ಹಲ್ಲು ನಮ್ಮ ಸೌಂದರ್ಯದ ಸಂಕೇತ, ಜೊತೆಗೆ ನಮ್ಮ ಕಾಂಫಿಡೆನ್ಸ್ ಅನ್ನು ಹೆಚ್ಚಿಸುವ ಭಾಗವೂ ಕೂಡ ಹೌದು ಎನ್ನಬಹುದು. ಯಾಕೆಂದರೆ ಹಲ್ಲು ಓರೆ ಕೋರೆಯಾಗಿ ಇದ್ದರೂ ಕೂಡ ಸಹಿಸಬಹುದು ಆದರೆ ಹಳದಿ ಆಗಿದ್ದರೆ ಅಥವಾ ಹಲ್ಲು ಹಾಳಾಗಿರುವ ಕಾರಣ ಬಾಯಿಯಿಂದ ವಾಸನೆ ಬರುತ್ತಿದ್ದರೆ ಅದು ನಮ್ಮನ್ನು ಎಲ್ಲರೆದುರು ಮುಜುಗರಕ್ಕೀಡು ಮಾಡುತ್ತದೆ.
ಇದರಿಂದ ಈ ರೀತಿ ಸಮಸ್ಯೆ ಇರುವವರು ಮುಕ್ತವಾಗಿ ನಗುವುದಿಲ್ಲ, ಧೈರ್ಯವಾಗಿ ಮಾತನಾಡುವುದು ಇಲ್ಲ, ಈ ಸಮಸ್ಯೆ ಪರಿಹಾರಕ್ಕೆ ಮಾರ್ಕೆಟ್ ಅಲ್ಲಿ ಎಂತಹದೇ ಮೌತ್ ವಾಷರ್ ಅಥವಾ ಟೂತ್ಪೇಸ್ಟ್ಗಳು ಸಿಕ್ಕರೂ ಅದನ್ನು ಬಳಸಿಯೂ ಕೂಡ ಅಷ್ಟೊಂದು ಪ್ರಭಾವಕಾರಿಯಾದ ಫಲಿತಾಂಶ ಸಿಗುವುದು ಅನುಮಾನ. ಇದಕ್ಕೆಲ್ಲ ಹಣ ವ್ಯರ್ಥ ಮಾಡುವ ಬದಲು ಈಗ ನಾವು ಹೇಳುವ ಈ ಮನೆ ಮದ್ದನ್ನು ಟ್ರೈ ಮಾಡಿ ನೋಡಿ ಮೊದಲ ಬಾರಿಗೆ ನಿಮಗೆ ಫಲಿತಾಂಶ ತಿಳಿಯುತ್ತದೆ.
ಹಲ್ಲು ಎಷ್ಟೇ ಹಳದಿ ಆಗಿದ್ದರೂ ಕೂಡ ಅದನ್ನು ಒಂದು ನಿಮಿಷದಲ್ಲಿ ಸರಿ ಮಾಡಬಹುದು ಆದರೆ ಹಳದಿ ಆಗಬಾರದು ಎಂದರೆ ನೀವು ಪ್ರತಿದಿನ ಕೂಡ ದಿನಕ್ಕೆ ಎರಡು ಬಾರಿ ಸರಿಯಾದ ರೀತಿಯಲ್ಲಿ ತಪ್ಪದೇ ಬ್ರಷ್ ಮಾಡಬೇಕು. ದಂತ ವೈದ್ಯರು ಸಲಹೆ ಮಾಡುವ ಟೂತ್ಪೇಸ್ಟ್ ಹಾಗೂ ಟೂತ್ ಬ್ರಷ್ ಗಳನ್ನು ಬಳಸಬೇಕು, ಊಟ ಆದ ಬಳಿಕ ನೀರಿನಿಂದ ಬಾಯಿ ಮುಕ್ಕಳಿಸುವ ಅಭ್ಯಾಸ ಇರಬೇಕು.
ಹೀಗೆಲ್ಲಾ ಮಾಡಿಯೂ ನಿಮ್ಮ ಹಲ್ಲು ಹೊಳೆಯುತ್ತಿಲ್ಲ ಎಂದರೆ ಈ ಉಪಾಯ ಮಾಡಿ. ಒಂದು ENO ಪ್ಯಾಕೆಟ್ ತೆಗೆದುಕೊಳ್ಳಿ, ENO ಪುಡಿಯಿಂದ ನಿಮ್ಮ ಹಲ್ಲುಗಳನ್ನು ನೀಟಾಗಿ ಕ್ಲೀನ್ ಮಾಡಿ. ಟೂತ್ ಬ್ರಷ್ ಸಹಾಯದಿಂದ ಕೂಡ ಮಾಡಬಹುದು. ಬ್ರಷ್ ಅನ್ನು ಒದ್ದೆ ಮಾಡಿ ENO ಪುಡಿ ಎಲ್ಲಾ ಹಲ್ಲುಗಳಿಗೂ ತಾಗುವಂತೆ ಬ್ರಷ್ ಮಾಡಿ ಅಥವಾ ಕೈ ಬೆರಳ ಸಹಾಯದಿಂದ ಕೂಡ ಹಲ್ಲುಗಳನ್ನು ಉಜ್ಜಿ ಬ್ರಷ್ ಮಾಡಿ ಬಳಿಕ ನೀರಿನಿಂದ ವಾಷ್ ಮಾಡಿ.
ಮಕ್ಕಳಿಗೂ ಕೂಡ ಈ ರೀತಿ ಮಾಡಬಹುದು ಆದರೆ ಮಕ್ಕಳು ಇದನ್ನು ನುಂಗದಂತೆ ಎಚ್ಚರಿಕೆ ವಹಿಸಬೇಕು ಅಷ್ಟೇ. ಆಗಾಗ ಈ ರೀತಿ ಮನೆ ಮದ್ದು ಮಾಡಿದರೆ ನಿಮ್ಮ ಹಲ್ಲು ಫಳಫಳ ಹೊಳೆಯುತ್ತದೆ ಮತ್ತು ಇನ್ನೊಂದು ಹಲ್ಲಿನ ಸಮಸ್ಯೆ ಎಂದರೆ ಬಾಯಿಯಿಂದ ವಾಸನೆ ಬರುವುದು. ಹಲ್ಲು ಹಾಳಾದಾಗ ಮಾತ್ರ ಈ ರೀತಿ ಆಗುತ್ತದೆ. ಆಗ ನೀವು ಆ ದುರ್ವಾಸನೆಯನ್ನು ಹೋಗಲಾಡಿಸಬೇಕು ಎಂದರೆ ಶುಂಠಿ ಹಾಗೂ ಲವಂಗ ಮತ್ತು ಉಪ್ಪಿನ ಸಹಾಯ ತೆಗೆದುಕೊಳ್ಳಿ.
ಮೊದಲಿಗೆ ಶುಂಠಿ ಹಾಗೂ ಲವಂಗವನ್ನು ಪುಡಿ ಮಾಡಿ ಒಂದು ಡಬ್ಬಿಯಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳಿ. ಆ ಪುಡಿಗೆ ಸ್ವಲ್ಪ ಉಪ್ಪು ಸೇರಿಸಿ ಕೈ ಬೆರಳಿನಿಂದ ಎಲ್ಲಾ ಹಲ್ಲುಗಳು ತಾಕುವಂತೆ ಚೆನ್ನಾಗಿ ಕನಿಷ್ಠ 2ರಿಂದ 5 ನಿಮಿಷದವರೆಗೆ ಬ್ರಷ್ ಮಾಡಿ ಬಳಿಕ ನೀರಿನಿಂದ ಮುಕ್ಕಳಿಸಿ ಇದನ್ನೂ ಕೂಡ ಮಕ್ಕಳಿಗೆ ಮಾಡಿಸಬಹುದು ಯಾವುದೇ ರೀತಿ ಅಡ್ಡ ಪರಿಣಾಮ ಇರುವುದಿಲ್ಲ.
ಈ ಮನೆ ಮದ್ದನ್ನು ಮಾಡಿದರೆ ಶೀಘ್ರವಾಗಿ ಬಾಯಿಯು ದುರ್ವಾಸನೆ ಹೋಗುತ್ತದೆ. ಹಲ್ಲುಗಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡುವವರು ತಪ್ಪದೆ ಪ್ರತಿ ಆರು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಭೇಟಿ ಮಾಡಿ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.