ದೇಶದಲ್ಲಿ ಈಗ ಹಣದುಬ್ಬರ ಏರಿಕೆ ಆಗಿದೆ. ಅಗತ್ಯ ವಸ್ತುಗಳ ಬೆಲೆಯೂ ಜನಸಾಮಾನ್ಯರಿಗೆ ಕೈಗೆಟುಕದ ರೀತಿ ಆಗಿದೆ. ಇದಕ್ಕೆ ಕಡಿವಾಣ ಹಾಕಿ ಜನಸಾಮಾನ್ಯರಿಗೆ ಅನುಕೂಲತೆ ಮಾಡಿಕೊಡಲು ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಈಗ ಅನ್ನಭಾಗ್ಯ ಯೋಜನೆ ಅಡಿ ಪಡಿತರವನ್ನು ಹೆಚ್ಚಿಸಲಾಗಿದೆ.
ಮತ್ತು ಪ್ರತಿ ಕುಟುಂಬದ ಯಜಮಾನಿಗೂ ಮನೆ ನಿರ್ವಹಣೆಗಾಗಿ 2000 ಸಹಾಯ ಧನವನ್ನು ಕೊಟ್ಟು 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಮತ್ತು ಮಹಿಳೆಯರಿಗೆ ರಾಜ್ಯದಾದ್ಯಂತ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಡಲಾಗಿದೆ ಮತ್ತು ನಿರುದ್ಯೋಗಿಗಳಿಗೂ 2 ವರ್ಷದವರೆಗೆ ಯುವನಿಧಿ ಯೋಜನೆತಡಿ ನಿರುದ್ಯೋಗ ಭತ್ಯೆ ಸಿಗುತ್ತಿದೆ.
ಇವುಗಳನ್ನು ಕಾಂಗ್ರೆಸ್ ಸರ್ಕಾರವು 2023 ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಗ್ಯಾರೆಂಟಿ ಕಾರ್ಡ್ ಯೋಜನೆಯಾಗಿ ಘೋಷಿಸಿಕೊಂಡಿತ್ತು. ಅದಕ್ಕಾಗಿ ಈಗ ಆ ಪ್ರಕಾರವಾಗಿ ಇದೆಲ್ಲವನ್ನು ರಾಜ್ಯದ ನಾಗರಿಕರಿಗಾಗಿ ಜಾರಿಗೆ ತರುತ್ತಿದೆ. ಹಾಗೆಯೇ ದೇಶದ ಎಲ್ಲ ರಾಜ್ಯಗಳಲ್ಲೂ ರಾಜ್ಯದಲ್ಲಿನ ಪರಿಸ್ಥಿತಿ ಅರಿತು ರಾಜಕೀಯ ಪಕ್ಷಗಳು ಚುನಾವಣೆ ಪೂರ್ವವಾಗಿ ಅನೇಕ ಭರವಸೆಗಳನ್ನು ನೀಡಿರುತ್ತವೆ.
ಈಗ ರಾಜಸ್ಥಾನ ಸರ್ಕಾರವೂ ಕೂಡ ಅವುಗಳನ್ನು ಈಡೇರಿಸುವುದರ ಜೊತೆಗೆ ದಿಢೀರ್ ಎಂದು ಗ್ಯಾಸ್ ಮೇಲೆ ಸಬ್ಸಿಡಿ ಯೋಜನೆ ಕೂಡ ಘೋಷಿಸಿದೆ. ಇದು ಅಲ್ಲಿನ 33 ಜಿಲ್ಲೆಗಳ ಫಲಾನುಭವಿಗಳ ಪಾಲಿಗೆ ವರದಾನವಾಗಿದ್ದು ಎಲ್ಲರನ್ನು ಸರ್ಪ್ರೈಸ್ ಮಾಡಿದೆ. ರಾಜಸ್ಥಾನ ರಾಜ್ಯದಲ್ಲಿ LPG ಗ್ಯಾಸ್ ಸಿಲಿಂಡರ್ ಬೆಲೆ 1140 ಇದೆ.
ದೇಶದಲ್ಲಿ ಒಂದು ವರ್ಷದಿಂದ ಪೆಟ್ರೋಲಿಯಂ ಉತ್ಪನ್ನ ಕಂಪನಿಗಳು ಗ್ಯಾಸ್ ಬೆಲೆಯಲ್ಲಿ ವ್ಯತ್ಯಾಸ ಗೊಳಿಸಿರುವುದರ ಪರಿಣಾಮವಾಗಿ ವಿಪರೀತ ಬೆಲೆ ಏರಿಕೆ ಆಗಿರುವುದು ದೇಶಕ್ಕೆ ಹೊರೆ ಎನಿಸಿದೆ. ರಾಜಸ್ಥಾನ ರಾಜ್ಯ ಸರ್ಕಾರಕ್ಕೆ ಈ ಬೆಲೆಯನ್ನು ಇಳಿಕೆ ಮಾಡುವಂತೆ ಅಲ್ಲಿನ ಜನರು ಮನವಿ ಸಲ್ಲಿಸಿದರು.
ಈವರಗೆ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಫಲಾನುಭವಿಗಳಿಗೆ ಕಡಿಮೆ ದರದಲ್ಲಿ LPG ಸಿಲಿಂಡರ್ ಲಭ್ಯವಾಗುತ್ತಿತ್ತು ಹಾಗೂ ಆರಂಭದಿಂದ ಅನೇಕರಿಗೆ ಸಬ್ಸಿಡಿ ಲಭ್ಯವಾಗುತ್ತಿತ್ತು. ಇವುಗಳು ಸ್ಥಗಿತಗೊಂಡಿರುವ ಕಾರಣ ವಿಪರೀತವಾಗಿ ಏರಿರುವ ಗ್ಯಾಸ್ ಬೆಲೆಯು ಗೃಹಿಣಿಯರ ಪಾಲಿಗೆ ನೋ’ವಿ’ನ ಸಂಗತಿ ಆಗಿತ್ತು.
ಈಗ ಬಡವರು ಹಾಗೂ ಮಧ್ಯಮ ವರ್ಗದವರು ಕೂಡ ಅಡುಗೆಗೆ ಗ್ಯಾಸ್ ಇಂಧನ ಬಳಸುವುದು ಸಾಮಾನ್ಯವಾಗಿ ಇರುವುದರಿಂದ ಇದರ ಬೆಲೆ ನಿಯಂತ್ರಣ ಮಾಡಬೇಕು ಎಂದು ಬಯಸಿದ ಅಲ್ಲಿನ ಮುಖ್ಯಮಂತ್ರಿಗಳು ಇಂದಿರಾಗಾಂಧಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಯೋಜನೆ ಎನ್ನುವ ಯೋಜನೆಯನ್ನು ಜಾರಿಗೆ ತಂದು 500 ರೂಪಾಯಿ ಸಬ್ಸಿಡಿಯನ್ನು ಘೋಷಿಸಿದೆ.
ಸೋಮವಾರ ಕಾರ್ಯಕ್ರಮವನ್ನು ನಡೆಸಿ ಪ್ರಾರಂಭಿಕವಾಗಿ 14 ಲಕ್ಷ ಗ್ರಾಹಕರ ಖಾತೆಗೆ 60 ಕೋಟಿರೂ. ಹಣವನ್ನು DBT ಮೂಲಕ ಫಲಾನುಭವಿಗಳ ನೇರ ವರ್ಗಾವಣೆ ಮಾಡಲಾಗಿದೆ. ಕೆಲ ದಿನಗಳಲ್ಲೇ ಫಲಾನುಭವಿಗಳೆಲ್ಲರ ಖಾತೆಗೂ ವಿಸ್ತರಿಸಲಾಗುವುದು ಎನ್ನುವ ಭರವಸೆ ಕೂಡ ಸರ್ಕಾರದಿಂದ ಸಿಕ್ಕಿದೆ.
ಇಂದಿರಾಗಾಂಧಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಯೋಜನೆ ಘೋಷಿಸಿದ ರಾಜ್ಯಸ್ಥಾನದ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್ ಅವರು ಮಾಧ್ಯಮಗಳ ಜೊತೆ ಕೂಡ ಮಾತನಾಡಿದ್ದಾರೆ. ಜನರ ಉಳಿತಾಯ, ಪರಿಹಾರ ಮತ್ತು ಅಭಿವೃದ್ಧಿಗಾಗಿ ಸರ್ಕಾರವು ಸಮಗ್ರ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ರೂಪಿಸುತ್ತಿದೆ ಎಂದು ಹೇಳಿದ ಅವರು ಪ್ರಸ್ತುತವಾಗಿ ನಮ್ಮ ಭಾರತ ದೇಶದ ದೊಡ್ಡ ಸಮಸ್ಯೆ ಹಣದುಬ್ಬರವಾಗಿದೆ ಮತ್ತು ಇಡೀ ದೇಶವು ಈ ಹಣದುಬ್ಬರ ಸಮಸ್ಯೆಯಿಂದ ಬಳಲುತ್ತಿದೆ.
ದಿನದಿಂದ ದಿನಕ್ಕೆ ಏರುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆಯಿಂದ ಜನಸಾಮಾನ್ಯರು ಗ್ಯಾಸ್ ಸಿಲಿಂಡರ್ ಖರೀದಿಸುವುದು ಕಷ್ಟವಾಗುತ್ತಿತ್ತು, ಆದ್ದರಿಂದ ರಾಜ್ಯ ಸರ್ಕಾರ ಇಂದಿರಾಗಾಂಧಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಯೋಜನೆಯ ಮೂಲಕ ಪ್ರಸ್ತುತ 1,140 ರೂ.ಗಳ ಬೆಲೆಯ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 500 ರೂ.ಗೆ ಲಭ್ಯವಾಗುವಂತೆ ಮಾಡುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ರಾಜಸ್ಥಾನ ಸರ್ಕಾರದ ಈ ನಡೆಗೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.