ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ (Guarantee Schemes) ಮಹಿಳೆಯರದ್ದೇ ಮೇಲುಗೈ. ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆಯ ಬಳಿಕ ಗೃಹಲಕ್ಷ್ಮಿ ಯೋಜನೆ ಕೂಡ ಲಾಂಚ್ ಆಗಿದ್ದು, ಕಳೆದ ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣವನ್ನು ಪಡೆಯುತ್ತಿದ್ದಾರೆ.
ಜುಲೈ 19 ರಿಂದ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಪಡಿತರ ಚೀಟಿ ಹೊಂದಿರುವ ಮತ್ತು ಅದರಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಯರು (head of the family women) ತಮ್ಮ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಕೊಟ್ಟು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದು ಎಂದು ಅನುಮತಿ ನೀಡಿತ್ತು.
ರಾಜ್ಯದ ಈ 7 ಜಿಲ್ಲೆಯವರಿಗೆ ಮನೆ ಕಟ್ಟಲು ಸರ್ಕಾರದ ವತಿಯಿಂದ ಉಚಿತ ಸೈಟ್ ವಿತರಣೆ.!
ಅಂತೆಯೇ ಆಗಸ್ಟ್30ರಂದು ಮೊದಲ ಕಂತಿನ ಹಣ ವರ್ಗಾವಣೆ ಕಾರ್ಯಕ್ರಮಕ್ಕೆ ಚಾಲನೆ ಕೂಡ ನೀಡಿತ್ತು. ಆಗಸ್ಟ್ ಅಂತ್ಯದವರೆಗೆ ಈ ಯೋಜನೆಗೆ 1.10 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಮಂಜೂರಾತಿ ಪತ್ರ ಪಡೆದು ಎಲ್ಲಾ ದಾಖಲೆಗಳು ಸರಿ ಇದ್ದ ಲಕ್ಷಾಂತರ ಮಹಿಳೆಯರು 2000ರೂ. ಹಣ ಸಹಾ ಪಡೆದಿದ್ದಾರೆ.
ಈಗ ಅವರಿಗೆಲ್ಲ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಅದೇನೆಂದರೆ, ಎರಡನೇ ಕಂತಿನ ಹಣವು ಕೂಡ ಬಿಡುಗಡೆಯಾಗುತ್ತಿದೆ. ಈ ಬಾರಿ ಸರ್ಕಾರವು ಹಂತ ಹಂತವಾಗಿ ಜಿಲ್ಲಾವಾರು ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆ ಮಾಡುತ್ತಿದೆ. ಬಳ್ಳಾರಿ, ಬೀದರ್, ರಾಯಚೂರು, ರಾಮನಗರ, ಹಾಸನ, ಬಿಜಾಪುರ, ಕಲ್ಬುರ್ಗಿ, ದಾವಣಗೆರೆ ಈ ಎಂಟು ಜಿಲ್ಲೆಯ ಫಲಾನುಭವಿಗಳ ಖಾತೆಗೆ ಇಂದು ಗೃಹಲಕ್ಷ್ಮಿ ಯೋಜನೆ ಎರಡನೇ ಕಂತಿನ ಹಣ ವರ್ಗಾವಣೆ ಆಗಲಿದೆ.
ಹಾಗೂ ಅಕ್ಟೋಬರ್ 15 ರ ಒಳಗಡೆ ಈಗಾಗಲೇ ಮೊದಲನೇ ಕಂತಿನ ಹಣ ಪಡೆದಿರುವ ಎಲ್ಲಾ ಮಹಿಳೆಯರು ಕೂಡ ಎರಡನೇ ಕಂತಿನ ಹಣವನ್ನು ಪಡೆಯಲಿದ್ದಾರೆ ಮತ್ತು ಹೊಸದಾಗಿ ಯೋಜನೆಗೆ ಅರ್ಜಿ ಸಲ್ವಿಸಿರುವವರು ಮೊದಲನೇ ಕಂತಿನ ಹಣವನ್ನು ಪಡೆದಿದ್ದಾರೆ, ಮೊದಲನೇ ಕಂತಿನ ಹಣ ಪಡೆಯಲಾಗದೆ ದಾಖಲೆಗಳಲ್ಲಿ ಸಮಸ್ಯೆ ಇದ್ದವರು ಅದನ್ನು ಸರಿಪಡಿಸಿಕೊಂಡಿದ್ದರೆ ಅವರು ಎರಡು ಕಂತಿನ ಒಟ್ಟು 4,000ರೂ. ರೂಪಾಯಿ ಹಣ ಪಡೆಯಲಿದ್ದಾರೆ ಎನ್ನುವ ಮಾಹಿತಿಯನ್ನು ಇಲಾಖೆ ಮೂಲಗಳು ತಿಳಿಸಿವೆ.
ಯಾವೆಲ್ಲ ಕಾಣದಿಂದಾಗಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಕೈತಪ್ಪಿದೆ ಎಂದು ನೋಡುವುದಾದರೆ, ● ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child welfare department) ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಬರೋಬ್ಬರಿ 8 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳೇ ಸಮಸ್ಯೆಯಾಗಿವೆ ಎಂದು ತಿಳಿದು ಬಂದಿದೆ.
ಗೃಹಲಕ್ಷ್ಮಿ ಯೋಜನೆ ಹಣ ಇನ್ನು ಬಂದಿಲ್ಲವೇ.? ಈ ಸಣ್ಣ ಕೆಲಸ ಮಾಡಿ ಎರಡು ಕಂತಿನ 4000ರೂ. ಒಟ್ಟಿಗೆ ಬರುತ್ತದೆ.!
ಫಲಾನುಭವಿಗಳ ಖಾತೆಗೆ DBT ಮೂಲಕ ಹಣ ವರ್ಗಾವಣೆ ಮಾಡಲು ಪ್ರಯತ್ನಿಸಿದಾಗ ಮಹಿಳೆಯರ ಬ್ಯಾಂಕ್ ಖಾತೆಗಳು ಇನ್ ಆಕ್ಟಿವ್ (account inactive) ಆಗಿರುವುದು ಖಾತೆಗಳಿಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ (Aadhar Seeding NPCI mapping) ಆಗದೆ ಇರುವುದು, ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ನಲ್ಲಿ ಬೇರೆ ರೀತಿ ಹೆಸರು ಬ್ಯಾಂಕ್ ಪಾಸ್ ಬುಕ್ ವಿವರದಲ್ಲೇ ಬೇರೆ ರೀತಿ ಹೆಸರು ಇರುವುದು ಇತ್ಯಾದಿ ಸಮಸ್ಯೆಗಳಾಗಿವೆ. ಇವುಗಳನ್ನು ಎಲ್ಲ ದಾಖಲೆಯಲ್ಲೂ ಒಂದೇ ಹೆಸರು ಇರುವಂತೆ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
● ಎಲ್ಲಾ ದಾಖಲೆ ಸರಿಯಿದ್ದು ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಎಂದರೆ ಅವರ ರೇಷನ್ ಕಾರ್ಡ್ ಗೆ ಇ-ಕೆವೈಸಿ (e-kyc) ಅಪ್ಡೇಟ್ ಆಗದೆ ಇರುವುದು ಕೂಡ ಒಂದು ಕಾರಣವಿರಬಹುದು. ಹಾಗಾಗಿ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಹಾಗೂ ಅವರ ಬಯೋಮೆಟ್ರಿಕ್ ಮಾಹಿತಿಯನ್ನು ನೀಡುವುದರ ಮೂಲಕ ತಪ್ಪದೆ ರೇಷನ್ ಕಾರ್ಡ್ ಇ-ಕೆವೈಸಿ ಅಪ್ಡೇಟ್ ಮಾಡಿಸಿದರೆ ಅಂತಹ ಫಲಾನುಭವಿಗಳು ಎರಡು ಕಂತಿನ ಹಣವನ್ನು ಒಟ್ಟಿಗೆ ಪಡೆಯಲಿದ್ದಾರೆ.