ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ… ಇಲ್ಲದಿದ್ರೆ ನಿಮಗೆ ನಷ್ಟ..!

 

ಆಸ್ತಿಯಲ್ಲಿ ನಾವು ಕೂಡ ಹಕ್ಕು ಹೊಂದಿರಬೇಕು ಅಂತಾ ಹೆಣ್ಣು ಮಕ್ಕಳೂ ಆಸೆ ಇಟ್ಕೊಂಡಿರ್ತಾರೆ. ಆದ್ರೆ, ಹೆಣ್ಮಕ್ಳುಗೆ ನಿಜವಾಗಿ ಯಾವ ಆಸ್ತಿಯಲ್ಲಿ ಹಕ್ಕಿದೆ ಎಂಬುದನ್ನ ತಿಳ್ಕೊಳೋದು ತುಂಬಾ ಮುಖ್ಯ. ಇಲ್ಲಿ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಆಸ್ತಿ ಕೇಳುವ ಮುನ್ನ ಈ ಲೇಖನದಲ್ಲಿ ತಿಳಿಸಲಾಗಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ….

ತಂದೆಗೆ ಪಿತ್ರಾರ್ಜಿತವಾಗಿ ಆಸ್ತಿ ಬಂದಿರುತ್ತದೆ. ಅಂದ್ರೆ, ತಾತನ ಮರಣದ ನಂತರ ಪೌತಿ ಖಾತೆಯಿಂದ ಅಜ್ಜಿ ಹಾಗೂ ಅವರ ಮಕ್ಕಳಿಗೆ ಆಸ್ತಿ ಬಂದಿರುತ್ತದೆ. ಅಜ್ಜಿಯ ಮರಣದ ನಂತರ ಕೂಡ ಮಕ್ಕಳೆಲ್ಲ ಸೇರಿ ಪಾರ್ಟಿಷನ್ ಮಾಡಿಕೊಂಡು ಅವರವರ ಆಸ್ತಿಯನ್ನು ಅನುಭವಿಸುತ್ತಾ ಇರುತ್ತಾರೆ. ಆಗ ನಿಮ್ಮ ತಂದೆಗೆ ಬಂದಿರುವಂತಹ ಪಾಲಿನಲ್ಲಿ ಮಕ್ಕಳೆಲ್ಲರೂ ಕೂಡ ಹಕ್ಕುದಾರರಾಗಿರುತ್ತಾರೆ.

ಮದುವೆಯಾದ ಹೆಣ್ಣು ಮಕ್ಕಳು ಕೂಡ ಹಕ್ಕುದಾರರಾಗಿರುತ್ತಾರೆ. ತಂದೆಯು ತಾನು ಗಂಡು ಮಕ್ಕಳಿಗೆ ಮಾತ್ರ ಆಸ್ತಿಯನ್ನು ಕೊಡ್ತೀನಿ ಹೆಣ್ಣುಮಕ್ಕಳಿಗೆ ಕೊಡಲ್ಲ ಅನ್ನೋದಕ್ಕೆ ಬರೋದಿಲ್ಲ. ಯಾಕೆಂದರೆ, ಎಲ್ಲಾ ಮಕ್ಕಳು ಕೂಡ ಆಸ್ತಿಗೆ ಹಕ್ಕುದಾರರಾಗಿರುತ್ತಾರೆ. ಎಲ್ಲ ಮಕ್ಕಳಿಗೂ ಹಕ್ಕು ಇದ್ದೇ ಇರುತ್ತದೆ. ತಂದೆಯ ಜೀವಿತಾವಧಿಯಲ್ಲಿಯೂ ಕೂಡ ಹಕ್ಕನ್ನ ಪಡಿಬಹುದು.

ಆದ್ರೆ, ಎಲ್ಲಾ ಕೇಸ್ ಗಳಲ್ಲಿಯೂ ಹೀಗೆ ಇರುವುದಿಲ್ಲ. ಮದುವೆಯಾದ ಹೆಣ್ಣು ಮಗಳು ಯಾರದೋ ಮಾತು ಕೇಳಿಕೊಂಡು ತಂದೆ ಬದುಕಿದ್ದಾಗಲೇ ಆಸ್ತಿಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳದೇ ಆಸ್ತಿ ಹಕ್ಕು ಕೇಳಲು ಸಾಧ್ಯವಿಲ್ಲ. ಯಾಕಂದ್ರೆ, ಅದು
ಅವರ ತಂದೆಯ ಸ್ವಯಾರ್ಜಿತ ಆಸ್ತಿ ಆಗಿರುತ್ತದೆ.

ತಂದೆ ಬದುಕಿದ್ದಾಗಲೇ ತನ್ನ ಆಸ್ತಿಯನ್ನು ತನ್ನ ಒಬ್ಬ ಮಗನಿಗೆ ದಾನ ಪತ್ರದ ಮೂಲಕ ಆಸ್ತಿಯನ್ನು ವರ್ಗಾವಣೆ ಮಾಡಿರುತ್ತಾರೆ. ಹಾಗಾಗಿ, ನಿಮ್ಮ ತಂದೆ ಅದಕ್ಕೆ ಹಕ್ಕುದಾರರಾಗಿರುತ್ತಾರೆ. ಅಂದ್ರೆ ನಿಮ್ಮ ತಂದೆಗೆ ಬಂದಿರುವ ಆಸ್ತಿ ಪಿತ್ರಾರ್ಜಿತ ಆಸ್ತಿಯಾಗಿದ್ದು ಅವರ ತಂದೆಯ ಮರಣದ ನಂತರ ಬಂದಿರುವ ಆಸ್ತಿ ಆಗಿರುವುದಿಲ್ಲ. ಬದಲಿಗೆ ಅವರ ತಂದೆ ಬದುಕಿದ್ದಾಗಲೇ ತನ್ನ ಮಗನಿಗೆ ಪ್ರೀತಿಯಿಂದ ಕೊಟ್ಟ, ದಾನವಾಗಿ ಕೊಟ್ಟ ಆಸ್ತಿ ಆಗಿರುತ್ತದೆ.

ಈ ಮಾಹಿತಿಯನ್ನು ನೀವು ತಿಳಿದುಕೊಳ್ಳದೇ ನಿಮ್ಮ ತಂದೆ ಬಳಿ ಹೋಗಿ ಆಸ್ತಿ ಹಕ್ಕನ್ನು ಕೇಳಿದರೆ, ಅವರು ಇದನ್ನು ನಿರಾಕರಿಸುತ್ತಾರೆ. ತಂದೆಯ ಅವಧಿ ಮುಗಿದ ನಂತರ, ತನ್ನೆಲ್ಲ ಮಕ್ಕಳು ತನ್ನ ಆಸ್ತಿಯನ್ನು ಸಮಪಾಲು ಮಾಡಿಕೊಳ್ಳಲಿ ಅನ್ಕೊಂಡಿದ್ರೂ ಕೂಡ ನೀವು ಹಕ್ಕನ್ನು ಕೇಳೋದ್ರಿಂದ ಮನಸ್ಸಿಗೆ ಬೇಜಾರಾಗಿ ತನ್ನ ಆಸ್ತಿ ಹಕ್ಕನ್ನು ಉಳಿದ ಮಕ್ಕಳಿಗೆ ಹಂಚುವ ಸಂದರ್ಭ ಬರಬಹುದು…

ಹಾಗಾಗಿ, ನಿಮ್ಮ ತಂದೆ ಜೀವಂತವಾಗಿದ್ದಾಗ ಆಸ್ತಿ ಹಕ್ಕನ್ನು ಕೇಳುವಾಗ ನಿಮ್ಮ ತಂದೆಗೆ ಯಾವ ರೀತಿಯಾಗಿ ಆಸ್ತಿ ಬಂದಿದೆ, ದಾನ ಪತ್ರದಿಂದ ಆಸ್ತಿ ವರ್ಗಾವಣೆಯಾಗಿದೆಯಾ ಅಥವಾ ವಿಲ್ ಡಿಡ್ ಮೂಲಕ ಆಸ್ತಿ ವರ್ಗಾವಣೆಯಾಗಿದೆಯಾ ಅಥವಾ ಪಾರ್ಟಿಷಿಯನ್ ಮೂಲಕ ಆಸ್ತಿ ವರ್ಗಾವಣೆಯಾಗಿದೆಯಾ? ಎಲ್ಲವನ್ನು ತಿಳಿದು ಮುಂದುವರೆಯುವುದು ಒಳ್ಳೆಯದು.

ಈಗ ನಿಮ್ಮ ತಂದೆಗೆ ಅವರ ತಾಯಿ ಅಂದ್ರೆ ನಿಮ್ಮ ಅಜ್ಜಿ ಅವರ ತವರು ಮನೆಯಿಂದ ಪಡೆದ ಆಸ್ತಿಯನ್ನು ಮಗನಿಗೆ ದಾನ ಪತ್ರದ ಮೂಲಕ ಕೊಟ್ಟಿರುತ್ತಾರೆ. ಈ ಆಸ್ತಿನ್ನೂ ನೀವು ಕೇಳಿದ್ರೆ, ನಿಮಗೆ ಮುಂದೆ ಸಿಗುವ ಹಕ್ಕನ್ನು ಕಳೆದುಕೊಳ್ಳುವ ಸಂದರ್ಭ ಬರಬಹುದು. ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹಕ್ಕನ್ನು ಕೇಳಲು ನಮಗೆ ಬರುವುದಿಲ್ಲ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಇದೆಲ್ಲವನ್ನು ತಿಳಿದ ನಂತರ ನಿಮ್ಮ ಪಾಲನ್ನು ಕೇಳಲು ಮುಂದುವರೆಯುವುದು ಒಳ್ಳೆಯದು. ಆದಷ್ಟು ನಿಮ್ಮ ತಂದೆ-ತಾಯಿ ಬದುಕಿದ್ದಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಅವರ ಅವಧಿ ಮುಗಿದ ಮೇಲೆ ಅವರ ಆಸ್ತಿಯನ್ನು ಸಮಪಾಲು ಮಾಡಿಕೊಂಡು ಒಳ್ಳೆಯ ರೀತಿಯಿಂದ, ಪ್ರೀತಿ ಭಾವದಿಂದ ಬದುಕಿದರೆ ಕುಟುಂಬಗಳ ವಿವಾದ ಸೃಷ್ಟಿಯಾಗುವುದಿಲ್ಲ.

 

Leave a Comment

%d bloggers like this: