗೆ ಅರ್ಜಿ ಪತ್ರ ಕೂಡ ತೆಗೆದುಕೊಂಡು ಅದರಲ್ಲಿ ಸಹಿ ಮಾಡಿ ಇವುಗಳನ್ನು ಹತ್ತಿರದಲ್ಲಿರುವ ನಿಮ್ಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕೊಡುವ ವಿದ್ಯುತ್ ವಿತರಣ ಕಛೇರಿಗೆ ಸಲ್ಲಿಸಬೇಕು. ಅಲ್ಲಿರುವ ಕಂಪ್ಯೂಟರ್ ಆಪರೇಟರ್ ನಿಮ್ಮ ಅರ್ಜಿ ಪರಿಶೀಲನೆ ನಡೆಸುತ್ತಾರೆ. ನೀವು ಈಗ ಹೆಸರು ಬದಲಾವಣೆ ಮಾಡಿಕೊಳ್ಳಲು ಬಯಸುವುದಾದರೆ ಆ ವಿದ್ಯುತ್ ಮೀಟರ್ ಸಂಖ್ಯೆಯ ಹಳೆಯ ಎಲ್ಲಾ ಬಿಲ್ ಪೂರ್ತಿ ಪಾವತಿಯಾಗಿರಬೇಕು ಎನ್ನುವುದು ನಿಮಗೆ ಗೊತ್ತಿರಬೇಕು.
ಈ ಸುದ್ದಿ ತಪ್ಪದೆ ಓದಿ:- ಬಿತ್ತನೆ ಮಾಡದಿದ್ದರೂ ಬೆಳೆವಿಮೆ ಪರಿಹಾರ ಪಡೆಯಬಹುದು.! ಹೇಗೆ ಗೊತ್ತಾ.?
ಅರ್ಜಿ ಪರಿಶೀಲನೆ ನಡೆಸಿ ಹೊಸದಾಗಿ ಶೇರ್ ಕಟ್ಟಿಸಿಕೊಂಡು ಅನುಮೋದಿಸಿದರೆ ಕಛೇರಿಯಿಂದ ಸಿಬ್ಬಂದಿಗಳು ನಿಮ್ಮ ವಾಸ ಸ್ಥಳಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿ ಕರೆಂಟ್ ಮೀಟರ್ ನಲ್ಲಿ ಹೆಸರು ಬದಲಾವಣೆ ಮಾಡಿಕೊಡುತ್ತಾರೆ. ಈ ರೀತಿಯಾಗಿ ನೀವು ಸುಲಭವಾಗಿ ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿ ಇರುವಂತಹ ವಿದ್ಯುತ್ ಮೀಟರ್ ಅನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಬಹುದಾಗಿದೆ..