ಮೊದಲೆಲ್ಲಾ ಮನೆಗಳಲ್ಲಿ ಅಥವಾ ಬ್ಯಾಂಕ್ ಗಳಲ್ಲೂ ಇಟ್ಟ ಹಣ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳು ಕಳ್ಳತನವಾದ ಬಗ್ಗೆ ಸುದ್ದಿ ಕೇಳುತ್ತಿದ್ದೆವು. ದಿನ ಬದಲಾಗುತ್ತಿದ್ದಂತೆ ಇತ್ತೀಚಿನ ಜನರೇಶನ್ ಅಲ್ಲಿ ಮಾಹಿತಿ ಸೋರಿಕೆ ಆಗಿರುವುದು, ಸೈಬರ್ ಕಳ್ಳತನ ಈ ಬಗ್ಗೆ ಹೆಚ್ಚಾಗಿ ಕೇಳುತ್ತಿದ್ದೇವೆ. ಡಿಜಿಟಲ್ ಯುಗದಲ್ಲಿ ಜನರು ಬೆರಳ ತುದಿಯಲ್ಲಿ ಎಲ್ಲಾ ವ್ಯವಹಾರಗಳನ್ನು ಮಾಡಿಕೊಳ್ಳಲು ಆರಂಭಿಸಿದಾಗಲಿಂದ ಈ ಸೈಬರ್ ಕ್ರೈಂ ಎನ್ನುವುದು ಬಗೆಹರಿಯಾದ ದೊಡ್ಡ ಸಮಸ್ಯೆಯಾಗಿ ಸಮಾಜವನ್ನು ಕಾಡುತ್ತಿದೆ.
ಈಗ ಹಣ ಮಾತ್ರ ಅಲ್ಲದೆ ಕಂಟೆಂಟ್ ಕೂಡ ಅಷ್ಟೇ ಬೆಳೆಬಾಳುವ ವಿಷಯವಾಗಿದೆ. ಹಾಗಾಗಿ ಒಬ್ಬರ ವೈಯಕ್ತಿಕ ಮಾಹಿತಿ ಸೋರಿಕೆ ಆದರೆ ಅದು ಸೈಬರ್ ಕಳ್ಳರ ಕೈಗೆ ಸಿಕ್ಕರೆ ಅವರ ಖಾತೆಯಲ್ಲಿರುವ ಹಣಕ್ಕೆ ಕನ್ನ ಬೀಳುವುದರ ಜೊತೆಗೆ ಅವರಿಗೆ ಅರಿವಾಗದಂತೆ ಅನೇಕ ಅಪರಾಧಿ ಪ್ರಕರಣಗಳಲ್ಲಿ ಅವರು ಸಿಕ್ಕಿಹಾಕಿಕೊಳ್ಳಬಹುದು. ಇದನ್ನು ಸ್ಪಷ್ಟ ಉದಾಹರಣೆಯೊಂದಿಗೆ ಹೇಳಬೇಕು ಎಂದರೆ ಆಧಾರ್ ಕಾರ್ಡ್ ಎನ್ನುವುದು ಈಗ ಸಿಮ್ ಕಾರ್ಡ್ ಖರೀದಿಸುವುದರಿಂದ ಹಿಡಿದು ಬ್ಯಾಂಕಿಂಗ್ ಕ್ಷೇತ್ರದ ವಹಿವಾಟನವರಿಗೆ ಅನೇಕ ಕೆಲಸಗಳಿಗೆ ಬೇಕು.
ಈಗ ನಿಮ್ಮ ಆಧಾರ್ ಕಾರ್ಡ್ ಹಾಗೂ ಅದರಲ್ಲಿರುವ ಮಾಹಿತಿ ತಪ್ಪಾಗಿ ಬೇರೆಯವರ ಕೈಗೆ ಸಿಕ್ಕರೆ ಅವರು ಅದನ್ನು ಉಪಯೋಗಿಸಿಕೊಂಡು ಆ ಐಡೆಂಟಿಟಿಯಿಂದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ನಿಮ್ಮ ಮೇಲೆ ಆ ಹೊರೆ ಬೀಳುವಂತೆ ಮಾಡಬಹುದು. ಹಾಗಾಗಿ ಇಂತಹ ಅಪಾಯಗಳಿಂದ ದೂರ ಇರಬೇಕಾದರೆ ಅದಕ್ಕಾಗಿ ನಿಮ್ಮ ಆಧಾರ್ ಕಾರ್ಡ್ ಬೇರೆಯವರಿಗೆ ಸಿಗದಂತೆ ನೋಡಿಕೊಳ್ಳಿ ಮತ್ತು ಆಧಾರ್ ಕಾರ್ಡ್ ವಿಷಯವಾಗಿ ಜಾಗೃತರಾಗಿರಲು ಇವುಗಳನ್ನು ಪಾಲಿಸಿ.
● ಯಾವುದಾದರೂ ಸಮಯದಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಮತ್ತೊಮ್ಮೆ ಡೌನ್ಲೋಡ್ ಮಾಡಿಕೊಳಬೇಕಾದ ಸಂದರ್ಭ ಬಂದರೆ ಕಚೇರಿಗಳಲ್ಲಿ ಅಥವಾ ಸ್ನೇಹಿತರ ಕಂಪ್ಯೂಟರ್ ಅಥವಾ ಮೊಬೈಲ್ ಅಥವಾ ಸೈಬರ್ ಸೆಂಟರ್ ಗಳಲ್ಲಿ ಹೋಗಿ ಡೌನ್ಲೋಡ್ ಮಾಡಿಕೊಂಡು ಬರುವುದು ಮಾಮೂಲಿ ಆದರೆ ನಿಮ್ಮ ಇ-ಆಧಾರ್ ಕಾರ್ಡ್ ಮಾಹಿತಿ ಅದರಲ್ಲಿ ಸ್ಟೋರ್ ಆಗಿ ಇರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ರೀತಿ ಮಾಡಬೇಡಿ. ಇದರಿಂದ ನಿಮ್ಮ ಈ ಆಧಾರ್ ಮಾಹಿತಿ ಸೋರಿಕೆ ಆಗುತ್ತದೆ ನಿಮ್ಮ ಪರ್ಸನಲ್ ಕಂಪ್ಯೂಟರ್ ಅಥವಾ ಮೊಬೈಲ್ ಇಂದ ಮಾತ್ರ ಡೌನ್ಲೋಡ್ ಮಾಡಿಕೊಳ್ಳಿ.
● ನಿಮ್ಮ ಒರಿಜಿನಲ್ ಆಧಾರ್ ಕಾರ್ಡನ್ನು ಯಾವುದೇ ಕಾರಣಕ್ಕೂ ಯಾರಿಗೂ ಅನುವಶ್ಯಕವಾಗಿ ನೀಡಬೇಡಿ ಯಾರಾದರೂ ಕೇಳಿದರು ಕೂಡ ಅದರ ಪೂರ್ವಾಪರ ಪ್ರಶ್ನಿಸಿ ತಿಳಿದುಕೊಳ್ಳಿ. ಕೆಲವು ಅಗತ್ಯ ಸಂದರ್ಭಗಳಲ್ಲಿ ಕೊಡಲೇಬೇಕಾದ ಪರಿಸ್ಥಿತಿ ಬಂದರೆ ಆಧಾರ್ ಕಾರ್ಡ್ ಕಾರ್ಡ್ ಜೆರಾಕ್ಸ್ ಮಾತ್ರ ನೀಡಿ.
● ಆಧಾರ್ ಕಾರ್ಡ್ ಜೆರಾಕ್ಸ್ ನೀಡುವ ಸಮಯ ಬಂದಾಗ ನೀವು ಯಾವ ಉದ್ದೇಶಕ್ಕಾಗಿ ಆಧಾರ್ ಕಾರ್ಡ್ ಜೆರಾಕ್ಸ್ ನೀಡುತ್ತಿದ್ದೀರಾ ಎನ್ನುವುದನ್ನು ಅದರ ಮೇಲೆ ಬರೆದು ಕೊಡುವುದರಿಂದ ಕೂಡ ಅದು ಆ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಉಪಯೋಗ ಆಗದಂತೆ ತಡೆಯಬಹುದು ಕೆಲವರು ಸುಳ್ಳು ಹೇಳಿ ಆಧಾರ್ ಪ್ರತಿ ಪಡೆದಿದ್ದರೂ ಕೂಡ ಅದನ್ನು ಅವರ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
● ಎಲ್ಲೂ ಕೂಡ ಅಪರಿಚಿತ ವ್ಯಕ್ತಿಗಳ ಜೊತೆ ನಿಮ್ಮ ಆಧಾರ್ ಸಂಖ್ಯೆ ಅಥವಾ ಅದಕ್ಕೆ ಬರುವ OTP ಅಥವಾ ಅದರಲ್ಲಿರುವ ವಿವರಗಳನ್ನು ಹಂಚಿಕೊಳ್ಳಬೇಡಿ ನಿಮಗಾಗುವ ನ’ಷ್ಟವನ್ನು ತಪ್ಪಿಸಬಹುದು.