ವಾಹನಗಳನ್ನು ಖರೀದಿಸುವುದೇ ಒಂದು ದುಬಾರಿ ವಿಷಯ. ಆದರೆ ನಂತರ ಅದಕ್ಕೆ ಹಾಕಿಸುವ ಪೆಟ್ರೋಲ್ ಬೆಲೆ ಈಗ ಅದಕ್ಕಿಂತಲೂ ದುಬಾರಿಯಾಗಿ ಹೊರೆ ಆಗುತ್ತಿದೆ. ಸದ್ಯಕ್ಕೆ ಒಂದು ಲೀಟರ್ ಪೆಟ್ರೋಲ್ ಗೆ ಸ್ಕೂಟರ್ ಗಳಲ್ಲಿ 35 ರಿಂದ 40 ಕಿಲೋಮೀಟರ್ ಮೈಲೇಜ್ ಬಂದರೆ ಹೆಚ್ಚು. ಇದೇ ಕಾರಣಕ್ಕಾಗಿ ಇತ್ತೀಚಿಗೆ ಹೆಚ್ಚು ಜನರು ಇವಿ ಗಾಡಿಗಳ ಮೊರೆ ಹೋಗುತ್ತಿದ್ದಾರೆ ಆದರೆ ಈ ರೀತಿ ಎಲೆಕ್ಟ್ರಿಕಲ್ ಗಾಡಿಗಳನ್ನು ಖರೀದಿಸುವುದು ಕೂಡ ಅಷ್ಟು ಸಲೀಸಾಗಿಲ್ಲ.
ಅದಕ್ಕೂ ಕನಿಷ್ಠ ಒಂದುವರೆ ಲಕ್ಷವಾದರೂ ಹಣ ಬೇಕೇ ಬೇಕು. ಹಾಗಾಗಿ ಈಗಾಗಲೇ ಸ್ಕೂಟರ್ ಹೊಂದಿರುವವರು ಮತ್ತೊಮ್ಮೆ ಇದಕ್ಕೆ ಬಂಡವಾಳ ಹಾಕುವುದಾದರೆ ಅದು ಕೂಡ ಖ’ರ್ಚು ಹೆಚ್ಚಾದಂತೆ. ಇರುವುದರಲ್ಲೇ ಪೆಟ್ರೋಲ್ ಕಡಿಮೆ ತೆಗೆದುಕೊಂಡು ಮೈಲೇಜ್ ಜಾಸ್ತಿ ಕೊಡುವ ಏನಾದರೂ ಬದಲಿ ವ್ಯವಸ್ಥೆ ಸಿಕ್ಕರೆ ಎಂಬ ಆಲೋಚನೆ ಅವರಲ್ಲಿ ಮೂಡಿರುತ್ತದೆ.
ನಿಮಗೂ ಕೂಡ ಹೀಗೆ ಅನಿಸಿದರೆ ಇಂದು ನಾವು ಹೇಳುತ್ತಿರುವ ಮಾಹಿತಿಯು ನಿಮಗೆ ಬಹಳ ಅನುಕೂಲಕರವಾಗಿರುತ್ತದೆ. ಹಾಗಾಗಿ ತಪ್ಪದೆ ಈ ಅಂಕಣವನ್ನು ಪೂರ್ತಿಯಾಗಿ ಓದಿ. ನೀವು ನಿಮ್ಮ ಬಳಿ ಇರುವ ಸ್ಕೂಟರ್ ಅನ್ನು ಪೆಟ್ರೋಲ್ ಬದಲಿಗೆ CNG ಆಗಿ ಕನ್ವರ್ಟ್ ಮಾಡಿಕೊಂಡರೆ ನೀವು ಪೆಟ್ರೋಲ್ ಹಾಕಿಸುವ ಹಣದಲ್ಲಿ ಅದರ ಮೂರು ಪಟ್ಟು ಮೈಲೇಜ್ ಪಡೆಯಬಹುದು.
ಅಂದರೆ ಈಗ ಒಂದು ಲೀಟರ್ ಪೆಟ್ರೋಲ್ 103 ರೂಪಾಯಿ ಇದೆ. ನೀವು ಇದೆ 103 ರೂಪಾಯಿ CNG ಫಿಲ ಮಾಡಿಸಿದರೆ 100 ರಿಂದ 120 ಕಿಲೋಮೀಟರ್ ವರೆಗೆ ಮೈಲೇಜ್ ಪಡೆಯಬಹುದು. ಇದ ಸಾಧ್ಯವೇ ಎನ್ನುವ ಅನುಮಾನ ಇದ್ದರೆ ಸರ್ಕಾರದಿಂದ ಸರ್ಟಿಫೈಟ್ ಪಡೆದಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಯುನಿಟಿ ಮೋಟರ್ಸ್ ಭೇಟಿ ಕೊಡಿ ನೀವು ಇದನ್ನು ಪ್ರತ್ಯಕ್ಷವಾಗಿ ಕಂಡು ಹೆಚ್ಚಿನ ಮಾಹಿತಿ ಪಡೆಯಬಹುದು.
ಇವರು ಸ್ಕೂಟರ್ ಮತ್ತು ಕಾರ್ ಗಳಿಗೆ ಮಾತ್ರ ಈ ರೀತಿ CNG ಟ್ರಾಂಕ್ ಫಿಟ್ ಮಾಡಿಕೊಡುತ್ತಾರೆ. ಸ್ಕೂಟರ್ ಗಳಿಗೆ 1.5Kg ಹಿಡಿಯುವ ಎರಡು ಟ್ಯಾಂಕ್ ಫಿಟ್ ಮಾಡಿಕೊಡುತ್ತಾರೆ. ಕಾರುಗಳಿಗೆ 10Kg ಕೆಪಾಸಿಟಿಯ CNG ಟ್ಯಾಂಕ್ ಫಿಟ್ ಮಾಡಿಕೊಡುತ್ತಾರೆ. ಇದಕ್ಕೆ ಸ್ಟೀಲ್ ಪ್ರೆಶರ್ ಪೈಪ್ ಇಂದ ಕನೆಕ್ಟ್ ಮಾಡುವುದರಿಂದ, ಈ ಸಿಲಿಂಡರ್ ಗಳನ್ನು 50mm – 55mm ಥಿಕ್ನೆಸ್ ಮೆಟಲ್ ಇಂದ ಮಾಡಿರುವುದರಿಂದ
ಲೀಕ್ ಆಗುವ ಭಯವೇ ಇಲ್ಲ.
ಜೊತೆಗೆ CNG ಫಿಲ್ಲಿಂಗ್ ಮಾಡಿಸುವುದು ಕೂಡ ಈಗ ಬಹಳ ಸುಲಭ, ಪೆಟ್ರೋಲ್ ಬಂಕ್ ಅಂತೆಯೇ ಅನೇಕ ಕಡೆ ಈ ರೀತಿ CNG ಫಿಲ್ಲಿಂಗ್ ಕೂಡ ಮಾಡಿಕೊಡುತ್ತಾರೆ. ಪೆಟ್ರೋಲ್ ಕ’ಳ್ಳ’ತ’ನ ಮಾಡುತ್ತಾರೆ, ಫೀಲ್ಲಿಂಗ್ ಮಾಡುವಾಗ ಮೋ’ಸ ಮಾಡುತ್ತಾರೆ ಎನ್ನುವ ಸಮಸ್ಯೆಯೂ ಇಲ್ಲ, ಇದು ಇಕೋ ಫ್ರೆಂಡ್ಲಿ ಆಗಿರುತ್ತದೆ ನವೀಕರಿಸುವ ಇಂಧನ ಮೂಲ ಕೂಡ ಹೌದು.
ನಿಮ್ಮ ಸ್ಕೂಟರ್ ಗೆ ಇದನ್ನು ಫಿಟ್ ಮಾಡಿಸಿಕೊಂಡರೆ ಮೋಲ್ಡ್ ಬಾಕ್ಸ್ ಇಂದ ಕವರ್ ಮಾಡಿಕೊಡುತ್ತಾರೆ. ಇದರಿಂದ ಸ್ಕೂಟರ್ ಲುಕ್ ಕೂಡ ಹಾಳಾಗುವುದಿಲ್ಲ ಇನ್ನು ಮುಂತಾದ ಹತ್ತು ಹಲವು ಕಾರಣಗಳು ಇದಕ್ಕೆ ಸಿಗುತ್ತದೆ. ನೀವು ನಿಮ್ಮ ಸ್ಕೂಟರ್ ಗೆ ಇದನ್ನು ಫಿಟ್ ಮಾಡಿಸುವುದಾದರೆ 24,000 ಚಾರ್ಜ್ ತೆಗೆದುಕೊಳ್ಳುತ್ತಾರೆ.
ಒಮ್ಮೆ ಫಿಟ್ ಮಾಡಿದರೆ ಸಾಕು ಬರಿ CNG ಗ್ಯಾಸ್ ಫಿಲ್ ಮಾಡಿಸಿಕೊಂಡು ರನ್ ಮಾಡಬಹುದು. ಮುಂದೆ ಯಾವಾಗಾದರೂ ನೀವು ಪೆಟ್ರೋಲ್ ಬಳಸುತ್ತೇವೆ ಎಂದರೆ ಅದಕ್ಕೆ ಕೂಡ ಅವಕಾಶ ಇರುತ್ತದೆ. ಇಂತಹ ಟೆಕ್ನಾಲಜಿಯನ್ನು ನೀವು ಕೂಡ ಅಳವಡಿಸಿಕೊಂಡು ಪೆಟ್ರೋಲ್ ಭಾರ ಇಳಿಸಿಕೊಳ್ಳಿ.