ಬ್ಯಾಂಕ್ ಖಾತೆ ಇದ್ದವರಿಗೆ ಮಾತ್ರ ಹೆಚ್ಚುವರಿ ಅಕ್ಕಿಯ ಹಣ ಜಮೆ ಆಗುತ್ತೆ.! ಬ್ಯಾಂಕ್ ಖಾತೆ ಇಲ್ಲದವರು ಏನೂ ಮಾಡಬೇಕು.? ಇಲ್ಲಿದೆ ನೋಡಿ ನಿಮ್ಮ ಸಮಸ್ಯೆಗೆ ಪರಿಹಾರ.!

 

ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆ ಅನ್ನ ಭಾಗ್ಯ ಯೋಜನೆಗೆ ಸಾಕಷ್ಟು ಶ್ರಮಿಸಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ಸದಸ್ಯನಿಗೆ 10Kg ಪಡಿತ ನೀಡುವುದಾಗಿ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಕಾರಣ ಅದರ ಜಾರಿಗಾಗಿ ಸರ್ಕಾರ ಅಕ್ಕಿ ಖರೀದಿಗೆ ಸಾಕಷ್ಟು ಓಡಾಟ ನಡೆಸಿದೆ.

ಆದರೂ ದಾಸ್ತಾನು ಲಭ್ಯವಾಗದ ಕಾರಣ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಅಕ್ಕಿ ಬದಲು ಹಣ ನೀಡಲು ಮುಂದಾಗಿದೆ. ಅಕ್ಕಿ ದಾಸ್ತಾನು ಲಭ್ಯವಾಗುವವರೆಗೂ ಕೂಡ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ಮತ್ತು 170ಗಳನ್ನು ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಜುಲೈ ತಿಂಗಳಿನಿಂದಲೇ ಈ ಹೆಚ್ಚುವರಿ ಅಕ್ಕಿಯ ಧನಭಾಗ್ಯ ಫಲಾನುಭವಿಗಳಿಗೆ ಲಭಿಸುತ್ತಿದೆ.

ಅಂದರೆ ಪಡಿತರ ಚೀಟಿಯಲ್ಲಿ ಮೊದಲನೇ ಪೇಜ್ ಅಲ್ಲಿ ಯಾರ ಹೆಸರು ಇರುತ್ತದೋ ಅವರನ್ನೇ ಕುಟುಂಬದ ಮುಖ್ಯಸ್ಥರು ಎಂದು ಗುರುತಿಸಿ, ಅವರ ಖಾತೆಗೆ ಕುಟುಂಬದ ಎಲ್ಲಾ ಸದಸ್ಯರ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ. ಜುಲೈ 10ರಂದು ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಈ ಹಣ ವರ್ಗಾವಣೆಗೆ ಚಾಲನೆ ಕೊಟ್ಟಿದ್ದಾರೆ.

ಕುಟುಂಬದ ಮುಖ್ಯಸ್ಥನ ಖಾತೆಗೆ DBT ಮೂಲಕ ಹಣ ವರ್ಗಾವಣೆ ಆಗುತ್ತದೆ ಎಂದು ತಿಳಿಸಲಾಗಿತ್ತು. ಈಗ ಅದನ್ನು ಆಹಾರ ಇಲಾಖೆ ವೆಬ್ಸೈಟ್ ಗೆ ಹೋಗಿ ಸ್ಟೇಟಸ್ ಕೂಡ ಚೆಕ್ ಮಾಡಿ ನೋಡಬಹುದು. ನಿಮ್ಮ ಪಡಿತರ ಚೀಟಿ ಸಂಖ್ಯೆ ಹಾಕಿ ಪರಿಶೀಲಿಸಿದರೆ ನಿಮ್ಮ ಕುಟುಂಬದ ಯಾವ ಸದಸ್ಯನ ಖಾತೆಗೆ ಹಣ ಹೋಗುತ್ತಿದೆ, ಎಷ್ಟು Kg ಅಕ್ಕಿ ಹಣಕ್ಕೆ ಅರ್ಹವಾಗಿದ್ದಾರೆ, ಎಷ್ಟು ಹಣ ಜಮೆ ಆಗಿದೆ ಇನ್ನು ಮುಂತಾದ ಎಲ್ಲಾ ಮಾಹಿತಿಯು ಕೂಡ ಬರುತ್ತದೆ.

ಒಂದು ವೇಳೆ ಈ ರೀತಿ ಬಂದಿಲ್ಲ ಎಂದರೆ ನಿಮ್ಮ ಕುಟುಂಬದ ಮುಖ್ಯಸ್ಥರ ಮಾಹಿತಿ ಲಭ್ಯವಾಗಿಲ್ಲ ಅಥವಾ ತಪ್ಪಾಗಿದೆ ಎಂದು ಅರ್ಥ, ಇದಕ್ಕೆ ಸಾಕಷ್ಟು ಕಾರಣಗಳಿವೆ. ಕೆಲವು ಕಾರ್ಡುಗಳಲ್ಲಿ ಮುಖ್ಯಸ್ಥರಿಗೆ ಬ್ಯಾಂಕ್ ಖಾತೆಗೆ ಇಲ್ಲವಾದ ಪಕ್ಷದಲ್ಲಿ ಬೇರೆ ಸದಸ್ಯರ ಖಾತೆಗೆ ಹಣ ವರ್ಗಾವಣೆ ಮಾಡುವ ಪ್ರಯತ್ನ ಮಾಡಲಾಗಿದೆ ಆದರೆ ಒಬ್ಬರೇ ಸದಸ್ಯರು ಅಥವಾ ಇಬ್ಬರು ಸದಸ್ಯರಿರುವವರಲ್ಲಿ ಇಬ್ಬರು ಕೂಡ ಬ್ಯಾಂಕ್ ಖಾತೆ ಹೊಂದಿಲ್ಲ ಎಂದರೆ ಅವರಿಗೆ ಹೆಚ್ಚುವರಿ ಅಕ್ಕಿ ಹಣದಿಂದ ವಂ’ಚಿ’ತರಾಗುತ್ತಿದ್ದಾರೆ.

ಯಾವುದೇ ರಾಷ್ಟ್ರೀಕೃದ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಖಾತೆ ಹೊಂದಿದ್ದರು ಕೂಡ ಅವರಿಗೂ ಹಣ ವರ್ಗಾವಣೆ ಮಾಡಲಾಗುತ್ತಿದೆ ಆದರೆ ಅವರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು ಮತ್ತು NPCI ಮ್ಯಾಪಿಂಗ್ ಆಗಿರಬೇಕು. ಇದರ ಜೊತೆಗೆ KYC ಅಪ್ಡೇಟ್ ಕೂಡ ಆಗಿರಬೇಕು. ಹೀಗಿದ್ದಲ್ಲಿ ಮಾತ್ರ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.

ಇಲ್ಲವಾದಲ್ಲಿ ಅವರು ಈ ಪ್ರಕ್ರಿಯೆಗಳನ್ನು ಪೂರೈಸಬೇಕು. ಎಷ್ಟು ಬೇಗ ಅವರು ಈ ರೀತಿ ಬ್ಯಾಂಕ್ ಖಾತೆಗೆ ತೆರೆದು, ಆಧಾರ್ ಕಾರ್ಡ್ ಸೀಡಿಂಗ್ ಮಾಡಿ, NPCI ಮ್ಯಾಪಿಂಗ್ ಮಾಡಿ KYC ಅಪ್ಡೇಟ್ ಮಾಡಿಸುತ್ತಾರೋ ಅದರ ಮುಂದಿನ ತಿಂಗಳಿನಿಂದ ಅವರು ಹೆಚ್ಚುವರಿ ಅಕ್ಕಿಯ ಹಣ ಪಡೆಯಲು ಅರ್ಹರಾಗುತ್ತಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜೊತೆಗೆ ಪ್ರತಿ ನ್ಯಾಯಬೆಲೆ ಅಂಗಡಿಯಲ್ಲೂ ಕೂಡ ಬ್ಯಾಂಕ್ ಖಾತೆ ಲಿಂಕ್ ಆಗದವರ ಹೆಸರಿನ ಪಟ್ಟಿಯನ್ನು ನೋಟಿಸ್ ಬೋರ್ಡ್ ಅಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಆದೇಶ ನೀಡಿರುವುದಾಗಿ ಮಾಹಿತಿ ತಿಳಿದು ಬಂದಿದೆ.

ಅವರಿಗೆ ಬ್ಯಾಂಕ್‌ ಖಾತೆ ಮಾಡಿಸಲು ಅಥವಾ ಸಕ್ರಿಯಗೊಳಿಸಲು ಅಥವಾ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಸಲು ನ್ಯಾಯ ಬೆಲೆ ಅಂಗಡಿ ಸಿಬ್ಬಂದಿ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ ಇದರ ಜೊತೆ ಮತ್ತೊಂದು ಮುಖ್ಯವಾದ ವಿಷಯ ಏನೆಂದರೆ ಕಳೆದ ಮೂರು ತಿಂಗಳಿಂದ ಯಾರು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪಡೆದಿಲ್ಲ ಅವರೂ ಸಹ ಈ ಹೆಚ್ಚುವರಿ ಅಕ್ಕಿ ಹಣ ಪಡೆಯಲು ಅರ್ಹರಾಗಿರುವುದಿಲ್ಲ.

Leave a Comment

%d bloggers like this: